Author: admin

ತುರುವೇಕೆರೆ: ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ತುರುವೇಕೆರೆ ಶಾಖೆ, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ  ತಾಲ್ಲೂಕು ಕಚೇರಿಯ ಮುಂಭಾಗ ನಡೆಯಿತು. ಪಟ್ಟಣದ ತಾಲ್ಲೂಕು ಕಚೇರಿಯ ಆವರಣದಲ್ಲಿ ಮುಷ್ಕರವನ್ನುದ್ದೇಶಿಸಿ ಮಾತನಾಡಿದ ತಾಲ್ಲೂಕು ಗೌರವಾಧ್ಯಕ್ಷ ಹೇಮತ್ ಕುಮಾರ್,  ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕಾರ್ಯಕಾರಿ ಸಮಿತಿ ಸಭಾ ನಿರ್ಣಯದಂತೆ  ಹಿಂದೆ ರಾಜ್ಯಾದ್ಯಂತ ಮುಷ್ಕರ ನಡೆಸಿದ ಕಾರಣ, ದಿನಾಂಕ:03—10–2024 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಭರವಸೆ ನೀಡಿದ್ದರು. ಆದರೆ  ಸರ್ಕಾರವು ಈ ವೃಂದದ ನೌಕರರ ಬೇಡಿಕೆಗಳ ವಿಚಾರವಾಗಿ ಯಾವುದೇ ತೃಪ್ತಿಕರ ಕ್ರಮಗಳನ್ನು ಕೈಗೊಂಡಿರುವುದಿಲ್ಲ ಮತ್ತು ಬೇಡಿಕೆಗಳನ್ನು ಈಡೇರಿಸಿರುವುದಿಲ್ಲ. ಬದಲಾಗಿ ಮುಷ್ಕರದ ಪೂರ್ವದ ಅವಧಿಗಿಂತಲೂ ಹೆಚ್ಚಿನ ಕಾರ್ಯದ ಒತ್ತಡ ಉಂಟಾಗಿರುತ್ತದೆ.  ಆದ್ದರಿಂದ ಉಲ್ಲೇಖದ ಸಭೆಯಲ್ಲಿ ಮೇಲ್ದಂಡ ಎಲ್ಲಾ ಕಾರಣಗಳಿಗಾಗಿ ಮುಷ್ಕರದ…

Read More

ಜಬಲ್ಪುರ : ಕುಂಭಮೇಳದಿಂದ ಹಿಂತಿರುಗುತ್ತಿದ್ದ ಮಿನಿ ಬಸ್​ ಹಾಗೂ ಟ್ರಕ್​ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದ ಜಬಲ್ಪುರ—ಪ್ರಯಾಗ್ ​ರಾಜ್​ ಮಾರ್ಗದಲ್ಲಿ ಈ ದುರ್ಘಟನೆ ನಡೆದಿದೆ.  ಜಬಲ್ಪುರ — ಪ್ರಯಾಗ್​ರಾಜ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ಮಿನಿ ಬಸ್,​ ವಿರುದ್ಧ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಸಿಮೆಂಟ್​ ತುಂಬಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ 7 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟವರು ಆಂಧ್ರಪ್ರದೇಶದ ನಿವಾಸಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ರಾಯಚೂರು: ಚಲಿಸುತ್ತಿದ್ದ ಆ್ಯಂಬುಲೆನ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಆ್ಯಂಬುಲೆನ್ಸ್ ನಡು ರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ರಾಯಚೂರಿನ ಆಶಾಪುರ ರಸ್ತೆಯಲ್ಲಿ ನಡೆದಿದೆ. ಆ್ಯಂಬುಲೆನ್ಸ್ ನ ಇಂಜಿನ್ ನಲ್ಲಿ ಸಮಸ್ಯೆ ಕಂಡು ಬಂದಿದ್ದು, ಪರಿಣಾಮವಾಗಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಆ್ಯಂಬುಲೆನ್ಸ್ ನಲ್ಲಿದ್ದ ಮೂವರು ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಯಚೂರಿನಿಂದ ಉಡಮಗಲ್ ಗ್ರಾಮಕ್ಕೆ ಆ್ಯಂಬುಲೆನ್ಸ್ ಹೊರಟಿತ್ತು.  ಬೆಂಕಿ ಹತ್ತಿಕೊಂಡ ಬೆನ್ನಲ್ಲೇ  ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ  ಬೆಂಕಿ ನಂದಿಸಿದೆ. ನಂತರ ಮೃತದೇಹವನ್ನು ಬೇರೊಂದು ವಾಹನದಲ್ಲಿ ಗ್ರಾಮಕ್ಕೆ ಕುಟುಂಬಸ್ಥರು ಸಾಗಿಸಿದ್ದಾರೆ. ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಬೆಂಗಳೂರು: ಈಜಲು ತೆರಳಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಬನ್ನೇರುಘಟ್ಟ ಸುವರ್ಣಮುಖಿ ಕಲ್ಯಾಣಿಯಲ್ಲಿ ಮುಳುಗಿ ನೀರು ಪಾಲಾದ ಘಟನೆ ನಡೆದಿದೆ. ಬೊಮ್ಮನಹಳ್ಳಿ ಗಾರ್ವೇಬಾವಿ ಪಾಳ್ಯದ ದೀಪು(20), ಯೋಗಿಶ್ವರನ್(20) ಮೃತಪಟ್ಟ ವಿದ್ಯಾರ್ಥಿಗಳಾಗಿದ್ದಾರೆ. ಹೆಬ್ಬಗೋಡಿಯ ಕಾಲೇಜೊಂದರ 5 ಮಂದಿ ವಿದ್ಯಾರ್ಥಿಗಳು ಬನ್ನೇರುಘಟ್ಟ ಸುವರ್ಣಮುಖಿ ಕಲ್ಯಾಣಿಗೆ ಈಜಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ. ನೀರಿಗೆ ಇಳಿದಿದ್ದ ವಿದ್ಯಾರ್ಥಿಗಳ ಪೈಕಿ ದೀಪು ಹಾಗೂ ಯೋಗೀಶ್ವರನ್ ಈಜಲು ಸಾಧ್ಯವಾಗದೇ ಪರದಾಡಿದ್ದಾರೆ. ಕೆಲ ಕಾಲ ಜೀವ ಉಳಿಸಿಕೊಳ್ಳಲು ಸಾಕಷ್ಟು ಹೋರಾಟ ನಡೆಸಿದ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿದ್ದಾರೆ. ನೀರಲ್ಲಿ ಮುಳುಗುತ್ತಿದ್ದ ಸ್ನೇಹಿತರನ್ನು ರಕ್ಷಿಸಲಾಗದೇ ಉಳಿದ ಸ್ನೇಹಿತರು ಪರದಾಡಿದ್ದಾರೆ. ಈ ಘಟನೆಯ ದೃಶ್ಯ ಸ್ಥಳೀಯ ಯುವಕರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ತಿಪಟೂರು: ಗಂಗನಘಟ್ಟ ಗ್ರಾಮದ ಶ್ರೀ ರಂಗನಾಥ ಸ್ವಾಮಿ ಉತ್ಸವಮೂರ್ತಿ ಗಂಗನ ಘಟ್ಟದ ಒಡೆತನದ ವಿವಾದಕ್ಕೆ ಜಿಲ್ಲಾಧಿಕಾರಿಗಳು ಆದೇಶ ಪ್ರಕಟಿಸಿದ್ದು, ಉತ್ಸವ ಮೂರ್ತಿ ಸಾಸಲಹಳ್ಳಿಗ್ರಾಮಕ್ಕೆ ಸೇರಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಿ ಪೊಲೀಸ್ ಸಮ್ಮುಖದಲ್ಲಿ ಗಂಗನಘಟ್ಟಗ್ರಾಮದಲ್ಲಿರುವ ಉತ್ಸವ ಮೂರ್ತಿಯನ್ನು ಸಾಸಲಹಳ್ಳಿಯಲಿ ಇಡಬೇಕೆಂದು ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾಕ್ಟರ್ ಜಿ.ಬಿ. ವಿವೇಚನ ಅವರು, ಈ ಉತ್ಸವಮೂರ್ತಿ ಸಾಸಲ ಹಳ್ಳಿಗೆ ಸೇರಿದ್ದಲ್ಲ ಜಿಲ್ಲಾಧಿಕಾರಿಗಳು ಏಕ ಪಕ್ಷೀಯವಾಗಿ ನೀಡಿರುವ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಕೋರಿದ್ದಾರೆ. ತಲೆಮಾರುಗಳಿಂದ  ಗಂಗನಘಟ್ಟ ಬಾರೆ ಮೇಲೆ ಶ್ರೀ ರಂಗನಾಥ ಸ್ವಾಮಿ ಮೂಲ ದೇವಾಲಯವಿದ್ದು, ಇಲ್ಲಿಂದ ರಂಗನಾಥ ಸ್ವಾಮಿ ಉತ್ಸವ ಮೂರ್ತಿಯನ್ನು ಅರ್ಚಕರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸಾಸಲಹಳ್ಳಿಯಲ್ಲಿ ಇರಿಸಲಾಗಿತ್ತೇ ವಿನಃ ಗಂಗನಘಟ್ಟ ಗ್ರಾಮಸ್ಥರು ತಲೆಮಾರುಗಳಿಂದ ಪೂಜಿಸಿಕೊಂಡು ಬಂದಿರುವ ಮೂರ್ತಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ, ಪ್ರಾಣ ಕೊಟ್ಟೆವೇ ವಿನಃ ಉತ್ಸವ ಮೂರ್ತಿಯನ್ನು ಬಿಟ್ಟು ಕೊಡುವುದಿಲ್ಲ ಎಂದರು. ಈ  ಬಗ್ಗೆ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆಮಾಡಿ ವಾಸ್ತವ ಸಂಗತಿ…

Read More

ಹಾಸನ: ಅಮೆರಿಕದಿಂದ ಕಾಲಿಗೆ ಚೈನ್ ಹಾಕಿಕೊಂಡು ದೇಶದ ಜನರನ್ನು ತಂದು ಬಿಸಾಕಿದ್ದು ಇಡೀ ದೇಶಕ್ಕೆ ಅವಮಾನ. ಆದರೆ, ಇದರ ಬಗ್ಗೆ ಯಾವುದೇ ಚರ್ಚೆಯಾಗುತ್ತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಎಲ್ಲಾ ರಾಜ್ಯಗಳಿಗೆ ಹೋಗಿ ಮೋದಿ ಸಾಹೇಬ್ರು ಪ್ರೆಸ್ ಮೀಟ್ ಮಾಡಲಿ. ಎಂದಾದರೂ ಓಪನ್ ಡಿಸ್ಕಷನ್ ಮಾಡಿದ್ದಾರಾ? ಎಂದು ಪ್ರಶ್ನಿಸಿದರು. ಕೇವಲ ಮನ್ ಕೀ ಬಾತ್ ಎನ್ನುತ್ತಾರೆ. ಕಳೆದ ಲೋಕಸಭೆ ಚುನಾವಣೆ ವೇಳೆ ಮೋದಿಯವರು ಮಂಗಳಸೂತ್ರ, ಪಾಕಿಸ್ತಾನ ಎರಡೇ ಮಾತನಾಡಿದ್ದು. 10 ವರ್ಷದಿಂದ ಬಿಜೆಪಿಯವರಿಗೆ ಮೋದಿ ಬಿಟ್ಟರೆ ಯಾವ ನಾಯಕರು ಕಾಣಲಿಲ್ಲವೇ? ಮಹಾರಾಜ ಅಲ್ಲಿಂದ ಇಳಿಯುವುದೇ ಪರಿಹಾರ ಎಂದರು. ರಾಹುಲ್ ಗಾಂಧಿ ಜೊತೆ ಮೋದಿಯವರು 5 ಗಂಟೆ ಚರ್ಚೆ ಮಾಡುತ್ತಾರಾ ಎಂದು ಸವಾಲು ಹಾಕಿದ ಸಂತೋಷ್‌ ಲಾಡ್, ಬಿಜೆಪಿಯಲ್ಲಿ ಕೆಲಸ ಮಾಡುವವರಿಗೆ ಪ್ರಧಾನ ಮಂತ್ರಿ ಹುದ್ದೆ ಕೊಟ್ಟರೆ ದೇಶ ಉಳಿಯುತ್ತದೆ. ಈಗಾಗಲೇ ದೇಶ ನೂರಾರು ವರ್ಷ ಹಿಂದೆ ಸಾಗಿದೆ. ಪ್ರಧಾನಿ ಬದಲಾದರೆ ದೇಶದ ಆರ್ಥಿಕ…

Read More

ನಮ್ಮತುಮಕೂರು ವಿಶೇಷ:  ದೊಡ್ಡ ದೊಡ್ಡ ಮಾಲ್ ಗಳಲ್ಲಿ ಆಫರ್ ಗಳನ್ನು ನೋಡಿದ್ದೇವೆ. ಬೈ ಒನ್ ಗೆಟ್ ಒನ್ ಫ್ರೀ ಆಫ್ ಕೇಳಿದ್ದೇವೆ. ಆದರೆ ತುಮಕೂರಿನಲ್ಲೊಬ್ಬ ಈರುಳ್ಳಿ ಮಂಡಿ ಮಾಲೀಕ, ತನ್ನ ಅಂಗಡಿಯಲ್ಲಿ ಈರುಳ್ಳಿ ಖರೀದಿ ಮಾಡಿದ್ರೆ ಪ್ರತಿದಿನ ಗ್ರಾಹಕರಿಗೆ ಬಹುಮಾನ ಕೊಡ್ತಾ ಇದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು ಯುಗಾದಿ ಹಬ್ಬಕ್ಕೆ ಚಿನ್ನದುಂಗರದ ಉಡುಗೊರೆ ಕೊಡಲು ಮುಂದಾಗಿದ್ದಾನೆ. ಈರುಳ್ಳಿ ಕೊಳ್ಳಿ, ಬಹುಮಾನ ಗೆಲ್ಲಿ. ಹೀಗೊಂದು ಆಫರ್ ನ ಬೋರ್ಡ್ ತುಮಕೂರಿನ ಅಂತರಸನಹಳ್ಳಿಯ ಮಾರುಕಟ್ಟೆಯಲ್ಲಿ ಕಾಣಸಿಗುತ್ತಿದೆ. ಪಿ.ವಿ.ನೃಪತುಂಗ ಆ್ಯಂಡ್ ಸನ್ಸ್ ನ ಈರುಳ್ಳಿ ಮಂಡಿಯಿಂದ ವಿಶೇಷ ಆಫರ್ ಘೋಷಣೆ ಮಾಡಿದ್ದಾರೆ. 100 ರೂಪಾಯಿ ಮೇಲ್ಪಟ್ಟು ಈರುಳ್ಳಿ ಖರೀದಿ ಮಾಡಿದವರಿಗೆ ಈ ಆಫರ್ ಅನ್ವಯವಾಗುತ್ತದೆ. ಈರುಳ್ಳಿ ಖರೀದಿಸಿದ್ದ ಪ್ರತಿಯೊಬ್ಬರಿಗೂ ಕೂಪನ್ ಕೊಡಲಾಗುತ್ತದೆ. ಅದರಲ್ಲಿ ಗ್ರಾಹಕರ ಮಾಹಿತಿ ಬರೆದು ಲಕ್ಕಿ ಡ್ರಾ ಡಬ್ಬಿಯಲ್ಲಿ ಹಾಕಬೇಕು. ಪ್ರತಿ ದಿನ ರಾತ್ರಿ 7 ಗಂಟೆಗೆ ಗ್ರಾಹಕರ ಸಮ್ಮುಖದಲ್ಲೇ ಬಾಕ್ಸ್ ಓಪನ್ ಮಾಡಲಾಗುತ್ತದೆ. ಲಕ್ಕಿ ಡಿಪ್ ಮೂಲಕ ಕೂಪನ್…

Read More

ತುಮಕೂರು: ಪಾಲಿಕೆ ವ್ಯಾಪ್ತಿಯಲ್ಲಿ ಗುಂಡಿ ಬಿದ್ದು ಹಾಳಾಗಿರುವ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯ ಭರದಿಂದ ಸಾಗಿದೆ ಎಂದು ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ತಿಳಿಸಿದ್ದಾರೆ. ಪಾಲಿಕೆ ವ್ಯಾಪ್ತಿಯ 1 ರಿಂದ 17ನೇ ವಾರ್ಡ್ ನವರೆಗೆ 27ಲಕ್ಷ ಹಾಗೂ 18 ರಿಂದ 35ನೇ ವಾರ್ಡ್ ವರೆಗೆ 24 ಲಕ್ಷ ರೂ.ಗಳ ವೆಚ್ಚದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಪ್ರಮುಖ ರಸ್ತೆಗಳಾದ ಬಿ.ಎಚ್.ರಸ್ತೆ, ಕುಣಿಗಲ್ ರಸ್ತೆ, ಗುಬ್ಬಿ ರಸ್ತೆ, ಮಂಡಿಪೇಟೆ ಮುಖ್ಯರಸ್ತೆ, ಜೆ.ಸಿ.ರಸ್ತೆ, ಅಶೋಕ ರಸ್ತೆ, ರಾಧಾಕೃಷ್ಣ ರಸ್ತೆ, ಉಪ್ಪಾರಹಳ್ಳಿ ಮುಖ್ಯರಸ್ತೆ, ಇನ್ನಿತರೆ ಮುಖ್ಯ ರಸ್ತೆಗಳು ಹಾಗೂ ಅಡ್ಡರಸ್ತೆಗಳಲ್ಲಿ ಗುಂಡಿ ಬಿದ್ದು ಹಾಳಾಗಿದ್ದು, ವಾಹನ ಸಂಚಾರ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರು ದಾಖಲಾದ ಹಿನ್ನೆಲೆಯಲ್ಲಿ ಆಯುಕ್ತರು ಸ್ಥಳಪರಿಶೀಲನೆ ನಡೆಸಿ, ಅತಿ ತುರ್ತಾಗಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಪಾಲಿಕೆಯ ತಾಂತ್ರಿಕ ಶಾಖೆಗೆ ಸೂಚಿಸಿದ್ದಾರೆ. ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಆಹ್ವಾನಿಸಿ ಅರ್ಹ ಗುತ್ತಿಗೆದಾರರಿಗೆ…

Read More

ಔರಾದ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ  ವೆಂಕಟೇಶ್ವರ ಆಟೋ ಮೊಬೈಲ್ಸ್ ಅಂಗಡಿಗೆ ಬೆಂಕಿ ತಗುಲಿ ಅಂಗಡಿಯಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ಔರಾದ ತಾಲೂಕಿನ ವಡಗಾಂವ ಗ್ರಾಮದಲ್ಲಿ ನಡೆದಿದೆ. ಬಾಲಾಜಿ ಪಾಟೀಲ ಎನ್ನುವವರಿಗೆ ಸೇರಿದ  ಅಂಗಡಿ ಬೆಂಕಿಗೆ ಆಹುತಿಯಾಗಿದೆ.  ನಿನ್ನೆ ರಾತ್ರಿ ಸುಮಾರು ಎಂಟು ಗಂಟೆಗೆ ಆಟೋ ಮೊಬೈಲ್ಸ್ ಅಂಗಡಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎಂದು ಅಂಗಡಿಯ ಮಾಲಿಕರು ತಿಳಿಸಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ಈ ಅವಘಡದಿಂದ ಸುಮಾರು ಎಂಟು ಲಕ್ಷಕ್ಕಿಂತ ಅಧಿಕ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ವಿಷಯ ತಿಳಿದು ಕಾಂಗ್ರೆಸ್ ಮುಖಂಡ ಸುಧಾಕರ ಕೊಳ್ಳುರ ಅವರು ಸ್ಥಳಕ್ಕೆ ಭೇಟಿ ನೀಡಿ, ಅಂಗಡಿಯ ಮಾಲಿಕರಿಗೆ ಧೈರ್ಯ ತುಂಬಿ ,ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಮಾತನಾಡಿ, ಸೂಕ್ತ ಪರಿಹಾರ ಒದಗಿಸಿ ಕೊಡುವಂತೆ ಮನವಿ ಮಾಡಿದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ…

Read More

ಹೆಚ್.ಡಿ.ಕೋಟೆ: ಹೆಚ್.ಡಿ.ಕೋಟೆ ತಾಲೂಕಿನ ಹ್ಯಾಂಡ್ ಪೋಸ್ಟ್ ಯರಳ್ಳಿ ಜಮೀನಿಲ್ಲಿ  ಒಕ್ಕಣೆ ಮಾಡಲು ಹಾಕಿದ್ದ ರಾಗಿ,  ಬತ್ತದ, ಹಾಗೂ ಹುಲ್ಲಿನ ಮೆದೆಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯ ರಾಗಿ, ಬತ್ತ, ಹುಲ್ಲು ಸೇರಿದಂತೆ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ. ತಾಲೂಕಿನ ಹ್ಯಾಂಡ್ ಪೋಸ್ಟ್ ಯರಳ್ಳಿ ಗ್ರಾಮದ ನಿವಾಸಿಯಾದ  ರೈತ ಶಿವನಂಜು ಎಂಬುವರಿಗೆ ಸೇರಿದ, ಜಮೀನಿನಲ್ಲಿ ಹೊಕ್ಕಣೆ ಮಾಡಲು ಇರಿಸಿದ್ದ ರಾಗಿ, ಭತ್ತ, ಹುಲ್ಲುಗೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ತಂಡ  ಬೆಂಕಿಯನ್ನು ನಂದಿಸಲು ಸತತ ಪ್ರಯತ್ನ ಮಾಡಿದ್ದಾರೆ ಆದರೆ ಅಷ್ಟರಲ್ಲಿ ಸಂಪೂರ್ಣ ಒಕ್ಕಣೆ ಮಾಡಬೇಕಿದ್ದ ಲಕ್ಷಾಂತರ ರೂ ಮೌಲ್ಯದ ರಾಗಿ, ಭಕ್ತ, ಹುಲ್ಲು, ಸಂಪೂರ್ಣ ಭಸ್ಮವಾಗಿದೆ. ಬಳಿಕ ರೈತ ಶಿವನಂಜು  ಮಾತನಾಡಿ, ಹ್ಯಾಂಡ್ ಪೋಸ್ಟ್ ನಲ್ಲಿರುವ ಕೆಲವು ಮಧ್ಯದ ಅಂಗಡಿ ಹಾಗೂ ಬಾರ್ ನವರು, ಮಧ್ಯ ಸೇವನೆ ಮಾಡಿರುವ ತ್ಯಾಜ್ಯಗಳನ್ನ ನಮ್ಮ ಜಮೀನಿನ ಬಳಿ ತಂದು ಬೆಂಕಿ ಹಚ್ಚುತ್ತಾರೆ, ಆದ್ದರಿಂದ ಇಂಥ ಘಟನೆ ನಡೆದಿದೆ ನಾವು ಹಲವು…

Read More