ಮುಂಬೈ: ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ದಾಳಿ ನಡೆಸಿದ ವ್ಯಕ್ತಿಯನ್ನು ಬಂಧಿಸಲು ಹೇಗೆ ಸಾಧ್ಯವಾಯ್ತು ಎನ್ನುವುದು ಇದೀಗ ಬಹಿರಂಗಗೊಂಡಿದೆ. ಅಂದ ಹಾಗೆ ಆರೋಪಿ ಸಿಕ್ಕಿ ಬೀಳಲು ಕಾರಣವಾಗಿದ್ದು, ಪರೋಟ ಮತ್ತು ಯುಪಿಐ ಪೇಮೆಂಟ್ ಅಂತೆ.
ಸೈಫ್ ಅಲಿಖಾನ್ ಮೇಲಿನ ದಾಳಿ ಬಳಿ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು. ಆರೋಪಿ ಪೊಲೀಸರನ್ನು ದಾರಿ ತಪ್ಪಿಸಲು ಹಲವು ಮಾರ್ಗಗಳನ್ನು ಕಂಡುಕೊಂಡಿದ್ದನಾದರೂ ಕೊನೆಗೆ ಪರೋಟ ತಿಂದು ಅದಕ್ಕೆ ಪಾವತಿಸಲು ಮೊಬೈಲ್ ಮೂಲಕ ಗೂಗಲ್ ಪೇ ವಹಿವಾಟು ನಡೆಸಿದ್ದು, ಆತ ಇದ್ದ ಸ್ಥಳದ ಬಗ್ಗೆ ಪೊಲೀಸರು ಮಾಹಿತಿ ಪಡೆಯಲು ಸಾಧ್ಯವಾಗಿದೆ.
ಹೀಗಾಗಿ ಆರೋಪಿಯ ಸುಳಿವು ದೊರೆತ ಮುಂಬೈ ಪೊಲೀಸರು ಭಾನುವಾರ ಶಂಕಿತನನ್ನು ಬಂಧಿಸಿದ್ದರು. ಬಂಧಿತ ವ್ಯಕ್ತಿ ಬಾಂಗ್ಲಾದೇಶದ ಪ್ರಜೆಯಾಗಿದ್ದು, ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx