nammatumakuru

    Subscribe to Updates

    Get the latest creative news from FooBar about art, design and business.

    What's Hot

    ಚಿನ್ನದ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್ ​​ಗೆ ಜಾಮೀನು ಮಂಜೂರು, ಜೈಲಿನಿಂದ ಬಿಡುಗಡೆ

    April 22, 2026

    ಮಗಳ ಪ್ರಿಯಕರನ ಜತೆ ಸೇರಿ ಅಳಿಯನನ್ನೇ ಕೊಂದ ಅತ್ತೆ: ತುಮಕೂರಿನ ಕೊಡಿಗೇನಹಳ್ಳಿಯಲ್ಲಿ ಘೋರ ಕೃತ್ಯ

    April 22, 2026

    ‘ಅಣ್ಣ’ ಎಂದವನ ಜೊತೆಯೇ ಪತ್ನಿ ಎಸ್ಕೇಪ್: ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತಿಗೆ ಕೈಕೊಟ್ಟ ಮಹಿಳೆ!

    April 22, 2026
    Facebook Twitter Instagram
    ಟ್ರೆಂಡಿಂಗ್
    • ಚಿನ್ನದ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್ ​​ಗೆ ಜಾಮೀನು ಮಂಜೂರು, ಜೈಲಿನಿಂದ ಬಿಡುಗಡೆ
    • ಮಗಳ ಪ್ರಿಯಕರನ ಜತೆ ಸೇರಿ ಅಳಿಯನನ್ನೇ ಕೊಂದ ಅತ್ತೆ: ತುಮಕೂರಿನ ಕೊಡಿಗೇನಹಳ್ಳಿಯಲ್ಲಿ ಘೋರ ಕೃತ್ಯ
    • ‘ಅಣ್ಣ’ ಎಂದವನ ಜೊತೆಯೇ ಪತ್ನಿ ಎಸ್ಕೇಪ್: ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತಿಗೆ ಕೈಕೊಟ್ಟ ಮಹಿಳೆ!
    • ಕೊರಟಗೆರೆ: ಸಾರ್ವಜನಿಕ ಸೇವೆಗೆ ‘ಫ್ರೆಂಡ್ಸ್ ಗ್ರೂಪ್’ನಿಂದ ಉಚಿತ ನೂತನ ತುರ್ತು ವಾಹನ ಸಮರ್ಪಣೆ
    • ಮಹಿಳಾ ಮೀಸಲಾತಿ ವಿರೋಧಿಸುವ ಕಾಂಗ್ರೆಸ್‌ ಗೆ ಮಹಿಳೆಯರ ಶಾಪ ತಟ್ಟಲಿದೆ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
    • ಬೇಸಿಗೆಯಲ್ಲಿ ನೀರಿನ ತೊಂದರೆಯಾಗದಂತೆ ಕ್ರಮವಹಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಟ್ಟುನಿಟ್ಟಿನ ಸೂಚನೆ
    • ತುಮಕೂರು: ಸೌಲಭ್ಯಗಳಿಲ್ಲದ ಪುನೀತ್ ರಾಜ್‌ ಕುಮಾರ್ ಬಡಾವಣೆ; ಪಾಲಿಕೆ ವಿರುದ್ಧ ನಾಗರಿಕರ ಆಕ್ರೋಶ
    • ತುಮಕೂರು: ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರೋಗಿಗಳನ್ನು ಪ್ರೀತಿ ವಾತ್ಸಲ್ಯದಿಂದ  ಕಂಡರೆ ಅದಕ್ಕಿಂತ ಉಪಚಾರ ಬೇರೊಂದಿಲ್ಲ: ಸಿದ್ದರಾಮಯ್ಯ 
    ರಾಜ್ಯ ಸುದ್ದಿ September 29, 2024

    ರೋಗಿಗಳನ್ನು ಪ್ರೀತಿ ವಾತ್ಸಲ್ಯದಿಂದ  ಕಂಡರೆ ಅದಕ್ಕಿಂತ ಉಪಚಾರ ಬೇರೊಂದಿಲ್ಲ: ಸಿದ್ದರಾಮಯ್ಯ 

    By adminSeptember 29, 2024No Comments3 Mins Read
    siddaramaiah

    ಮೈಸೂರು:  ಆಸ್ಪತ್ರೆಗೆ ಬರುವಂತಹ ಪ್ರತಿಯೊಬ್ಬ ರೋಗಿಗಳನ್ನು ಅತ್ಯಂತ ಪ್ರೀತಿ, ವಾತ್ಸಲ್ಯ ,  ವಿಶ್ವಾಸ ಮತ್ತು ಅನ್ಯೋನ್ಯತೆಯಿಂದ ಕಂಡರೆ ಅದಕ್ಕಿಂತ ಉಪಚಾರ ಬೇರೊಂದಿಲ್ಲ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದರು.

    ವೈದ್ಯಕೀಯ ಶಿಕ್ಷಣ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರಿoಗ್ ಘಟಕ ವತಿಯಿಂದ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಗ್ರಂಥಾಲಯ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.


    Provided by
    Provided by

    ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರ ಮನುಕುಲದ ಆಯಸ್ಸನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಎಂದು  ಪ್ರಶಂಸೆ ವ್ಯಕ್ತಪಡಿಸಿದರು. ಶತಮಾನ ಕಂಡ ಮೈಸೂರು ವೈದ್ಯಕೀಯ ಕಾಲೇಜು 9 ಸಾವಿರ‌ ಮಂದಿ ವೈದ್ಯ ಸಂಪತ್ತನ್ನು ಸೃಷ್ಟಿಸಿದ ಹೆಗ್ಗಳಿಕೆ ಹೊಂದಿದೆ. ಪ್ರಪಂಚದಾದ್ಯಂತ ಈ ಕಾಲೇಜಿನಲ್ಲಿ ಕಲಿತ ವೈದ್ಯರು ವಿಸ್ತರಿಸಿಕೊಂಡಿದ್ದಾರೆ ಎಂದರು.

    ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಹೆಚ್ಚು ಪರಿಣಿತಿ ಮತ್ತು ಅನುಭವ ಇರುತ್ತದೆ ಎನ್ನುವುದು ನನ್ನ ಭಾವನೆ. ಸರ್ಕಾರಿ ಆಸ್ಪತ್ರೆಗೆ ಬರುವವರು ಹೆಚ್ಚಿನವರು ಬಡವರು. ಇವರು ವೈದ್ಯರನ್ನು ದೇವರಂತೆ ಕಾಣುತ್ತಾರೆ ಎಂದರು.

    ವೈದ್ಯಕೀಯ ಕ್ಷೇತ್ರದ್ದು ಎರಡು ರೀತಿಯ ಜವಾಬ್ದಾರಿ ಇದೆ. ರೋಗ ಬಂದ ನಂತರ ಚಿಕಿತ್ಸೆ ಕೊಡುವುದು ಮತ್ತು ರೋಗ ಬರದಂತೆ ತಡೆಯುವುದೂ ಕೂಡ ವೈದ್ಯಕೀಯ ಕ್ಷೇತ್ರದ ಜವಾಬ್ದಾರಿ ಆಗಿದೆ ಎಂದರು.

    ವೈದ್ಯರು ಸಮಾಜದ ಆಸ್ತಿ. ಇನ್ನೂ ಹೆಚ್ಚಿನ ವೈದ್ಯರು ಈ ಕಾಲೇಜಿನಿಂದ ಹೊರಗೆ ಬಂದು ಜನರ ಆಸ್ತಿ ಆಗಲಿ.‌ ಸೇವೆ, ಶುಚಿತ್ವ ಮತ್ತು ಗುಣಮಟ್ಟದಲ್ಲಿ ಯಾವುದಕ್ಕೂ ಕಡಿಮೆ ಇಲ್ಲದಂತೆ ಮೈಸೂರು ವೈದ್ಯಕೀಯ ಕಾಲೇಜು ಪ್ರಗತಿ ಕಾಣಲಿ ಎಂದು ಹಾರೈಸಿದರು.

    ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್. ಸಿ ಮಹದೇವಪ್ಪ ಅವರು ಮಾತನಾಡಿ, ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿ  100 ವರ್ಷಗಳಾಯಿತು. ಜನರಿಕ್ ಮೆಡಿಸನ್ಸ್ ಅಂದರೆ ಎಲ್ಲರಿಗೂ ಒಂದೇ ಎಂಬ ಪರಿಭಾವನೆ ಇತ್ತು, ಆದರೆ ಈಗ ವೈದ್ಯಕೀಯ ಜಗತ್ತಿನಲ್ಲಿ ನಾನಾ ರೀತಿಯ ವಿಭಾಗಗಳಿವೆ. ಅದಕ್ಕೆ ಸೀಮಿತವಾಗಿ ಸ್ಪೆಷಲಿಸ್ಟ್ ಗಳು ವೈದ್ಯಕೀಯ ಕ್ಷೇತ್ರದಲ್ಲಿ ಇದ್ದಾರೆ.

    1994ರಲ್ಲಿ ನಾನು ಆರೋಗ್ಯಮಂತ್ರಿಯಾಗಿದ್ದಾಗ ಹಣಕಾಸು ಮಂತ್ರಿ ಆಗಿ ಸಿದ್ದರಾಮಯ್ಯನವರು ಇದ್ದರು. ದೇವೇಗೌಡ್ರು ದೇವೇಗೌಡರು ಸಿಎಂ ಆಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಜೊತೆ ಮಾತನಾಡಿ ಎಲ್ಲಾ ವೈದ್ಯಕೀಯ ಕ್ಷೇತ್ರಗಳನ್ನು ಒಂದೇ ಕಡೆ ಸೀಮಿತಗೊಳಿಸಬೇಕು, ಒಂದೇ ವಿಶ್ವವಿದ್ಯಾನಿಲಯಕ್ಕೆ ಒಳಪಡಿಸಬೇಕು ಎಂದು ಆ ಸಂದರ್ಭದಲ್ಲಿ ಮಾತನಾಡಿದ್ದೆ. ಆಗ ‘ಫಸ್ಟ್ ಹೆಲ್ತ್ ಯುನಿವರ್ಸಿಟಿ ‘ ಎಂದು ಜಾರಿಗೆ ತರಲಾಯಿತು. ಈಗ ಆ ಕ್ಷೇತ್ರ ತುಂಬಾ ಬೆಳೆದಿದೆ. ಭಾರತವು ಒಂದು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಪ್ರೈಮರಿ ಹೆಲ್ತ್ ಕೇರ್ ಡೆವಲಪ್ಮೆಂಟ್ ಬಗ್ಗೆ ಗಮನಹರಿಸಿ ಹಳ್ಳಿ ಕಡೆಗಳಲ್ಲಿ ವಾಸಿಸುತ್ತಿರುವ ಜನರ ಬಗ್ಗೆ ಆಸಕ್ತಿ ವಹಿಸಿ ಪ್ರೈಮರಿ ಹೆಲ್ತ್ ಕೇರ್ ಸೆಂಟರ್ ಗಳನ್ನು ಕಲ್ಪಿಸಬೇಕು ಎಂದು ಹೇಳಿದರು.

    ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರ ದೃಷ್ಟಿಯ ಒಂದು ಸಂಕೇತವಾಗಿ ಅನೇಕ ಸಂಸ್ಥೆಗಳು ಶತಮಾನೋತ್ಸವವನ್ನು ಕಂಡಿದೆ. ಮೈಸೂರು ಈಗ ಶೈಕ್ಷಣಿಕವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ 2 ವೈದ್ಯಕೀಯ ಕಾಲೇಜುಗಳನ್ನು ಮುಖ್ಯಮಂತ್ರಿಗಳು ರೂಪಿಸಿದ್ದು, ಇದರ ಜೊತೆಗೆ ವೈದ್ಯಕೀಯ ಕಾಲೇಜಿನಿಂದ 250 ರಿಂದ 300 ವಿದ್ಯಾರ್ಥಿಗಳಿಗೆ ಇನ್ನಷ್ಟು ಅವಕಾಶ ಕಲ್ಪಿಸುವಂಥಾಗಿತು ಎಂದು ಹೇಳಿದರು.

    ಚಾಮರಾಜ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಅವರು ಮಾತನಾಡಿ, ಸೂರ್ಯ ಚಂದ್ರ ಇರುವವರೆಗೂ ಈ ಒಂದು ಸಂಸ್ಥೆಯು ಇರಬೇಕು ಎಂಬುದೂ ಮೈಸೂರಿನ ಎಲ್ಲಾ ಜನತೆಯ ಕನಸ್ಸಾಗಿದೆ ಎಂದರು.  ಮೈಸೂರು ನಗರಕ್ಕೆ ನಾಲ್ವಡಿ ಕೃಷ್ಣರಾಜರ ನಂತರ ಶಿಕ್ಷಣ ಮತ್ತು ವೈದ್ಯಕಿಯವಾಗಿ ಅತೀ ಹೆಚ್ಚು ಕೊಡುಗೆ ನೀಡಿದವರು  ಸಿದ್ದರಾಮಯ್ಯ ನವರು ಎಂದು ಹೇಳಿದರು. OPD ( ಹೊರರೋಗಿಗಳ ವಿಭಾಗ) ದ ನವೀಕರಣಕ್ಕಾಗಿ 75 ಸಾವಿರ ಕೋಟಿ ಅನುದಾನವನ್ನು ಸರಕಾರದ ವತಿಯಿಂದ  ನೀಡಲಾಗುತ್ತಿದೆ ಎಂದರು. ಹಾಗೆಯೇ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ  ಕೇವಲ 350 ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್ ವ್ಯವಸ್ಥೆ ಇದ್ದು, ವಿದ್ಯಾಭ್ಯಾಸಕ್ಕಾಗಿ ಬರುವವರ ಸಂಖ್ಯೆಯೂ ಪ್ರತಿ ವರ್ಷ ಹೆಚ್ಚಾಗುವುದರಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 3000 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಲು ಕಾಮಗಾರಿಯನ್ನು ಶುರುಮಾಡಲಾಗಿದೆ  ಎಂದು ಹೇಳಿದರು.

    ವೈದ್ಯಕೀಯ ಶಿಕ್ಷಣ ಸಚಿವರರಾದ ಶರಣ ಪ್ರಕಾಶ್ ಶಾಸಕರಾದ ಡಾ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಹಿರಿಯ ಐಪಿಎಸ್ ಅಧಿಕಾರಿ ಬೋರಲಿಂಗಯ್ಯ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರನಾಥ್ ,   ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮಿಕಾಂತ ರೆಡ್ಡಿ ಸೇರಿದಂತೆ  ಹಲವು ಪ್ರಮುಖರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಚಿನ್ನದ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್ ​​ಗೆ ಜಾಮೀನು ಮಂಜೂರು, ಜೈಲಿನಿಂದ ಬಿಡುಗಡೆ

    April 22, 2026

    ನಾನು ಜೆಡಿಎಸ್‌ ಗೆ ಹೋಗ್ತೀನಿ ಅನ್ನೋದು ಕೇವಲ ಊಹಾಪೋಹ: ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ

    April 21, 2026

    ಪ್ರಧಾನಿ ಮೋದಿ ಜೊತೆಗಿನ ‘ರಹಸ್ಯ’ ಮಾತುಕತೆ ಏನಿತ್ತು? ಗುಟ್ಟು ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ

    April 20, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಚಿನ್ನದ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್ ​​ಗೆ ಜಾಮೀನು ಮಂಜೂರು, ಜೈಲಿನಿಂದ ಬಿಡುಗಡೆ

    April 22, 2026

    ಬೆಂಗಳೂರು: ಬಹುಚರ್ಚಿತ ಚಿನ್ನದ ಕಳ್ಳಸಾಗಣೆ (Gold Smuggling) ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಸ್ಯಾಂಡಲ್‌ ವುಡ್ ನಟಿ ರನ್ಯಾ ರಾವ್ ಅವರಿಗೆ…

    ಮಗಳ ಪ್ರಿಯಕರನ ಜತೆ ಸೇರಿ ಅಳಿಯನನ್ನೇ ಕೊಂದ ಅತ್ತೆ: ತುಮಕೂರಿನ ಕೊಡಿಗೇನಹಳ್ಳಿಯಲ್ಲಿ ಘೋರ ಕೃತ್ಯ

    April 22, 2026

    ‘ಅಣ್ಣ’ ಎಂದವನ ಜೊತೆಯೇ ಪತ್ನಿ ಎಸ್ಕೇಪ್: ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತಿಗೆ ಕೈಕೊಟ್ಟ ಮಹಿಳೆ!

    April 22, 2026

    ಕೊರಟಗೆರೆ: ಸಾರ್ವಜನಿಕ ಸೇವೆಗೆ ‘ಫ್ರೆಂಡ್ಸ್ ಗ್ರೂಪ್’ನಿಂದ ಉಚಿತ ನೂತನ ತುರ್ತು ವಾಹನ ಸಮರ್ಪಣೆ

    April 22, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.