ತುಮಕೂರು: 116 ದೇಶಗಳಲ್ಲಿ ತಿರಸ್ಕಾರ ಮಾಡಿರುವ ಕುಲಾಂತರಿ ಬೀಜ ತಳಿಯನ್ನು ನಮ್ಮದೇಶದಲ್ಲಿ ತರಲು ಹೊರಟಿರುವುದು ವಿಪರ್ಯಾಸ. ಇದರಿಂದ ಪರಿಸರ, ಜೀವವೈಧ್ಯತೆ ಅಷ್ಟೇ ಅಲ್ಲದೆ, ಮಾನವನ ವಿಕಾಸದಲ್ಲೂಅನಾಹುತವೇ ಸಂಭವಿಸಲಿದೆ. ಆದ್ದರಿಂದ ರೈತರು ಮಾತ್ರವಲ್ಲದೆ, ಪಟ್ಟಣದಲ್ಲಿರುವ ಜನರೂ ಕುಲಾಂತರಿ ನೀತಿಯನ್ನು ಕಾಲಿನಲ್ಲಿಒದ್ದುತಿರಸ್ಕಾರ ಮಾಡಬೇಕು ಎಂದುರೈತ ಸಂಘ ಹಾಗೂ ಹಸಿರು ಸೇನೆಯ ಕೆ.ಟಿ. ಗಂಗಾಧರ್ ಕರೆ ನೀಡಿದರು.
ಗಾಂಧೀ ಸಹಜ ಬೇಸಾಯ ಆಶ್ರಮದ ವತಿಯಿಂದ ‘ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿನ ನಿರ್ದೇಶನದಂತೆ ಬೇಯರ್ ಮತ್ತು ಮಾನ್ಸೆಂಟೋ ಕಂಪನಿಗಳ ಸಹಯೋಗದಲ್ಲಿ ತರಲು ಹೊರಟಿರುವ ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯನ್ನು ವಿರೋಧಿಸಿ ಹಮ್ಮಿಕೊಂಡಿರುವ ಗ್ರಾಮಾಂತರದ ಹ್ಯಾಂಡ್ ಪೋಸ್ಟ್ ನ ದೊಡ್ಡ ಹೊಸೂರಿನ ಎರಡನೇ ದಿನದ ಸತ್ಯಾಗ್ರಹ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತ್ರೇತಾಯುಗದಲ್ಲಿ ರಾಮ ಸೀತೆಯೂ ಕೃಷಿ ಮಾಡಿದ್ದರು. ಭರತ ಖಂಡದಲ್ಲಿ ಕೃಷಿಗೆ ಪೂರಕವಾದ ವಾತಾವರಣವಿದೆ. ಇಲ್ಲಿನ ಕೃಷಿಗೆ ಶೇ.75 ರಷ್ಟು ಪ್ರಾಕೃತಿಕ ಬೆಂಬಲವಿದ್ದು, ಶೇ.25 ರಷ್ಟು ಮಾತ್ರವೇ ಮಾನವನ ಶ್ರಮವಿರುತ್ತದೆ. ಆದ್ದರಿಂದಲೇ ನಮ್ಮದು ಬಹುಪಾಲು ಕೃಷಿ ಪ್ರಧಾನವಾದ ಸಂಪದ್ಭರಿತ ರಾಷ್ಟ್ರ ಈ ಸಾರ್ವಭೌಮತೆಯನ್ನು ವಶಕ್ಕೆ ಪಡೆಯಲು ಬಹುರಾಷ್ಟ್ರೀಯ ಕಂಪನಿಗಳು ಹುನ್ನಾರ ನಡೆಸಿವೆ. ದೇಶೀ ಬೆಳೆಗಳನ್ನು ನಾಶ ಮಾಡಿಕುಲಾಂತರಿ ವ್ಯವಸ್ಥೆಯನ್ನುತರುವ ಮೂಲಕ ನಮ್ಮ ಕೃಷಿ ವ್ಯವಸ್ಥೆಯನ್ನು ನಿಯಂತ್ರಣ ಮಾಡಲು ಯೋಜನೆಯೇ ರೂಪಿಸಿವೆ. ಅನ್ನ ಹಾಕುವ ರೈತರನ್ನುಗ್ರಾಹಕರನ್ನಾಗಿ ಮಾರ್ಪಾಡು ಮಾಡುವದೊಡ್ಡ ಸಂಚು ನಡೆದಿದೆ ಎಂದು ಅವರು ವಿವರಿಸಿದರು.
ಹಸಿರು ಕ್ರಾಂತಿಯಿಂದಾದ ಹಾನಿಯಿಂದ ಇನ್ನೂ ಚೇತರಿಸಿಕೊಳ್ಳಲು ಆಗಿಲ್ಲ. ಈಗ 3ನೇ ಕೃಷಿ ಕ್ರಾಂತಿತರಲು ಹೊಂಚು ಹಾಕುತ್ತಿದ್ದಾರೆ. ಇದನ್ನು ನಾವು ವಿರೋಧಿಸಬೇಕು. ನಮ್ಮಧ್ವನಿ ಹಾಗೂ ಪ್ರತಿಭಟನೆಗಳ ಸಾಮರ್ಥ್ಯ ಹೆಚ್ಚಾದರೆ ಸಂವಿಧಾನಾತ್ಮಕವಾಗಿಯೂ ಮಹತ್ವ ದೊರೆಯಲಿದ್ದು, ಸರ್ಕಾರಗಳಿಗೆ ಚಳವಳಿಗಳ ಮೂಲಕವೇ ಅರ್ಥ ಮಾಡಿಸೋಣ ಎಂದು ನಿರ್ಧಾರಕೈಗೊಂಡರು.
ರೈತ ಸಂಘದ ಬಡಗಲಪುರ ನಾಗೇಂದ್ರ ಮಾತನಾಡಿ, ಸರ್ಕಾರಿ ವಿಜ್ಞಾನಿಗಳು ಮಾರಾಟವಾಗಿದ್ದಾರೆ. ವೈದ್ಯರು ವ್ಯಾಪಾರಿಗಳಾಗಿದ್ದಾರೆ. ಆರೋಗ್ಯ ಮತ್ತು ವಿಜ್ಞಾನ ಕ್ಷೇತ್ರವೇ ಹಣಗಳಿಕೆಗೆ ಮೀಸಲಾಗಿದೆ. ಹಳಿತಪ್ಪಿರುವ ವ್ಯವಸ್ಥೆ ಸರಿ ಮಾಡುವವರು ಯಾರು ಎಂಬುದೇ ಪ್ರಶ್ನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯ ಹಾಗೂ ವ್ಯಾಪರದಂತೆ ಕೃಷಿಯಲ್ಲಿಯೂ ಸಂಸ್ಕೃತಿ ಕಣ್ಮರೆಯಾಗಿದೆ. ಪುಟ್ಟ ಮಕ್ಕಳಿಗೆ ಡಯಾಬಿಟೀಸ್ ಅಂಟಿಕೊಂಡಿದೆ. ನಾಲ್ಕು ವರ್ಷದ ಹೆಣ್ಣುಮಕ್ಕಳು ಋತುಮತಿಯಾಗುತ್ತಿದ್ದಾರೆ. ಮತ್ತೊಂದು ಕಡೆ ಅಪೌಷ್ಠಿಕತೆ ಕಾಡುತ್ತಿದೆ. ಈಗ ಅನ್ನತಿನ್ನುವವರೆಲ್ಲರೂ ಎಚ್ಚೆತ್ತುಕೊಳ್ಳಬೇಕಾದ ಕಾಲ ಬಂದಿದೆ. ಇಲ್ಲವಾದರೆ ಆಹಾರ ಕ್ಷೇತ್ರ ಅಧೋಗತಿ ತಲುಪಲಿದೆ ಎಚ್ಚರಿಸಿದರು.
ಭೂಮಿಗೂ ನಮಗೂ ಭಾವನಾತ್ಮಕ ಸಂಬಂಧವಿದ್ದು, ಕೃಷಿ ಸಂಸ್ಕೃತಿ ಆಧಾರಿತ ಉದ್ಯೋಗ ತಂದುಕೊಟ್ಟಿದೆ. ನಮ್ಮ ಸಂಸ್ಕೃತಿ ಉಳಿಯಬೇಕೆಂದರೆ ಭೂಮಿಯನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ದೊಡ್ಡ ಹೊಸೂರು ಸತ್ಯಾಗ್ರಹ ದಾಖಲೆಯಾಗಿ ಉಳಿಯಲಿದೆ. ಸತ್ಯಾಗ್ರಹಕ್ಕೆ ತನ್ನದೇಆದ ಶಕ್ತಿ ಇದ್ದು, ಅದಕ್ಕೆ ಸಾಕ್ಷಿಯಾಗಿ ಮಹಾತ್ಮಗಾಂಧಿ ನಮ್ಮೆದುರಿಗಿದ್ದಾರೆ ಎಂದು ರೈತರನ್ನು ಹುರಿದುಂಬಿಸಿದರಲ್ಲದೆ, ಎಲ್ಲಾ ರಾಜಕೀಯ ಪಕ್ಷಗಳು ಬಂಡವಾಳ ಶಾಹಿಗಳ ಪರವಿರುವುದರಿಂದ ನಾವು ಸ್ಥಳೀಯ ಮಟ್ಟದಿಂದಲೇ ಚಳಚಳಿಗಳನ್ನು ಕಟ್ಟಬೇಕು ಎಂದು ಸಲಹೆ ನೀಡಿದರು.
ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಮಾತನಾಡಿ, ನಮ್ಮದೇಶದ ಕೃಷಿ, ಶಿಕ್ಷಣ, ಆರೋಗ್ಯ ಹಾಗೂ ಪರಿಸರದ ಮೇಲೆ ಅವ್ಯಾಹತವಾಗಿ ದಾಳಿ ನಡೆಯುತ್ತಿದೆ. ಕೃಷಿ, ಕಲೆ, ಸಾಹಿತ್ಯ, ಆಡಳಿತ, ಸಂಸ್ಕೃತಿ ಒಂದಕ್ಕೊಂದು ಅಂತರ ಸಂಬಂಧ ಹೊಂದಿದ್ದು, ಈ ವ್ಯವಸ್ಥೆಯನ್ನು ಸರಿ ಮಾಡಬೇಕಾದರೆ ಮಸನೋಬು ಫುಕುವೋಕ, ಜೆ.ಸಿ.ಕುಮಾರ್, ಮಹಾತ್ಮಗಾಂಧಿ ಅವರತತ್ವದಡಿಯಲ್ಲಿ ಹೋರಾಟಗಳು ಮುನ್ನಡೆಯಬೇಕು ಎಂದರು.
ನಮ್ಮ ದೇಶದಲ್ಲಿಒಂದು ಲಕ್ಷಕ್ಕೂಅಧಿಕ ರೀತಿಯ ಭತ್ತದ ತಳಿಗಳಿದ್ದವು. ಅವೆಲ್ಲವೂ ಈಗ ನಾಶವಾಗಿ ಕುಲಾಂತರಿ ಭತ್ತರಾರಾಜಿಸುತ್ತಿದೆ. ಜಪಾನ್ ಹಾಗೂ ಚೀನಾದಲ್ಲಿ ಕುಲಾಂತರಿ ಮನುಷ್ಯರನ್ನು ಸೃಷ್ಟಿ ಮಾಡಲಾಗಿದೆ. ಇದು ಪ್ರಕೃತಿ ವಿರುದ್ಧವಾದುದು. ಹೀಗೇ ಮುಂದುವೆರೆದರೆ 2050ರ ಹೊತ್ತಿಗೆ ಭೂಮಂಡಲ ವಿನಾಶವಾಲಿದೆ ಎಂದು ನಾಸಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಪರಿಸರಕ್ಕೆ ಪೂರಕವಾದ ನೈಸರ್ಗಿಕ ಕೃಷಿ ಮಾಡಬೇಕು. ನಾವು ತಿನ್ನುವ ಆಹಾರ ಉತ್ತಮವಾಗಿದ್ದರೆ ಮನಸ್ಥಿತಿ ಮತ್ತುಆರೋಗ್ಯ ಉತ್ತಮವಾಗಿರುತ್ತದೆ. ಸಮಾಜದ ಬಗ್ಗೆ ಕಾಳಜಿ ವಹಿಸಬೇಕಾದ ಸಾಹಿತಿಗಳು ಮರ್ಯಾದೆ ಇಲ್ಲದಂತೆ ವರ್ತಿಸುತ್ತಿದ್ದು, ಸಣ್ಣಪುಟ್ಟ ರಾಜಕಾರಣಿಗಳಿಗೆ ಆ ಸ್ಥಾನ ಬಿಟ್ಟುಕೊಟ್ಟಿದ್ದಾರೆ ಎಂದುಚಾಟಿ ಬೀಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಕೃಷಿ ಕಾರ್ಮಿಕ ಸಂಘದ ಎಸ್.ಎನ್ ಸ್ವಾಮಿ, ಕರ್ನಾಟಕ ರಾಜ್ಯರೈತ ಸಂಘದ ಜಿಲ್ಲಾಧ್ಯಕ್ಷಎ.ಗೋವಿಂದರಾಜು, ಹೋರಾಟಗಾರರಾದ ಶಾಂತಕೃಷ್ಣ, ತನುಜ, ನೇತ್ರಾವತಿ, ಶಾರದಾ, ಬಿ.ಮರುಳಯ್ಯ, ಕೃಷಿ ವಿಜ್ಞಾನಿ ಡಾ.ಮಂಜುನಾಥ್, ಪರಿಸರವಾದಿ ಸಿ.ಯತಿರಾಜು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296