ಬೆಂಗಳೂರು: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಕಾಮುಕನೊಬ್ಬ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೊಯ್ಸಳ ನಗರದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡು ನೇಪಾಳಿ ಕುಟುಂಬ ಇಲ್ಲೇ ನೆಲೆಸಿದೆ. ಸೆಕ್ಯೂರಿಟಿ ಗಾರ್ಡ್ ದಂಪತಿಗೆ 6 ವರ್ಷದ ಮಗಳಿದ್ದಳು. ಆಕೆ ಕಟ್ಟಡದ ಸಮೀಪದಲ್ಲೇ ಆಟವಾಡಿಕೊಂಡಿದ್ದಳು. ನಿನ್ನೆ ಸಂಜೆ ಪೋಷಕರು ಹೊರಗೆ ಹೋಗಿದ್ದರು. ಹಾಗಾಗಿ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು.
ಈ ಸಮಯವನ್ನು ನೋಡಿಕೊಂಡಿದ್ದ ಆರೋಪಿ ಮನೆಗೆ ನುಗ್ಗಿ ಬಾಲಕಿಯನ್ನು ಪುಸಲಾಯಿಸಿ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಕಿರುಚದಂತೆ ಬಾಲಕಿಯ ಬಾಯಿಯನ್ನು ಮುಚ್ಚಿದ್ದರಿಂದ ಆಕೆ ಉಸಿರುಗಟ್ಟಿ ನರಳಿ ನರಳಿ ಪ್ರಾಣಬಿಟ್ಟಿದ್ದಾಳೆ.
ವಿಷಯ ತಿಳಿದು ರಾಮಮೂರ್ತಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಲಕಿಯ ತಂದೆಯಿಂದ ಮಾಹಿತಿ ಪಡೆದು ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿ, ಕಾಮುಕನಿಗಾಗಿ ಶೋಧ ಕೈಗೊಂಡು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಬಿಹಾರ ಮೂಲದ ಅಭಿಷೇಕ್ ಕುಮಾರ್ (25) ಎಂಬಾತನನ್ನು ಬಂಧಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx