ತುಮಕೂರು: ಸಿದ್ದರಾಮಯ್ಯನಂತಹ ನುರಿತ ರಾಜಕಾರಣಿ ಕೂಡ ಹಠಕ್ಕೆ ಬೀಳ್ತಾರೆ ಅಂದ್ರೆ ಸ್ವಲ್ಪ ಕಷ್ಟವಾಗುತ್ತದೆ. ಅವರು ಅರ್ಥಮಾಡಿಕೊಂಡರೆ ಒಳ್ಳೆಯದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯನವರು ಅವರ ಕಾಲು ಮೇಲೆ ಅವರೇ ಕಲ್ಲು ಹಾಕಿಕೊಳ್ತಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರವನ್ನ ಅವರೇ ಬೇಡಾ ಅಂದಾಗ ನ್ಯಾಯಾಂಗವಿದೆ. ಅದರ ಮೇಲುಗಡೆ ಇನ್ನೊಂದು ಇದೆ ಎಂದರು.
ದಿಢೀರ್ ತೆಗೆದುಕೊಳ್ಳುವ ತೀರ್ಮಾನ ಏನಾಗುತ್ತದೆ ಹೇಳಿ, ಇದು ಆಗಬಾರದಿತ್ತು, ಅದ್ಯಾಕೆ ಹೀಗೆ ಮಾಡ್ತಾ ಇದ್ದಾರೋ ಗೊತ್ತಿಲ್ಲ. ಒಂದು ತಪ್ಪು ಮಾಡಲು ಹೋಗಿ ನೂರಾರು ತಪ್ಪು ಮಾಡೋದಿಕ್ಕೆ ಇಂತಹ ಚಿಂತನೆ ಒಳ್ಳೆಯದಲ್ಲ ಎಂದರು.
ರಾಜ್ಯಗಳಿಗೆ ಬರುವ ಅನುದಾನ ವಿಚಾರದಲ್ಲಿ ಜಲಶಕ್ತಿ ಖಾತೆ ನನಗೆ ನೇರವಾಗಿ ಇಲ್ಲ. ಶೇ.51 ರಾಜ್ಯದ ಪಾಲಿರುತ್ತದೆ, ಕೇಂದ್ರದಿಂದ ಬರುವ ಕೆಲಸಗಳು ನಮ್ಮವೆ ಎಂದರು.
ಅನಿರೀಕ್ಷಿತವಾಗಿ ಬಂದ ನನ್ನನ್ನು ಲಕ್ಷಾಂತರ ಮತಗಳಿಂದ ಗೆಲ್ಲಿಸಿದರು. ತುಮಕೂರಿಗೆ ಮಾಡಬೇಕಾದ ಕೆಲಸ ತುಂಬಾ ಇದೆ. ಇನ್ನೂ ಎರಡು ಮೂರು ತಿಂಗಳಲ್ಲಿ ಹಲವಾರು ಯೋಜನೆಗಳನ್ನ ತರುತ್ತೇನೆ ಎಂದರು.
ನನಗೂ ತುಂಬಾ ಶತ್ರುಗಳಿದ್ದಾರೆ, ಅವನ್ನೆಲ್ಲಾ ನೋಡ್ಕೊಂಡು ನನ್ನ ಅನುಭವ ಬಳಸುತ್ತೇನೆ. ನೆನ್ನೆ ಶಿವಮೊಗ್ಗಕ್ಕೆ ಹೋಗಿದ್ದೆ, ಬಿ.ವೈ.ರಾಘವೇಂದ್ರ ಅವರು ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ ಎಂದರು.
ಎಲ್ಲಾ ಸಂಸದರು ಕೇಂದ್ರದ ಜೊತೆ ಕೈಜೋಡಿಸಿದ್ರೆ ಏನು ಬೇಕಾದರೂ ಮಾಡಬಹುದು. ಹೊಸ ತುಮಕೂರು ಮಾಡೋಣ ಎಲ್ಲರೂ ಕೈ ಜೋಡಿಸಿ ಹೆಚ್ಚು ಅಭಿವೃದ್ಧಿ ಮಾಡೋಣ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q