Subscribe to Updates
Get the latest creative news from FooBar about art, design and business.
- ಕೊರಟಗೆರೆಯಲ್ಲಿ ಪ್ರಜಾ ಸೇವಾ ಅಭಿಯಾನ | 75 ಅರ್ಜಿಗಳ ಸ್ವೀಕಾರ: ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕಾರ್ಯಕ್ರಮ: ಡಾ.ತಿಪ್ಪೇಸ್ವಾಮಿ
- ಪೌತಿ ಖಾತೆ ಆಂದೋಲನಕ್ಕೆ ಚುರುಕು: ಹಳ್ಳಿ ಹಳ್ಳಿಗೆ ತೆರಳಿ ಅರಿವು ಮೂಡಿಸುತ್ತಿರುವ ತಹಶೀಲ್ದಾರ್ ಮಂಜುನಾಥ್ ಕೆ.
- ಮಹಾ ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮಕ್ಕೆ ಸಿದ್ದರಬೆಟ್ಟದ ಶ್ರೀಗಳಿಂದ ಚಾಲನೆ
- ಕೋಟಗುಡ್ಡ ಸಹನಾ ಶಾಲೆಗೆ “ಪರಿಸರ ಶಾಲಾ ಪ್ರಶಸ್ತಿ”
- ಭಗತ್ ಸಿಂಗ್ ರವರ 119ನೇ ಜನ್ಮ ದಿನ | ಭಗತ್ ಸಿಂಗ್ ಕನಸಿನ ಭಾರತ ಕಟ್ಟಲು ಮುಂದೆ ಬನ್ನಿ: ಲಕ್ಕಪ್ಪ
- ಮಧುಗಿರಿ: ನೇರಳೆಕೆರೆ (ಗೇಟು) ಅಂಗನವಾಡಿ ಕೇಂದ್ರದಲ್ಲಿ ಪೋಷಣೆ ಮಾಸಾಚರಣೆ ಮತ್ತು ಸೀಮಂತ ಕಾರ್ಯಕ್ರಮ
- “ನಮ್ಮ ಅಂಗನವಾಡಿ, ನಮ್ಮ ಜವಾಬ್ದಾರಿ”: ಮಲ್ಲಪ್ಪನಹಳ್ಳಿಯಲ್ಲಿ ವಿಜೃಂಭಣೆಯಿಂದ ಜರುಗಿದ ಪೋಷಣ್ ಅಭಿಯಾನ ಕಾರ್ಯಕ್ರಮ
- ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ತುಮಕೂರಿನಲ್ಲಿ ರೈತರ ಬೃಹತ್ ಪ್ರತಿಭಟನೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
Author: admin
ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಡು – ಗೊಲ್ಲರ ಚಿಂತನ – ಮಂಧನ ಸಭೆ ನಡೆದಿದ್ದು, ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಶಿವುಯಾದವ್ ಮಾತನಾಡಿದರು. ಕಾಡುಗೊಲ್ಲ ಜನಾಂಗ ತೀರ ಹಿಂದುಳಿದ ಜನಾಂಗ. ಈ ಜನಾಂಗದಲ್ಲಿ ರಾಜಕೀಯ ಪ್ರಭಾವ ಶಾಲಿಗಳಾಗಳಿಲ್ಲ. , ಅಲ್ಪಸಲ್ಪ ಸರ್ಕಾರಿ ಅಧಿಕಾರಿಗಳು ಇದ್ದಾರೆ . ಆದರೆ ಅವರು ಜನಾಂಗದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ ಎಂದರು. ಮುಖಂಡರಾದ ಗೋಪಿಯಾದವ್ ಮಾತನಾಡಿ, ಕಾಡುಗೊಲ್ಲ ಯುವಕರು ಮತ್ತು ನಾಯಕರಿಗೆಗಳಿಗೆ ಕಾಡುಗೊಲ್ಲ ಹೋರಾಟ ಮನವರಿಕೆಯಾಗಿದೆ . ಎಲ್ಲಾ ತಾಲ್ಲೂಕಿನಲ್ಲಿ ಕಾಡುಗೊಲ್ಲ ಸಭೆ ಮಾಡುತ್ತಿದ್ದಾರೆ. ಕಾಡುಗೊಲ್ಲ ಬುಡಕಟ್ಟು ಜಾತಿ ಪ್ರಮಾಣ ಪತ್ರ ಎಲ್ಲಾ ತಾಲ್ಲೂಕಿನಲ್ಲಿ ನೀಡುತ್ತಿದ್ದಾರೆ. ಆದರೆ ಮೊಳಕಾಲ್ಮೂರು ತಾಲ್ಲೂಕು ತಹಶೀಲ್ದಾರರು ಮಾತ್ರ ನೀಡುತ್ತಿಲ್ಲ . ಕಾಡುಗೊಲ್ಲ ಯುವಕರು ಜಾತಿ ಪ್ರಮಾಣ ಪತ್ರ ಕೇಳಿದರೆ,. ಅಸಭ್ಯವಾಗಿ ಮಾತನಾಡುವುದಲ್ಲದೇ ನೀವು ಗುಡ್ಡಗಾಡಿನಲ್ಲಿ ಇರಿ , ಬರಿ ಗೆಣಸು ತಿನ್ನಿರಿ , ಆಗ ನಾನು ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ…
ತುರುವೇಕೆರೆ: ದಕ್ಷ ಅಧಿಕಾರಿಯಾಗಿದ್ದ ತುರುವೇಕೆರೆ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ರವರ ಅಮಾನತು ಆದೇಶ ಸರ್ಕಾರ ಮೂರು ದಿನದೊಳಗಾಗಿ ಹಿಂಪಡೆಯಬೇಕು, ಇಲ್ಲವಾದಲ್ಲಿ ಪಟ್ಟಣದ ಸಿಪಿಐ ಕಚೇರಿ ಮುಂಭಾಗ ತಾಲೂಕಿನ ವಿವಿಧ ಪರ ಸಂಘಟನೆಗಳು ಹಾಗೂ ನಾಗರಿಕರು ಜೊತೆಗೂಡಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳುವುದಾಗಿ ಮುಖಂಡ ಹೆಡಗಿಹಳ್ಳಿ ವಿಶ್ವನಾಥ್ ಎಚ್ಚರಿಸಿದ್ದಾರೆ. ಪಟ್ಟಣದ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವನಾಥ್ ರವರು, ಸಿಪಿಐ ನವೀನ್ ರವರು ದಕ್ಷ ಅಧಿಕಾರಿಯಾಗಿದ್ದು, ಸಾಕಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿದ್ದವರಾಗಿದ್ದವರು. ದಂಡಿನಶಿವರ ವ್ಯಾಪ್ತಿಯ ಕೋಡಿಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ ನವೀನ್ ರವರನ್ನು ಅಮಾನತುಗೊಳಿಸುವುದು ವೈಜ್ಞಾನಿಕವಾಗಿಲ್ಲ. ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ನೀಡಿದಂತಾಗಿದೆ ಎಂಬ ಚರ್ಚೆಯು ಸಾರ್ವಜನಿಕ ವಲಯದಲ್ಲಿ ಪ್ರತಿನಿತ್ಯ ನಡೆಯುತ್ತಿದೆ.ಉತ್ತಮವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ನೈತಿಕ ಸ್ಥೈರ್ಯ ತುಂಬಾಬೇಕಾದದ್ದು ಪ್ರತಿ ನಾಗರಿಕನ ಕರ್ತವ್ಯವಾಗಿದೆ ಎಂದರು. ಸಾರ್ವಜನಿಕ ವಲಯದಲ್ಲಿ ಜನಸ್ನೇಹಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸಿಪಿಐ ನವೀನ್ ರವರ ಬೆಂಬಲಕ್ಕೆ ನಿಲ್ಲುವುದು…
ಹುಬ್ಬಳ್ಳಿ: ಕೊರೊನಾ ಸೋಂಕಿಗೆ ತುತ್ತಾಗಿ ಲಘು ರೋಗ ಲಕ್ಷಣಗಳಿದ್ದರೆ ಹೋಂ ಐಸೊಲೇಷನ್ ಮಾಡಲಾಗುತ್ತಿದ್ದು, ಇವರ ಮನೆಬಾಗಿಲಿಗೆ ಔಷಧದ ಕಿಟ್ ಸರಿಯಾಗಿ ವಿತರಣೆಯಾಗದೆ ಬಾಧಿತರು ಪರದಾಡುವಂತಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಹೋಂ ಐಸೋಲೇಷನ್ ಕೊರೊನಾ ಸೋಂಕಿತರಿಗೆ ಮಹಾನಗರಪಾಲಿಕೆ ಸರಿಯಾಗಿ ಔಷಧದ ಕಿಟ್ ನೀಡುತ್ತಿಲ್ಲ ಎಂದು ದೂರುಗಳು ಕೇಳಿ ಬರುತ್ತಿವೆ. ಆರೋಗ್ಯ ಇಲಾಖೆಯು ಜನವರಿ 19 ರಿಂದ ಫೆಬ್ರವರಿ 2ರ ವರೆಗೆ ಪಾಲಿಕೆಗೆ 5,779 ಕಿಟ್ ನೀಡಿದೆ. ಪಾಲಿಕೆಯು 3,149 ಜನರ ಮನೆ ಬಾಗಿಲಿಗೆ ಕಿಟ್ ತಲುಪಿಸಿದೆ. ಉಳಿದ 2,630 ಕಿಟ ವಿತರಣೆಯಾಗಿಲ್ಲ. ನಿತ್ಯ ಅರ್ಧದಷ್ಟು ಜನರಿಗೆ ಮಾತ್ರ ಕಿಟ್ ವಿತರಣೆಯಾಗುತ್ತಿದೆ. ಉಳಿದವರಿಗೆ ಮರುದಿನವೂ ನೀಡುವ ವ್ಯವಸ್ಥೆಯಾಗಿಲ್ಲ ಎಂದು ದೂರುಗಳು ಬಂದಿವೆ. ಮಹಾನಗರ ಪಾಲಿಕೆ ಔಷಧಿಗಳನ್ನು ನೀಡಲಂದೇ ತಿಂಗಳ ಬಾಡಿಗೆ ಆಧಾರದ ಮೇಲೆ 30 ಕಾರುಗಳನ್ನು ಬಾಡಿಗೆಗೆ ತೆಗೆದುಕೊಂಡಿದೆ. ತಿಂಗಳಲ್ಲಿ 2,500 ಕಿ.ಮೀ ಸಂಚರಿಸುವ ಷರತ್ತಿನೊಂದಿಗೆ ಜಿಎಸ್ ಟಿ ಸಮೇತ 29 ಸಾವಿರ ಪಾವತಿಸಲಾಗುತ್ತಿದೆ. ಆದರೂ ಬಾಧಿತರ ಮನೆಗೆ ಕಿಟ್ ಗಳನ್ನು ಸರಿಯಾಗಿ ತಲುಪಿಸುವ ಕೆಲಸ ಆಗುತ್ತಿಲ್ಲ…
ಕೊಪ್ಪ: ತಾಲ್ಲೂಕು ಕಚೇರಿಯ ಕಡತಗಳನ್ನು ಬಚ್ಚಿಟ್ಟುಕೊಂಡು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿರುವ ಪ್ರಥಮ ದರ್ಜೆ ಸಹಾಯಕ ಪ್ರಕಾಶ್ ಎಂಬುವವರನ್ನು ಕೊಪ್ಪ ತಹಸೀಲ್ದಾರ್ ಪರಮೇಶ್ ಹಾಗೂ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಡಾ.ಎಚ್.ಎನ್.ನಾಗರಾಜ್ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಭಾರೀ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ , ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಇನೇಶ್, ನುಗ್ಗಿ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಈ ಕುರಿತು ಗಂಭೀರ ಆರೋಪ ಮಾಡಿದ್ದಾರೆ. ಕೊಪ್ಪ ತಹಸೀಲ್ದಾರ್ ಕಚೇರಿಯಲ್ಲಿ ಈ ಹಿಂದೆ ರೈತರು ಹಾಗೂ ಬಡವರ ಫಾರಂ-50, 53 ಕಡತಗಳ ಉಸ್ತುವಾಗಿಯಾಗಿದ್ದ ಪ್ರಥಮ ದರ್ಜೆ ಸಹಾಯಕ ಪ್ರಕಾಶ್ ಸುಮಾರು 300ಕ್ಕಿಂತ ಹೆಚ್ಚು ಕಡತಗಳನ್ನು ದುರುದ್ದೇಶದಿಂದ ಬಚ್ಚಿಟ್ಟುಕೊಂಡು ಹಣ ಕೊಟ್ಟವರ ಕಡತಗಳನ್ನಷ್ಟೇ ಭೂ ಮಂಜೂರಾತಿ ಪ್ರಕ್ರಿಯೆ ಪ್ರಸ್ತಾವನೆಗೆ ಸಲ್ಲಿಸುತ್ತಿದ್ದ.ಈತನ ವರ್ಗಾವಣೆ ಸಂದರ್ಭದಲ್ಲೂ ಕಡತಗಳನ್ನು ಹಸ್ತಾಂತರಿಸದೆ ಗಂಭೀರ ಕರ್ತವ್ಯಲೋಪವೆಸಗಿರುವುದಲ್ಲದೆ ಪ್ರಭಾರ ವಹಿಸಿಕೊಡುವ ಪ್ರಕ್ರಿಯೆಯಲ್ಲೂ ಲೋಪವೆಸಗಿದ್ದಾನೆ. ಕೊಪ್ಪಕ್ಕೆ ಕರ್ತವ್ಯಕ್ಕೆ ಬರುವ ಮುನ್ನವೇ ಈತ…
ಪುನಿತ್ ರಾಜ್‍ಕುಮಾರ್ ಅವರ ಮೈಸೂರಿನ ಪ್ರೀತಿಯ ಶಕ್ತಿಧಾಮದ ಹೆಣ್ಣು ಮಕ್ಕಳ ಜೊತೆಗೂಡಿ ನಟ ಡಾ.ಶಿವರಾಜ್ ಕುಮಾರ್ ದಂಪತಿ ನಂದಿ ಗ್ರಾಮದ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಪುನೀತ್ ರಾಜ್ ಕುಮಾರ್ ನಿಧನ ನಂತರ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ಮೈಸೂರಿನಲ್ಲಿರುವ ಶಕ್ತಿಧಾಮದ ಮಕ್ಕಳು. ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಹುಟ್ಟು ಹಾಕಿದ ಸಂಸ್ಥೆಯನ್ನು ಪುನೀತ್ ರಾಜ್ ಕುಮಾರ್ ಅತ್ಯಂತ ಕಾಳಜಿಯಿಂದ ಅಲ್ಲಿರುವ ಹೆಣ್ಣು ಮಕ್ಕಳನ್ನು ಸಾಕಿ ಸಲಹುವ ಜವಾಬ್ದಾರಿ ಹೊತ್ತಿದ್ದರು.ಆದರೆ, ಪುನೀತ್ ರಾಜ್ ಕುಮಾರ್ ನಿಧನದ ನಂತರ ಅವರಿಗೆ ಅನಾಥ ಭಾವ ಕಾಡಬಾರದು ಎಂಬ ಕಾರಣಕ್ಕೆ ಸ್ವತಃ ಡಾ.ಶಿವರಾಜ್ ಕುಮಾರ್ ಅವರೇ ಶಕ್ತಿಧಾಮದ ಹೆಣ್ಣುಮಕ್ಕಳನ್ನು ಚಿಕ್ಕಬಳ್ಳಾಪುರದ ನಂದಿ ಗ್ರಾಮಕ್ಕೆ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದರು. ಬೆಳಗ್ಗೆ ನಂದಿಯಲ್ಲಿರುವ ಜಗದ್ವಿಖ್ಯಾತ ಭೋಗ ನಂದೀಶ್ವರ ಸ್ವಾಮಿ ದೇವಾಲಯಕ್ಕೆ ಬಂದಿದ್ದ ಮಕ್ಕಳು ಸಾಲಿನಲ್ಲಿ ಹೋಗಿ ದೇವರ ದರ್ಶನ ಪಡೆದರು. ಮಕ್ಕಳೊಂದಿಗೆ ಶಿವರಾಜ್ ಕುಮಾರ್‍ಮತ್ತು ಅವರ ಪತ್ನಿ ಗೀತಾ ಶಿವರಾಜ್…
ರಾಮನಗರದಲ್ಲಿ ಅತ್ಯಾಧುನಿಕ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ಸರ್ಕಾರದ ಆದೇಶ ಹೊರಡಿಸಲಾಗಿದೆ. ರಾಮನಗರ-ಚನ್ನಪಟ್ಟಣ ಅವಳಿ ನಗರದ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಲಾಗಿದ್ದು, ಜನವರಿ 27 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಇದೀಗ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿದೆ. 10 ದಿನದೊಳಗೆ ಟೆಂಡರ್ ಅಹ್ವಾನ: ಸಚಿವ ಡಾ.ನಾರಾಯಣಗೌಡ ರಾಮನಗರ ಮಾರುಕಟ್ಟೆಗೆ ಪ್ರತಿದಿನ 40-50 ಟನ್ ರೇಷ್ಮೆಗೂಡು ಬರುತ್ತಿದ್ದು, ಹೈಟೆಕ್ ಮಾರುಕಟ್ಟೆ ನಿರ್ಮಾಣವಾದ ಬಳಿಕ 100-150 ಟನ್‍ನಷ್ಟು ರೇಷ್ಮೆಗೂಡು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಹಾಗಾಗಿ, 10ದಿನದೊಳಗೆ ಟೆಂಡರ್ ಕರೆದು, ಆದಷ್ಟು ಬೇಗ ಶಂಕುಸ್ಥಾಪನೆ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರೇಷ್ಮೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚನ್ನಪಟ್ಟಣದ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ 20 ಎಕರೆ ಜಾಗದಲ್ಲಿ 75 ಕೋಟಿ ರೂಪಾಯಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಲಾಗಿದೆ. ಹೈಟೆಕ್ ರೇಷ್ಮೆ ಮಾರುಕಟ್ಟೆ…
ಮಗನ ಹೆಸರಿಗೆ ಜಮೀನು ಬರೆದುಕೊಡಲು ನಿರಾಕರಿಸಿದ ಪತಿ ಚನ್ನಿಗರಾಯಪ್ಪನನ್ನು ಕೊಲೆ ಮಾಡಿ ಶವ ಸುಟ್ಟುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ, ಮಗ ಸೇರಿ ಐದು ಮಂದಿ ಆರೋಪಿಗಳನ್ನು ಬನ್ನೇರುಘಟ್ಟ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಶೋಭಾ ಅಲಿಯಾಸ್ ಯಶೋಧಾ (33), ಮಗ ನಿಖಿಲ್ ಅಲಿಯಾಸ್ ಅಭಿ (22) ಮತ್ತು ಗುರುಕಿರಣ್ (21), ವಿಶ್ವಾಸ್ (20), ಮಂಜುನಾಥ್ (29) ಬಂಧಿತ ಆರೋಪಿಗಳು. ಕೊರಟಗೆರೆ ತಾಲ್ಲೂಕು ಪಣ್ಣೇನಹಳ್ಳಿ ನಿವಾಸಿಯಾದ ಚನ್ನಿಗರಾಯಪ್ಪನಿಗೆ 21 ಗುಂಟೆ ಕೃಷಿ ಭೂಮಿ ಇದ್ದು, ಈತನಿಗೆ 24 ವರ್ಷಗಳ ಹಿಂದೆ ಯಶೋಧಾ ಜತೆ ಮದುವೆಯಾಗಿದ್ದು, ನಿಖಿಲ್ ಎಂಬ ಗಂಡುಮಗನಿದ್ದಾನೆ. 20 ವರ್ಷಗಳ ಹಿಂದೆ ಎಚ್‍ಎಸ್‍ಆರ್ ಲೇಔಟ್, ಗಾರೆಬಾವಿ ಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ಯಶೋಧಾ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಮಗನೊಂದಿಗೆ ವಾಸವಾಗಿದ್ದರು.ಮಗ ನಿಖಿಲ್ ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದನು. ಪತಿ ಚನ್ನಿಗರಾಯಪ್ಪ ಎರಡನೆ ಮದುವೆಯಾಗಿದ್ದು, ಕೊರಟಗೆರೆ ತಾಲ್ಲೂಕಿನ ಪಣ್ಣೇನಹಳ್ಳಿಯಲ್ಲಿರುವ 21 ಗುಂಟೆ ಜಮೀನು ಮಾರುವ ವಿಚಾರ ಯಶೋಧಾಗೆ ಗೊತ್ತಾಗಿದೆ.ಈ ವಿಚಾರವಾಗಿ ತನ್ನ ಮಗ ನಿಖಿಲ್…
ಪತ್ನಿ-ಮಗಳ ಮೇಲೆ ಬಿಸಿ ಎಣ್ಣೆ ಸುರಿದು ಪರಾರಿಯಾಗಿದ್ದ ಆರೋಪಿಯನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಲ್ ಆರ್ ನಗರದ ನಿವಾಸಿ ಥಾಮಸ್(46) ಬಂಧಿತ ಆರೋಪಿ. ಈತನ ಪತ್ನಿ ಮನೆ ಕೆಲಸ ಮಾಡಿ, ಕುಟುಂಬ ನಿರ್ವಹಿಸುತ್ತಾರೆ. ಕುಡಿತದ ಚಟ ಹೊಂದಿದ್ದ ಆರೋಪಿ ವಿನಾ ಕಾರಣ ಪತ್ನಿ ಮಗಳೊಂದಿಗೆ ಜಗಳವಾಡುತ್ತಿದ್ದನು. ಭಿನ್ನಾಭಿಪ್ರಾಯದಿಂದಾಗಿ ದಂಪತಿ ನಡುವೆ ಜಗಳವಾಗುತ್ತಿತ್ತು. ಜ.30ರಂದು ಆರೋಪಿ ಹೊರಗೆ ಹೋಗಿ ಅಡುಗೆ ಎಣ್ಣೆ ತೆಗೆದುಕೊಂಡು ಮನೆಗೆ ಬಂದಿದ್ದಾನೆ. ಈ ಸಂದರ್ಭದಲ್ಲಿ ಪತ್ನಿ-ಮಗಳು ಟಿವಿ ನೋಡುತ್ತಾ ಕುಳಿತ್ತಿದ್ದರು. ಆರೋಪಿ ಸೀದಾ ಅಡುಗೆ ಮನೆಗೆ ಹೋಗಿ ಎಣ್ಣೆ ಕಾಯಿಸಿಕೊಂಡು ಬಂದು ಪತ್ನಿ-ಮಗಳ ಮೇಲೆ ಚೆಲ್ಲಿ ಸ್ಥಳದಿಂದ ಪರಾರಿಯಾಗಿದ್ದನು. ವಿಷಯ ತಿಳಿದು ಆಡುಗೋಡಿ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಸುಟ್ಟ ಗಾಯಗೊಂಡಿದ್ದ ತಾಯಿ-ಮಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ವರದಿ :ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ…
ಹಿರಿಯೂರು: ವಿ ವಿ ಸಾಗರ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಹಂಗಾಮಿನ ಕೃಷಿ ಬೆಳೆಗೆ ಅವಶ್ಯಕತೆಯಿರುವುದರಿಂದ ನೀರು ಹರಿಸಲು ಚಿತ್ರದುರ್ಗ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಫೆಬ್ರವರಿ 4 ರಂದು ವಿವಿ ಸಾಗರದ ಅಚ್ಚುಕಟ್ಟು ಪ್ರದೇಶಗಳಿಗೆ ಇಂದು ಹರಿಸಲಿದ್ದಾರೆ ಆದರೆ , ಆದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವಿವಿ ನಾಲವನ್ನು ಅಚ್ಚುಕಟ್ಟು ಗೊಳಿಸದೆ ಪ್ಲಾಸ್ಟಿಕ್ , ಗಾಜು , ಕಸಕಡ್ಡಿ ತುಂಬಿರುವಂತಹ ನಾಲಕ್ಕೆ ನೀರು ಹರಿಸಲು ಸಿದ್ಧತೆ ಮಾಡಿದ್ದಾರೆ ಎಂದು ಇಲ್ಲಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯೂರು ತಾಲ್ಲೂಕಿನ ವಿ ವಿ ಸಾಗರದ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಹಂಗಾಮಿನ ಕೃಷಿ ಬೆಳೆಗೆ ಅವಶ್ಯಕತೆಯಿರುವ ಹಿನ್ನೆಲೆಯಲ್ಲಿ ಫೆ4ರಂದು ಇಂದು ನೀರು ಹರಿಸಲು ಆದೇಶಿಸಿದೆ . ಹಾಲಿ ಶೇಂಗಾ , ಮೆಕ್ಕಜೋಳ ಮತ್ತು ಹತ್ತಿ ಹಾಗೂ ಅಡಿಕೆ, ತೆಂಗು ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ . ಆದರೆ ತ್ಯಾಜ್ಯ ವಸ್ತುಗಳ ಹಾಗೂ ಫೈರುಗಳು ಬೆಳೆದಿರುವ ನಾಲೆಗಳ ಹೂಳು…
ಮುನಿಯೂರು: ರೈತರಿಗೆ ಸಾಲ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯ ವೇಳೆ ಸಹಕಾರ ಸಂಘದ ಕಾರ್ಯದರ್ಶಿ ಗಿಡ್ಡೇಗೌಡ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ತುರುವೇಕೆರೆ ಪೋಲೀಸ್ ಠಾಣಾ ವ್ಯಾಪ್ತಿಗೆ ಬರುವ ಮುನಿಯೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಂತಹದ್ದೊಂದು ಘಟನೆ ನಡೆದಿದ್ದರೂ ಪೊಲೀಸರು ಮೌನವಾಗಿದ್ದಾರೆ ಎನ್ನುವ ಆರೋಪಗಳು ಕೂಡ ಇದೀಗ ಕೇಳಿ ಬಂದಿದೆ. ಈ ಪ್ರದೇಶದಲ್ಲಿ ಕೆಲವರು ಆಗಾಗ ಮಾರಕಾಸ್ತ್ರಗಳಿಂದ ಬೆದರಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎನ್ನುವ ಆತಂಕದ ಮಾತುಗಳು ಕೂಡ ಕೇಳಿ ಬಂದಿವೆ. ಯಾರೋ ಬೀದಿ ರೌಡಿಗಳ ನ್ಯಾಯ ಇಲ್ಲಿ ನಡೆಯುವುದಾದರೆ, ಪೊಲೀಸ್ ವ್ಯವಸ್ಥೆಗಳೇಕೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ಘಟನೆ ಸಂಬಂಧ ತಕ್ಷಣವೇ ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB