ತುಮಕೂರು: ಶಾಸಕ ಮುನಿರತ್ನಗೆ ಬುದ್ದಿಭ್ರಮಣೆಯಾಗಿ ಡಿ.ಕೆ. ಹೆಸರು ಹೇಳ್ತಿದ್ದಾರೆ. ಸಿಎಂ ಆಗಲಿಕ್ಕೆ ಇಂತಹ ಕೆಲಸ ಮಾಡಲು ಆಗುತ್ತಾ. ಹಾಗೆ ಮಾಡಿದ್ರೆ ಅವರ ವರ್ಚಸ್ಸು ಕಡಿಮೆಯಾಗಲ್ವಾ ಎಂದು ಎಂದು ಕೆಎಸ್ ಆರ್ಟಿಸಿ ನಿಗಮದ ಅಧ್ಯಕ್ಷ ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್.ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಶಾಸಕ ಮುನಿರತ್ನ ತಲೆ ಕೆಟ್ಟು ಡಿ.ಕೆ.ಶಿವಕುಮಾರ್ ಹೆಸರು ಹೇಳ್ತಾರೆ. ಅವರ ಮೇಲೆ ಕಂಪ್ಲೆಂಟ್ ಆಗಿದೆ. ಎಷ್ಟು ಹೆಣ್ಣು ಮಕ್ಕಳು ದೂರು ಕೊಟ್ಟಿದ್ದಾರೆ, ಎಷ್ಟು ದಿನ ಜೈಲಿಗೆ ಹೋಗಿಬಂದರು ಇದೆಲ್ಲಾ ಗೊತ್ತಿದೆ ಎಂದರು.ಸುಮ್ಮನೆ ಡಿ.ಕೆ.ಶಿವಕುಮಾರ್ ವ್ಯಕ್ತಿತ್ವ ಹರಣ ಮಾಡಲು ಹೀಗೆ ಆರೋಪ ಮಾಡ್ತಾರೆ ಎಂದರು.ಹನಿ ಹುಡುಕಿಕೊಂಡು ಹೋದವರು ಟ್ರ್ಯಾಪ್ ಆಗ್ತಾರೆ, ಸುಮ್ಮನೆ ಇದ್ರೆ ಯಾರು ಬಂದು ಟ್ರ್ಯಾಪ್ ಮಾಡ್ತಾರೆ. ಒಟ್ಟಾರೆ ಹನಿ ಹುಡುಕಿಕೊಂಡು ಹೋದರೆ ಟ್ರ್ಯಾಪ್ ಆಗೋದು ತಿಳಿಸಿದ್ದಾರೆ.
ಅವರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದರೆ ಅವರಿಗೆ ಗೊತ್ತಿರುತ್ತೆ. ಅವರು ಹೋಗಿ ದೂರು ಕೊಡಬೇಕು, ತನಿಖೆ ಆಗುತ್ತೆ. 40–50 ಜನರು ಹನಿಟ್ರ್ಯಾಪ್ ಆಗಿದೆ ಎಂದರೆ ಅವರಿಗೆ ಗೊತ್ತಿರುತ್ತೆ. ಅವರು ದೂರು ಕೊಡಲಿ ಎಂದರು.
ಇಂತಹ ಘಟನೆ ಎಂದೂ ಆಗಬಾರದು.ಅವರ ವಿರುದ್ಧ ಕ್ರಮವಾಗಲಿ. ಕಾಂಗ್ರೆಸ್ ನಾಯಕರೇ ಸದನದಲ್ಲಿ ಚೀಟಿ ನೀಡಿ ಮಾಹಿತಿ ಹೇಳಿಕೆ ವಿಚಾರದಲ್ಲಿಯೂ ಕೂಡ ತನಿಖೆಯಾಗಬೇಕು ಎಂದರು.
ಚೀಟಿ ಯಾರು ಯಾರಿಗೆ ಕೊಟ್ಟರು ಎನ್ನೋದು ತನಿಖೆ ಆಗಲಿ. ಹನಿಟ್ರ್ಯಾಪ್ ವಿಚಾರ ಪ್ರಸ್ತಾಪ ಆಗಿದ್ದ ದಿನ ನಾನು ಸದನದಲ್ಲಿ ಇರಲಿಲ್ಲ.ಈ ಹನಿಟ್ರ್ಯಾಪ್ ಚಾಳಿ ಅಂತ್ಯವಾಗಬೇಕು ಎಂದರು.
ಎಲ್ಲರೂ ಹೋಗಿ ಕೋರ್ಟ್ ನಲ್ಲಿ ಸ್ಟೇ ತರ್ತಾರೆ.ರಮೇಶ್ ಜಾರಕಿಹೊಳಿಯವರು ಕೂಡ ಕೋರ್ಟ್ ಗೆ ಹೋಗಿದ್ದರು. ದೆಹಲಿಯಿಂದ ಅವರು ಪೋನ್ ನಲ್ಲಿ ಮಾತಾಡಿದ್ದಾರೆ, ಅದಕ್ಕೆ ಇವರು ರೆಸ್ಪಾನ್ಸ್ ಮಾಡಿದ್ದಾರೆ. ಇವರು ಮಾತಾಡಿಲ್ಲ ಎಂದರೆ ಅವರು ಯಾಕೆ ಮಾತಾಡ್ತಾರೆ. ಇದೆಲ್ಲಾ ಅಂತ್ಯವಾಗಬೇಕು ಎಂದರು.
ನಿರಂತರವಾಗಿ ಪ್ರಚಾರ ಆಗ್ತಿದೆ ಇದು. ಅವರು ಮಾಡಿದ್ರು ಇವರು ಮಾಡಿದ್ರು ಫ್ಯಾಕ್ಟರಿ ಇದೆ, ಕಾಂಗ್ರೆಸ್ ನವರು ಮಾಡಿದ್ದಾರೆ. ಇದೆಲ್ಲಾ ತಾರ್ತಿಕ ಅಂತ್ಯವಾಗಬೇಕೆಂದರೆ ತನಿಖೆಯಾಬೇಕು ಎಂದರು.
ಹನಿಟ್ರ್ಯಾಪ್ ವಿಚಾರ ಸದನದಲ್ಲಿ ಪ್ರಸ್ತಾಪ ವಿಚಾರದಲ್ಲಿ ಸದನದಲ್ಲಿ ವಿಚಾರ ಪ್ರಸ್ತಾಪ ಮುನ್ನ ಮುಖಂಡರಿಗೆ ಅರಿವಿರಬೇಕು. ಪಕ್ಷದ ಮುಖಂಡರು ಮಾತಾಡುವ ಮುನ್ನ ಯೋಚಿಸಬೇಕು ಎಂದರು.
ಮೊದಲು ಸಿಎಂ ಜೊತೆ ಗೃಹ ಸಚಿವರ ಜೊತೆ ಮಾತಾಡಿ ದೂರು ಕೊಡಬಹುದಿತ್ತು. ಸದನದಲ್ಲಿ ಪ್ರಸ್ತಾಪ ಅಷ್ಟರಮಟ್ಟಿಗೆ ಸರಿಯಿಲ್ಲ ಎಂದರು.
ಹನಿಟ್ರ್ಯಾಪ್ ತನಿಖೆಯಾಗಲಿ ಉಪ್ಪು ತಿಂದವರು ನೀರು ಕುಡಿಯಲಿ. ಸದನದಲ್ಲಿ ಈಗ ಗೌರವ ಕಳೆದುಕೊಂಡಿದೆ. ಹಿಂದೆ ಸ್ಪೀಕರ್ ಗೆ ಎಷ್ಟು ಮರ್ಯಾದೆ ಕೊಡ್ತಾ ಇದ್ದರು. ಯಡಿಯೂರಪ್ಪ ವಿಪಕ್ಷ ನಾಯಕರಾಗಿದ್ದಾಗ ಯಡಿಯೂರಪ್ಪ ಒಮ್ಮೆ ಹಿಂದೆ ತಿರುಗಿ ನೋಡಿದ್ರೆ 82 ಜನ ಬಿಜೆಪಿ ಶಾಸಕರು ಗಪ್ ಚುಪ್ ಆಗೋರು ಎಂದರು.
ಆದರೆ ಈಗ ಇವು ಏನೆನೋ ಅಂತಾವೆ. ಈಗ ಹಗ್ಗ ಮೂಗುದಾರ ಕಳಚಿಬಿಟ್ಟ ಗೂಳಿಥರ ಆಗಿವೆ. ಅವರಿಗೆ ಹೇಳೋರು ಇಲ್ಲ,ಕೇಳೊರಿಲ್ಲ,ನಾಯಕತ್ವ ಇಲ್ಲ ಎಂದರು.
ಒಬ್ಬರ ಮೇಲೆ ಒಬ್ಬರು ಕಂಟ್ರೋಲ್ ಇಲ್ಲ. ಕಾಂಗ್ರೆಸ್ ನವರು ಮಾಡಿದ್ರು ಅದಕ್ಕೆ ನಾವು ಮಾಡಿದ್ವಿ ಅನ್ನೋದಲ್ಲ, ನಾವು ಹೇಗೆ ನಡೆದುಕೊಂಡ್ವಿ ಅನ್ನೋದು ಮುಖ್ಯ ಎಂದರು.
ಯಡಿಯೂರಪ್ಪ ರೀತಿ ವಿಪಕ್ಷ ನಾಯಕತ್ವ ಬೇಕು. ರಾಜ್ಯದಲ್ಲಿ ಬಿಜೆಪಿ ಸಮರ್ಪಕ ನಾಯಕತ್ವ ಇಲ್ಲ ಎಂದರು. ನಿಮಗೆ ಏನಾದರೂ ಹನಿಟ್ರ್ಯಾಪ್ ಅನುಭವ ಆಗಿದಿಯಾ ಎಂಬ ಪ್ರಶ್ನೆಗೆ, ನನಗೆ ಹನಿಟ್ರ್ಯಾಪ್ ಹೇಗೆ ಆಗುತ್ತೆ, ನಾನು ಹೆಣ್ಣು ಮಕ್ಕಳು ಹಿಂದೆ ಹೋದರೆ ತಾನೇ ಆಗೋದು. ಬರ್ತಿಯಾ ಅಂತಾ ಕರೆದರೆ ಅಥವಾ ಅಲ್ಲಿಗೆ ಬಾ ಇಲ್ಲಿಗೆ ಬಾ ಅಂತಾ ಕರೆದರೆ ನನ್ನ ಹನಿಟ್ರ್ಯಾಪ್ ಮಾಡ್ತಾರೆ ಎಂದರು.
ನಾನು ಪಕ್ಷದ ಭಾಗವಾಗಿ ಶಾಸಕನಾಗಿ ಹೇಳೊದಿಷ್ಟೇ. ಹನಿಟ್ರ್ಯಾಪ್ ವಿಚಾರವನ್ನ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಬೇಕಿತ್ತು. ಹಾದಿರಂಪ, ಬೀದಿ ರಂಪ ಮಾಡಿದ್ರೆ ಪಕ್ಷದ ಇಮೇಜ್ ಕಳೆದುಕೊಳ್ಳುತ್ತದೆ ಎಂದು ಶ್ರೀನಿವಾಸ್ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4