ತಿಪಟೂರು: ಮಾ.20ರಂದು ತುಮಕೂರಿನಲ್ಲಿ ನಡೆಯಲಿರುವ ಭಾರತದ ಅಸ್ಪಶ್ಯರ ಮೊದಲ ಪ್ರತಿರೋಧ ಚಳವಳಿ, ಮಹಾಡ್ ಸತ್ಯಾಗ್ರಹದ ನೆನಪು ಕಾರ್ಯಕ್ರಮವನ್ನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಆಯೋಜನೆ ಮಾಡಿದ್ದು, ದಲಿತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಪಟೂರು ತಾಲೂಕು ಸಂಚಾಲಕ ಗಡಬನಹಳ್ಳಿ ಚಂದ್ರಶೇಖರಯ್ಯ ತಿಳಿಸಿದರು.
ನಗರದ ಕೌಸ್ತುಭ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ತುಮಕೂರಿನ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಮಾ.20ರಂದು ನಡೆಯುತ್ತಿರುವ ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳವಳಿಯ ನೆನಪು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ತಿಪಟೂರು ತಾಲೂಕಿನಾದ್ಯಂತ ದಲಿತ ಸಂಘಟನೆಗಳ ಮುಖಂಡರು, ಹಿರಿಯ ಮಹಿಳೆಯರು ಸೇರಿದಂತೆ ನೂರಾರು ಜನ ಭೀಮ ಬಂಧುಗಳುಈ ಮಹಾಡ್ ಸತ್ಯಾಗ್ರಹ ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಮಹಾಡ್ ಸತ್ಯಾಗ್ರಹ ಆಧುನಿಕ ಭಾರತದ ಇತಿಹಾಸದಲ್ಲೇ ಅತ್ಯಂತ ಮಹತ್ವವಾಗಿದ್ದು ಭಾರತದ ಮಟ್ಟದಲ್ಲಿ ದಲಿತ ಚಳವಳಿಗೆ ಅಡಿಪಾಯ ಹಾಕಿದ ಘಟನೆ ಎಂದು ಕರೆಯಲಾಗುತ್ತದೆ ಎಂದರು.
ಬಾಬಾ ಸಾಹೇಬರು ಈ ಮೂಲಕ ಮಾನವ ಹಕ್ಕುಗಳನ್ನು ಎತ್ತಿ ಹಿಡಿದರು. 1927ರಲ್ಲಿ ಬಾಬಾ ಸಾಹೇಬರು ಸಾರ್ವಜನಿಕ ಸ್ಥಳದಲ್ಲಿ ನೀರನ್ನು ಬಳಸುವ ಹಕ್ಕುಗಳನ್ನ, ಪ್ರತಿಪಾದಿಸಲು ಮಹಾಡ್ ಆರಂಭಿಸಿದರು. ತುಮಕೂರಿನಲ್ಲಿ ಮಹಾಡ್ ಚಳುವಳಿ ನೆನಪು ಕಾರ್ಯಕ್ರಮದಲ್ಲಿ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್, ರಾಜ್ಯ ಸಮಿತಿ ಸದಸ್ಯ ಕುಂದೂರು ತಿಮ್ಮಯ್ಯ, ಸೇರಿ ಅನೇಕ ಗಣ್ಯರು ಸಾಹಿತಿ ಚಿಂತಕರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಟೀಯಲ್ಲಿ ಶಿವಪುರ ರಾಮೇಶ್,ಶೆಟ್ಟಿಹಳ್ಳಿ ಮಹೇಶ್, ಸೋಮಶೇಖರ್ ಈಚನೂರು, ಲಕ್ಕಿಹಳ್ಳಿ ತಿಮ್ಮಯ್ಯ, ಮಂಜುಳ ರಂಗಸ್ವಾಮಿ ಕುಪ್ಪಾಳು, ಚಿಗ್ಗಾವಿ ಲೋಕೇಶ್, ಮನೋಹರ್ ಕೆರೆಗೋಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4