nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜಿಲೆಟಿನ್ ಕಡ್ಡಿ ಕಟ್ಟಿಕೊಂಡು ಸ್ಫೋಟಿಸಿಕೊಂಡ ವ್ಯಕ್ತಿ — ತಂದೆ, ಮಗಳು ದಾರುಣ ಸಾವು; ನಾಲ್ವರಿಗೆ ಗಂಭೀರ ಗಾಯ

    August 11, 2026

    ಬೆಂಗಳೂರು ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರಾಜ್ ಹೆಸರು ಔಟ್!

    August 11, 2026

    ಬರದ ಮುನ್ಸೂಚನೆ; ಮುನ್ನೆಚ್ಚರಿಕೆ ವಹಿಸಲು ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

    August 11, 2026
    Facebook Twitter Instagram
    ಟ್ರೆಂಡಿಂಗ್
    • ಜಿಲೆಟಿನ್ ಕಡ್ಡಿ ಕಟ್ಟಿಕೊಂಡು ಸ್ಫೋಟಿಸಿಕೊಂಡ ವ್ಯಕ್ತಿ — ತಂದೆ, ಮಗಳು ದಾರುಣ ಸಾವು; ನಾಲ್ವರಿಗೆ ಗಂಭೀರ ಗಾಯ
    • ಬೆಂಗಳೂರು ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರಾಜ್ ಹೆಸರು ಔಟ್!
    • ಬರದ ಮುನ್ಸೂಚನೆ; ಮುನ್ನೆಚ್ಚರಿಕೆ ವಹಿಸಲು ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
    • ಹೀಗೂ ಉಂಟೆ | ಹತ್ತಿಯಲ್ಲೇ ಮೊಳಕೆ ಬಂದ ಮರಿಗಿಡಗಳು, ಮರ ಅಣಬೆ
    • ಕಳಚಿತು ಸ್ಟಾರ್ ಹೊಟೇಲ್ ಗಳ ಮುಖವಾಡ: ಕೊಳೆತ ಮಾಂಸ, ಬೂಸ್ಟ್ ಹಿಡಿದ ತರಕಾರಿ, ವಿಷ ಎಣ್ಣೆ ಪತ್ತೆ
    • ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’
    • ಬೆಳಕುಣಿ (ಚೌದ್ರಿ)–ಮುಂಗನಾಳ ರಸ್ತೆ ಹದಗೆಟ್ಟು ಸಂಚಾರಕ್ಕೆ ಸಂಚಕಾರ: ತಕ್ಷಣ ದುರಸ್ತಿಗೆ ಜೀವನ್ ಮಾಳೆಗೆ ಆಗ್ರಹ
    • ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: FIR ದಾಖಲು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರುದ್ರಭೂಮಿಯಲ್ಲಿ ‘ಅಡವಿ’ ಚಿತ್ರದ ಪೋಸ್ಟರ್ ಪೌರಕಾರ್ಮಿಕರಿಂದ ಬಿಡುಗಡೆ ಮಾಡಿಸಿದ ನಿರ್ದೇಶಕ ಟೈಗರ್ ನಾಗ್
    ರಾಜ್ಯ ಸುದ್ದಿ March 30, 2023

    ರುದ್ರಭೂಮಿಯಲ್ಲಿ ‘ಅಡವಿ’ ಚಿತ್ರದ ಪೋಸ್ಟರ್ ಪೌರಕಾರ್ಮಿಕರಿಂದ ಬಿಡುಗಡೆ ಮಾಡಿಸಿದ ನಿರ್ದೇಶಕ ಟೈಗರ್ ನಾಗ್

    By adminMarch 30, 2023No Comments4 Mins Read
    adavi

    ಕನ್ನಡದ ‘ ಕಾಂತಾರ ’ ಮತ್ತು ತಮಿಳಿನಲ್ಲಿ ತೆರೆಕಂಡ ‘ಜೈ ಭೀಮ್’ ಚಿತ್ರಗಳ ಪಟ್ಟಿಗೆ ಸೇರಲು ಕನ್ನಡದ ಮತ್ತೊಂದು ಚಿತ್ರ “ *ಅಡವಿ ” ಇದು ಮತ್ತೊಂದು ಕಾಂತಾರ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಿದೆ ಚಿತ್ರತಂಡ, ಪರಿಸರ ಸಂರಕ್ಷಣೆ ಹಾಗೂ ಆದಿವಾಸಿಗಳ ಜೀವನ ಆಧಾರಿತ ಸ್ಥಳೀಯ ಹೊಸ ಪ್ರತಿಭೆಗಳಿಂದ ಮೂಡಿಬಂದ ಅಡವಿ ಚಿತ್ರವನ್ನು ರುದ್ರಭೂಮಿಯಲ್ಲಿ ಪಟ್ಟಣವನ್ನು ಸ್ವಚ್ಛ ಸುಂದರವಾಗಿಸುವ ಪೌರಕಾರ್ಮಿರಿಂದ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದು ಇಡೀ ರಾಜ್ಯದಲ್ಲಿ ಮನೆ ಮಾತಾಗಲಿ ಎನ್ನುವುದು ಎಲ್ಲರ ಆಶಯವಾಗಿದೆ.

    ಪತ್ರಕರ್ತ ಸಾಮಾಜಿಕ ಹೋರಾಟಗಾರ ಟೈಗರ್ ನಾಗ್ ಕಾದಂಬರಿಯನ್ನು ಆಧರಿಸಿ, ಅವರೇ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮತ್ತು ನಿರ್ಮಾಣ ಮಾಡುತ್ತಿರುವ ಅಡವಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಕೊರಟಗೆರೆಯ ಪಟ್ಟಣದಲ್ಲಿ ವಿಶೇಷವಾಗಿ ರುದ್ರಭೂಮಿಯಲ್ಲಿ ಪೌರಕರ್ಮಿಕರಿಂದ ಬಿಡುಗಡೆ ಗಳಿಸಿ ಜನ ಮನ್ನಣೆ ಪಡೆದರು.

    ನಗರ ಪಾಲಿಕೆ, ನಗರಸಭ ಪುರಸಭೆ ಪಟ್ಟಣ ಪಂಚಾಯಿತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮಂತಹ ಸಾಮಾನ್ಯ ಪೌರಕಾರ್ಮಿಕರಿಂದ ಅಡವಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿಸಿದ್ದು ಸ್ವಚ್ಛತಾ ರಾಯಭಾರಿ ಗಳಾಗಿ ಕೆಲಸ ಮಾಡುತ್ತಿರುವ ನಮಗೆ ಸಲ್ಲಿಸಿದ ಗೌರವವಾಗಿದೆ ಎಂದರು.

    ಕೊರಟಗೆರೆ ಪಟ್ಟಣದ ರುದ್ರಭೂಮಿಯಲ್ಲಿ ಬುಧವಾರ ನಡೆದ ಸರಳ ಕರ‍್ಯಕ್ರಮದಲ್ಲಿ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ನಗರದ ಸ್ವಚ್ಛತೆಗೆ ದುಡಿಯುವ ನಮ್ಮಂತಹ ಕಾರ್ಮಿಕರನ್ನು ಗಮನಿಸದೆ ಇರುವ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಕಾರ‍್ಯಕ್ರಮಕ್ಕೆ ಆಹ್ವಾನಿಸಿ ಪೋಸ್ಟರ್ ಅನ್ನು ನನ್ನಂಥ ಪೌರ ಕಾರ್ಮಿಕರ ಕೈಯಿಂದ ಬಿಡುಗಡೆ ಮಾಡಿಸುವ ಮೂಲಕ ಪೌರಕಾರ್ಮಿಕರ ಮಹತ್ವವನ್ನು ಸ್ವಚ್ಛತೆಯ ಅಗತ್ಯತೆಯ ಸಂದೇಶವನ್ನು ನಾಡಿಗೆ ಚಿತ್ರತಂಡ ನೀಡಿದೆ. ಈ ಚಿತ್ರವು ಯಶಸ್ಸಾಗಲಿ ಎಂದು ಶುಭಹಾರೈಸಿದರು.

    ಸಂವಿಧಾನ ಸಿನಿ ಕಂಬೈನ್ಸ್ ಅಡಿಯಲ್ಲಿ ನಿರ್ಮಿಸಲಾಗಿರುವ ಅಡವಿ ಚಿತ್ರವು ಚಿತ್ರೀಕರಣದ ಆರಂಭದಲ್ಲೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು. ಅರಣ್ಯ ಸಂರಕ್ಷಣೆ. ಅರಣ್ಯದೊಂದಿಗೆ ಬೆಸೆದುಕೊಂಡಿರುವ ಮೂಲ ನಿವಾಸಿಗಳ ಬದುಕಿನ ಹೋರಾಟದ ವಾಸ್ತವದ ನೈಜ ಚಿತ್ರಣವನ್ನು ತೆರೆದಿಡಲಿದೆ. ಈ ಚಿತ್ರದಲ್ಲಿ ಸಾಮಾಜಿಕ ಹೋರಾಟಗಾರರು ಪ್ರಗತಿಪರ ಚಿಂತಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಬಗ್ಗೆ ಈಗಾಗಲೇ ರ‍್ಚೆ ಆರಂಭವಾಗಿದೆ.

    ಮೋಹನ್ ಮರ‍್ಯ ಪ್ರಥಮ ಬಾರಿಗೆ ನಾಯಕನಟನಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಇವರಿಗೆ ಶಿಲ್ಪ ಮತ್ತು ಆರುಂದತಿ ಲಾಲ್ ನಾಯಕಿಯರಾಗಿದ್ದಾರೆ. ಖಳನಾಯಕನಾಗಿ ರ‍್ಜುನ್ ಪಾಳೇಗಾರ ಇವರೊಂದಿಗೆ ಟೈಗರ್ ನಾಗ ಸಾತ್ ನೀಡಿದ್ದಾರೆ. ಉಗ್ರಂ ದೇವು. ಮಂಜೀವ. ವೃಶ್ಚಿಕ. ಶಿಲ್ಪಾ ಟೈಗರ್ ನಾಗ್. ಖ್ಯಾತ ಜಾಯಗ್ರಹ ರವಿ ಕುಮಾರ್ ಸನ. ಹಿರಿಯ ನರ‍್ದೇಶಕ ಅನಂತರಾಜು, ದಾಸೇಗೌಡ ಪತ್ರರ‍್ತರಾದ ಶಿವಾನಂದ ನವೀನ್ ಅರುಣ್. ಸಿದ್ದರಬೆಟ್ಟಸಿದ್ದರಾಜು, ಮತ್ತಿತರರು ನಟಿಸಿದ್ದಾರೆ.

    ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿರುವ ಈ ಚಿತ್ರಕ್ಕೇ ಮಂಜು ಮಹಾದೇವ್ ಸಂಗೀತ. ವಿಪಿನ್ ರಾಜ್ ಛಾಯಾಗ್ರಹಣ . ಸಂಜೀವ ರೆಡ್ಡಿ ಸಂಕಲನವಿದ್ದು. ಕೆ ಮಂಜು ಕೋಟೆ ಕೆರೆ. ಟೈಗರ್ ನಾಗ. ಎ ಆರ್ ಸಾಯಿ ರಾಮ್ ಇವರುಗಳ ಸಂಭಾಷಣೆ. ಕೆ ಮಂಜು ಕೋಟೆಕೆರೆ ಸಹ ನಿರ್ದೇಶನ. ದಯಾನಂದ್ ಮೇಕಪ್. ಬಾಬುಖಾನ್ ಕಲಾ ನಿರ್ದೇಶನ. ಪುಟ್ಟರಾಜು ವಸ್ತ್ರಲಂಕಾರ. ನಾಗೇಂದ್ರ ಪತ್ರಿಕಾ ಪ್ರಚಾರ. ದೇವು ಪ್ರಚಾರಕಲೆ. ದಿನೇಶ್ ರಾಜ್. ರ‍್ಷಿತ. ಪವನ್ ಡಾಲಿ . ಸಿದ್ದರಬೆಟ್ಟ ರಾಕೇಶ್. ಪ್ರಭಾಕರ್ ಇವರುಗಳ ಸಹಾಯಕ ನಿರ್ದೇಶನ. ಎ.ಆರ್ ಸಾಯಿ ರಾಮ್ ಸಾಹಸ. ನೃತ್ಯ ನಿರ್ದೇಶನ ಹಾಗೂ ತಾಂತ್ರಿಕ ನಿರ್ದೇಶನವಿದೆ.

    ಚಿತ್ರವು ಮುಂಬರುವ ಎಪ್ರಿಲ್ ಮಾಹೆಯ ತೆರೆಗೆ ಕಾಣಿಸಿಕೊಳ್ಳುವ ಆಶೋತ್ತರವನ್ನು ನಮ್ಮ ಚಿತ್ರತಂಡ ಹೊಂದಿದೆ. ಸಮಾಜ ಕಟ್ಟಕಡೆಯ ಸಮುದಾಯಕ್ಕೆ ನ್ಯಾಯಒದಗಿಸುವ ನೈಜ್ಯ ಕಾದಂಬರಿ ಆಧಾರಿತ ಚಿತ್ರ ಇದ್ದಾಗಿದ್ದು, ರಾಜ್ಯದ ಜನತೆ ನವ ಪ್ರತಿಭೆಗಳಿಗೆ ಪ್ರೋತ್ಸಾಹಿಸಬೇಕು. ಪ್ರತಿಯೊಬ್ಬರು ನೋಡಲೇ ಬೇಕಾದ ಚಿತ್ರ ನಮ್ಮ ಅಡವಿ ಚಿತ್ರವನ್ನು ಚಿತ್ರ ಮಂದಿರಗಳಿಗೆ ಆಗಮಿಸಿ ವೀಕ್ಷಣೆ ಮಾಡಬೇಕೆಂದು ಮನವಿ ಮಾಡುತ್ತೇವೆ ಎಂದು ಟೈಗರ್ ನಾಗ್ ಹೇಳಿದರು.
    ಸಂವಿಧಾನ ಸಿನಿ ಕಂಬೈನ್ಸ್ ಬ್ಯಾನರ್ ಅವರ ಪ್ರಥಮ ಕಾಣಿಕೆಯಾಗಿರುವ ಈ ಚಿತ್ರಕ್ಕೆ ಟೈಗರ್ ನಾಗ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

    ಕಾಡನ್ನೇ ಸರ್ವಸ್ವ ಎಂದು ನಂಬಿ ಬದುಕುವ ದ್ರಾವಿಡ ಜನರ ಬದುಕು ಬವಣೆ ಬಿಂಬಿಸುವ ಈ ಚಿತ್ರವನ್ನು ಕರ್ನಾಟಕದ ಪ್ರಪ್ರಥಮ ದಲಿತ ದೊರೆ ಕೊರಂಗರಾಯ ಆಳಿದ ಐತಿಹಾಸಿಕ ಹಿನ್ನೆಲೆ ಹಾಗೂ ಸಿದ್ದಸಾಧು ಸಂತರ ತಪೋಭೂಮಿ ಆಯುರ್ವೇದದಲ್ಲಿ ಪ್ರಖ್ಯಾತಿ ಪಡೆದಿರುವ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ಸಿದ್ದರಬೆಟ್ಟದಲ್ಲಿ ಚಿತ್ರದ ಮುಹೂರ್ತಕ್ಕೆ ಚಾಲನೆ ನೀಡಲಾಗಿತ್ತು ಅಲ್ಲಿಯೇ ಕುಂಬಳಕಾಯಿಯನ್ನು ಹೊಡೆದು ಚಿತ್ರೀಕರಣ ಮುಗಿಸಿರುವುದು ವಿಶೇಷ.

