nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಪಿಎಸ್‌ ಐ ತೀರ್ಥೇಶ್

    June 25, 2026

    ಬಿ.ಕೆ.ಶ್ರೀನಿವಾಸ್ (ಬೆಂಕೋಷ್ಣಿ) ಅವರ ‘ಜೀವನಯಾನ’ ಪುಸ್ತಕ ಬಿಡುಗಡೆ

    June 25, 2026

    ಬಿಡದಿಯಲ್ಲಿ ಟೌನ್ ಶಿಪ್ ನಿರ್ಮಾಣದಲ್ಲಿ ಕಾಂಗ್ರೆಸ್ ಪಾಲುದಾರಿಕೆ: ಶಾಸಕರ ಎಂ.ಟಿ.ಕೃಷ್ಣಪ್ಪ ಆರೋಪ

    June 25, 2026
    Facebook Twitter Instagram
    ಟ್ರೆಂಡಿಂಗ್
    • ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಪಿಎಸ್‌ ಐ ತೀರ್ಥೇಶ್
    • ಬಿ.ಕೆ.ಶ್ರೀನಿವಾಸ್ (ಬೆಂಕೋಷ್ಣಿ) ಅವರ ‘ಜೀವನಯಾನ’ ಪುಸ್ತಕ ಬಿಡುಗಡೆ
    • ಬಿಡದಿಯಲ್ಲಿ ಟೌನ್ ಶಿಪ್ ನಿರ್ಮಾಣದಲ್ಲಿ ಕಾಂಗ್ರೆಸ್ ಪಾಲುದಾರಿಕೆ: ಶಾಸಕರ ಎಂ.ಟಿ.ಕೃಷ್ಣಪ್ಪ ಆರೋಪ
    • ತುಮಕೂರು: ವಿವಿಧ ಸೌಲಭ್ಯಕ್ಕಾಗಿ ಆನ್ ಲೈನ್ ಅರ್ಜಿ
    • ಜೂ. 28ರಂದು ಪಲ್ಸ್ ಪೋಲಿಯೋ ಲಸಿಕೆ, ಜಿಲ್ಲೆಯಾದ್ಯಂತ 1,86,831 ಮಕ್ಕಳಿಗೆ ಲಸಿಕೆ ಗುರಿ: ಡಾ.ಚಂದ್ರಶೇಖರ್
    • ಬಿಜೆಪಿ ಶಾಸಕರ ವಿರುದ್ಧ ಅಡ್ಡಮತದಾನದ ಅಪಪ್ರಚಾರ: ಎಸ್ ಪಿ ಕಚೇರಿ ಬಳಿ ಪ್ರತಿಭಟನೆ: ಕ್ರಮಕ್ಕೆ ಆಗ್ರಹ
    • ಗ್ರಾಮೀಣ ಮೂಲಭೂತ ಸೌಕರ್ಯ ಕಲ್ಪಿಸುವುದೇ ನಮ್ಮ ಆದ್ಯತೆ, ಜು.1 ರಿಂದ ನರೇಗಾ ಬದಲು ವಿಬಿಜಿ ರಾಮ್‌ ಜಿ ಯೋಜನೆ ಜಾರಿ : ಜಿಪಂ ಸಿಇಒ
    • ಬೆಳಕುಣಿ ಚೌದ್ರಿ ಗ್ರಾಮದಲ್ಲಿ ನೀರಿನ ಹಾಹಾಕಾರ: ಸ್ಥಳಕ್ಕೆ ತಾಲೂಕು ಅಧಿಕಾರಿಗಳ ಭೇಟಿ, ಭರವಸೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅವಕಾಶವಂಚಿತರಾಗಿ ಹತಾಶರಾಗುವ ಬದಲು, ಸಾಧನೆಗೆ ಹಾತೊರೆಯಬೇಕು: ಡಾ.ಕೆ.ಜಯಲಕ್ಷ್ಮಮ್ಮ
    ಮಧುಗಿರಿ January 23, 2023

