ತುಮಕೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ನೆರವು ಅಭಿರಕ್ಷಕರ ಕಚೇರಿಯಲ್ಲಿ ಖಾಲಿಯಿರುವ 2 ಕಚೇರಿ ಸಹಾಯಕ/ಗುಮಾಸ್ತ ಹಾಗೂ 2 ಜವಾನ(ಮುನ್ಸಿ/ಅಟೆಂಡೆಂಟ್) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಚೇರಿ ಸಹಾಯಕ/ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸುವವರು ಯಾವುದೇ ಪದವಿಯೊಂದಿಗೆ ಮೂಲದ ಸಂಸ್ಕರಣ ಕೌಶಲ್ಯಗಳು ಮತ್ತು ಕಾರ್ಯನಿರ್ವಹಿಸುವ ಸಾಮರ್ಥ್ಯ, ಕಂಪ್ಯೂಟರ್ ಮತ್ತು ಡೇಟಾ ಫೀಡ್ ಮಾಡುವ ಕೌಶಲ್ಯ, ಅರ್ಜಿಗಳ ಸರಿಯಾದ ಪುಟ ಜೋಡಣೆಯೊಂದಿಗೆ ಉತ್ತಮ ಟೈಪಿಂಗ್ ವೇಗ, ಉಕ್ತಲೇಖನ ತೆಗೆದುಕೊಳ್ಳುವ ಮತ್ತು ನ್ಯಾಯಾಲಯಗಳಲ್ಲಿ ಪ್ರಸ್ತುತಿಗಾಗಿ ಕಡತಗಳನ್ನು ಸಿದ್ಧಪಡಿಸುವ ಸಾಮರ್ಥ್ಯ, ಕಡತ ನಿರ್ವಹಣೆ ಪ್ರಕ್ರಿಯೆ ಜ್ಞಾನವನ್ನು ಹೊಂದಿರಬೇಕು. ಈ ಹುದ್ದೆಗೆ ಮಾಸಿಕ 19,695 ರೂ.ಗಳ ವೇತನ ನಿಗಧಿಪಡಿಸಲಾಗಿದೆ.
ಜವಾನ(ಮುನ್ಸಿ/ಅಟೆಂಡೆಂಟ್) ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು. ಆಯ್ಕೆಯಾದವರಿಗೆ ಮಾಹೆಯಾನ 15,884 ರೂ.ಗಳ ವೇತನ ಪಾವತಿ ಮಾಡಲಾಗುವುದು.
ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 3ರೊಳಗಾಗಿ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾನೂನು ನೆರವು ಅಭಿರಕ್ಷಕರ ಕಚೇರಿಗೆ ಮಾನವ ಸಂಪನ್ಮೂಲ ವ್ಯಕ್ತಿ ನೇಮಕಾತಿ ಸಮಿತಿ, ನೆಲ ಮಹಡಿ, ಹೊಸ ನ್ಯಾಯಾಲಯಗಳ ಸಂಕೀರ್ಣ, ತುಮಕೂರು ಇವರಿಗೆ ಸಲ್ಲಿಸಬಹುದಾಗಿದೆ.
ನಿಗಧಿತ ಅರ್ಜಿ ನಮೂನೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0816–-2255133 ಅಥವಾ ಇ-ಮೇಲ್ ವಿಳಾಸ dlsatumkur1@gmail.com ಅಥವಾ ಜಾಲತಾಣ https://tumakuru.dcourts.gov.in ಅನ್ನು ಸಂಪರ್ಕಿಸಬಹುದು.
ಹುದ್ದೆಗಳ ನೇಮಕಾತಿಯು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, 6 ತಿಂಗಳ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ಕರ್ತವ್ಯ ಸಾಮರ್ಥ್ಯ ತೃಪ್ತಿಕರವಾದಲ್ಲಿ ವಿಸ್ತರಣೆಗೆ ಅವಕಾಶವಿರುತ್ತದೆ. ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ, ಕಂಪ್ಯೂಟರ್ ಜ್ಞಾನದ ದಾಖಲೆ ಪ್ರತಿಗಳು, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿಗಳನ್ನು ಅರ್ಜಿಗೆ ಲಗತ್ತಿಸಬೇಕು. ನೇಮಕಾತಿ ಪ್ರಾಧಿಕಾರ ಕೋರಿದಾಗ ಮೂಲ ದಾಖಲೆಗಳನ್ನು ಹಾಜರುಪಡಿಸತಕ್ಕದ್ದು. ಗಣಕ ಯಂತ್ರ/ಬೆರಳಚ್ಚು ಜ್ಞಾನ ಕುರಿತು ಕೌಶಲ್ಯ ಪರೀಕ್ಷೆ ನಡೆಸಲಾಗುವುದು ಹಾಗೂ ಅರ್ಹತೆಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q