ಬೀದರ್: ಜಿಲ್ಲಾ ಪೊಲೀಸರು 10 ದ್ವಿಚಕ್ರ ವಾಹನ ಕಳ್ಳತನ ಮತ್ತು ಒಂದು ಕುರಿ ಕಳವು ಪ್ರಕರಣವನ್ನು ಭೇದಿಸಿದ್ದು, 16 ಲಕ್ಷಕ್ಕೂ ಅಧಿಕ ಮೌಲ್ಯದ ದ್ವಿಚಕ್ರ ವಾಹನ, ಕುರಿ ವಶಪಡಿಸಿಕೊಂಡು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ
ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಚಂದ್ರಕಾಂತ್ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಬೀದರ್ ರವರ ಮುಂದಾಳತ್ವದಲ್ಲಿ ಭಾಲ್ಕಿ ಉಪ ವಿಭಾಗದ ಶಿವಾನಂದ್ ಪವಾಡ ಶೆಟ್ಟಿ, DySP ಭಾಲ್ಕಿ, ಅಮರೇಶ್, ಪಿ.ಐ ಬಾಲ್ಕಿ ನಗರ, ಗುರುಪಾದ, ಸಿಪಿಐ ಬಾಲ್ಕಿ ಗ್ರಾಮೀಣ ವೃತ್ತ, ಅಮರೆಪ್ಪ, ಸಿಪಿಐ ಕಮಲ ನಗರ ವೃತ್ತ ಇವರ ನೇತೃತ್ವದಲ್ಲಿ ಚಂದ್ರಶೇಖರ್, ಪಿಎಸ್ ಐ, ಕಮಲ ನಗರ ಪೊಲೀಸ್ ಠಾಣೆ, ಬಾಲಾಜಿ, ಪಿಎಸ್ ಐ ಇವರನ್ನೊಳಗೊಂಡ ನುರಿತ ಅಧಿಕಾರಿ ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸಿ 10 ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.
ಅದರಂತೆ ಕಮಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕುರಿಗಳ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿ 28 ಕುರಿಗಳನ್ನು ಮತ್ತು ಒಂದು ವಾಹನದೊಂದಿಗೆ ನಾಲ್ಕು ಜನ ಆರೋಪಿಗಳನ್ನು ವಶ ಪಡೆದುಕೊಂಡಿರುತ್ತಾರೆ.
ಜಿಲ್ಲೆಯಲ್ಲಿ ಜರುಗಿದ ಕಳ್ಳತನ ಪ್ರಕರಣದಲ್ಲಿ 16,92,000 ರೂಪಾಯಿ ಮೌಲ್ಯದ ವಸ್ತುಗಳು ಮತ್ತು 6 ಜನ ಆರೋಪಿಗಳನ್ನು ಬಂಧಿಸಿದ ಭಾಲ್ಕಿ ಉಪ–ವಿಭಾಗದ ಅಧಿಕಾರಿ ಸಿಬ್ಬಂದಿಗಳ ಕಾರ್ಯಕ್ಕೆ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು, ಬೀದರ್ ನಗದು ಬಹುಮಾನದೊಂದಿಗೆ ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296