ಬಾಗಲಕೋಟೆ: ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ತಾಂತ್ರಿಕ ಕೌಶಲ್ಯಗಳಿಗೆ ಪ್ರಾದ್ಯಾನ್ಯತೆ ನೀಡಬೇಕು. ಪ್ರಾಯೋಗಿಕ ವಿಷಯಗಳ ಕಲಿಕೆಯಲ್ಲಿ ನೈಪುಣ್ಯತೆ ಇದ್ದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಕಿತ್ತೂರಿನ ಕೆ.ಎನ್.ವಿ.ವಿ.ಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಂಗೀತ ವಿಭಾಗದ ಪ್ರೋ.ನಾಗರಾಜ ಎಚ್.ಕೆ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಂಗೀತ ವಿಭಾಗದಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಉಪನ್ಯಾಸ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳ ಕಿರು ಉಪನ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದರು. ಸಂಗೀತ ಅಧ್ಯಯನದಲ್ಲಿ ಕೌಶಲ್ಯಗಳ ಅಭಿವೃದ್ಧಿ ಮುಖ್ಯ. ನೂತನ ಶಿಕ್ಷಣ ಪದ್ದತಿಯಲ್ಲಿ ಸಂಗೀತದ ಆಶೋತ್ತರಗಳನ್ನು ಈಡೇರಿಸುವುದು ಒಂದು ಸವಾಲವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಂಗೀತ ಹೊಸದು ಮತ್ತು ಉಳಿದ ವಿಷಯಗಳಿಗಿಂತ ವಿಭಿನ್ನವಾಗಿದೆ. ಗುರುಕುಲ ಪದ್ಧತಿಯ ಪರಂಪರೆ ಮುಂದುವರಿಸಿಕೊಂಡು ಬಂದಿರುವ ವಿಭಾಗವಾಗಿದೆ ಎಂದರು.
ಸಂಗೀತಕ್ಕೆ ಹಲವಾರು ವೈಶಿಷ್ಟ್ಯತೆಗಳಿವೆ. ಹಲವಾರು ವಿದ್ವಾಂಸರು ರಾಗಗಳ ಬಗ್ಗೆ ಚಿಂತನೆ ಮಾಡಿದ್ದಾರೆ. 12ನೇ ಶತಮಾನದಲ್ಲಿ ವೈಜ್ಞಾನಿಕವಾಗಿ ಸಂಗೀತದ ಪರಿಕಲ್ಪನೆ ಮಂಡಿಸಿದ್ದಾರೆ. ಸ್ವರ, ನಾದ, ಶೃತಿ ,ಸಪ್ತಂಕ ರಾಗಗಳನ್ನು ಈ ಎಲ್ಲ ಅಂಶಗಳನ್ನು ವಿದ್ಯಾರ್ಥಿಗಳು ಅರಿಯುವ ಮೂಲಕ ಸಂಗೀತ ಕ್ಷೇತ್ರದಲ್ಲಿ ಯಶಸ್ಸುಗಳಿಸಬಹುದು ಎಂದರು.
ಪ್ರಾಚಾರ್ಯರಾದ ಎಸ್.ಆರ್.ಮೂಗನೂರಮಠ ಮಾತನಾಡಿ ಸಂಗೀತದ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಸ್ವರಗಳ ಜೋಡಣೆ ಕಲಿಯುವುದೇ ಸಂಗೀತ. ತರಂಗಗಳ ಜಗತ್ತು ಇದು. ಸಂಗೀತದ ರಸತತ್ವ ಬಳಸಿ ಚಿಕಿತ್ಸೆ ಕಂಡುಹಿಡಿಯಬಹುದು. ಇಂದಿನ ದಿನಮಾನಗಳಲ್ಲಿ ಸಂಗೀತ ಚಿಕಿತ್ಸೆ ಅವಶ್ಯಕತೆ ಇದೆ. ಇದನ್ನು ಕಲಿಯುತ್ತಾ ಹೊಂದತೆ ಇದರ ಆಳ, ಅಗಲ ಇನ್ನು ಹೆಚ್ಚಿನ ಮಟ್ಟದಲ್ಲಿ ತಿಳಿಯುತ್ತದೆ . ಇನ್ನು ಹೆಚ್ಚಿನ ಜನ ಈ ಕ್ಷೇತ್ರಕ್ಕೆ ಬರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ಮುಖ್ಯಸ್ಥ ಡಾ.ಕೆ.ವಿ.ಮಠ, ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು.ರಾಠೋಡ, ಡಾ.ಆರ್.ಎಂ.ಬೆಣ್ಣೂರ, ಸಿ.ಎಮ್.ಮಠದ ಮುಂತಾದವರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


