ತುಮಕೂರು: ಮಹಾನಗರಪಾಲಿಕೆ ವಾರ್ಡ್ ಸಂಖ್ಯೆ 1 ರಿಂದ 35ರ ವ್ಯಾಪ್ತಿಯಲ್ಲಿರುವ ಅಧಿಕೃತ(ಎಂಎಆರ್–19 ವಹಿಯಲ್ಲಿನ ಆಸ್ತಿ ಮತ್ತು ಸಕ್ಷಮ ಪ್ರಾಧಿಕಾರದಿಂದ ಲೇಔಟ್ ಮಂಜೂರಾತಿ ಪಡೆದಿರುವ) ಖಾಲಿ ನಿವೇಶನಗಳನ್ನು ಸರ್ಕಾರದ ಆದೇಶದನ್ವಯ ಇ–ಆಸ್ತಿ ವ್ಯಾಪ್ತಿಗೆ ಒಳಪಡಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕೆಂದು ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
URL PIDs List Link: https://tinyurl.com/TCCPIDlist ನಲ್ಲಿ ಪ್ರಚುರಪಡಿಸಿರುವ ಆಸ್ತಿ ಸಂಖ್ಯೆ(PID–Property Identification Number)ಗಳ ಖಾಲಿ ನಿವೇಶನಗಳಿಗೆ ಇ-ಆಸ್ತಿ ನಮೂನೆ-2ನ್ನು ಪಡೆಯದೇ ಇರುವ ಮಾಲೀಕರು ಜಿಯೋಟ್ಯಾಗ್(Latitude and Longitude with date and Timings) ಒಳಗೊಂಡ ಸ್ವತ್ತಿನ ಛಾಯಾಚಿತ್ರ, ಮಾಲೀಕರ ಭಾವಚಿತ್ರ, ಆಧಾರ್ ಕಾರ್ಡ್ನೊಂದಿಗೆ ಪಾನ್ ಕಾರ್ಡ್/ಪಾಸ್‌ಪೋರ್ಟ್/ಡ್ರೈವಿಂಗ್ ಲೈಸೆನ್ಸ್/ವೋಟರ್ ಐಡಿ/ಪಡಿತರ ಚೀಟಿಯ ನಕಲು ಸೇರಿದಂತೆ ಇನ್ನಿತರೆ ಅಗತ್ಯ ದಾಖಲೆಗಳ ಪ್ರತಿಯನ್ನು ಸಲ್ಲಿಸಿ ತಮ್ಮ ಸ್ವತ್ತನ್ನು ಇ–ಆಸ್ತಿಗೆ ಒಳಪಡಿಸಬಹುದಾಗಿದೆ.
ಆಸ್ತಿ ಮಾಲೀಕರು ತಮ್ಮ ಸ್ವತ್ತಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಮಹಾನಗರಪಾಲಿಕೆಯ ಇ–ಆಸ್ತಿ ಕೌಂಟರ್ ಗೆ ಸಲ್ಲಿಸಿ ಇ–ಆಸ್ತಿ ನಮೂನೆ–2ನ್ನು ಪಡೆಯಬಹುದಾಗಿದೆ. ಸ್ವತ್ತನ್ನು ಇ–ಆಸ್ತಿಗೆ ವರ್ಗಾಯಿಸುವ ಪ್ರಕ್ರಿಯೆಯಲ್ಲಿ ಯಾವುದೇ ನ್ಯೂನ್ಯತೆಗಳು ಕಂಡು ಬಂದಲ್ಲಿ ಸಕ್ಷಮ ಪ್ರಾಧಿಕಾರ ತೆಗೆದುಕೊಳ್ಳುವ ತೀರ್ಮಾನವು ಅಂತಿಮವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4