ಬೀದರ್: ಜಿಲ್ಲೆಯ ಕಮಲನಗರ ತಾಲೂಕಿನ ಕೊರೆಕಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಲಕ್ಷ್ಮಿನಗರ ಗ್ರಾಮದಲ್ಲಿ ಮುಂಜಾನೆ ಕುಡಿಯುವ ನೀರಿನಲ್ಲಿ ಕಪ್ಪೆ ಮರಿಗಳು ಪ್ರತ್ಯಕ್ಷವಾಗಿದ್ದು, ನೀರಿನಲ್ಲಿ ಕಪ್ಪೆ ಮರಿಗಳನ್ನು ಕಂಡು ಜನರು ಕಂಗಾಲಾಗಿದ್ದಾರೆ.
ಘಟನೆ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ದೇಶಪಾಂಡೆ ಜನರಿಗೆ ಉಡಾಫೆ ಉತ್ತರಗಳನ್ನು ನೀಡಿದರು. ಇದರಿಂದ ಆಕ್ರೋಶಗೊಂಡ ಸಾಮಾಜಿಕ ಹೋರಾಟಗಾರರಾದ ರತ್ನದೀಪ ಕಸ್ತೂರೆ ಮತ್ತು ಸುನಿಲ್ ಮಿತ್ರರವರ ನೇತೃತ್ವದಲ್ಲಿ ಜನರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ನಿರತರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು.ಈ ವೇಳೆ ಕಮಲನಗರ ತಹಸೀಲ್ದಾರ ಅಮಿತ ಕುಮಾರ ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿ, ನೀರು ಪರಿಶೀಲಿಸಿ ಪಿ.ಡಿ. ಓ ಗೆ ತರಾಟೆಗೆ ತೆಗೆದುಕೊಂಡರು.
ಮುಖಂಡ ರತ್ನದೀಪ ಕಸ್ತೂರೆ ಮಾತನಾಡಿ, ಕುಡಿಯುವ ನೀರಿನಲ್ಲಿ ಕಪ್ಪೆ ಮರಿಗಳು ಬಂದಿದ್ದು ವಿಷಾದನಿಯ ಸಂಗತಿಯಾಗಿದೆ. ಎಲ್ಲಾ ಓಣಿಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಎಲ್ಲಾ ಓಣಿಗಳಲ್ಲಿ ನೀರು ನಿಂತು ಗಬ್ಬು ನಾರುತ್ತಿವೆ, ಕೂಡಲೇ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕು ಇದಕ್ಕೆ ನೇರ ಹೊಣೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಇವರನ್ನು ಅಮಾನತು ಮಾಡಬೇಕೆಂದು ತಹಶೀಲ್ದಾರಗೆ ಮನವಿ ಮಾಡಿದರು.
ದಲಿತ್ ಸೇನೆ ಅಧ್ಯಕ್ಷ ಸುನಿಲ್ ಮಿತ್ರಾ ಮಾತನಾಡಿ, ಈಗಾಗಲೇ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿದ್ದು, ಗ್ರಾಮದ ಎಲ್ಲಾ ಮೂಲೆ ಮೂಲೆಗಳಲ್ಲಿ ಮಲೇರಿಯಾ ಡೆಂಗ್ಯು ಉತ್ಪತ್ತಿ ಮಾಡುವ ಸೊಳ್ಳೆಗಳ ನಿಯಂತ್ರಣದ ಓಷದಿಯನ್ನು ಸಿಂಪಡಿಸಬೇಕು ಎಂದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕೆಲಕಾಲ ಪ್ರತಿಭಟನಾಕಾರರು ಮುತ್ತಿಗೆ ಹಾಕಿದರು. ಈ ಸಂದರ್ಭದಲ್ಲಿ ಮುಖಂಡರಾದ ಪ್ರಕಾಶ ಕಾಂಬಳೆ, ಅಭಿಷೇಕ ಮಾನಕರೆ, ಗ್ರಾಮಸ್ಥರಾದ ಅನಿಲ ಸಾಬರೆ, ಕೆರಬಾ ಮಾನೆ, ಶೇಶೀಕಲಾ, ವಿದ್ಯಾವತಿ, ಪದ್ಮಿನಿಬಾಯಿ, ಶಾಂತಾಬಾಯಿ ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296