    ಈ ಚಿತ್ರಕ್ಕಾಗಿ ಸಿದ್ದರಬೆಟ್ಟದಲ್ಲಿ ಆದಿವಾಸಿಗಳು ವಾಸಿಸುವ ಗುಡಿಸಲಹಟ್ಟಿ ಸೆಟ್ಟನ್ನು ಹಿರಿಯ ಕಲಾ ನಿರ್ದೇಶಕ ಬಾಬು ಖಾನ್ ರವರ ಕಲಾ ನಿರ್ದೇಶನದಲ್ಲಿ ನಿರ್ಮಾಣ ಮಾಡಲಾಗಿತ್ತು. ಕಲಾ ಸಹಾಯಕರ ತಂಡ ಹಗಲಿರುಳನ್ನದೆ ಶ್ರಮಿಸಿ ಗುಡಿಸಲಹಟ್ಟಿ ಸೆಟ್ ಜೊತೆಗೆ ಪೊಲೀಸ್ ಸ್ಟೇಷನ್ ಹಾಗೂ ಕೋರ್ಟ್ ಸೆಟ್ ನಿರ್ಮಾಣ ಮಾಡಲಾಗಿತ್ತು. ಯೋಜನೆಯಂತೆ ನಿಗದಿತ ಅವಧಿಯಲ್ಲಿ ಯಾವುದೇ ವಿಗ್ನ ವಿಲ್ಲದೆ ಸಿದ್ದರಬೆಟ್ಟ. ಚಿಕ್ಕಮಗಳೂರು. ಸಕಲೇಶಪುರ. ಮತ್ತಿತರ ಸುಂದರ ಪ್ರಕೃತಿಯ ತಾಣಗಳಲ್ಲಿ ಚಿತ್ರೀಕರಣ ಪರ‍್ಣಗೊಂಡಿದ್ದು ಅರಣ್ಯ ರಕ್ಷಣೆಯ ಜಾಗೃತಿಯ ಜೊತೆಗೆ ಆದಿವಾಸಿ ದ್ರಾವಿಡ ಜನರು ತಮ್ಮ ಬದುಕಿಗಾಗಿ ಏನೆಲ್ಲಾ ಹೋರಾಟ ಮಾಡಬೇಕಾಗುತ್ತದೆ ಎಂಬ ಆದಿವಾಸಿ ಜನ ವ್ಯವಸ್ಥೆಯ ಹಾಗೂ ಪರಿಸರ ಸಂರಕ್ಷಣೆಯ ಕಥೆಯನ್ನು ತೆರೆದಿಡುವ ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಹೊಸ ಅಲೆಯ ಚಿತ್ರವಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಈ ಚಿತ್ರದಲ್ಲಿ ಮೂರು ಹಾಡುಗಳಿವೆ ಎರಡು ಫೈಟ್ ಇವೆ.

    ಖಾಸಗಿ ಪತ್ರಿಕೆಯೊಂದರಲ್ಲಿ ವರದಿಗಾರನಾಗಿ. ಕೊರಟಗೆರೆ ತಾಲ್ಲೂಕು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ 5 ವರ್ಷ ಪೂರೈಸಿ ಸ್ವತಃ ಹೋರಾಟಗಾರರಾಗಿರುವ ಟೈಗರ್ ನಾಗ್ ನಿಜಜೀವನದಲ್ಲಿ ಸುಮಾರು 17ಕ್ಕೂ ಹೆಚ್ಚು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿ ಸುಮಾರು 10 ವರ್ಷಗಳಿಂದ ಶೋಷಿತರ ಪರವಾಗಿ ಅನ್ಯಾಯದ ವಿರುದ್ಧವಾಗಿ ರಾಜ್ಯಾದ್ಯಂತ ವಿಭಿನ್ನ ಹೋರಾಟಗಳ ಮೂಲಕ ಪ್ರಖ್ಯಾತಿ ಪಡೆದಿರುವ ಅವರು ಸಿನಿಮಾ ಮೂಲಕ ಕೂಡ ತಳ ಸಮುದಾಯಗಳ ಪರ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿದ್ದಾರೆ ತಮ್ಮ ಮೊದಲ ಪ್ರಯತ್ನದಲ್ಲೇ ಸಾಕಷ್ಟು ರ‍್ಚೆಯ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ ಎಂಬುದು ಹಲವು ಚಿಂತಕರು ಹಾಗೂ ಹೋರಾಟಗಾರರ ಅಭಿಪ್ರಾಯವಾಗಿದೆ.
    ಈ ಚಿತ್ರದಲ್ಲಿ ಸಮಾಜದ ಅಂಕು-ಡೊಂಕುಗಳು. ಮತ್ತು ಭ್ರಷ್ಟಾಚಾರ. ಮಾನವಹಕ್ಕು ಉಲ್ಲಂಘನೆ. ಸಮಾನತೆಗಾಗಿ ಹೋರಾಟ ಮಾಡುವ. ನಿಜವಾದ ಹೋರಾಟಗಾರರನ್ನು ಬಳಸಿಕೊಂಡು ಚಿತ್ರೀಕರಿಸಲಾಗಿದೆ ಜಗದೀಶ್ ಮಹಾದೇವ್ (ವಕೀಲ್ ಸಾಬ್) ಹ.ರಾ.ಮಹಿಷಾ. ಕುಣಿಗಲ್ ರಮೇಶ್ ಸೇರಿದಂತೆ ಹಲವು ನಿಜವಾದ ಹೋರಾಟಗಾರರು ಅಭಿನಯಿಸಿದ್ದಾರೆ.

    ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡು ಆದಿವಾಸಿಗಳಿಗೆ ನ್ಯಾಯ ಕೊಡಿಸಲು ಹೋರಾಟ ಮಾಡಿರುವ ನಾಯಕ ಮೋಹನ್ ಮರ‍್ಯ. ಬಾಲ ನಟನಾಗಿ ಅಭಿನಯಿಸಿರುವ ಮಾಸ್ಟರ್ ಚಿರುಶ್ರೀ ನಾಗ್. ನಾಯಕಿ ಅರುಂಧತಿಲಾಲ್. ಖಳ ನಟನಾಗಿರುವ ಅರ್ಜುನ್ ಪಾಳೇಗಾರ್. ಮತ್ತೊಬ್ಬ ಖಳನಟನಾಗಿ ಅಭಿನಯಿಸಿರುವ ಟೈಗರ್ ನಾಗ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಉಗ್ರಂ ಚಿತ್ರದ ಛಾಯಾಗ್ರಾಹಕ ರವಿಕುಮಾರ್ ಸನ್ನ. ಖ್ಯಾತ ನರ‍್ದೇಶಕ ಆರ್ ಅನಂತರಾಜ್. ರಥವಾರಂ ದೇವು. ಶಿಲ್ಪಾ ನಾಗ್. ವಾಲೆ ಚಂದ್ರು . ರಾಮನಾಯಕ್ . ವೃಶ್ಚಿಕ. ಮಂಜೀವ. ಸರಸ್ವತಿ. ಬಾಲ ನಟಿ ಬೇಬಿ ಸಿಂಚನ. ಪತ್ರರ‍್ತರಾದ ಶಿವಾನಂದ. ಕೆ ಆರ್ ಓಬಳರಾಜು ನವೀನ್ ಆನಂದ್ ದಿನೇಶ್ ಅರುಣ್,ದಾಸೇಗೌಡ ಸೇರಿದಂತೆ ಮತ್ತಿತರರು ನಟಿಸಿದ್ದಾರೆ.

    ಈ ಚಿತ್ರದ ಸಹ ನಿರ್ದೆಶಕ ಮಧುಗಿರಿ ಸಾಧಿಕ್ ಸಾಬ್, ಕಥೆ ಚಿತ್ರಕಥೆ ನಿರ್ದೇಶನ ಟೈಗರ್ ನಾಗ್, ಛಾಯಾಗ್ರಹಣ ವಿಪಿನ್ ರಾಜ್, ಸಂಗೀತ ನಿರ್ದೇಶಕ ಜುಡಾ ಸ್ಯಾಂಡಿ, ಸಂಭಾಷಣೆ ಸಾಹಸ ಎ.ಆರ್.ಸಾಯಿರಾಮ್, ಸಹ ನಿರ್ದೇಶಕ ಕೆ.ಮಂಜುನಾಥ್ ಕೋಟೆ ಕೆರೆ, ವಸ್ತ್ರಾಲಂಕಾರ ಪುಟ್ಟರಾಜ, ಮೇಕಪ್ ದಯಾನಂದ್, ಇದೀಗ ಸಂಕಲನ ಧ್ವನಿ ಜೋಡಣೆ ಕಾರ್ಯವನ್ನು ಮುಗಿಸಿದ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಶೀಘ್ರವಾಗಿ ಮುಗಿಸಿ ತೆರೆಗೆ ಬರಲು ಸಿದ್ಧವಾಗುತ್ತಿದೆ.

    ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ.ಪಂ ಸದಸ್ಯ ನಟರಾಜು, ಯುವಮುಖಂಡ ರಮೇಶ್, ಪತ್ರಕರ್ತ ಸಂಘದ ಅಧ್ಯಕ್ಷ ಕೆ.ವಿ. ಪುರುಷೋತ್ತಮ್ ಸೇರಿದಂತೆ ಅನೇಕರು ಚಿತ್ರಕ್ಕೆ ಶುಭಕೋರಿದರು.

    ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ

    admin
    • Website

    Related Posts

    ಬೆಂಗಳೂರು ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರಾಜ್ ಹೆಸರು ಔಟ್!

    August 11, 2026

    ಹೀಗೂ ಉಂಟೆ | ಹತ್ತಿಯಲ್ಲೇ ಮೊಳಕೆ ಬಂದ ಮರಿಗಿಡಗಳು, ಮರ ಅಣಬೆ

    August 11, 2026

    ಕಳಚಿತು ಸ್ಟಾರ್ ಹೊಟೇಲ್ ಗಳ ಮುಖವಾಡ: ಕೊಳೆತ ಮಾಂಸ, ಬೂಸ್ಟ್ ಹಿಡಿದ ತರಕಾರಿ, ವಿಷ ಎಣ್ಣೆ ಪತ್ತೆ

    August 11, 2026

    Comments are closed.

    Our Picks

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026

    36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!

    August 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಜಿಲೆಟಿನ್ ಕಡ್ಡಿ ಕಟ್ಟಿಕೊಂಡು ಸ್ಫೋಟಿಸಿಕೊಂಡ ವ್ಯಕ್ತಿ — ತಂದೆ, ಮಗಳು ದಾರುಣ ಸಾವು; ನಾಲ್ವರಿಗೆ ಗಂಭೀರ ಗಾಯ

    August 11, 2026

    ಕಲಬುರಗಿ: ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನ ದೇಹಕ್ಕೆ ಜಿಲೆಟಿನ್ ಕಡ್ಡಿಗಳನ್ನು ಕಟ್ಟಿಕೊಂಡು ಸ್ಫೋಟಿಸಿಕೊಂಡ ಪರಿಣಾಮ ತಂದೆ ಹಾಗೂ ಪುತ್ರಿ…

    ಬೆಂಗಳೂರು ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರಾಜ್ ಹೆಸರು ಔಟ್!

    August 11, 2026

    ಬರದ ಮುನ್ಸೂಚನೆ; ಮುನ್ನೆಚ್ಚರಿಕೆ ವಹಿಸಲು ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

    August 11, 2026

    ಹೀಗೂ ಉಂಟೆ | ಹತ್ತಿಯಲ್ಲೇ ಮೊಳಕೆ ಬಂದ ಮರಿಗಿಡಗಳು, ಮರ ಅಣಬೆ

    August 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.