ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಳಿಯಾರ್ ರಸ್ತೆಯಲ್ಲಿನ ಪೌದಿಯಮ್ಮ(ಭಗವತಿ) ಅಮ್ಮನ ದೇವಸ್ಥಾನಕ್ಕೆ ತಿರುಗುವ ತಿರುವಿನಲ್ಲಿರುವ ಸೇತುವೆ ಭೂಮಿಯಿಂದ ಬೇರ್ಪಟ್ಟಿದ್ದು , ಇನ್ನೇನು ಆಗಲೋ , ಈಗಲೋ ಕಳಚಿ ಬೀಳುವಂತಿದೆ.
ಈ ರಸ್ತೆಯು ಮೈಸೂರಿಗೆ ತೆರಳುವ ಪ್ರಧಾನ ರಸ್ತೆಯಾಗಿದ್ದು , ಈ ರಸ್ತೆಯಲ್ಲಿನ ಬದಿಯಲ್ಲಿರುವ ಸೇತುವೆ ಶಿಥಿಲಾವಸ್ಥೆ ಗೆ ತಲುಪಿ ವರ್ಷಗಳೇ ಕಳೆದವು . ಈ ರಸ್ತೆಯಲ್ಲಿನ ಬೀದಿ ದೀಪಗಳು ಕೂಡ ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ರಸ್ತೆಯು ಬಹಳ ಕಿರಿದಾಗಿದ್ದು, ಇಲ್ಲಿ ಬಹಳಷ್ಟು ಅಪಘಾತಗಳು ಕೂಡ ನಡೆಯುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸೇತುವೆಯನ್ನು ಸರಿಪಡಿಸಿ ಎಂದು ತಾಲ್ಲೂಕಿನ ಸಾರ್ವಜನಿಕರು ಹಲವು ಭಾರಿ ದೂರು ನೀಡಿದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ. ಇದರಿಂದ ನೊಂದ ಸಾರ್ವಜನಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ಸೇತುವೆಯು ಇನ್ನೇನೂ ಇವಾಗಲೋ ಅವಾಗಲೋ ಕಳಚಿ ಬೀಳುವ ಸ್ಥಿತಿಯಲ್ಲಿರುವುದರಿಂದ ತಾಲ್ಲೂಕಿನ ಶಾಸಕರು ಈ ತಕ್ಷಣವೇ ಈ ಬಗ್ಗೆ ಗಮನ ಹರಿಸಿ ಸಂಬಂಧಪಟ್ಟವರನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ: ಮುರುಳಿಧರನ್ ಆರ್., ಹಿರಿಯೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy