Subscribe to Updates
Get the latest creative news from FooBar about art, design and business.
- ಜಿಲೆಟಿನ್ ಕಡ್ಡಿ ಕಟ್ಟಿಕೊಂಡು ಸ್ಫೋಟಿಸಿಕೊಂಡ ವ್ಯಕ್ತಿ — ತಂದೆ, ಮಗಳು ದಾರುಣ ಸಾವು; ನಾಲ್ವರಿಗೆ ಗಂಭೀರ ಗಾಯ
- ಬೆಂಗಳೂರು ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರಾಜ್ ಹೆಸರು ಔಟ್!
- ಬರದ ಮುನ್ಸೂಚನೆ; ಮುನ್ನೆಚ್ಚರಿಕೆ ವಹಿಸಲು ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
- ಹೀಗೂ ಉಂಟೆ | ಹತ್ತಿಯಲ್ಲೇ ಮೊಳಕೆ ಬಂದ ಮರಿಗಿಡಗಳು, ಮರ ಅಣಬೆ
- ಕಳಚಿತು ಸ್ಟಾರ್ ಹೊಟೇಲ್ ಗಳ ಮುಖವಾಡ: ಕೊಳೆತ ಮಾಂಸ, ಬೂಸ್ಟ್ ಹಿಡಿದ ತರಕಾರಿ, ವಿಷ ಎಣ್ಣೆ ಪತ್ತೆ
- ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’
- ಬೆಳಕುಣಿ (ಚೌದ್ರಿ)–ಮುಂಗನಾಳ ರಸ್ತೆ ಹದಗೆಟ್ಟು ಸಂಚಾರಕ್ಕೆ ಸಂಚಕಾರ: ತಕ್ಷಣ ದುರಸ್ತಿಗೆ ಜೀವನ್ ಮಾಳೆಗೆ ಆಗ್ರಹ
- ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: FIR ದಾಖಲು
Author: admin
ಉಡುಪಿ: ಉಡುಪಿಯ ಶ್ರೀಕೃಷ್ಣ ಮಠಕ್ಕೆ ನವದಂಪತಿಗಳಾದ ಸಂಸದ ತೇಜಸ್ವಿ ಸೂರ್ಯ, ಶಿವಶ್ರೀ ಭೇಟಿ ನೀಡಿ ದೇವರ ಸನ್ನಿಧಿಯಲ್ಲಿ ಕೀರ್ತನೆ, ಸಂಗೀತ ಸೇವೆ ಸಲ್ಲಿಸಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದ ದಂಪತಿ ಕೀರ್ತನೆ, ಸಂಗೀತ ಸೇವೆ ಸಲ್ಲಿಸಿದರು. ಮದುವೆಯ ನಂತರ ತೇಜಸ್ವಿ ಸೂರ್ಯ ಅವರು ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದಾರೆ, ಇದು ಒಳ್ಳೆಯ ಬೆಳವಣಿಗೆ . ಇಬ್ಬರೂ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುವ ದಂಪತಿಯಾಗಿದ್ದಾರೆ ಎಂದು ಇದೇ ವೇಳೆ ನವದಂಪತಿಗಳನ್ನು ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಡಿ ಹೊಗಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ನವದೆಹಲಿ: ಪಾಕಿಸ್ತಾನವು ಸಾಮರಸ್ಯದ ಸಹಬಾಳ್ವೆಯನ್ನು ಬಯಸುತ್ತಿಲ್ಲ. ಬದಲಾಗಿ ಭಾರತದ ವಿರುದ್ಧ ಪರೋಕ್ಷ ಯುದ್ಧ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಮೆರಿಕ ಮೂಲದ ಖ್ಯಾತ ಪಾಡ್ ಕ್ಯಾಸ್ಟರ್ ಲೆಕ್ಸ್ ಫ್ರಿಡ್ ಮನ್ ಜೊತೆಗಿನ ಸಂವಾದದಲ್ಲಿ ಪ್ರಧಾನಿ ಮಾತನಾಡುತ್ತಿದ್ದರು. ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಶಾಂತಿ ಮತ್ತು ಸಾಮರಸ್ಯದಿಂದ ಸಹಬಾಳ್ವೆ ನಡೆಸಬಹುದೇ? ಎಂದು ಲೆಕ್ಸ್ ಫ್ರಿಡ್‌ಮನ್ ಅವರು ಕೇಳಿದರು. ಇದಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, ಪಾಕಿಸ್ತಾನ ಭಯೋತ್ಪಾದಕ ಮನಸ್ಥಿತಿಯಿಂದಾಗಿ ನಡೆಯುತ್ತಿದೆ, ಭಾರತ, ಪಾಕ್ ವಿಭಜನೆ ಕಥೆ ಮತ್ತು ನಂತರದ ರಕ್ತಪಾತದ ಹೃದಯಸ್ಪರ್ಶಿ ವಿಚಾರವನ್ನು ಹಂಚಿಕೊಂಡರು. ಕಾಲ ಕಳೆದರೂ, ರಕ್ತಪಾತ ಮತ್ತು ಭಯೋತ್ಪಾದನೆಯಿಂದ ಅಭಿವೃದ್ಧಿ ಹೊಂದುವ ಸಿದ್ಧಾಂತದಿಂದ ಉತ್ತೇಜಿಸಲ್ಪಟ್ಟ ಪಾಕಿಸ್ತಾನ, ಭಾರತದ ವಿರುದ್ಧ ಪರೋಕ್ಷ ಯುದ್ಧವನ್ನು ಮುಂದುವರೆಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ತಿಪಟೂರು: ದಲಿತ ವಿರೋಧಿ ಅಸ್ಪೃಶ್ಯತಾ ಮನಸ್ಥಿತಿ ಹೊಂದಿರುವ ತುಮಕೂರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ರವರನ್ನು ತುಮಕೂರು ಜಿಲ್ಲೆಯಿಂದ ಬೇರಡೆ ವರ್ಗಾವಣೆ ಮಾಡಬೇಕೆಂದು ದಲಿತ ಪ್ರಗತಿಪರ ಸಂಘಟನೆಗಳು ಒತ್ತಾಯ ಮಾಡಿದರು. ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ. ಶಾಂತಪ್ಪ, ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿ. ಪ್ರಭು ಅವರು ಅಧಿಕಾರ ದುರ್ಬಳಕೆ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಲಿತ ಸರ್ಕಾರಿ ನೌಕರರುಗಳಿಗೆ ನೀಡುತ್ತಿರುವ ಮಾನಸಿಕ ಹಿಂಸೆ ಮತ್ತು ಅಮಾನತು ಶಿಕ್ಷೆಗಳನ್ನು ದಲಿತ ಅಧಿಕಾರಿಗಳನ್ನು ಗುರಿಯನ್ನಾಗಿಸಿ ನೀಡುತ್ತಿರುವುದು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ದಲಿತ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಅಸ್ಪೃಶ್ಯತೆಯನ್ನ ತುಮಕೂರು ಜಿಲ್ಲಾ ಪಂಚಾಯತಿ ಸಿಇಓ ರವರು ಜೀವಂತವಾಗಿಸಲು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡುತ್ತಿರುವುದು ದಲಿತ ನೌಕರರ ಮೇಲಿನ ದೌರ್ಜನ್ಯದಿಂದ ರುಜುವಾತಾಗಿರುತ್ತದೆ ಆದಕಾರಣ ದಲಿತ…
ಬೀದರ್: ಸಿಎಂ ಸಿದ್ದರಾಮಯ್ಯ ಮಾದಿಗರ ವಿರೋಧಿ, ದಲಿತ ವಿರೋಧಿ ರಾಜ್ಯ ಸರ್ಕಾರ, ಒಳಮೀಸಲಾತಿ ಜಾರಿಗೆ ಹಿಂದೇಟು ಹಾಕುತ್ತಿದೆ ಎಂದು ಮಾದಿಗ ದಂಡೋರ ಔರಾದ್ ತಾಲ್ಲೂಕು ಮಾಜಿ ಉಪಾಧ್ಯಕ್ಷ ಅರವಿಂದ ಮಲ್ಲಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಶಿಷ್ಟ ಜಾತಿಗಳಲ್ಲಿರುವ 101 ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು ಅವರು ಒತ್ತಾಯಿಸಿದ್ದಾರೆ. ಸದಾಶಿವ ಆಯೋಗದ ಪ್ರಕಾರ ಒಳಮೀಸಲಾತಿ ಜಾರಿಗೊಳಿಸಬೇಕೆಂಬ ಸುಪ್ರೀಂಕೋರ್ಟ್ ಆದೇಶ ಪಾಲಿಸದ ಸರ್ಕಾರ, ದಲಿತರ ಪಾಲಿಗೆ ಸತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಒಳಮೀಸಲಾತಿ ಜಾರಿಗೆ ಆಗ್ರಹಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ಬೀದರ್: ತಾಲೂಕಿನ ಕೋಟೆ ಊರು ಎಂಬ ಖ್ಯಾತಿ ಪಡೆದ ವಡಗಾಂವ(ದೇ) ಗ್ರಾಮದಲ್ಲಿ ಶನಿವಾರ ರಣಗಂಬ ಉತ್ಸವ ಅದ್ದೂರಿಯಾಗಿ ಜರುಗಿತ್ತು. ಈ ರಣಗಂಬ ಉತ್ಸವ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಪಾಳೇಗಾರಿಕೆ ವಿರುದ್ಧ ವಿಜಯದ ಸಂಕೇತ ಈ ರಣಗಂಬ ಆಚರಿಸಲಾಗುತ್ತಿದೆ. ಪ್ರತಿವರ್ಷ ಹೋಳಿ ಹಬ್ಬದ ಮರುದಿನ ನಡೆಯುವ ಈ ಉತ್ಸವದಲ್ಲಿ ಗಡಿಭಾಗದ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದ ಅಪಾರ ಸಂಖ್ಯೆ ಭಕ್ತರು ಪಾಲ್ಗೊಂಡು ರಣಗಂಬಕ್ಕೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಪೂರೈಸಿದರು. ಈ ಉತ್ಸವ ಜನ ಜಾತ್ರೆ ರೂಪದಲ್ಲಿ ಆಚರಿಸುತ್ತಾರೆ. ಭಕ್ತಿ ಭಾವದಿಂದ ಉತ್ಸವದಲ್ಲಿ ಪಾಲ್ಗೊಂಡು ಹರಕೆ ತೀರಿಸುತ್ತಾರೆ. ದೇಶಮುಖ ಮನೆತನದ ಬಸವರಾಜ ದೇಶಮುಖ, ಶರಣಬಸಪ್ಪ ದೇಶಮುಖ, ಡಾ.ಉಮಾ ದೇಶಮುಖ, ಸುರೇಖಾ ಬಾಯಿ ದೇಶಮುಖ, ಅಲ್ಲಮ ಪ್ರಭು ದೇಶಮುಖ, ಮಲ್ಲಿಕಾರ್ಜುನ ದೇಶಮುಖ, ಕುಮಾರ ದೇಶಮುಖ ಪೂಜೆಸಲ್ಲಿಸಿ ಚಾಲನೆ ನೀಡಿದರು. ಗ್ರಾಮದ ಮುಖಂಡರಾದ ವೀರಪ್ಪ ಖಾನಾಪುರೆ, ಜಗನ್ನಾಥ್ ಪಟ್ನೆ, ಶಂಕ್ರಪ್ಪ ಧರ್ಮಜೆ, ಮಲ್ಲಪ್ಪ ನೇಳಗೆ, ಸಿದ್ದಯ್ಯ ಸ್ವಾಮಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ: ಅರವಿಂದ…
ತಿಪಟೂರು: ನಗರದ ಕೃಷಿಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ನಂದಿನಿ ಕ್ಷೀರ ಭವನವನ್ನು ಮಾರ್ಚ್ 23ರ ಭಾನುವಾರ ಲೋಕಾರ್ಪಣೆ ಮಾಡಲಾಗುವುದು ಎಂದು ಕರ್ನಾಟಕ ಹಾಲು ಮಹಾ ಮಂಡಳಿಯ ನಿರ್ದೇಶಕ ಮಾದಿಹಳ್ಳಿ ಎಂ.ಕೆ.ಪ್ರಕಾಶ್ ತಿಳಿಸಿದರು. ಈ ಕ್ಷೀರ ಭವನದ ಉದ್ಘಾಟನೆಯನ್ನು ಕೇಂದ್ರ ರೈಲ್ವೆ ಸಚಿವ ಹಾಗೂ ಜಲಶಕ್ತಿ ಖಾತೆಯ ಸಹಾಯಕ ಸಚಿವ ವಿ.ಸೋಮಣ್ಣ ಗೃಹ ಸಚಿವ ಡಾ.ಜಿ,ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ಸಭಾಂಗಣದ ಉದ್ಘಾಟನೆಯನ್ನು ಕೆ.ಎನ್.ರಾಜಣ್ಣ ಹಾಗೂ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಹಾಗೂ ಉಗ್ರಾಣದ ಕೊಠಡಿಯನ್ನು ಶಾಸಕ ಕೆ.