ತುಮಕೂರು: ನಾನು ಮೊದಲ ಬಾರಿಗೆ ಮುಖ್ಯಮಂತ್ರಿ ಆಗೋದಕ್ಕೆ ಯಡಿಯೂರಪ್ಪ ಅವರೇ ಕಾರಣ. ನಮಗಿಂತ ಹೆಚು ಶಾಸಕರಿದ್ರು ನಮಗೆ ಅವಕಾಶವನ್ನ ಕೊಟ್ಟಿದ್ರು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ತುಮಕೂರಿನಲ್ಲಿ ವಿ ಸೋಮಣ್ಣ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು ನಾವು-ಅವರು ಸೇರಿ 2006ರಲ್ಲಿ ಸರ್ಕಾರ ರಚಿಸಿದ್ವಿ. 4 ಸಾರಿ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸಲ್ಲಿಸಿದ್ದ ಹಿರಿಯರಾದ ಯಡಿಯೂರಪ್ಪ ನವರು ಆಗಮಿಸಿದ್ದಾರೆ. ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ರಾಜ್ಯ ಸರ್ಕಾರದಿಂದ 4 ಸಾವಿರ ಕೊಡ್ತಿದ್ರು ಎಂದರು.
ಆದ್ರೆ ಕಾಂಗ್ರೆಸ್ ಸರ್ಕಾರ ಇದನ್ನ ನಿಲ್ಲಿಸಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ನಾವು ನುಡಿದಂತೆ ನಡೆದಿದ್ದೇವೆ ಅಂತಾ ಹೇಳ್ತಿದ್ದಾರೆ. ಐದು ಗ್ಯಾರೆಂಟಿಗಳನ್ನ ಕೊಟ್ಟಿದ್ದೇವೆ ಅಂತಾ ದೊಡ್ಡದಾಗಿ ಹೇಳಿಕೊಡ್ತಿದ್ದಾರೆ ಎಂದರು.
ನಾಡಿನ ತೆರಿಗೆಯ ಹಣವನ್ನ ದುಂಧು ವೆಚ್ಚ ಮಾಡಿ, ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾರೆ. ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ನೀವು ಇದನ್ನ ಹೇಳಬೇಕಾಗುತ್ತೆ ಎಂದರು.
ಯಾವ ಅಭಿವೃದ್ಧಿ ಕೆಲಸಗಳನ್ನ ಈ ಸರ್ಕಾರ ಮಾಡ್ತಿಲ್ಲ. ಐದು ಗ್ಯಾರಂಟಿ ಗಳನ್ನ ಕೊಟ್ಟಿದ್ದೀವಿ ಅಂತಾ ಜಾಹಿರಾತು ಗಳನ್ನ ಕೊಟ್ಟು ಪ್ರಚಾರ ಪಡೀತಾ ಇದ್ದಾರೆ ಎಂದರು.
ಕೊಬ್ಬರಿಗೆ ಬೆಂಬಲ ಬೆಲೆ ಕೊಡ್ತಿರೋದು ಕೇಂದ್ರ ಸರ್ಕಾರದ ದುಡ್ಡು. ಸೋಮಣ್ಣ ನವರನ್ನ ಆಯ್ಕೆ ಮಾಡಿ ಕಳುಹಿಸಿ ನಾನು ಲೋಕಸಭೆಗೆ ನಿಲ್ಲಬೇಕು ಅಂತಾ ಇರಲಿಲ್ಲ. ಕೊಬ್ಬರಿ ಬೆಳೆಗಾರರಿಗೆ ಮುಂದಿನ ದಿನಗಳಲ್ಲಿ 15-16 ಸಾವಿರ ಕೊಡೋದಕ್ಕೆ ಹೋರಾಟ ಮಾಡ್ತೀನಿ ಎಂದರು.
ಮುದ್ದಹನುಮೇಗೌಡರು ಕೊಡಿಸೋದಕ್ಕೆ ಆಗೋದಿಲ್ಲ . ಯಾರೋ ರೈತರು ಹೇಳ್ತಿದ್ರು, ಬಹಳ ರೈತರ ಪರ ಮಾತಾಡ್ತಾರೆ ಅಂತಾ.
ದೇವೇಗೌಡರು ಮುಖ್ಯಮಂತ್ರಿ ಆಗಬೇಕಾದರೆ ಸೋಮಣ್ಣನವರು ಶಾಸಕರಾಗಿ ಬೆಂಬಲ ಕೊಟ್ಟಿದ್ರು. ಕರ್ನಾಟಕದಿಂದ ಮೈತ್ರಿ ಪಕ್ಷದ 28ಕ್ಕೆ 28 ಅಭ್ಯರ್ಥಿಗಳು ಗೆದ್ದು ಸಂಸತ್ ಗೆ ಹೋಗ್ತಾರೆ ಎಂದರು.
ತುಮಕೂರಿನ ಮಹಾಜನತೆಗೆ ಕೈ ಮುಗಿದು ಮನವಿ ಮಾಡ್ಕೊಳ್ತೀನಿ. ಜಾತಿ ಆಧಾರದ ಮೇಲೆ ಈ ಚುನಾವಣೆ ನಡೀತಿಲ್ಲ . ನಾಡಿನಲ್ಲಿ ಅಭಿವೃದ್ಧಿಗಾಗಿ ಮತ ನೀಡಿ. ಸೋಮಣ್ಣ ನವರು ಕೆಲಸಗಾರರಿದ್ದಾರೆ ಎಂದರು.
ಮುದ್ದಹನುಮೇಗೌಡರು ಒಕ್ಕಲಿಗರಿದ್ದಾರೆ ಅಂತಾ ಹೇಳ್ತಾರೆ . ಹಾಗಿದ್ರೆ ದೇವೇಗೌಡರು ನಿಂತಾಗ ಯಾಕೆ ವಿರೋಧ ಮಾಡಿದ್ರು ಎಂದರು.
ಕೇವಲ ತುಮಕೂರಿನ ಸಂಪೂರ್ಣ ಅಭಿವೃದ್ಧಿಯನ್ನ ದೃಷ್ಟಿಯಲ್ಲಿಟ್ಟುಕೊಂಡು ಮತ ನೀಡಿ . ನಮ್ಮ ಪಕ್ಷದ ಮುಖಂಡರು, ನಮ್ಮ ಪಕ್ಷದ ಅಭಿಮಾನಿಗಳು ಸೋಮಣ್ಣ ಅವರಿಗೆ ಮತ ನೀಡಿ ಎಂದರು.ತುರುವೇಕೆರೆ, ಕೊರಟಗೆರೆ, ಮಧುಗಿರಿ, ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಪ್ರಚಾರ ಮಾಡ್ತೀನಿ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA