ಚೆನ್ನೈ: ಭಾಷಾ ವಿವಾದದ ಚರ್ಚೆಗೆ ಸಂಬಂಧಿಸಿದಂತೆ ಪವನ್ ಕಲ್ಯಾಣ್ ಅವರ ಟೀಕೆಗೆ ಪ್ರತಿಕ್ರಿಯಿಸಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಪವನ್ ಕಲ್ಯಾಣ್ ಗೆ ಸರಿಯಾದ ತಿಳುವಳಿಕೆ ಇಲ್ಲ, ಅವರ ತಿಳುವಳಿಕೆ ಟೊಳ್ಳು ಎಂದಿದೆ.
ಹಿಂದಿಯನ್ನು ವಿರೋಧಿಸುವವರು ಹಿಂದಿಗೆ ತಮಿಳು ಚಿತ್ರಗಳನ್ನು ಯಾಕೆ ಡಬ್ ಮಾಡುತ್ತೀರಿ ಎಂದು ಪವನ್ ಕಲ್ಯಾಣ್ ಪ್ರಶ್ನಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಎಂಕೆ ವಕ್ತಾರ ಡಾ. ಸೈಯದ್ ಹಫೀಜುಲ್ಲಾ, ಭಾಷಾ ನೀತಿಗಳ ಬಗ್ಗೆ “ಟೊಳ್ಳಾದ ತಿಳುವಳಿಕೆ” ಎಂದಿದ್ದಾರೆ.
ಹಿಂದಿ ಅಥವಾ ಇನ್ನಾವುದೇ ಭಾಷೆಯನ್ನು ಕಲಿಯುವ ವ್ಯಕ್ತಿಗಳನ್ನು ತಮಿಳುನಾಡು ಎಂದಿಗೂ ವಿರೋಧಿಸಿಲ್ಲ, ಆದರೆ ತನ್ನ ಜನರ ಮೇಲೆ ಹಿಂದಿ ಅಥವಾ ಯಾವುದೇ ಭಾಷೆಯನ್ನು ಹೇರುವುದನ್ನು ವಿರೋಧಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4