    ಅವಕಾಶವಂಚಿತರಾಗಿ ಹತಾಶರಾಗುವ ಬದಲು, ಸಾಧನೆಗೆ ಹಾತೊರೆಯಬೇಕು: ಡಾ.ಕೆ.ಜಯಲಕ್ಷ್ಮಮ್ಮ

    By adminJanuary 23, 2023No Comments2 Mins Read
    madhugiri

    Provided by
    Provided by

    ಮಧುಗಿರಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಸ್ಥಾನಗಳನ್ನು ಗಳಿಸಬಹುದು. ಪದವಿಯ ಜೊತೆಗೆ ಹಲವಾರು ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು. ಜೀವನದಲ್ಲಿ ಬರುವ ಹಲವಾರು ಅಡೆತಡೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಸದೃಢ ಜೀವನ ಕಟ್ಟಿಕೊಳ್ಳಬೇಕು. ಜೀವನದಲ್ಲಿ ಅವಕಾಶವಂಚಿತರಾಗಿ ಹತಾಶರಾಗುವ ಬದಲು, ಸಾಧನೆಗೆ ಹಾತೊರೆಯಬೇಕು. ಭವಿಷ್ಯದ ಬಗ್ಗೆ ಆಶಾವಾದಿಯಾಗಿರಬೇಕೆಂದು ಬೆಂಗಳೂರಿನ ಪ್ರತಿಷ್ಟಿತ ಸರ್ಕಾರಿ ಆರ್.ಸಿ.ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಕೆ.ಜಯಲಕ್ಷ್ಮಮ್ಮ ಕರೆನೀಡಿದರು.

    ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಎಂ.ಕಾಂ. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಓರಿಯೆಂಟೇಶನ್ ಮತ್ತು ವಿಶೇಷ ಉಪನ್ಯಾಸ ಮತ್ತು ಸ್ವಾಗತ ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದ ಅವರು, ಆಳವಾದ ಅಧ್ಯಯನ, ಸತತ ಪರಿಶ್ರಮದಿಂದ ಯಶಸ್ಸಿನ ಮಂತ್ರ ಅಡಗಿದೆ. ಪ್ರಸಕ್ತ ದಿನಗಳಲ್ಲಿ ಯುಜಿಸಿ, ಐ.ಸಿ.ಎಸ್.ಎಸ್.ಆರ್ ಮತ್ತು ಸರ್ಕಾರಿ ಮತ್ತು ಖಾಸಗೀ ಸಂಶೋಧನಾ ಕೇಂದ್ರಗಳು ಸಂಶೋಧನೆಗೆ ಒತ್ತು ನೀಡಿದ್ದು, ಸ್ನಾತಕೋತ್ತರ ಪದವಿ ಅಧ್ಯಯನ ಜೊತೆಗೆ ಕಿರು ಸಂಶೋಧನೆ ಕೈಗೊಳ್ಳಬೇಕು. ಪದವಿ ಜೊತೆಗೆ ಡ್ಯುಯಲ್ ಡಿಗ್ರಿ ಮಾಡುವ ಅವಕಾಶವಿದೆ. ಸ್ವಯಂ, ಮೂಕ್ಸ್ ಪೋರ್ಟಲ್‍ಗಳಲ್ಲಿ ಲಭ್ಯವಿರುವ ವಿವಿಧ ಕೋರ್ಸ್‍ಗಳನ್ನು ಕಲಿತು ಉದ್ಯೋಗಾರ್ಹತೆ ಹೆಚ್ಚಿಸಿಕೊಳ್ಳಬೇಕು. ಮೂನ್‍ಲೈಟಿಂಗ್ ಕಲ್ಪನೆಯಡಿಯಲ್ಲಿ ತಜ್ಞತೆ ಹೊಂದಿರುವ ಉದ್ಯೋಗಿ ಅಧಿಕೃತ ಉದ್ಯೋಗದ ಸಮಯದ ನಂತರ ಹೆಚ್ಚುವರಿ ಸಂಪಾದನೆಗಾಗಿ ಅಥವಾ ಆತ್ಮತೃಪ್ತಿಗಾಗಿ ಬೇರೆ ಬೇರೆ ಉದ್ಯೋಗಗಳನ್ನು ಕೈಗೊಳ್ಳಬಹುದು. ಕೊರೋನಾ ನಂತರ ಕಾಲಘಟ್ಟದಲ್ಲಿ ಆನ್ಲೈನ್, ವರ್ಚುವಲ್ ಅವಕಾಶಗಳು ಎಲ್ಲೆಡೆ ವ್ಯಾಪ್ತಿ ವಿಸ್ತರಿಸಿವೆ.ಈ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಿ ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಟಿ.ಎನ್.ನರಸಿಂಹಮೂರ್ತಿ ಮಾತನಾಡಿ ಬದಲಾಗುತ್ತಿರುವ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸಮಯಕ್ಕೆ ಆದ್ಯತೆಕೊಟ್ಟು, ವಿವಿಧ ಆಯಾಮಗಳಲ್ಲಿ ಅಧ್ಯಯನಶೀಲರಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸವಾಲಿನಿಂದ ಎದುರಿಸಿಬೇಕು. ವಿವಿಧ ಕ್ಷೇತ್ರಗಳಲ್ಲಿ ನೈಪುಣ್ಯವುಳ್ಳ ನುರಿತ ಸಿಬ್ಬಂದಿ ಅವಶ್ಯವಿದ್ದು, ಕೆಲವರು ಹಣಕ್ಕಾಗಿ ತಮ್ಮ ಜೀವನವನ್ನು ಸವೆಸುತ್ತಾರೆ. ಆದರೆ ಬುದ್ದಿವಂತರು ಹಣವನ್ನೇ ತಮ್ಮ ಜೀವನದುದ್ದಕ್ಕೂ ದುಡಿಸಿಕೊಳ್ಳುತ್ತಾರೆ. ಆದುದರಿಂದ ಉನ್ನತ ಆಲೋಚನೆಗಳಿಗೆ ಮನ್ನಣೆ ನೀಡಿ, ವಿವಿಧ ಕ್ಷೇತ್ರಗಳಲ್ಲಿ ಮಂಚೂಣಿ ಸ್ಥಾನ ಪಡೆಯಬೇಕೆಂದರು. ಆಧುನಿಕ ಜಗತ್ತಿನಲ್ಲಿ ಹಲವಾರು ವಿಷಯಗಳು ವಿಕಾಸ ಹೊಂದಿ, ಹಲವಾರು ಕ್ಷೇತ್ರಗಳಾಗಿ ಉದಯಿಸಿವೆ.  ಪರಿಣಿತ ವಾಣಿಜ್ಯ ಪದವೀಧರರಿಗೆ ಹಲವಾರು ಉದ್ಯೋಗಾವಕಾಶಗಳು ಕೈಬೀಸಿ ಕರೆಯುತ್ತಿವೆ. ಉದ್ಯಮಿಯಾಗಲು ಸಾಕಷ್ಟು ಸರ್ಕಾರದ ಸವಲತ್ತು, ರಿಯಾಯಿತಿಗಳು ಲಭ್ಯವಿದೆ ಎಂದರು.


    Provided by
    Provided by

    ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಚಾಲಕರಾದ ಬಿ.ಮಂಜುನಾಥ್ ಮಾತನಾಡಿ ಸ್ನಾತಕೋತ್ತರ ವಾಣಿಜ್ಯ ವಿಭಾಗವು ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಯೋಜನಾ ವರದಿ ತಯಾರಿಕೆ, ಕೈಗಾರಿಕಾ ವೀಕ್ಷಣೆ, ಕ್ಷೇತ್ರ ಸಂಚಾರ, ಬ್ಯಾಂಕಿಂಗ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಲಹೆ ಮಾರ್ಗದರ್ಶನ ನೀಡುತ್ತಿದ್ದು ಇವುಗಳ ಸದ್ಬಳಕೆ ಮಾಡಿಕೊಳ್ಳಿ, ಹಲವು ಹಿರಿಯ ವಿದ್ಯಾರ್ಥಿಗಳು ಉನ್ನತ ಸ್ಥಾನಗಳಿಸಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಆದುದರಿಂದ ಕಿರಿಯ ವಿದ್ಯಾರ್ಥಿಗಳು ಹಿರಿಯರ ಮಾರ್ಗದರ್ಶನದಲ್ಲಿ ನಡೆದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದರು.

    ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಿ.ಎಸ್.ಮುನೀಂದ್ರಕುಮಾರ್ ಮಾತನಾಡಿ ಯಶಸ್ಸನ್ನು ಯಾರೂ ತಂದು ನಮ್ಮ ಬೊಗಸೆಯಲ್ಲಿಡುವುದಿಲ್ಲ, ಯಶಸ್ಸು ಗಳಿಸಲು ನಿರಂತರ ಸಾಧನೆ, ಕಠಿಣ ಪರಿಶ್ರಮ ಅಗತ್ಯ. ಚಂಚಲ ಮನಸ್ಸನ್ನು ಹತೋಟಿಯಲ್ಲಿಟ್ಟು, ಅರಿಷಡ್ವರ್ಗಗಳನ್ನು ನಿಯಂತ್ರಿಸಿ ಸಾಧನೆಗೆ ಮುಂದಾದರೆ ಯಶಸ್ಸು ನಮ್ಮದಾಗುತ್ತದೆ. ಸಾಮಾನ್ಯರೂ ಮೇರುವ್ಯಕ್ತಿಗಳಾಗಿ ಪರಿವರ್ತನೆಯಾಗಲು ಬೌದ್ದಿಕ ಸಾಮಥ್ರ್ಯ ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತುಬದ್ದ ಜೀವನ ನಿಮ್ಮದಾದರೆ ಭವಿಷ್ಯದ ಬದುಕು ಹಸನಾಗುತ್ತದೆ. ಆದುದರಿಂದ ಜೀವನವೇ ಒಂದು ಕೊಡುಗೆ, ಇಲ್ಲಿ ಸಾರ್ಥಕ ಜೀವನಕಟ್ಟಿಕೊಂಡು ತಂದೆತಾಯಿ, ಗುರುಹಿರಿಯರ ಮೆಚ್ಚುಗೆ ಗಳಿಸಬೇಕೆಂದರು.

    ಸಮಾರಂಭದಲ್ಲಿ ಅಧ್ಯಾಪಕರಾದ ಡಾ.ಲಕ್ಷ್ಮೀಪತಯ್ಯ, ಬಿ.ಎನ್.ರೇಖಾ, ಬಿ.ಪಿ.ಪುಟ್ಟರಾಜು ಮಾತನಾಡಿದರು. ನಾಗಪ್ಪ,  ಶಿವಶಂಕರರೆಡ್ಡಿ, ನರಸಿಂಹರಾಜು, ತಿಪ್ಪೇಶಪ್ಪ, ರುಬಿಯಾ ಖಾನಂ ಉಪಸ್ಥಿತರಿದ್ದರು. ಇದೇ ಸಂಧರ್ಭದಲ್ಲಿ ಪ್ರಥಮ ಎಂ.ಕಾಂ.ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು. ದ್ವಿತೀಯ ಎಂ.ಕಾಂ. ವಿದ್ಯಾರ್ಥಿಗಳಾದ ಶಾಲಿನಿ, ಸಂದೀಪ್ ನಿರ್ವಹಿಸಿ, ತಿಪ್ಪೇಶ್ ಯಾದವ್ ಸ್ವಾಗತಿಸಿ. ಸೌಮ್ಯ ಪ್ರಾರ್ಥಿಸಿ, ಗಂಗರಾಜು ವಂದಿಸಿ, ತೌಸೀಫ್ ಮತ್ತು ಧನಂಜಯ ಕಾರ್ಯಕ್ರಮ ನಿರೂಪಿಸಿದರು.

    ವರದಿ: ಆಬಿದ್, ಮಧುಗಿರಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

    admin
    • Website

    Related Posts

    ಉತ್ತಮ ಆರೋಗ್ಯಕ್ಕೆ ರಕ್ತ ಪರೀಕ್ಷೆ ಸಹಕಾರಿ: ಮುರಳೀಧರ್ ಹಾಲಪ್ಪ

    June 24, 2026

    ಮಧುಗಿರಿ: ಪುರಸಭೆ ನಿರ್ಲಕ್ಷ,  ಪಾದಚಾರಿ ಜಾಗ ಒತ್ತುವರಿ

    June 19, 2026

    ಸಿದ್ದರಬೆಟ್ಟ ಶ್ರೀಮಠದ 20ನೇ ವರ್ಷದ ಮಹೋತ್ಸವಕ್ಕೆ ಭರದ ಸಿದ್ಧತೆ:  ಜೂ.21 ರಂದು ಧರ್ಮ ಜಾಗೃತಿ ಮತ್ತು ಉಚಿತ ಸಾಮೂಹಿಕ ವಿವಾಹ, “ಸಿದ್ಧಶ್ರೀ ಪ್ರಶಸ್ತಿ” ಪ್ರದಾನ

    June 19, 2026

    Comments are closed.

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಪಿಎಸ್‌ ಐ ತೀರ್ಥೇಶ್

    June 25, 2026

    ಕೊರಟಗೆರೆ: ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಇದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದ್ದು,…

    ಬಿ.ಕೆ.ಶ್ರೀನಿವಾಸ್ (ಬೆಂಕೋಷ್ಣಿ) ಅವರ ‘ಜೀವನಯಾನ’ ಪುಸ್ತಕ ಬಿಡುಗಡೆ

    June 25, 2026

    ಬಿಡದಿಯಲ್ಲಿ ಟೌನ್ ಶಿಪ್ ನಿರ್ಮಾಣದಲ್ಲಿ ಕಾಂಗ್ರೆಸ್ ಪಾಲುದಾರಿಕೆ: ಶಾಸಕರ ಎಂ.ಟಿ.ಕೃಷ್ಣಪ್ಪ ಆರೋಪ

    June 25, 2026

    ತುಮಕೂರು: ವಿವಿಧ ಸೌಲಭ್ಯಕ್ಕಾಗಿ ಆನ್ ಲೈನ್ ಅರ್ಜಿ

    June 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.