ಮೀರತ್: ಪ್ರಿಯಕರನ ಜೊತೆ ಸೇರಿ ಪತ್ನಿ ತನ್ನ ಪತಿಯನ್ನೇ ಇರಿದು ಕೊಂದು ಘಟನೆ ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ನೌಕಾಪಡೆಯ ಉದ್ಯೋಗಿ ಸೌರಭ್ ರಜಪೂತ್ (29) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಇವನ ಪತ್ನಿ ಮುಸ್ಕಾನ್ (27) ಮತ್ತು ಆಕೆಯ ಪ್ರಿಯಕರ ಸಾಹಿಲ್ ( 25) ಹತ್ಯೆ ನಡೆಸಿದ ಆರೋಪಿಗಳಾಗಿದ್ದಾರೆ.
ಕಳೆದ ಮಾರ್ಚ್ 4 ರಂದು ಸೌರಭ್ ರಜಪೂತ್ ನಿಗೂಢವಾಗಿ ನಾಪತ್ತೆಯಾಗಿದ್ದರು. ಮಾರ್ಚ್ 4 ರಂದು ಸೌರಬ್ ಗೆ ಇರಿದು ಕೊಂದಿದ್ದಾಗಿ ಇಬ್ಬರೂ ಒಪ್ಪಿಕೊಂಡಿದ್ದು, ಕೊಲೆಯ ನಂತರ ಇಬ್ಬರೂ ಆತನ ದೇಹವನ್ನು ಕತ್ತರಿಸಿ, ಶವಗಳನ್ನು ಡ್ರಮ್ ನಲ್ಲಿ ಇರಿಸಿ, ಸಿಮೆಂಟ್ ನಿಂದ ಮುಚ್ಚಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.
ಕೊಲೆ ನಂತರ, ಅವರು ಸಾಹಿಲ್ ಅವರೊಂದಿಗೆ ಗಿರಿಧಾಮಕ್ಕೆ ವಿಹಾರಕ್ಕೆ ಹೋಗಿ ಏಗೂ ಆಗಿಲ್ಲ ಎಂಬಂತೆ ಕಾಲ ಕಳೆದಿದ್ದರು.ಕೊನೆಗೆ ಸೌರಭ್ ಕುಟುಂಬದವರು ಪೊಲೀಸರಿಗೆ ದೂರು ನೀಡಿದ ನಂತರ ತನಿಖೆ ಕೈಗೊಂಡಾಗ ಕೊಲೆ ನಡೆದಿರುವುದು ಬಹಿರಂಗಗೊಂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4