nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೊರಟಗೆರೆ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ನೌಕರರಿಂದ ಬೃಹತ್ ಪ್ರತಿಭಟನೆ

    June 13, 2026

    ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ

    June 13, 2026

    ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ

    June 12, 2026
    Facebook Twitter Instagram
    ಟ್ರೆಂಡಿಂಗ್
    • ಕೊರಟಗೆರೆ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ನೌಕರರಿಂದ ಬೃಹತ್ ಪ್ರತಿಭಟನೆ
    • ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ
    • ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ
    • ಲೋಕಾಯುಕ್ತರಿಂದ 56 ಜನರ ಅಹವಾಲು ಸ್ವೀಕಾರ:  ಜಮೀನು ಖಾಸಗಿ ವ್ಯಾಜ್ಯಗಳೇ ಹೆಚ್ಚು.. ಪಡಿತರ ಕಾರ್ಡಿನ ಮಾಹಿತಿಯೇ ನೀಡಲ್ವಂತೆ!
    • ಪಾವಗಡ: ನಿಯಮ ಉಲ್ಲಂಘನೆ, ವೆಂಕಟೇಶ್ವರ ಕಲ್ಲುಗಣಿ ಗುತ್ತಿಗೆ ರದ್ದುಪಡಿಸಿ ಇಲಾಖೆ ಖಡಕ್ ಆದೇಶ! | ಶಾಸಕ ವೆಂಕಟೇಶ್ ವಿರುದ್ಧ ಎಫ್‌ ಐಆರ್ ದಾಖಲಿಸಲು ಒತ್ತಾಯ
    • ಜುಲೈ 15ರಂದು ಎಲ್ಲಾ ರೈತಪರ ಸಂಘಟನೆಗಳು, ಮುಖಂಡರೊಂದಿಗೆ ಹೇಮಾವತಿ ನಾಲಾ ವೀಕ್ಷಣೆ: ಶಾಸಕ ಸಿ.ಬಿ. ಸುರೇಶ್‌ ಬಾಬು ಕರೆ
    • ಪಾವಗಡ: ಸಕಾಲಕ್ಕೆ ಸಿಗದ ಚಿಕಿತ್ಸೆ; ಹಾವು ಕಚ್ಚಿ ಬಿ.ಫಾರ್ಮಸಿ ವಿದ್ಯಾರ್ಥಿ ದುರ್ಮರಣ
    • ಐದು ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಗುದ್ದಲಿ ಪೂಜೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಗೆಲುವು ಸಾಧಿಸಿದರೆ ರಾಷ್ಟ್ರಪತಿ ಚುನಾವಣೆಗೆ ಸಿಗಲಿದೆ ತಿರುವು
    ರಾಷ್ಟ್ರೀಯ ಸುದ್ದಿ March 10, 2022

    ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಗೆಲುವು ಸಾಧಿಸಿದರೆ ರಾಷ್ಟ್ರಪತಿ ಚುನಾವಣೆಗೆ ಸಿಗಲಿದೆ ತಿರುವು

    ರಾಷ್ಟ್ರಪತಿ ಚುನಾವಣೆ 2022 ಪ್ರಮುಖ ಪಾತ್ರ ವಹಿಸಲಿದೆ ಇಂದಿನ ಫಲಿತಾಂಶಗಳ ಸಮೀಕರಣಗಳು ಹೇಗಿವೆ ಗೊತ್ತಾ?
    By adminMarch 10, 2022No Comments2 Mins Read
    election

    ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಈ ರಾಜ್ಯಗಳ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸಲಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚುನಾವಣಾ ಫಲಿತಾಂಶ ಈ ವರ್ಷ ನಡೆಯಲಿರುವ ರಾಷ್ಟ್ರಪತಿ ಚುನಾವಣೆ (President election)ಮೇಲೂ ನೇರ ಪರಿಣಾಮ ಬೀರಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಜುಲೈ 24 ರಂದು ಕೊನೆಗೊಳ್ಳಲಿದೆ.

    ಮಾರ್ಚ್ 10 ಅಂದರೆ ಇಂದು ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾ ವಿಧಾನಸಭೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ (five state election result). ಇಂದಿನ ಈ ಫಲಿತಾಂಶ 2022 ರ ರಾಷ್ಟ್ರಪತಿ ಚುನಾವಣೆಯಲ್ಲಿ ಯಾವ ಪಕ್ಷ ಅಥವಾ ಒಕ್ಕೂಟವು ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನುವುದು ಕೂಡಾ ನಿರ್ಣಯವಾಗಲಿದೆ.


    Provided by
    Provided by

    ಹೆಚ್ಚಲಿದೆಯೇ ಬಿಜೆಪಿ ಸಂಕಷ್ಟ :

    ಎಕ್ಸಿಟ್ ಪೋಲ್ ಫಲಿತಾಂಶ (Exit poll 2022 result) ಭವಿಷ್ಯ ನುಡಿದಂತೆ ನಡೆದರೆ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಗೆ ಕಷ್ಟ ಎದುರಾಗಲಿದೆ. ಯುಪಿಯಲ್ಲಿ ನಡೆದ ಹಲವು ಎಕ್ಸಿಟ್ ಪೋಲ್‌ಗಳನ್ನು ವಿಶ್ಲೇಷಿಸಿದರೆ, ಬಿಜೆಪಿ ಸರಾಸರಿ 240 ಸ್ಥಾನಗಳನ್ನು ಗೆಲ್ಲಲಿದೆ. ಅಂದರೆ, 2017ರ ಚುನಾವಣೆಗಿಂತ 72 ಸ್ಥಾನಗಳು ಕಡಿಮೆಯಾಗಲಿವೆ. ಇಂತಹ ಪರಿಸ್ಥಿತಿಯಲ್ಲಿ ಎನ್ ಡಿಎ ಅದರಲ್ಲೂ ಬಿಜೆಪಿ (BJP) ತಮ್ಮ ನೆಚ್ಚಿನ ಅಭ್ಯರ್ಥಿಯನ್ನು ರಾಷ್ಟ್ರಪತಿಯನ್ನಾಗಿ ಮಾಡಲು ಇನ್ನೂ ಕೆಲವು ಮಿತ್ರಪಕ್ಷಗಳನ್ನು ಹುಡುಕಬೇಕಾಗಿದೆ.

    ಇದೀಗ ಬಿಜೆಪಿಗೆ ಸಮೀಕರಣವೇನು?

    ಪ್ರಸ್ತುತ, ಭಾರತೀಯ ಜನತಾ ಪಕ್ಷ ತನ್ನ ಅಭ್ಯರ್ಥಿಯನ್ನು ದೇಶದ ಉನ್ನತ ಹುದ್ದೆಗೆ ಸುಲಭವಾಗಿ ಆಯ್ಕೆ ಮಾಡುವ ಸ್ಥಿತಿಯಲ್ಲಿದೆ. ಆದರೆ ಉತ್ತರ ಪ್ರದೇಶದ ಪ್ರತಿಕೂಲ ಫಲಿತಾಂಶಗಳು ಈ ಪರಿಸ್ಥಿತಿಯನ್ನು ಬದಲಾಯಿಸಬಹುದು. ಒಂದು ವೇಳೆ ಹೀಗಾದರೆ ಬಿಜು ಜನತಾ ದಳ (BJD), ತೆಲಂಗಾಣ ರಾಷ್ಟ್ರ ಸಮಿತಿ (TRS) ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷ (YSRCP)ನಂತಹ ಪ್ರಾದೇಶಿಕ ಪಕ್ಷಗಳ ಪಾತ್ರ ಪ್ರಮುಖವಾಗಲಿದೆ. ಆದರೆ ಎಕ್ಸಿಟ್ ಪೋಲ್ ಫಲಿತಾಂಶ (UP Exit Poll 2022) ಕುರಿತು ಮಾತನಾದುವುದಾದರೆ ಹೆಚ್ಚಿನ ಸಮೀಕ್ಷೆಗಳು ಯುಪಿಯಲ್ಲಿ ಬಿಜೆಪಿ ಸರ್ಕಾರ ರಚನೆಯ ಬಗ್ಗೆ ಭವಿಷ್ಯ ನುಡಿದಿವೆ.

    ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಯುಪಿ :

    ರಾಷ್ಟ್ರಪತಿ ಚುನಾವಣೆಯಲ್ಲಿ (President election), ಉತ್ತರ ಪ್ರದೇಶದ ಶಾಸಕರ ಮತದ ಮೌಲ್ಯವು ಅತ್ಯಧಿಕ ಅಂದರೆ 208 ಆಗಿದ್ದರೆ, ಸಿಕ್ಕಿಂನ ಶಾಸಕರ ಮತದ ಮೌಲ್ಯವು ಅತ್ಯಂತ ಕಡಿಮೆ ಅಂದರೆ ಏಳು. ವಿಧಾನಸಭೆ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಪಂಜಾಬ್‌ನ ಶಾಸಕರ ಮತ ಮೌಲ್ಯ 116, ಉತ್ತರಾಖಂಡದ ಶಾಸಕರ ಮತ ಮೌಲ್ಯ 64, ಗೋವಾದ ಶಾಸಕರ ಮತ ಮೌಲ್ಯ 20 ಮತ್ತು ಮಣಿಪುರದ ಒಬ್ಬ ಶಾಸಕರ ಮತ ಮೌಲ್ಯ 18. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ರಾಷ್ಟ್ರಪತಿ ಚುನಾವಣೆಗೆ ಮಹತ್ವದ್ದಾಗಿದ್ದು, ರಾಜ್ಯದ 403 ಶಾಸಕರ ಪೈಕಿ ಪ್ರತಿಯೊಬ್ಬರು ಅತಿ ಹೆಚ್ಚು ಅಂದರೆ 208 ಮತಗಳನ್ನು ಹೊಂದಿದ್ದಾರೆ.

    ಉತ್ತರ ಪ್ರದೇಶ ವಿಧಾನಸಭೆಯ ಒಟ್ಟು ಮತಗಳ ಮೌಲ್ಯ 83,824, ಪಂಜಾಬ್ -13,572, ಉತ್ತರಾಖಂಡ -4,480, ಗೋವಾ -800 ಮತ್ತು ಮಣಿಪುರ -1,080. ಆಗಿದೆ.

    ಎನ್‌ ಡಿಎ ಪ್ರಸ್ತುತ ಶಕ್ತಿ :

    ವಿಭಿನ್ನ ಸಮೀಕರಣಗಳ ಪ್ರಕಾರ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಚುನಾಯಿತ ಪ್ರತಿನಿಧಿಗಳ ಮತಗಳ ಮೌಲ್ಯವು ಒಟ್ಟು ಸಂಖ್ಯೆಯ 50% ಕ್ಕಿಂತ ಕಡಿಮೆಯಿದೆ. ರಾಷ್ಟ್ರಪತಿ ಭವನದಲ್ಲಿ ಅವರ ಅಭ್ಯರ್ಥಿ ಗೆಲುವೂ ಪಡೆಯಬೇಕಾದರೆ ಬೇರೆ ಪೋಕ್ಕುತಗಳ ಬೆಂಬಲ ಪಡೆಯಬೇಕು. ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸ್ಪಷ್ಟ ಉದ್ದೇಶದಿಂದಲೇ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ (K Chandrashekhar Rao)ಅವರು ವಿರೋಧ ಪಕ್ಷಗಳನ್ನು ಭೇಟಿ ಮಾಡುತ್ತಿರುವುದು.

    ವರದಿ:  ಆಂಟೋನಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    Leave A Reply Cancel Reply

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕೊರಟಗೆರೆ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ನೌಕರರಿಂದ ಬೃಹತ್ ಪ್ರತಿಭಟನೆ

    June 13, 2026

    ಕೊರಟಗೆರೆ: ರಾಜ್ಯದಲ್ಲಿ ವಿದ್ಯುತ್ ವಿತರಣಾ ಚಟುವಟಿಕೆಗಳನ್ನು ನಡೆಸಲು ಟಾಟಾ ಪವರ್ ಸೇರಿದಂತೆ ಯಾವುದೇ ಖಾಸಗಿ ಕಂಪನಿಗಳಿಗೆ ಅನುಮತಿ ನೀಡಬಾರದು ಎಂದು…

    ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ

    June 13, 2026

    ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ

    June 12, 2026

    ಲೋಕಾಯುಕ್ತರಿಂದ 56 ಜನರ ಅಹವಾಲು ಸ್ವೀಕಾರ:  ಜಮೀನು ಖಾಸಗಿ ವ್ಯಾಜ್ಯಗಳೇ ಹೆಚ್ಚು.. ಪಡಿತರ ಕಾರ್ಡಿನ ಮಾಹಿತಿಯೇ ನೀಡಲ್ವಂತೆ!

    June 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.