ಬೆಳಗಾವಿ : ಕುಂದಾನಗರಿ ಕೇವಲ ಕುಂದಾಗಷ್ಟೇ ಅಲ್ಲಾ ತಾಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭತ್ತದ ಬೆಳೆಗೂ ಪ್ರಸಿದ್ಧಿ ಪಡೆದಿದೆ. ಬಾಸುಮತಿ ಭತ್ತದ ತಳಿಗೆ ಪ್ರಸಿದ್ಧತೆ ಪಡೆದಿರುವ ಬೆಳಗಾವಿ ಭತ್ತದ ಖನಿಜ ಎಂದು ಪ್ರಸಿದ್ಧಿಯಾಗಿದೆ.
ಆದ್ರೇ ಭತ್ತ ಬೆಳೆಗಾರರು ಈ ಭಾರಿ ಕಂಗಾಲಾಗಿದ್ದಾರೆ. ಕೂಲಿ ವೆಚ್ಚ, ಕಾರ್ಮಿಕರ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿಂದ ತತ್ತರಿಸಿ ಹೋಗಿದ್ದಾರೆ. ಈ ಕುರಿತು ಪಂಚಾಯತ್ ಸ್ವರಾಜ್ ಸಮಾಚಾರದೊಂದಿಗೆ ಭತ್ತ ಬೆಳೆಗಾರರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ.
ಬೆಳಗಾವಿ ಸುತ್ತುಮುತ್ತಲು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತಿದ್ದು ಇಲ್ಲಿ ಪ್ರಮುಖವಾಗಿ ಇಂದಿರಾಯನಿ ಬಾಸುಮತಿ, ಕಿಟಾಲ ತಳಿಗಳ ಹೆಚ್ಚನ ಪ್ರಮಾಣದಲ್ಲಿ ಬೆಳೆಯುತ್ತಾರೆ .
ಈಗ ಇರುವ ಮಾರುಕಟ್ಟೆಯ ಬೆಲೆ ತಳಿಗಳ ಆಧಾರಿತವಾಗಿದ್ದು ಬಾಸುಮತಿಗೆ 4 ಸಾವಿರ ರೂಪಾಯಿಗಳಿಂದ ಹಿಡಿದು 5 ಸಾವಿರ ರೂಪಾಯಿವರೆಗೆ ಬೆಲೆ ಹೊಂದಿದೆ. 2500-3000 ಸಾವಿರವರೆಗೆ ರೈತರಿಂದ ದಲ್ಲಾಳಿಗಳು ಖರೀದಿ ಮಾಡುತ್ತಾರೆ.
ಈ ಬೆಲೆ ರೈತನಿಗೆ ಸಮಾಧಾನಕರವಾಗಿಯೂ ಇಲ್ಲ ಮತ್ತು ಈ ಬೆಲೆಯಿಂದಾಗಿ ಕೃಷಿ ಮಾಡಲು ಕಷ್ಟವಾಗಿದೆ, ಒಂದು ಕಡೆ ಕೃಷಿ ಕಾರ್ಮಿಕರ ಕೊರತೆಯಿದ್ದು, ಬೆಲೆ ಏರಿಕೆ ಬಿಸಿ ರೈತರಿಗೆ ಹೆಚ್ಚಿನ ತೊಂದರೆ ಆಗಿದೆ ,ಒಂದು ಕಡೆ ರಸಗೊಬ್ಬರುಗಳೇ ಬೆಲೆ ಏರಿಕೆ, ಕೃಷಿ ಉಪಕರಣಗಳ ಬೆಲೆ ಏರಿಕೆ, ಅಲ್ಲದೆ ಕೃಷಿ ಕಾರ್ಮಿಕರು ಕೂಡ ರೈತರ ಸಮಸ್ಯೆಗಳಿಗೆ ಪ್ರಮುಖ ಕಾರಣರಾಗಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 300 ರಿಂದ 350 ರೂಪಾಯಿ ಕೂಲಿ ಸಿಗುತ್ತಾ ಇರುವುದರಿಂದ ದಿನವೆಲ್ಲ ಕೂಲಿ ಮಾಡಬೇಕೆಂದು ಕೃಷಿ ಕಾರ್ಮಿಕರ ತಮ್ಮ ಕಷ್ಟ ಹೇಳಿಕೊಂಡರು.
ಬೆಳಗಾವಿ ಸುತ್ತಮುತ್ತಲು ಒಟ್ಟಾರೆ ಭತ್ತ ಬೆಳೆಯುವ ಬೆಳೆಗಾರರು ಭಕ್ತ ಕೊಯ್ಲೆ ಮಾಡುತ್ತಿರುವುದು ಮತ್ತು ರಾಶಿ ಮಾಡುತ್ತಿರುವುದು ಅಲ್ಲಲ್ಲೇ ಕಂಡು ಬಂದಿರುವ ದೃಶ್ಯ ವಾಗಿದೆ. ಈ ಸಲ ಮಳೆಯ ಪ್ರಮಾಣ ಕೂಡ ರೈತರಿಗೆ ಸ್ವಲ್ಪ ನೆಮ್ಮದಿ ನೀಡಿದೆ ಎಂದು ಹೇಳಬಹುದು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy