Author: admin

ಬೆಂಗಳೂರು:  ಬೆಲೆ ಏರಿಕೆ ವಿಚಾರವಾಗಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಬಿಜೆಪಿ ಪಕ್ಷದೊಳಗಿನ ಕೋಲಾಹಲವನ್ನು ಮುಚ್ಚಿಹಾಕಲು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ ಅವರು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಹೊರಹಾಕಿದ್ದಾರೆ. ತಮ್ಮ ಪಕ್ಷದೊಳಗಿನ ಕಲಹವನ್ನು ‘ಮುಚ್ಚಿಹಾಕಲು’ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು. ಪ್ರಧಾನಿ ಮೋದಿಯವರ ಆರ್ಥಿಕ ನೀತಿಯಿಂದಾಗಿ ಸಾಮಾನ್ಯ ಜನರ ಜೀವನ ನರಕವಾಗಿದೆ. ಈ ಎಲ್ಲ ಬೆಲೆ ಏರಿಕೆಗೆ ಯಾರು ಹೊಣೆ, ಪ್ರಧಾನಿ ಮೋದಿಯವರ ಮಾಸ್ಟರ್ ಸ್ಟ್ರೋಕ್‌ ನಿಂದ ಆರ್ಥಿಕತೆ ಕುಸಿದಿದೆ. ಅದಾನಿ ಅಂಬಾನಿಯಿಂದಾಗಿಯೇ ಪರಿಸ್ಥಿತಿ ಹೀಗಿದೆ ಎಂದು ಆರೋಪಿಸಿದರು. ಬಜೆಟ್ ಬಗ್ಗೆ ಚರ್ಚೆ ಏಕೆ ನಡೆಯಲಿಲ್ಲ, ಸಿದ್ದರಾಮಯ್ಯ ಅವರು 4 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ಅದನ್ನು ಎಳೆ ಎಳೆಯಾಗಿ ಬಿಚ್ಚಬಹುದಿತ್ತು. ಆದರೆ, ಇಂದು ವಿಜಯೇಂದ್ರ ಮತ್ತು ಯತ್ನಾಳ್ ನಡುವಿನ ಜಗಳವನ್ನು ಮುಚ್ಚಿಹಾಕಲು ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರಲ್ಲಿ…

Read More

ತುಮಕೂರು:   ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ  ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು,   ಮೊದಲಿಗೆ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ಭೇಟಿ ನೀಡಿ ದರ್ಶನ ಪಡೆದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಇಂದು ಏಪ್ರಿಲ್ 1. ಪ್ರತಿ ವರ್ಷವೂ ಏಪ್ರಿಲ್ 1ನ್ನು ಮೂರ್ಖರ ದಿನಾಚರಣೆಯಾಗಿ ಆಚರಿಸುತ್ತಾರೆ. ಏಪ್ರಿಲ್  ಫೂಲ್ ಯಾಕೆ ಆಚರಿಸುತ್ತಾರೆ ಎನ್ನುವುದಕ್ಕೆ ಒಬ್ಬೊಬ್ಬರೂ ಒಂದೊಂದು ಕಾರಣಗಳನ್ನು ನೀಡುತ್ತಾರೆ. ಆದ್ರೆ ತಮಾಷೆಯ ಪ್ರಜ್ಞೆ ಬೆಳೆಸಲು ಈ ದಿನ ಬಳಕೆಯಾಗುತ್ತಿದೆ. ಕೆಲವೊಮ್ಮೆ ತಮಾಷೆಗಳು ಅತಿರೇಕಕ್ಕೆ ಹೋದರೆ, ದುಃಖಕರ ಸನ್ನಿವೇಶಗಳನ್ನೂ ಎದುರಿಸುವಂತಹ ಸನ್ನಿವೇಶಗಳು ಪ್ರತಿ ವರ್ಷವೂ ಸಂಭವಿಸುತ್ತಲೇ ಇರುತ್ತದೆ. ಏಪ್ರಿಲ್ ಫೂಲ್ ಕೇವಲ ಒಂದು ದಿನದ ತಮಾಷೆಯ ದಿನ. ಆದ್ರೆ ನಾವು ಪ್ರತಿ ದಿನವೂ ಯಾವುದಾದರೂ ಒಂದು ವಿಷಯದಲ್ಲಿ ಫೂಲ್ ಆಗುತ್ತಲೇ ಇರುತ್ತೇವೆ. ನಾವು ಬೇರೆಯವರ ಮೇಲೆ ವಿಶ್ವಾಸ ನಂಬಿಕೆ ಇಟ್ಟಿರುತ್ತೇವೆ. ಆದರೆ ಅವರು ತಮ್ಮ ಸ್ವಾರ್ಥಕ್ಕೆ ನಮ್ಮ ನಂಬಿಕೆಗಳನ್ನು ಬಲಿ ಕೊಡುತ್ತಾರೆ. ಸುಳ್ಳು ಹೇಳುತ್ತಾರೆ. ಯಜಮಾನನ ಮೇಲೆ ನಿಷ್ಠೆಯಿಂದ ಕೆಲಸ ಮಾಡುವ ಕೆಲಸಗಾರ, ಕೆಲಸಗಾರನ ಮೇಲೆ ನಂಬಿಕೆ ಇಡುವ ಯಜಮಾನ, ಮಕ್ಕಳ ಮೇಲೆ ನಂಬಿಕೆ ಇಡುವ ಪೋಷಕರು, ಪೋಷಕರ ಮೇಲೆ ನಂಬಿಕೆ ಇಡುವ ಮಕ್ಕಳು, ಸ್ನೇಹಿತರ ಮೇಲೆ ನಂಬಿಕೆ ಇಡುವ ಸ್ನೇಹಿತರು ಹೀಗೆ ನಂಬಿಕೆಗಳ ಮೇಲೆ…

Read More

ಪಾವಗಡ: ತಾಲ್ಲೂಕಿನ ವೈ.ಎನ್. ಹೊಸಕೋಟೆ ಹೋಬಳಿಯ ಜೋಡಿ ಅಚ್ಚಮ್ಮನಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ, ಶ್ರೀ ಚೌಡೇಶ್ವರಿ ಅಮ್ಮನವರ 60ನೇ ಜ್ಯೋತಿ ಉತ್ಸವವನ್ನು ಸೋಮವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾದ ಉತ್ಸವ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಮಧ್ಯಾಹ್ನ 2 ಗಂಟೆಯ ವೇಳೆ ದೇವಾಲಯದಲ್ಲಿ ಕೊನೆಗೊಂಡಿತು. ಉತ್ಸವದ ಉದ್ದಕ್ಕೂ ಹರಕೆ ಹೊತ್ತ ಭಕ್ತಾಧಿಗಳು ನಾರದ ಹಾಕಿಸಿಕೊಂಡು ಹರಕೆ ತೀರಿಸಿದರು. ಗ್ರಾಮಕ್ಕೆ ದುಷ್ಟಶಕ್ತಿಗಳ ಹಾವಳಿ ಬಾರದಿರಲೆಂದು ಪೂಜಾನ್ನವನ್ನು ಹಾಕಲಾಯಿತು. ಮೆರವಣಿಗೆಯಲ್ಲಿ ತೊಗಟವೀರ ಸಮುದಾಯ ಆನಂದ ಪದಗಳನ್ನು ಹಾಡುತ್ತ ದೇವಿಯ ಮೂರ್ತಿಗೆ ಶಕ್ತಿ ತುಂಬಿದರು. ಹಬ್ಬದ ಅಂಗವಾಗಿ ಮೂಲ ದೇವತಾ ಮೂರ್ತಿಗೆ ‘ಅರಶಿಣ ಕುಂಕುಮ’ದ ಅಲಂಕಾರ ಮಾಡಲಾಗಿತ್ತು. ವರದಿ :  ನಂದೀಶ್ ನಾಯ್ಕ ಪಿ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಪಾವಗಡ:  ಶಾಸಕರಾದ ಹೆಚ್.ವಿ.ವೆಂಕಟೇಶ್ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ವೈ.ಎನ್.ಹೊಸಕೋಟೆ ಆರ್ಯ ವೈಶ್ಯ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವೆಂಕಟೇಶ್ ಅವರನ್ನು ಹಾಗೂ ಮಾಜಿ ಸಚಿವರಾದ ವೆಂಕಟರಮಣಪ್ಪ ನವರನ್ನು ಭೇಟಿ ಮಾಡಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎನ್ ಆರ್ ಅಶ್ವಥ್ ಕುಮಾರ್ , ವಿಶ್ವನಾಥ್ ಟಿ.ಆರ್.ವಿ ಪ್ರಸಾದ್ , ಎಂ.ಆರ್ ಶಿವಾನಂದ ಗುಪ್ತ, ಎನ್.ಜಿ ರಾಮು ರವರು,ಎನ್.ಎಸ್ ಮಂಜುನಾಥ್ ,ಇ.ವಿ ಶ್ರೀಧರ್ ,ಟಿ ವಿ ವೆಂಕಟೇಶ್, ಎನ್.ಶ್ರೀನಿವಾಸ್,ಇ.ಎನ್. ರಘು ರವರು ಸೇರಿ ಇನ್ನಿತರರು ಇದ್ದರು. ವರದಿ: ನಂದೀಶ್ ನಾಯ್ಕ ಪಿ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಕ್ಯಾತಗಾನಕೆರೆ ಗ್ರಾಮದಲ್ಲಿ ಚರ್ಚ್ ಉದ್ಘಾಟನೆಯು ವಿವಾದಕ್ಕೆ ಕಾರಣವಾಗಿದೆ. ಗ್ರಾಮದ ಜನರು ಚರ್ಚ್ ನಿರ್ಮಾಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಶಿಲಾನ್ಯಾಸ ಫಲಕವನ್ನು ಧ್ವಂಸಗೊಳಿಸುವ ಮೂಲಕ ಉದ್ಘಾಟನೆಯನ್ನು ತಡೆದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಸುರೇಶ್ ಎಂಬ ಪಾದ್ರಿ ಗ್ರಾಮದಲ್ಲಿ ವಾಸವಿದ್ದು, ಕ್ರೈಸ್ತ ಧರ್ಮದ ಬಗ್ಗೆ ಜನರಲ್ಲಿ ಮಾಹಿತಿ ಪಸರಿಸುತ್ತಿದ್ದರು. ಆದರೆ, ಅವರ ವಿರುದ್ಧ ಗ್ರಾಮದ ನಿರ್ವಾಹಕರ ಪತ್ನಿಯೊಂದಿಗಿನ ಅನುಚಿತ ವರ್ತನೆಯ ಆರೋಪ ಹೊರಿಸಲಾಗಿದೆ. ಈ ಆರೋಪಗಳನ್ನು ವ್ಯಕ್ತಪಡಿಸಿದ ಮಹಿಳೆಯ ಪತಿ, ಪಾದ್ರಿಯ ವರ್ತನೆ ಅವರ ಕುಟುಂಬದ ಜೀವನವನ್ನು ಹಾಳು ಮಾಡಿದೆ ಎಂದು ದೂರಿದ್ದಾರೆ. ಸೋಮವಾರ ಉದ್ಘಾಟನೆಗೆ ಸಿದ್ಧವಾಗಿದ್ದ ಐಪಿಸಿ ಚಿಯೋನ್ ಪ್ರಾರ್ಥನಾ ಮಂದಿರವನ್ನು ಉದ್ಘಾಟಿಸಲು ಉದ್ದೇಶಿಸಿದ್ದಾಗ, ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉದ್ಘಾಟನೆಗೆ ಸಿದ್ಧವಾಗಿದ್ದ ಶಿಲಾನ್ಯಾಸ ಫಲಕವನ್ನು ಧ್ವಂಸಗೊಳಿಸಿದರು. ಗ್ರಾಮದ ಯುವಕ ಅನಿಲ್ ಮಾತನಾಡಿ, “ಪಾದ್ರಿ ಸುರೇಶ್ ನಮ್ಮ ಗ್ರಾಮದಲ್ಲಿ ಜನರನ್ನು ಮತಾಂಧತೆಯತ್ತ ಕರೆದುಕೊಂಡು ಹೋಗುತ್ತಿದ್ದಾರೆ. ನಮಗೆ ಗೊತ್ತಿಲ್ಲದೆ ಚರ್ಚ್ ನಿರ್ಮಿಸಿದ್ದಾರೆ. ಜೊತೆಗೆ…

Read More

ಬೀದರ್: ಪವಿತ್ರ ರಂಜಾನ್ ಹಬ್ಬದ ಹಿನ್ನೆಲೆ ಸಂಸದ   ಸಾಗರ್ ಖಂಡ್ರೆ ಬೀದರ್ ಈದ್ಗಾ ಮೈದಾನದಲ್ಲಿ ಮುಸ್ಲಿಮರೊಂದಿಗೆ ವಿಶೇಷ ಪ್ರಾರ್ಥನೆ ವೇಳೆ ಭಾಗಿಯಾಗಿ ಈದ್ ನ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ  ಸಚಿವರಾದ ರಹಿಂ ಖಾನ್, ಸೇರಿದಂತೆ  ಹಲವು ಕಾಂಗ್ರೆಸ್ ಮುಖಂಡರು, ಧಾರ್ಮಿಕ ಪ್ರಮುಖ ಮುಖಂಡರು, ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಕೊರಟಗೆರೆ: ಭೀಕರ ಬಿಸಿಲಿನ ತಾಪಕ್ಕೆ ಬೃಹತ್ ಕಾಡ್ಗಿಚ್ಚು ಸೃಷ್ಟಿಯಾಗಿ, ಪ್ರವಾಸಿಗರ ಕಾರು ಬೆಂಕಿಯಲ್ಲಿ ಬೆಂದು ಹಾನಿಯಾಗಿರುವ ಘಟನೆ ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟದಲ್ಲಿ ನಡೆದಿದೆ. ಶ್ರೀ ಕ್ಷೇತ್ರದ ಸಿದ್ದೇಶ್ವರ ದರ್ಶನಕ್ಕೆ ಎಂದು ಬಂದ ಬೆಂಗಳೂರು ಮೂಲದ ಭಕ್ತರು.. ಸುಸಜ್ಜಿತವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ರಸ್ತೆ ಬದಿಯಲ್ಲಿ ಕಾರು ಪಾರ್ಕಿಂಗ್ ಮಾಡಿದ್ದರು. ಇದಕ್ಕಿದ್ದಂತೆ ಕಾಡ್ಗಿಚ್ಚು ಸಂಭವಿಸಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮುಜರಾಯಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಮೇಲೆ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಯುರ್ವೇದಿಕ್ ದಿವ್ಯೌಷಧಿಗಳ ಕ್ಷೇತ್ರ, ಸಿದ್ದರ ತಪೋವನ, ಸಾಧು ಸಂತರ ತವರೂರಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸೃಷ್ಟಿಯಾಗಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಸಿದ್ದರಬೆಟ್ಟದಲ್ಲಿ ಇದ್ದು ಇಲ್ಲದಂತಿದೆ ಎಂಬ ಆಕ್ರೋಶ ಕೇಳಿ ಬಂದಿದೆ. ಮುಜರಾಯಿ ಇಲಾಖೆ ವತಿಯಿಂದ ವಾಹನ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದ್ರೆ ವ್ಯವಸ್ಥಿತವಾದ ವಾಹನ ಪಾರ್ಕಿಂಗ್ ಸ್ಥಳವೇ ಇಲ್ಲ. ಹೀಗಾಗಿ ರಸ್ತೆ ಬದಿ ವಾಹನ ನಿಲ್ಲಿಸಿ…

Read More

ತುಮಕೂರು: ಯುಗಾದಿ ಹಬ್ಬದ ಸಂಭ್ರಮದ ಮಧ್ಯೆ ಬಡ ಕುಟುಂಬವೊಂದು ಆಕಸ್ಮಿಕ ಬೆಂಕಿ ಅವಘಡಕ್ಕೆ ಸಿಲುಕಿದ ದಾರುಣ ಘಟನೆ ನಡೆದಿದೆ. ಈ ದುರ್ಘಟನೆ ಶೋಕದ ಛಾಯೆ ಮೂಡಿಸಿದೆ. ಬುಕ್ಕಾಪಟ್ಟಣ ಹೋಬಳಿಯ ಹುಣಸೆಕಟ್ಟೆ ಗ್ರಾಮದ ಭೋವಿ ಜನಾಂಗದ ರತ್ನಮ್ಮ, ತಮ್ಮ ಇಬ್ಬರು ಮಕ್ಕಳ ಜೊತೆ ಊರಿನಿಂದ, ಎರಡು ಕಿಲೋ ಮೀಟರ್ ದೂರದಲ್ಲಿರುವ ತಮ್ಮ ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು. ಅವರ ಪತಿ ಸಿದ್ದಾಭೋವಿ ಸುಮಾರು 20 ವರ್ಷಗಳ ಹಿಂದೆ ಕುಟುಂಬವನ್ನು ಬಿಟ್ಟು ಎಲ್ಲೋ ತೆರಳಿದ್ದು, ಇದುವರೆಗೆ ಮರಳಿಲ್ಲ. ಈ ಕಾರಣದಿಂದ, ರತ್ನಮ್ಮ ಹೊಲದಲ್ಲಿಯೇ ಹಸು, ಕರು, ಕುರಿ, ಮೇಕೆಗಳನ್ನು ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಶುಕ್ರವಾರ ರಾತ್ರಿ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ, ಸುಮಾರು ರಾತ್ರಿ ಎರಡು ಗಂಟೆ ಸುಮಾರಿಗೆ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ತೀವ್ರಗೊಳ್ಳುತ್ತಿದ್ದಂತೆ, ರತ್ನಮ್ಮ ಮತ್ತು ಅವರ ಮಕ್ಕಳು ಎಚ್ಚರಗೊಂಡು ಆರಿಸುವ ಪ್ರಯತ್ನ ನಡೆಸಿದರು. ಆದರೆ, ಊರಿನಿಂದ ದೂರವಾಗಿರುವ ಕಾರಣದಿಂದ, ಸ್ಥಳೀಯರು ಬರುವಷ್ಟರಲ್ಲಿ ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು. ಎರಡು…

Read More

ಬೆಂಗಳೂರು: ಸ್ವಚ್ಛತೆ ಮತ್ತು ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಬಳಸಿ ಐಸ್ ಕ್ರೀಂ ಮತ್ತು ತಂಪು ಪಾನೀಯ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ದಾಳಿ ನಡೆಸಿದಿದೆ. ದಾಳಿಯ ನಂತರ ಒಟ್ಟು 220 ಅಂಗಡಿಗಳಲ್ಲಿ 97 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. ತಪಾಸಣೆ ವೇಳೆ ಐಸ್ ಕ್ರೀಮ್ ಗಳಲ್ಲಿ ಕೆನೆ ಬಣ್ಣದ ವಿನ್ಯಾಸವನ್ನು ರಚಿಸಲು ಡಿಟರ್ಜೆಂಟ್ ಪೌಡರ್ ಅನ್ನು ಬಳಸಲಾಗುತ್ತಿತ್ತು. ಕೂಲ್ ಡ್ರಿಂಕ್ ಗಳಲ್ಲಿ ಮೂಳೆಗಳನ್ನು ದುರ್ಬಲಗೊಳಿಸುವ ಫಾಸ್ಪರಿಕ್ ಆಮ್ಲ ಹಾಗೂ ಫಿಜ್ ಅನ್ನು ಹೆಚ್ಚಿಸಲು ಬಳಸಲಾಗುತ್ತಿತ್ತು ಎಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಆಘಾತಕಾರಿ ಉಲ್ಲಂಘನೆ ಮಾಡಿರುವವರಿಗೆ ಇಲಾಖೆಯು ಒಟ್ಟು 38,000 ರೂ. ದಂಡ ವಿಧಿಸಲಾಗಿದೆ. ಮಕ್ಕಳು ಸಾಮಾನ್ಯವಾಗಿ ಸೇವಿಸುವ ಆಹಾರದ ಗುಣಮಟ್ಟ ಮತ್ತು ತಯಾರಿಕೆಯ ವಿಧಾನಗಳನ್ನು ನಿರ್ಣಯಿಸುವ ಪ್ರಯತ್ನಗಳ ಭಾಗವಾಗಿ, ಇಲಾಖೆಯು ಎರಡು ದಿನಗಳಲ್ಲಿ ತಪಾಸಣೆ ನಡೆಸಿತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…

Read More