ತುಮಕೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಜಿಲ್ಲೆಯ ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ತಾಳಗುಂದ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡುವ 18 ಎಂ.ವಿ.ಎ., 66/11ಕೆ.ವಿ ಉಪಸ್ಥಾವರಕ್ಕೆ ಹಾಲಿ ಇರುವ 66/11ಕೆವಿ ಉಪಸ್ಥಾವರ ಗುಳಿಗೇನಹಳ್ಳಿಯಿಂದ ದ್ವಿಮುಖ ಗೋಪುರಗಳ ಮೇಲೆ 10.898 ಕಿ.ಮೀ. ಉದ್ದದ 66 ಕೆವಿ ರೇಡಿಯಲ್ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಸೆಪ್ಟೆಂಬರ್ 30ರಂದು ಅಥವಾ ತದನಂತರ ವಿದ್ಯುದ್ದೀಕರಣಗೊಳಿಸಲಿದೆ.
ಈ ಪ್ರಸರಣ ಮಾರ್ಗವು ಜಿಲ್ಲೆಯ ಶಿರಾ ತಾಲ್ಲೂಕು ಕಸಬ ಹೋಬಳಿಯ ನ್ಯಾಯಗೆರೆ, ರತ್ನಸಂದ್ರ, ದೇವಗೊಂಡನಹಳ್ಳಿ, ಕಳ್ಳಂಬೆಳ್ಳ ಹೋಬಳಿಯ ಬೈರಾಪುರ, ಮಾಟನಹಳ್ಳಿ, ದೇವರಹಳ್ಳಿ, ದೊಡ್ಡಚಿಕ್ಕನಹಳ್ಳಿ, ಹೊನ್ನೇನಹಳ್ಳಿ ಗ್ರಾಮಗಳ ಸರಹದ್ದಿನಲ್ಲಿ ಹಾದು ಹೋಗಲಿದ್ದು, ಸಾರ್ವಜನಿಕರು ಸದರಿ ಗ್ರಾಮಗಳಲ್ಲಿ ಗೋಪುರಗಳನ್ನು ಹತ್ತುವುದಾಗಲೀ, ಲೋಹದ ತಂತಿ, ಹಸಿರು ಬಳ್ಳಿ, ಕೊಂಬೆ ಇತ್ಯಾದಿಗಳನ್ನು ವಿದ್ಯುತ್ ಪ್ರವಹಿಸುವ ತಂತಿಗಳಿಗೆ ಎಸೆಯುವುದಾಗಲೀ ಅಥವಾ ದನಕರುಗಳನ್ನು ಗೋಪುರಗಳಿಗೆ ಕಟ್ಟುವುದಾಗಲಿ ಮಾಡಬಾರದಾಗಿ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಸೂಚನೆ ನೀಡಿದ್ದಾರೆ.
ಸದರಿ ದಿನಾಂಕದಂದು ಅಥವಾ ತದನಂತರವೂ ಕೂಡ ಯಾರಾದರೂ ಇಂತಹ ಕೃತ್ಯಗಳನ್ನು ಎಸಗಿದಲ್ಲಿ ಉಂಟಾಗುವ ಅಪಘಾತಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಯಾವುದೇ ರೀತಿಯಲ್ಲೂ ಜವಾಬ್ದಾರಿಯಾಗುವುದಿಲ್ಲವೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q