ಬೆಂಗಳೂರು: ಸಿಎಂ ಕಚೇರಿಯ ಟಿಪ್ಪಣಿ ನಕಲು ಮಾಡಿ ವಂಚಿಸಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹಾವೇರಿ ಜಿಲ್ಲೆ ರಾಣೆಬೆನ್ನೂರು ಮೂಲದ ರಾಘವೇಂದ್ರ ಎಂದು ಗುರುತಿಸಲಾಗಿದೆ. ಕೆಎಎಸ್ ಅಧಿಕಾರಿಯೊಬ್ಬರಿಗೆ ಪೋಸ್ಟಿಂಗ್ ನೀಡುವಂತೆ ಆರೋಪಿ ರಾಘವೇಂದ್ರ, ಮುಖ್ಯಮಂತ್ರಿಗಳ ಕಚೇರಿ ಹೆಸರಿನಲ್ಲಿ ನಕಲಿ ಟಿಪ್ಪಣಿ ಸೃಷ್ಟಿಸಿದ್ದನು. ಈ ಬಗ್ಗೆ ವಿಧಾನಸೌಧದ ಸಚಿವಾಲಯ ದೂರು ನೀಡಿತ್ತು.
ಈತ ಈ ಹಿಂದೆ ಶಾಸಕರ ಖಾಸಗಿ ಸಹಾಯಕರ ಬಳಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ನಕಲಿ ಸಿಎಂ ಕಚೇರಿ ಪತ್ರ ಮತ್ತು ಸಹಿಯನ್ನು ಬಳಸಿದ್ದರ ವಿರುದ್ಧ ವಿಧಾನಸೌಧದ ಕಾರ್ಯದರ್ಶಿ ದೂರು ದಾಖಲಿಸಿದ ನಂತರ ಆತನನ್ನು ಇತ್ತೀಚೆಗೆ ಬಂಧಿಸಲಾಗಿದೆ.
ಪೋಸ್ಟಿಂಗ್ ಕೊಡಿಸುವುದಾಗಿ ಆರೋಪಿ ರಾಘವೇಂದ್ರ ಅಧಿಕಾರಿಯ ಬಳಿ ಹಣ ಪಡೆದು ವಂಚಿಸಿದ್ದ. ಅಲ್ಲದೆ ರಾಜಕಾರಣಿಗಳ ಬಳಿ ಕೆಲಸ ಮಾಡಿಸಿಕೊಳ್ಳಲು ಬರುತ್ತಿದ್ದವರಿಗೂ ವಂಚಿಸಿದ್ದ ಎನ್ನಲಾಗಿದೆ. ಸದ್ಯ ಪೊಲೀಸರು ಆರೋಪಿ ರಾಘವೇಂದ್ರನನ್ನು ವಿಚಾರಣೆ ನಡೆಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4