ತುಮಕೂರು: ತಮ್ಮ ಹತ್ಯೆಗೆ ಸುಪಾರಿ ನೀಡಿರುವ ಬಗ್ಗೆ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಹೇಳಿಕೆ ನೀಡಿದ್ದರು. ಇದೀಗ ಈ ಬಗ್ಗೆ ಎಸ್ ಪಿಗೆ ಅವರು ದೂರು ನೀಡಿದ್ದಾರೆ.
ಎಸ್ಪಿ ಗೆ ದೂರು ನೀಡಿದ ಬಳಿಕ ಮಾತನಾಡಿದ ಅವರು, ಎಸ್ಪಿ ಅವರಿಗೆ ದೂರು ನೀಡಿ ವಿವರವಾಗಿ ತಿಳಿಸಿದ್ದೇನೆ ಎಂದರು.
ಆರೋಪಿಗಳು ಕಾರಿಗೆ ಜಿಪಿಎಸ್ ಹಾಕೋ ಕೆಲಸ ಮಾಡಿದ್ರು. ಒಟ್ಟು 70 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದಾರೆ. ಅದ್ರಲ್ಲಿ ಐದು ಲಕ್ಷ ಕೊಟ್ಟಿದ್ದಾರೆ. ಯಾಕ್ ಕೊಟ್ಟಿದ್ದಾರೆ ಏನು ಅಂತಾ ಗೊತ್ತಿಲ್ಲ. ನಾನು ಆಗಲಿ ನನ್ನ ಕೆಲಸ ಆಗಲಿ ಅಂತಾ ಇರೋನು ಎಂದರು.
ಸೋಮ ಮತ್ತು ಭರತ್ ಅನ್ನೋ ಹೆಸರು ಆಡಿಯೋದಲ್ಲಿ ಬಂದಿದೆ. ಅವರಿಬ್ಬರು ಯಾರಂತ ನನಗೆ ಗೊತ್ತಿಲ್ಲ. ಲೇಡಿ ಮತ್ತು ಹುಡುಗ ಮಾತನಾಡಿರೋ ಆಡಿಯೋ ಅದು. 18 ನಿಮಿಷದ ಆಡಿಯೋ ಇರೋ ಅಂತದ್ದು. ಸುಪಾರಿ ಕೊಟ್ಟಿದ್ದಾರೆ ಹೊಡೆಯಬೇಕು ಅಂತಾ ಏನ್ ವಿಚಾರ ಅಂತಾ ತನಿಖೆಯಾಗಬೇಕು ಎಂದರು.
ದ್ವೇಷ ಏನುಕ್ಕೆ ಅಂತಾ ಗೊತ್ತಿಲ್ಲ. ಜಿಪಿಎಸ್ ಚಿಪ್ ಕಾರಿಗೆ ಅಳವಡಿಸಬೇಕು ಅಂತಾ ಇದ್ರಂತೆ. ಜನವರಿಯಲ್ಲಿ ನನ್ನ ಸರ್ಕಲ್ ನಲ್ಲಿ ಅದು ಸಿಕ್ತು, ನಾನು ತಮಾಷೆ ಅಂತಾ ಸುಮ್ಮನಾಗಿದ್ದೆ. ಅದ್ರೇ ಅದು ಸಿರಿಯಸ್ ಅಂತಾ ಗೊತ್ತಾಗಿ ದೂರು ನೀಡಿದ್ದೇನೆ ಎಂದರು.
ಹನಿಟ್ಯಾಪ್ ವಿಚಾರವಾಗಿ ಸಿಐಡಿ ಅವರು ತನಿಖೆ ನಡೆಸ್ತಾ ಇದ್ದಾರೆ. ಅವರು ನಿನ್ಮೇ ಬೆಂಗಳೂರು ಮನೆ ಹತ್ತಿರ ಬಂದಿದ್ದಾರೆ. ತನಿಖೆ ನಡೆಸ್ತಾರೆ. ಶಾಮಿಯಾನ ಹಾಕೋರು ನನ್ನ ಸ್ನೇಹಿತರೇ ಇದ್ದಾರೆ. ಸುಮ್ಮನೆ ಅವರನ್ನ ಎಳೆಯೋಕೆ ಇಷ್ಟ ಇಲ್ಲ. ಇಲ್ಲಿಂದಲೇ ದೂರು ಕ್ಯಾತಸಂದ್ರಕ್ಕೆ ಕಳಿಸ್ತಾರೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4