ಷಡಕ್ಷರಿ ಉದ್ಘಾಟಿಸುವರು ಎಂದು ಅವರು ತಿಳಿಸಿದರು. ನಾನು ಜಿಲ್ಲೆಯ ನಿರ್ದೇಶಕರಲ್ಲಿ ಹಿರಿಯವನಾಗಿದ್ದು ಈ ಬಾರಿ ಸುಮಲ ಅಧ್ಯಕ್ಷರ ಚುನಾವಣೆಯಲ್ಲಿ ಆಕಾಂಕ್ಷಿಯಾಗಿದ್ದೆ, ಆದರೆ ರಾಜಕೀಯ ಕಾರಣಗಳಿಂದ ಅಧ್ಯಕ್ಷ ಸ್ಥಾನದಿಂದ ವಂಚಿತನಾಗಿದು ವಪಕ್ಷನಿಷ್ಠನಾಗಿ ಹಿರಿಯರ ಆಯ್ಕೆಯನ್ನು ಒಪ್ಪಿಕೊಂಡಿದ್ದೇನೆ. ಮುಂದೆ ಕೆಎಂಎಫ್ ನಿರ್ದೇಶಕ ಸ್ಥಾನದ ಆಕಾಂಕ್ಷಿಯಾಗಿದ್ದು, ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿಸ್ತರಣಾ ಅಧಿಕಾರಿ ದಿವಾಕರ್ ಮಲ್ಲಿಕಾರ್ಜುನ್ ಸುನಿಲ್ ಅಭಿಷೇಕ್ ಸಿಬ್ಬಂದಿ…
ತುಮಕೂರು: ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹುಲಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಸುಮಾರು ಎರಡು ವರ್ಷ ವಯಸ್ಸಿನ ಗಂಡು ಚಿರತೆ ಅನೇಕ ದಿನಗಳಿಂದ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಭೀತಿ ಉಂಟು ಮಾಡಿತು. ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆಯು ಚಿರತೆಯನ್ನು ಸೆರೆ ಹಿಡಿಯಲು ಬೋನು ಇರಿಸಿತ್ತು. ಈ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಈ ಮೂಲಕ ಈ ಪ್ರದೇಶದ ಜನರು ಚಿರತೆ ಭಯದಿಂದ ಮುಕ್ತರಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ತುಮಕೂರು: ಗೃಹ ಸಚಿವರ ಗ್ರಾಮದ ದಲಿತ ಕಾಲೋನಿಗೆ ಪೇಜಾವರ ಶ್ರೀಗಳು ಭೇಟಿ ನೀಡಿದರು. ತುಮಕೂರಿನ ಗೊಲ್ಲಹಳ್ಳಿ ಜನತಾ ಕಾಲೋನಿಗೆ ಭೇಟಿ ನೀಡಿದ ಶ್ರೀಗಳ ಪಾದಪೂಜೆ ನೆರವೇರಿಸುವ ಮೂಲಕ ದಲಿತ ದಂಪತಿ ಅತಿಥಿ ಸತ್ಕಾರ ಮಾಡಿದರು. ಮಂಜುನಾಥ್, ಚೈತ್ರಾ ಹಾಗೂ ಬಸವರಾಜು ಶಶಿಕಲಾ ದಂಪತಿಗಳು ಶ್ರೀಗಳ ಪಾದಪೂಜೆ ಮಾಡಿದರು. ಬಳಿಕ ದಲಿತ ದಂಪತಿಗಳಿಂದ ಫಲತಾಂಬೂಲ ಸ್ವೀಕರಿಸಿದ ಸ್ವಾಮೀಜಿ, ದಲಿತ ಕುಟುಂಬದ ಸದಸ್ಯರಿಗೆ ಹಣ್ಣಿನ ಫಲ ನೀಡಿ ಆಶೀರ್ವಾದ ಮಾಡಿದರು. ದಲಿತ ಮನೆಯಲ್ಲಿ ದೇವರ ಭಾವಚಿತ್ರಕ್ಕೆ ದೀಪ ಹಚ್ಚಿ ಪೂಜೆ ಸಲ್ಲಿಸಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ದಲಿತ ಕಾಲೋನಿಯಲ್ಲಿ ಅಶ್ವಥ ಹಾಗೂ ಬೇವಿನ ಗಿಡಗಳನ್ನ ನೆಟ್ಟು ಶುಭ ಹಾರೈಕೆ ಮಾಡಿದರು. ದಲಿತ ಕಾಲೋನಿಯ ರಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ಮಾಡಿದರು. ಏತನ್ಮಧ್ಯೆ ಭೀಮರಾಜ ಅರಸು ಪಾರ್ವತಮ್ಮ ದಂಪತಿಗೆ ಕೃಷ್ಣಾನುಗ್ರಹ ಮನೆ ಹಸ್ತಾಂತರ ಮಾಡಿದರು. ಈ ಮನೆಯನ್ನು ಅಂದಾಜು 10 ಲಕ್ಷ ರೂ. ಮೌಲ್ಯದಲ್ಲಿ ನಿರ್ಮಾಣ ಮಾಡಲಾಗಿದೆ. ಹಲವು ದಾನಿಗಳ ಸಹಾಯದಿಂದ ನಿರ್ಮಾಣ ಮಾಡಲಾಗಿದ್ದ ಈ …
ತುಮಕೂರು: ಕಾಂಗ್ರೆಸ್ ಮಾಜಿ ಶಾಸಕ ಶಫಿ ಅಹಮದ್ ಅವರ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ತಮ್ಮೆಲ್ಲ ಕಷ್ಟಗಳನ್ನು ಭಗವಂತ ಅಲ್ಲಾಹ ದೂರಮಾಡಲಿ, ಅಲ್ಲದೆ ಸುಖದಿಂದ ಶಾಂತಿಯಿಂದ ಬಾಳುವಂತಾಗಲಿ. ಪವಿತ್ರ ರಂಜಾನ್ ಹಬ್ಬವು ತಮಗೆಲ್ಲರಿಗೂ ಸುಖ ಸಂತೋಷವನ್ನು ಕರುಣಿಸಲಿ ಎಂದು ಹಾರೈಸಿದರು. ಕ್ರಿಸ್ತಪೂರ್ವ 632 ರಲ್ಲಿ ಜಗತ್ತು ಅದ್ವಿತೀಯ ಬದಲಾವಣೆಯನ್ನು ಕಂಡಿತ್ತು. ಅಂದು ಅತಿಯಾದ ಪ್ರಮಾಣದಲ್ಲಿ ಕೊಲೆ ಸುಲಿಗೆ ಹಾಗೂ ದೊಂಬಿ ನಡೆದಿತ್ತು. ಆಗ ಮಹಮ್ಮದ್ ಪೈಗಂಬರ್ ಅವರು ಶಾಂತಿ ಹಾಗೂ ನೆಮ್ಮದಿಯಿಂದ ಮತ್ತು ಸಹೋದರತ್ವ ಭಾವನೆಯಿಂದ ಬಾಳಬೇಕೆಂದು ಸಂದೇಶ ನೀಡಿದ್ದರು. ಈ ಸಂದೇಶವವನ್ನು ಇವತ್ತಿಗೂ ಕೂಡ ನಮ್ಮ ಜೀವನದಲ್ಲಿ ಅನುಸರಿಸಬೇಕಾಗಿದೆ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ: ತಾಲೂಕಿನ ಅಕ್ಕಿರಾಂಪುರ ಗ್ರಾಮ ಪಂಚಾಯಿತಿಯ ಪಿಡಿಓ ರವಿಕುಮಾರಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಿಂದ ಶೋಕಾಸ್ ನೋಟಿಸ್ ಜಾರಿಯಾಗಿದೆ. ರಾಜ್ಯ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿದ ಆದೇಶದಂತೆ ಶ್ರೀ ಯೋಗಿ ನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿಯನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಆಚರಿಸಲು ಸೂಚನೆ ನೀಡಲಾಗಿತ್ತು. ಆದರೆ ಅಕ್ಕಿರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಸುಸಜ್ಜಿತ ಭಾವಚಿತ್ರವನ್ನು ಪ್ರದರ್ಶಿಸುವ ಬದಲು, ಪ್ಲೈವುಡ್ ಅಥವಾ ವುಡ್ ಶೀಟ್ ಮೇಲೆ ಫೋಟೋ ಅಂಟಿಸಿ ಗೌರವ ತಗ್ಗಿಸಿದ ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಗಿತ್ತು. ಈ ಬಗ್ಗೆ ನಮ್ಮ ತುಮಕೂರು ವರದಿ ಪ್ರಕಟ ಮಾಡಿದ ಬೆನ್ನಲ್ಲೇ, ಅಧಿಕಾರಿಗಳ ನಿರ್ಲಕ್ಷ್ಯತೆ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಯಿತು. ಕ್ಷಮೆ ಯಾಚಿಸಿದ ಪಿಡಿಓ: ಅಕ್ಕಿರಾಂಪುರ ಪಿಡಿಓ ರವಿಕುಮಾರ್ ಅವರು ತಮ್ಮ ಉತ್ತರದಲ್ಲಿ, ಜಯಂತಿ ದಿನದಂದು ಅಕ್ಕಿರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಸ್ವತಃ ಹಾಜರಿರಲಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಅವರು ಪಕ್ಕದ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಆದರೆ,…