nammatumakuru

    Subscribe to Updates

    Get the latest creative news from FooBar about art, design and business.

    What's Hot

    ತೋಟದಲ್ಲಿ ಗಾಂಜಾ ಬೆಳೆದ ಪೊಲೀಸಪ್ಪನ ಪುತ್ರ: 950 ಗ್ರಾಂ ಸೊಪ್ಪು ವಶಕ್ಕೆ

    September 22, 2026

    ತುಮಕೂರು: ಉದ್ಯೋಗಕ್ಕಾಗಿ ನೇರ ಸಂದರ್ಶನ

    September 22, 2026

    ಗಣೇಶೋತ್ಸವ ಅನ್ನದಾನದ ವೇಳೆ ಕುದಿಯುತ್ತಿದ್ದ ಸಾಂಬಾರ್‌ ಪಾತ್ರೆಗೆ ಬಿದ್ದು ಮಹಿಳೆ ದಾರುಣ ಸಾವು

    September 22, 2026
    Facebook Twitter Instagram
    ಟ್ರೆಂಡಿಂಗ್
    • ತೋಟದಲ್ಲಿ ಗಾಂಜಾ ಬೆಳೆದ ಪೊಲೀಸಪ್ಪನ ಪುತ್ರ: 950 ಗ್ರಾಂ ಸೊಪ್ಪು ವಶಕ್ಕೆ
    • ತುಮಕೂರು: ಉದ್ಯೋಗಕ್ಕಾಗಿ ನೇರ ಸಂದರ್ಶನ
    • ಗಣೇಶೋತ್ಸವ ಅನ್ನದಾನದ ವೇಳೆ ಕುದಿಯುತ್ತಿದ್ದ ಸಾಂಬಾರ್‌ ಪಾತ್ರೆಗೆ ಬಿದ್ದು ಮಹಿಳೆ ದಾರುಣ ಸಾವು
    • ನಾಲೆಯಲ್ಲಿ ನವವಿವಾಹಿತೆ ಅನುಮಾನಾಸ್ಪದ ಕಣ್ಮರೆ: ಪತಿ ಹಾಗೂ ಕುಟುಂಬದ ವಿರುದ್ಧ ಕೊಲೆ ಆರೋಪ
    • ಕಸ್ತೂರಿರಂಗನ್ ವರದಿ ಜಾರಿಯಾದರೆ 10 ಜಿಲ್ಲೆಗಳ ಜನಜೀವನಕ್ಕೆ ಹೊಡೆತ: ಡಿ.ಕೆ. ಶಿವಕುಮಾರ್
    • ಮಹಿಳಾ PSIಗೆ ಕಪಾಳಮೋಕ್ಷ ಪ್ರಕರಣ: ಹೈಕೋರ್ಟ್ ಸೂಚನೆ ಬಳಿಕ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯ ಕ್ಷಮೆಯಾಚನೆ
    • ರಾಜ್ಯಾದ್ಯಂತ ಲೋಕಾಯುಕ್ತ ದಾಳಿ: ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಗಳಿಗೆ ಶಾಕ್!
    • ಡಿಸಿಎಂ ತವರಲ್ಲೇ ದಲಿತ ಅಪ್ರಾಪ್ತ ಬಾಲಕನ ಭೀಕರ ಕೊಲೆ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದಿದ್ದೇ ತಪ್ಪಾಯ್ತಾ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುಮಕೂರಿನಲ್ಲೇ ವಿಮಾನ ನಿಲ್ದಾಣವಾಗಲಿ: ಕೇಂದ್ರ–ರಾಜ್ಯ ಸರ್ಕಾರಕ್ಕೆ ಮಾಜಿ ಸಂಸದ ಜಿಎಸ್ ಬಿ ಆಗ್ರಹ
    ತುಮಕೂರು July 22, 2026

    ತುಮಕೂರಿನಲ್ಲೇ ವಿಮಾನ ನಿಲ್ದಾಣವಾಗಲಿ: ಕೇಂದ್ರ–ರಾಜ್ಯ ಸರ್ಕಾರಕ್ಕೆ ಮಾಜಿ ಸಂಸದ ಜಿಎಸ್ ಬಿ ಆಗ್ರಹ

    By adminJuly 22, 2026No Comments3 Mins Read
    g s basavaraju.jpg

    ತುಮಕೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು-2 ನಿರ್ಮಾಣ ಮಾಡಲು ಮುಂದಾಗಿರುವ ಕೇಂದ್ರ, ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ ರಾಜಧಾನಿ ಬೆಂಗಳೂರಿಗೆ ಪರ್ಯಾಯ ನಗರವಾಗಿ ಬೆಳೆಯುತ್ತಿರುವ ತುಮಕೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸದೆ ರಾಜಧಾನಿ ಸುತ್ತಮುತ್ತಲೇ ಮಾಡಲು ಪ್ರಸ್ತಾಪಿಸಿರುವುದು ಸರಿಯಲ್ಲ. ತುಮಕೂರು ಜಿಲ್ಲೆಯಲ್ಲೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಮಾಡಿದರೆ ರಾಜಧಾನಿ ಬೆಂಗಳೂರು ಸಂಚಾರ ದಟ್ಟಣೆಯಿಂದ ಮುಕ್ತಿ ಸೇರಿದಂತೆ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಭಾಗದವರಿಗೂ ಅನುಕೂಲವಾಗಲಿದೆ ಎಂದು ಮಾಜಿ ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.

    ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಕನಕಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ವಿಶೇಷ ಆಸಕ್ತಿ ವಹಿಸಿದ್ದಾರೆ. ತಾಂತ್ರಿಕ ಸಮಿತಿ ಪರಿಶೀಲಿಸಿರುವ ಸ್ಥಳಗಳಲ್ಲಿ ತುಮಕೂರನ್ನು ಸೇರಿಸಲಾಗಿಲ್ಲ. ವಿಪಕ್ಷ ಶಾಸಕ ಅರವಿಂದ್ ಬೆಲ್ಲದ್ ಸೇರಿದಂತೆ ಉತ್ತರ ಕರ್ನಾಟಕದ 19 ಜಿಲ್ಲೆಗಳ 37 ಚುನಾಯಿತ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಕೇಂದ್ರ ಸರ್ಕಾರಕ್ಕೆ ತುಮಕೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು-2 ನಿರ್ಮಾಣ ಮಾಡಲು ಮನವಿ ಮಾಡಿದ್ದಾರೆ. ಹಾಗಾಗಿ ವಿಮಾನ ನಿಲ್ದಾಣ ಸ್ಥಾಪನೆಗೆ ಅಗತ್ಯವಾದ ಭೂಮಿ ಸೇರಿದಂತೆ ಪೂರಕ ಸೌಲಭ್ಯವಿರುವ ತುಮಕೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಮಾಡಲು ರಾಜ್ಯ ಸರ್ಕಾರ ಕ್ರಮ ವಹಿಸಬೇಕು.

    ಹಿಂದೆ ಸಂಸದನಾಗಿದ್ದ ವೇಳೆ ಮಧುಗಿರಿ, ಕೊರಟಗೆರೆ, ಸಿರಾ ಮತ್ತು ತುಮಕೂರು ತಾಲೂಕಿನಲ್ಲಿ 1100 ಎಕರೆ ಜಮೀನು ಗುರುತಿಸಿ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಕಳುಹಿಸಲಾಗಿತ್ತು. ಈಗಿನ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ, ಹಿಂದೆ ಮಧುಗಿರಿ ಉಪವಿಭಾಗಾಧಿಕಾರಿಯಾಗಿದ್ದರು. ಅವರು ಮತ್ತು ಆಗಿನ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ವಿಮಾನ ನಿಲ್ದಾಣ ಸಂಬಂಧ ವರದಿ ಸಿದ್ಧಪಡಿಸಿದ್ದರು. ಜಿಲ್ಲೆಯವರಾದ ಡಿಸಿಎಂ ಪರಮೇಶ್ವರ್‌ ಅವರು ಕಂದಾಯ ಸಚಿವರೂ ಆಗಿರುವುದರಿಂದ ಒಂದು ತಿಂಗಳ ಅವಧಿಯಲ್ಲಿ ಜಮೀನು ಗುರುತಿಸಬೇಕು. ಪರಮೇಶ್ವರ್‌ ಅವರ ಜೊತೆಗೆ ಟಿ.ಬಿ. ಜಯಚಂದ್ರ, ಕೆ.ಎನ್‌. ರಾಜಣ್ಣ, ಸುರೇಶ್‌ಗೌಡ ರವರು ಅವರವರ ಕ್ಷೇತ್ರದಲ್ಲಿ ಜಮೀನು ಗುರುತಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

    ಸಿಲಿಕಾನ್‌ ಸಿಟಿಗೂ ಜಾಗ ಗುರುತಿಸಲಿ: ಕೇಂದ್ರ ರೈಲ್ವೆ, ಐಟಿ ಸಚಿವಾರಾದ ಅಶ್ವಿನ್‌ ವೈಷ್ಣವ್‌ ರವರು ತುಮಕೂರಿನಲ್ಲಿ ಸಿಲಿಕಾನ್‌ ಮಾದರಿ ಸಿಟಿ ಸ್ಥಾಪಿಸಿ ಎಂದು ರಾಜ್ಯದ ಕೈಗಾರಿಕಾ ಎಂ.ಬಿ. ಪಾಟೀಲ್‌ ರವರಿಗೆ ಸಭೆಯಲ್ಲಿಯೇ ಹೇಳಿದ್ದರೂ ಇದುವರೆಗೂ ಪ್ರಸ್ತಾವನೆ ಸಲ್ಲಿಸದೇ ಇರುವುದು ವಿಷಾದಕರ ಸಂಗತಿ. ಹಾಗಾಗಿ ವಿಮಾನ ನಿಲ್ದಾಣ ಹಾಗೂ ಸಿಲಿಕಾನ್‌ ಸಿಟಿ 2 ಯೋಜನೆಗಳಿಗೂ ಜಮೀನು ಗುರುತಿಸಿ ಎರಡು ಯೋಜನೆಗಳಿಗೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದು ಸೂಕ್ತವಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಭಿವೃದ್ಧಿ ರವಲ್ಯೂಷನ್‌ ಫೋರಂ ಅಧ್ಯಕ್ಷ ಕುಂದರಹಳ್ಳಿ ರಮೇಶ್‌, ಶಿವರುದ್ರಪ್ಪ, ಗುರುಕುಲ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಜಿ.ಮಲ್ಲಿಕಾರ್ಜುನಯ್ಯ ಬಿ.ಬಿ., ಮಹದೇವಯ್ಯ, ವೀರಭದ್ರಯ್ಯ, ರಕ್ಷಿತ್‌ ಮತ್ತಿತರರು ಉಪಸ್ಥಿತರಿದ್ದರು.

    ಬೆಂಗಳೂರಲ್ಲಿ ನಿರ್ಮಾಣ ಸರಿಯಲ್ಲ:

    ಕಿಷ್ಕಿಂಧೆಯಾಗಿರುವ ಬೆಂಗಳೂರಲ್ಲಿ ಮತ್ತೊಂದು ವಿಮಾನ ನಿಲ್ದಾಣ ಮಾಡುವುದು ಸರಿಯಲ್ಲ. ಬೆಂಗಳೂರಲ್ಲಿ ಸಂಚಾರ ದಟ್ಟಣೆ ಜಾಸ್ತಿಯಿದ್ದು, ಬೆಂಗಳೂರು ತಲುಪಿ ಮತ್ತೊಂದು ವಿಮಾನ ನಿಲ್ದಾಣ ತಲುಪುವುದು ಸವಾಲೇ ಸರಿ. ತುಮಕೂರು 19 ಜಿಲ್ಲೆಗಳ ಹೆಬ್ಬಾಗಿಲಾಗಿದ್ದು, ಬೆಂಗಳೂರು-ಚೆನ್ನೈ ಇಂಡಸ್ಟ್ರಿಯಲ್‌ ಕಾರಿಡಾರ್‌, ಗ್ರೀನ್‌ ಹೈವೇ ಸೇರಿದಂತೆ ಪುಣೆ ಎಕನಾಮಿಕ್‌ ಕಾರಿಡಾರ್‌, ಚೆನ್ನೈ – ಚಿತ್ರದುರ್ಗ ಇಂಡಸ್ಟ್ರಿಯಲ್‌ ಕಾರಿಡಾರ್‌, ಉದ್ದೇಶಿತ ಬೀದರ್‌-ಬೆಂಗಳೂರು ಎಕ್ಸ್‌ ಪ್ರೆಸ್‌ ಹೈವೇ ಸಹ ತುಮಕೂರು ಮಾರ್ಗವಾಗಿಯೇ ಹಾದು ಹೋಗಿದ್ದು, ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ಶಿರಾ, ಕೊರಟಗೆರೆ, ಮಧುಗಿರಿ, ತುಮಕೂರು ಈ ನಾಲ್ಕು ತಾಲೂಕಿಗೆ ಹೊಂದಿಕೊಂಡಂತೆ ಸುಮಾರು 2000ಕ್ಕೂ ಅಧಿಕ ಎಕರೆ ಸರ್ಕಾರಿ ಭೂಮಿ ಸಹ ಲಭ್ಯವಿದೆ. ಇಲ್ಲಿಯೇ ವಿಮಾನ ನಿಲ್ದಾಣ ನಿರ್ಮಿಸಬೇಕೆಂದು ಪುನರುಚ್ಛರಿಸಿದರು.

    ನಾನು ತುಮಕೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆಂದು 2020 ರಿಂದಲೂ ಒತ್ತಾಯಿಸುತ್ತಾ ಬಂದಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರವರು ತುಮಕೂರಿನಲ್ಲಿ ನಿರ್ಮಾಣ ಮಾಡಲು ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೂ ಸೇರ್ಪಡೆ ಮಾಡಲು ನಾನೇ ಮನವಿ ಮಾಡಿದ್ದೆ. ಜೊತೆಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೇಂದ್ರ ಸಚಿವ ವಿ. ಸೋಮಣ್ಣನವರು ಈ ಪ್ರಸ್ತಾಪಕ್ಕೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಮತ್ತು ಉತ್ತರ ಕರ್ನಾಟಕದ ಅನೇಕ ಸಂಘ ಸಂಸ್ಥೆಗಳು ತುಮಕೂರು ಭಾಗದಲ್ಲೇ ವಿಮಾನ ನಿಲ್ದಾಣ ಆಗಬೇಕೆಂದು ಒತ್ತಾಯಿಸಿದ್ದಾರೆ. ದಿಶಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸ್ಥಳ ಗುರುತಿಸಲು ಕೋರಲಾಗಿತ್ತು.

    — ಜಿ.ಎಸ್.ಬಸವರಾಜ್, ಮಾಜಿ ಸಂಸದ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಮಹಿಳಾ PSIಗೆ ಕಪಾಳಮೋಕ್ಷ ಪ್ರಕರಣ: ಹೈಕೋರ್ಟ್ ಸೂಚನೆ ಬಳಿಕ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯ ಕ್ಷಮೆಯಾಚನೆ

    September 22, 2026

    ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

    September 21, 2026

    ಅಹಿಂದ ವರ್ಗ ಒಂದಾಗದಿದ್ದರೆ ನಾಶ: ಎಸ್.ಟಿ ಶ್ರೀನಿವಾಸ್ ಕಳವಳ

    September 21, 2026

    Leave A Reply Cancel Reply

    Our Picks

    ಗಣೇಶೋತ್ಸವ ಅನ್ನದಾನದ ವೇಳೆ ಕುದಿಯುತ್ತಿದ್ದ ಸಾಂಬಾರ್‌ ಪಾತ್ರೆಗೆ ಬಿದ್ದು ಮಹಿಳೆ ದಾರುಣ ಸಾವು

    September 22, 2026

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಗುಬ್ಬಿ

    ತೋಟದಲ್ಲಿ ಗಾಂಜಾ ಬೆಳೆದ ಪೊಲೀಸಪ್ಪನ ಪುತ್ರ: 950 ಗ್ರಾಂ ಸೊಪ್ಪು ವಶಕ್ಕೆ

    September 22, 2026

    ಗುಬ್ಬಿ: ತೋಟದಲ್ಲಿ ಅಮಲು ಭರಿಸುವ ಗಾಂಜಾ ಗಿಡಗಳನ್ನು ಗೊಬ್ಬರ ಹಾಕಿ ಸೊಗಸಾಗಿ ಬೆಳೆಸಿದ್ದ ಖಚಿತ ಮಾಹಿತಿ ಮೇರೆಗೆ ಚೇಳೂರು ಪೊಲೀಸರು…

    ತುಮಕೂರು: ಉದ್ಯೋಗಕ್ಕಾಗಿ ನೇರ ಸಂದರ್ಶನ

    September 22, 2026

    ಗಣೇಶೋತ್ಸವ ಅನ್ನದಾನದ ವೇಳೆ ಕುದಿಯುತ್ತಿದ್ದ ಸಾಂಬಾರ್‌ ಪಾತ್ರೆಗೆ ಬಿದ್ದು ಮಹಿಳೆ ದಾರುಣ ಸಾವು

    September 22, 2026

    ನಾಲೆಯಲ್ಲಿ ನವವಿವಾಹಿತೆ ಅನುಮಾನಾಸ್ಪದ ಕಣ್ಮರೆ: ಪತಿ ಹಾಗೂ ಕುಟುಂಬದ ವಿರುದ್ಧ ಕೊಲೆ ಆರೋಪ

    September 22, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.