ಕೊರಟಗೆರೆ: ಸಿದ್ದರಬೆಟ್ಟದ ದಾಸೋಹ ಭವನಕ್ಕೆ ಎರಡು ಮಿನಿ ಕುಡಿಯುವ ನೀರಿನ ಘಟಕಗಳನ್ನ ಕೊಡುಗೆಯಾಗಿ ಸಮಾಜ ಸೇವಕ ವಿ.ನಟರಾಜ್ ನೀಡಿದರು.
ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿರುವ ದಾಸೋಹ ಭವನದಲ್ಲಿ ಶುದ್ಧ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದ ಸುದ್ದಿ ಕೇಳಿದ ತಕ್ಷಣ ಎರಡು ಫಿಲ್ಟರ್ ವಾಟರ್ ಘಟಕಗಳನ್ನು ಸಮಾಜ ಸೇವಕ ವಿ.ನಟರಾಜ್ ತಮ್ಮ ಕುಟುಂಬದ ಪರವಾಗಿ ಕೊಡುಗೆಯಾಗಿ ನೀಡಿದ್ದಾರೆ.
ಕ್ಷೇತ್ರಕ್ಕೆ ಬರುವ ಸಾವಿರಾರು ಜನ ಭಕ್ತರು ದಾಸೋಹ ಭವನಕ್ಕೆ ಬಂದು ಪ್ರಸಾದ ಸೇವಿಸುತ್ತಿರುತ್ತಾರೆ. ಆದರೆ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಈ ವಿಚಾರ ತಿಳಿದು ಮಣುವಿನಕುರಿಕೆ ಗ್ರಾಮದ ಸಮಾಜ ಸೇವಕ ಹಾಗೂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ (KREIS) ವಿ.ನಟರಾಜ್ ಎರಡು ಮಿನಿ ಶುದ್ಧ ಕುಡಿಯುವ ನೀರಿಗೆ ಘಟಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಈ ನೂತನ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬಾಳೆ ಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳು ಚಾಲನೆ ನೀಡಿದ್ದಾರೆ.
ನಂತರ ಶ್ರೀ ಸಿದ್ದೇಶ್ವರ ಸ್ವಾಮಿಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ ವಿ.ನಟರಾಜ್ ರವರನ್ನ ಸನ್ಮಾನಿಸಲಾಯಿತು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW