2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ 175 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಫೈನಲ್ ಆಗಿದ್ದು, ಘೋಷಣೆಯೊಂದೇ ಬಾಕಿ ಇದೆ ಎನ್ನಲಾಗಿದೆ.
ಬೆಂಗಳೂರಿನ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತ ಸಭೆ ನಡೆದಿದ್ದು, ಈಗಾಗಲೇ 175 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ ಎನ್ನಲಾಗಿದೆ.
175 ಕ್ಷೇತ್ರಗಳಲ್ಲಿ 90 ಕ್ಷೇತ್ರಗಳಿಗೆ ಒಬ್ಬ ಅಭ್ಯರ್ಥಿ, 85 ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆ. ಇನ್ನೂ 49 ಕ್ಷೇತ್ರಗಳಿಗೆ ಅಂತಿಮವಾಗದ ಅಭ್ಯರ್ಥಿಗಳಿದ್ದಾರೆ.
ಹಾಲಿ ಶಾಸಕರ ಪೈಕಿ 10 ಮಂದಿಗೆ ಟಿಕೆಟ್ ಕೈ ತಪ್ಪಿದೆ. ಉಳಿದೆಲ್ಲಾ ಹಾಲಿ ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ನೀಡಲಾಗಿದೆ. ಬೇರೆ ಪಕ್ಷಗಳಿಂದ 25 ಜನ ಕಾಂಗ್ರೆಸ್ಗೆ ಬರುವ ನಿರೀಕ್ಷೆಯಿದ್ದು, ಅವರಿಗೆ ಈಗಾಗಲೇ ಕ್ಷೇತ್ರ ಮೀಸಲಿಡಲಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ 40ಕ್ಕೂ ಹೆಚ್ಚು ಕ್ಷೇತ್ರಗಳನ್ನು ಅಂತಿಮಗೊಳಿಸಿಲ್ಲ. ಇಂದು ಸಂಜೆಯೇ ಹೈಕಮಾಂಡ್ಗೆ ಕೈ ಅಭ್ಯರ್ಥಿಗಳ ಲಿಸ್ಟ್ ಹೋಗಲಿದ್ದು, ದೆಹಲಿಯಿಂದ ತಂಡವೊಂದು ಬಂದು ರಾಜ್ಯದಲ್ಲಿ ಸಮೀಕ್ಷೆ ನಡೆಸುತ್ತದೆ.
ಸಮೀಕ್ಷೆ ರಿಪೋರ್ಟ್ ಬಳಿಕ ಹೈಕಮಾಂಡ್ನಿಂದ ಪಟ್ಟಿ ರಿಲೀಸ್ ಮಾಡುತ್ತದೆ. ಕಾಂಗ್ರೆಸ್ ಡಿಸೆಂಬರ್ 15ಕ್ಕೆ ಮೊದಲ ಪಟ್ಟಿ ರಿಲೀಸ್ ಮಾಡಲಿದೆ.
ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ನೇತೃತ್ವದಲ್ಲಿ ಸಭೆ ನಡೆಸಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾಗಿಯಾಗಿದ್ದರು. ಎಲ್ಲಾ ಜಿಲ್ಲೆಗಳ ನಾಯಕರೊಂದಿಗಿನ ಸಭೆಯಲ್ಲಿ ಪಟ್ಟಿ ಫೈನಲ್ ಆಗಲಿದೆ. ಕೆಲ ಪೆಂಡಿಂಗ್ ಕ್ಷೇತ್ರಗಳ ಪಟ್ಟಿ ನೋಡಿದ್ರೆ ಭಾರೀ ಕುತೂಹಲವಿದೆ. ಕಾಂಗ್ರೆಸ್ ಪೆಂಡಿಂಗ್ ಇಟ್ಟಿರೋ ಕ್ಷೇತ್ರಗಳು
ಯಾವ್ಯಾವುವು ಗೊತ್ತಾ?
ಕಾಂಗ್ರೆಸ್ ಪಟ್ಟಿಯಲ್ಲಿ ಕೆಲ ಕ್ಷೇತ್ರಗಳು ಪೆಂಡಿಂಗ್ನಲ್ಲಿದ್ದು, ಪೆಂಡಿಂಗ್ ಪಟ್ಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಯಶವಂತಪುರ, ಮಹಾಲಕ್ಷ್ಮೀಲೇಔಟ್, ಕೆ.ಆರ್.ಪುರಂ, ಆರ್. ಆರ್.ನಗರ, ಗೋವಿಂದರಾಜನಗರ, ಯಲ್ಲಾಪುರ, ಅರಸೀಕೆರೆ, ಮುಳಬಾಗಿಲು, ಚಿಕ್ಕಬಳ್ಳಾಪುರ, ಪುತ್ತೂರು, ಮಸ್ಕಿ, ವಿರಾಜಪೇಟೆ, ಗೋಕಾಕ್ ಕ್ಷೇತ್ರಗಳಿಗೆ ಟಿಕೆಟ್ ಅಂತಿಮಗೊಳಿಸಲಾಗಿಲ್ಲ.
ಮೈಸೂರಿನ ಚಾಮುಂಡೇಶ್ವರಿ, ಬಾದಾಮಿ, ಕೋಲಾರದಲ್ಲಿ ಟಿಕೆಟ್ ಫೈನಲ್ ಮಾಡದೇ ಇರುವುದು ಕುತೂಹಲಕ್ಕೆ ಕಾರಣವಾಗಿದ್ದು, ಈ ಮೂರು ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಣಕ್ಕಿಳಿಯುತ್ತಾರೆ ಎಂಬುದು ಗೌಪ್ಯವಾಗಿ ಇರಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy