ಮಾಜಿ ಸಿಎಂ ಯಡಿಯೂರಪ್ಪಹಾಗೂ ಅವರ ಮಕ್ಕಳ ವಿರುದ್ಧ ಸಿಡಿದೆದ್ದಿರುವ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, “ಈ ಲೋಕಸಭಾ ಚುನಾವಣೆ ಬಳಿಕ ವಿಜಯೇಂದ್ರ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಉಳಿಯಲ್ಲ” ಎಂದು ಭವಿಷ್ಯ ನುಡಿದಿದ್ದಾರೆ.
ಸುದ್ದಿಘೋಷ್ಟಿ ನಡೆಸಿ ಮಾತನಾಡಿದ ಈಶ್ವರಪ್ಪ, ‘ಬಿಎಸ್ ವೈ ಪೂರ್ತಿ ಕುಟುಂಬ ಮೋಸದ ಕುಟುಂಬ, ಬರೀ ಮೋಸದ ರಾಜಕಾರಣ ಮಾಡುತ್ತಿದ್ದಾರೆ. ಒಂದು ನಗರಸಭಾ ಟಿಕೆಟ್‌ಗೆ 5 ಜನರಿಗೆ ಮಾತು ಕೊಟ್ಟು ಕಾರ್ಯಕರ್ತರಿಗೆ ಮೋಸ ಮಾಡುತ್ತಿದ್ದಾರೆ . ಈ ಚುನಾವಣೆ ಬಳಿಕ ವಿಜಯೇಂದ್ರ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಇರುವುದಿಲ್ಲ. ಯಾಕೆಂದರೆ, ಕಳೆದ ಬಾರಿ 25 ಸೀಟು ಗೆದ್ದಿತ್ತು. ಆದರೆ ಈ ಬಾರಿ ಯಾರ್ಯಾರನ್ನೋ ಅಭ್ಯರ್ಥಿ ಮಾಡಿದ್ದಾರೆ, ಎಷ್ಟು ಗೆಲ್ಲುತ್ತೇವೆ ಗೊತ್ತಿಲ್ಲ. ರಾಘವೇಂದ್ರ ಈ ಬಾರಿ ಆಯ್ಕೆಯಾಗುವುದಿಲ್ಲ ಅಲ್ಲಿಗೆ ಕುಟುಂಬ ರಾಜಕಾರಣ ನಿಲ್ಲುತ್ತದೆ’ ಎಂದು ಹೇಳಿದರು.
“ನನಗೆ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತ ಎಂಬ ಹೆಸರಿದೆ ಅದನ್ನು ಉಳಿಸಿಕೊಂಡು ಹೋಗ್ತೇನೆ ಎಂದರು. ಇನ್ನು ಮುಸ್ಲಿಂ ಮತಗಳನ್ನು ನಿರೀಕ್ಷೆ ಮಾಡ್ತೀರಾ ಎಂಬ ಪ್ರಶ್ನೆಗೆ ರಾಷ್ಟ್ರವಾದಿ ಮುಸ್ಲಿಂ ಮತಗಳನ್ನು ನಿರೀಕ್ಷಿಸ್ತೇನೆ” ಎಂದು ಈಶ್ವರಪ್ಪ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296