ಬೆಂಗಳೂರಿನಲ್ಲಿ ಇಂದು ರಸ್ತೆಗುಂಡಿಯಿಂದಾಗಿ ಅಪಘಾತ ಸಂಭವಿಸಿ ಮಹಿಳೆ ಗಂಭೀರ ಗಾಯಗೊಂಡ ಹಿನ್ನೆಲೆ ರಸ್ತೆಗುಂಡಿಗಳನ್ನು ಮುಚ್ಚದ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಬೆಂಗಳೂರಲ್ಲೆ ಅಷ್ಟೆ ಅಲ್ಲ ರಸ್ತೆಗುಂಡಿಗಳು ಇಡೀ ರಾಜ್ಯದಲ್ಲಿಇವೆ. ಸಿಎಂ ಕಾನ್ಫರೆನ್ಸ್ ಮಾಡ್ತಾರೆ. ಎಷ್ಟೇ ಸಭೆ ಮಾಡಿದ್ರೂ ಗುಂಡಿ ಮುಚ್ಚಲ್ಲ. ಜನ ಜೀವನ ಕಾಪಾಡಲು ಸರ್ಕಾರ ಮುಂದಾಗಿಲ್ಲ. ಮಳೆಹಾನಿ ತಡೆಗೆ ಸರ್ಕಾರ ತಯಾರಿ ಮಾಡಿಕೊಂಡಿಲ್ಲ. ನಮ್ಮಲ್ಲಿ ಗುಂಡಿ ಮುಚ್ಚುವ ಕೆಲಸ ಮಾತ್ರ ಆಗಿಲ್ಲ ಎಂದು ಕಿಡಿಕಾರಿದರು.
ವಾಹನ ಸವಾರಿಂದ ಪೊಲೀಸರು ದಂಡ ವಸೂಲಿ ಮಾಡ್ತಿದ್ದಾರೆ. ರಾಜ್ಯದ ಎಲ್ಲಾ ಕಡೆ ರಸ್ತೆ ಗುಂಡಿ ಸಮಸ್ಯೆಯೇ ಇದೆ. ಆದರೆ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ನಿನ್ನೆ ಅರಸೀಕೆರೆಯಲ್ಲಿ 9 ಮಂದಿ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಹೈವೇಗಳಲ್ಲಿ ಪೊಲೀಸರು ಜನರಿಂದ ವಸೂಲಿಗೆ ನಿಂತಿರುತ್ತಾರೆ. ಹಣ ವಸೂಲಿಗೆ ಈ ಸರ್ಕಾರವೂ ನಿಂತುಬಿಟ್ಟಿದೆ. ಹಣ ವಸೂಲಿ ಮಾಡಿ ಹಂಚಿಕೊಳ್ಳುತ್ತಾರೆ . ರಾತ್ರಿ ವೇಳೆ ಕುಡಿಯೋದಕ್ಕೆ ಅವಕಾಶ ಕೊಡೋದು ನೀವೇ. ಹೋಟೆಲ್ ಗೆ ಅನುಮತಿ ನೀಡೋದು ನೀವೆ. ಕುಡಿದ ಮೇಲೆ ಮತ್ತೆ ಹಣ ವಸೂಲಿ ಮಾಡೋದು ನೀವೆ. ಎಂದು ಹರಿಹಾಯ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz