Author: admin

ತುಮಕೂರು:  ತುಮಕೂರು ತಾಲ್ಲೂಕು ಕಸಬಾ ಹೋಬಳಿ ಸ್ವಾಂದೇನಹಳ್ಳಿ ಗ್ರಾಮದಲ್ಲಿ ಫೆಬ್ರವರಿ 13 ಮತ್ತು 14ರಂದು “ಶ್ರೀ ಆದಿಶಕ್ತಿ ಸ್ವಾಂದೇನಹಳ್ಳಿ ಗ್ರಾಮದೇವತೆ ಮಾರಮ್ಮನವರ ನೂತನ ಸ್ಥಿರ ವಿಗ್ರಹ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಾಲಯ ಉದ್ಘಾಟನೆ ಹಾಗೂ ವಿಮಾನ ಗೋಪುರಕ್ಕೆ ಕಳಸ ಪ್ರತಿಷ್ಠಾಪನಾ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಫೆಬ್ರವರಿ 13ರಂದು ಸಂಜೆ 4 ಗಂಟೆಗೆ ಗೋಧೂಳಿ ಲಗ್ನದ ಸುಮುಹೂರ್ತದಲ್ಲಿ ಗಣಪತಿಪೂಜೆ, ಗಂಗಾಪೂಜೆ, ಕುಲದೇವತಾ ಪ್ರಾರ್ಥನೆ, ಯಾಗಶಾಲಾ ಪ್ರವೇಶ, ಸ್ವಸ್ತಿಪುಣ್ಯಾಃ, ರಕ್ಷಾಬಂಧನ, ಮಹಾಸಂಕಲ್ಪ, ದೇವಾನಾಂದಿ, ನವಗ್ರಹ ಪೂಜೆ, ಕಳಸಗಳ ಆರಾಧನೆ, ಅಮ್ಮನವರ ಪೀಠಸ್ಥಾಪನೆ, ಚಕ್ರಸ್ಥಾಪನೆ, ಜಲಾದಿವಾಸ, ಕ್ಷೀರಾದಿವಾಸ, ಧಾನ್ಯದಿವಾಸ, ಶಯ್ಯಾದಿವಾಸ, ಪುಷ್ಪದಿವಾಸ, ಗಣಪತಿ ಹೋಮ, ನವಗ್ರಹ ಹೋಮ, ರಾಕ್ಷೊಘ್ನ ಹೋಮ, ಅಘೋರ ಹೋಮ, ಬಲಿಹರಣ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಲಾಗುವುದು. ಫೆಬ್ರವರಿ 14ರಂದು ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಆದಿಶಕ್ತಿ ಗ್ರಾಮದೇವತೆ ಮಾರಮ್ಮನವರ ಪ್ರಾಣಪ್ರತಿಷ್ಠೆ, ನೇತ್ರೋನ್ಮಿಲನ, ದೃಷ್ಠಿ, ಗರ್ಭಗುಡಿ ಗೋಪುರಕ್ಕೆ ಕಳಸಾರೋಹಣ, ಪ್ರಾಣ ಪ್ರತಿಷ್ಠಾಪನ ಹೋಮ, ತ್ರಿಶಕ್ತಿಯರ ಹೋಮ, ವಾಸ್ತು ಹೋಮ, ಕಲಾ ಹೋಮ,…

Read More

ತುಮಕೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಫೆಬ್ರವರಿ 11ರಂದು ಬೆಳಿಗ್ಗೆ 10:30 ಗಂಟೆಗೆ ತುಮಕೂರು ವಿಶ್ವವಿದ್ಯಾನಿಲಯದ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ “ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ”ವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ, ಪ್ರಬಂಧ, ಕವನ ವಾಚನ, ಆಶುಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಕಾರ್ಯಕ್ರಮವನ್ನು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಎನ್. ಛಲವಾದಿ ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಕಾನೂನು ಸಲಹೆಗಾರ ಡಾ.ಬಾಬಾ ಸಾಹೇಬ್ ಜಿನರಾಳ್ಕರ್ ಹಾಗೂ ಆನಂದ್ ಪಬ್ಲಿಕೇಶನ್‌ ನ ಲೇಖಕ ಮತ್ತು ಪ್ರಕಾಶಕ ಶಂಕರಾನಂದ್ ಎಂ.ವಿ. ಅವರು ಉಪನ್ಯಾಸ ನೀಡಲಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

Read More

ತುಮಕೂರು: ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಮಹತ್ವಾಕಾಂಕ್ಷಿ ಯೋಜನೆ ‘ಮಿಶನ್ ಉತ್ಥಾನ್’ನ ನೋಡಲ್ ಕಚೇರಿಯಾಗಿ ತುಮಕೂರು ವಿಶ್ವವಿದ್ಯಾನಿಲಯವು ಆಯ್ಕೆಯಾಗಿದೆ. ಈ ಯೋಜನೆಗೆ ದೇಶದಲ್ಲಿ ಆಯ್ಕೆಯಾದ ಕೆಲವೇ ಸಂಸ್ಥೆಗಳಲ್ಲಿ ತುಮಕೂರು ವಿವಿ ಒಂದಾಗಿದೆ. ಎರಡು ಹಾಗೂ ಮೂರನೇ ಶ್ರೇಣಿಯ ನಗರಗಳಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಾವೀನ್ಯತೆ ಹಾಗೂ ಸಂಶೋಧನೆಯನ್ನು ಬೆಳೆಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಆಶ್ರಯದಲ್ಲಿ ‘ಮಿಶನ್ ಉತ್ಥಾನ್’ ಅನ್ನು ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ತುಮಕೂರು ವಿಶ್ವವಿದ್ಯಾನಿಲಯವು ತನ್ನ ‘ಇನ್ಕ್ಯೂಬೇಶನ್, ಇನ್ನೋವೇಶನ್ ಅಂಡ್ ಎಂಟರ್‌ ಪ್ರಿನ್ಯುರ್‌ ಶಿಪ್ ಸೆಂಟರ್’ ಮೂಲಕ ತುಮಕೂರು ಜಿಲ್ಲೆಯಲ್ಲಿ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಜಾರಿಗೆ ತರಲಿದೆ. ಮಂಗಳೂರಿನ ತಣ್ಣೀರುಬಾವಿ ಬೀಚ್‌ ನಲ್ಲಿ ಇತ್ತೀಚೆಗೆ ನಡೆದ ‘ಎಮರ್ಜ್– 2025’ ಸ್ಟಾರ್ಟಪ್ ಉತ್ಸವದಲ್ಲಿ ‘ಮಿಶನ್ ಉತ್ಥಾನ್’ ಯೋಜನೆಗೆ ಚಾಲನೆ ನೀಡಲಾಗಿದ್ದು, ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದರು. ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಸ್ಟಾಟೆಜಿಕ್…

Read More

ತುಮಕೂರು: ಇಲ್ಲಿನ ವಿದ್ಯಾನಗರದಲ್ಲಿ ವಿದ್ಯಾನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಜ್ಞಾನಿ ಶ್ರೇಷ್ಠ ಡಾ.ಸಿ. ದುರ್ಗಾ ಪ್ರಸಾದ್ ರವರನ್ನು ಸನ್ಮಾನಿಸಲಾಯಿತು. ವಿದ್ಯಾನಗರದ ನಿವಾಸಿಯೂ ಆಗಿರುವ ವಿಜ್ಞಾನಿ ದುರ್ಗಾ ಪ್ರಸಾದ್ ರವರು ವಿಶ್ವದ ಪ್ರತಿ ಶತ ಎರಡು ರ‍್ಸೇಂಟ್‌‌ ಶ್ರೇಷ್ಠ ವಿಜ್ಞಾನಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರಿಂದ ಅವರನ್ನು ನಾಗದೇವತಾ ಪ್ರತಿಷ್ಠಾಪನಾ ರಜತ ಮಹೋತ್ಸವದ  ಸಮಾರಂಭದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಆಡಿಟರ್ ಟಿ.ಆರ್.ಅಂಜನಪ್ಪರವರು ವಹಿಸಿದ್ದರು. ಪಾಲಿಕೆಯ ಮಾಜಿ ಸದಸ್ಯರುಗಳಾದ ಲಲಿತಾ ರವೀಶ್, ಶ್ರೀನಿವಾಸಮೂರ್ತಿ ಸೇರಿದಂತೆ ಬಡಾವಣೆಯ ಪ್ರಮುಖರು, ಸಂಘದ ಉಪಾಧ್ಯಕ್ಷರಾದ ವಾಸುದೇವ ತವಳ, ಕಾರ್ಯದರ್ಶಿ  ನಿವೃತ್ತ ಪ್ರಾಚಾರ್ಯ ಕುಮಾರಸ್ವಾಮಿ, ಖಜಾಂಚಿ ಜಿ.ವಿ. ಲಕ್ಷ್ಮೀನರಸಿಂಹಯ್ಯ, ನಿರ್ದೇಶಕರಾದ ಗಂಗಾಧರಮೂರ್ತಿ, ವಿದ್ಯುತ್ ಗುತ್ತಿಗೆದಾರ ಯೋಗೀಶ್,  ಕಲಾವಿದರೂ ಹಾಗೂ ನಿವೃತ್ತ ಬ್ಯಾಂಕ್ ನೌಕರರಾದ ಚಿಕ್ಕಹನುಮಂತಯ್ಯ, ಹೆಚ್ಎಂಟಿ ನಂಜುಂಡಪ್ಪ, ರವೀಶ್ ಮತ್ತಿತರರು ಪಾಲ್ಗೊಂಡಿದ್ದರು.  ಕಾರ್ಯಕ್ರಮಕ್ಕೂ ಮುನ್ನ ಆಗಮಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಯವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ತುಮಕೂರು: ಪ್ರಯೋಗದಾಟಗಳ ರಂಗ ಕೇಂದ್ರವೆಂದೇ ಪ್ರಸಿದ್ಧಿ ಇರುವ ನಾಟಕ ಮನೆ ತುಮಕೂರು ರಂಗ ತಂಡವು ನಿರಂತರವಾಗಿ ರಂಗಉತ್ಸವ, ನಾಟಕಗಳು, ವಿಚಾರ ಸಂಕಿರಣಗಳು, ರಂಗ ಕಾರ್ಯಾಗಾರಗಳು, ಸಾಧಕರಿಗೆ ಅಭಿನಂದನೆ ಹೀಗೆ ಹಲವಾರು ರೀತಿಯ ರಂಗ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇದೀಗ ತುಮಕೂರು ನಗರದ ಡಾ.ಗುಬ್ಬಿವೀರಣ್ಣಕಲಾಕ್ಷೇತ್ರದಲ್ಲಿ, ದಿನಾಂಕ 13—02–2025ರ ಗುರುವಾರ ಸಂಜೆ 6.00ಕ್ಕೆ ನಾಟಕೋತ್ಸವದ ಉದ್ಘಾಟನಾ ಸಮಾರಂಭವಿದ್ದು , ನಂತರ ಪ್ರಸ್ತುತ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸೈಯದ್‌ ಅಹಮದ್‌ ಖಾನ್ (ಎಸ್.ಎ.ಖಾನ್)ರವರಿಗೆ ನಾಟಕ ಮನೆ ತುಮಕೂರು ವತಿಯಿಂದ ಅಭಿನಂದನೆಯನ್ನು ಸಲ್ಲಿಸಲಾಗುತ್ತದೆ. ತದನಂತರ ರಾತ್ರಿ 7.00ಕ್ಕೆ ಯುದ್ಧದಿಂದ, ಧಾರ್ಮಿಕ ಸಂಘರ್ಷಗಳಿಂದ ಕ್ಷೋಭೆಗೊಂಡು ನರಳುತ್ತಿರುವ ಜಗತ್ತಿಗೆ ಬುದ್ಧನ ಕರುಣಾ ಮೈತ್ರಿಯ ವಿಚಾರಗಳು ಮದ್ದಾಗ ಬಲ್ಲವು ಮತ್ತು ತನಗೂ ಒಂದು ದಿನ ಸಾವಿದೆ ಎಂದು ತಿಳಿದ ಮನುಷ್ಯ ಬೇರೆಯವರಿಗೆಕೇಡು ಬಯಸಲಾರ ಎಂಬ ವಿಷಯದ ಆಶಯದೊಂದಿಗೆ ಅಶೋಕ ಚಕ್ರವರ್ತಿಯ ಬಗ್ಗೆ ಕಟ್ಟಿರುವ ನಾಟಕ “ದಯಾನದಿ ದಂಡೆಯಮೇಲೆ” ಮೋದೂರುತೇಜರವರ ರಚನೆಯಲ್ಲಿ ಧೀಮಂತ್‌ ರಾಮ್‌ ರವರ ನಿರ್ದೇಶನದಲ್ಲಿ ಮೂಡಿಬರಲಿದೆ.…

Read More

ತುಮಕೂರು: ದಲಿತರು ತಮ್ಮ ಜಮೀನುಗಳಿಗೆ ಹಾದು ಹೋಗುತ್ತಿರುವ ರಸ್ತೆಗಳನ್ನ ಬಲಾಢ್ಯರು ಅಡ್ಡಿಪಡಿಸಿ ಒತ್ತುವರಿ ಮಾಡಿಕೊಳ್ಳುತ್ತಿದ್ದು, ಒತ್ತುವರಿ ತೆರವುಗೊಳಿಸುವಲ್ಲಿ ಕಂದಾಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತು. ಕುಣಿಗಲ್ ತಾಲೂಕಿನ ತರೆದಕುಪ್ಪೆ, ಬೆಣಚಕಲ್ಲು, ಆರ್. ಬ್ಯಾಡರಹಳ್ಳಿ, ಇಪ್ಪಾಡಿ, ಗುನ್ನಾಗೆರೆ, ಕೊಡವತ್ತಿ, ಬ್ಯಾಡರಹಳ್ಳಿ, ತೊರೆಹಳ್ಳಿ, ಶೆಟ್ಟಿಗೆಹಳ್ಳಿ, ಚನ್ನಾಪುರ, ಮಲ್ಲಾಪುರ ಮತ್ತಿತರೆ ಗ್ರಾಮಗಳಲ್ಲಿ ದಲಿತರು ತಮ್ಮ ಪೂರ್ವಜರ ಕಾಲದಿಂದಲೂ ತಮ್ಮ ಜಮೀನುಗಳಿಗೆ ಹಾದು ಹೋಗುತ್ತಿದ್ದ ರಸ್ತೆಗಳನ್ನು ಏಕಾಏಕಿ ಅತಿಕ್ರಮ ಪ್ರವೇಶ ಮಾಡಿ ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಲಾಢ್ಯರು — ರಸ್ತೆ ಒತ್ತುವರಿ ಮಾಡಿಕೊಂಡಿರುವುದರಿಂದ ದಲಿತರು ತಮ್ಮ ಜಮೀನಿನಲ್ಲಿ ಉಳುಮೆಗೆ, ಬಿತ್ತನೆಗೆ ಮತ್ತು ಕಟಾವು ಕೆಲಸಗಳನ್ನು ಮಾಡಕು ತೊಂದರೆ  ಅನುಭವಿಸುತ್ತಿದ್ದು,  ತರೇದಕುಪ್ಪೆ ಮತ್ತು ಬೆಣಚಕಲ್ಲು ಗ್ರಾಮದಲ್ಲಿ ಬೆಳೆದ ಬೆಳೆಗಳು ದನಕರುಗಳ ಪಾಲಾಗಿ ಉಳಿದ ಬೆಳೆ ನಾಶವಾಗಿ ಹೋಗುತ್ತಿದೆ. ಕೆಲವು ಗ್ರಾಮಗಳಲ್ಲಿ ರಸ್ತೆ ಇಲ್ಲದೆ ಮಕ್ಕಳು ಶಾಲೆಗೆ ಹೋಗಲು ದಲಿತರು ತಮ್ಮ ಮನೆಗಳಿಗೆ ತಿರುಗಾಡಲು ತೊಂದರೆ…

Read More

ಹೆಚ್.ಡಿ.ಕೋಟೆ:  ತಾಲೂಕಿನ ಹೈರಿಗೆ ಗ್ರಾಮ ಪಂಚಾಯಿತಿ  ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಅನಿಲ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮತ್ತು ಶ್ರೀ ವಾಲ್ಮೀಕಿ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿದ್ದರು. ಚುನಾವಣೆ ಅಧಿಕಾರಿ ರಾಮಸ್ವಾಮಿ ಮಾತನಾಡಿ, ಚುನಾವಣಾ ಅಧಿಕಾರಿಯಾಗಿ ಹೈರಿಗೆ ಪಂಚಾಯಿತಿಗೆ ನನ್ನನ್ನು ನೇಮಿಸಿದ್ದರು. 12 ದಿನಗಳ ಕಾಲ ಸದಸ್ಯರಿಗೆ ನೋಟಿಸ್ ನೀಡಿ 17 ಸದಸ್ಯರಲ್ಲಿ 14 ಸದಸ್ಯರು ಹಾಜರಾಗಿದ್ದು, 3 ಜನ ಗೈರಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅನಿಲ್ ಕುಮಾರ್ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು. ನೂತನ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ಈ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಬಹಳ ಸಂತಸ ತಂದಿದೆ. ನನ್ನ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಹೇಳುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟು…

Read More

ಬೆಂಗಳೂರು: ಇಂಗ್ಲೆಂಡ್ ನ ಖ್ಯಾತ ಗಾಯಕ ಎಡ್ ಶೀರನ್ ಅನುಮತಿ ಇಲ್ಲದೆ ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದ ಹಿನ್ನೆಲೆ ಬೆಂಗಳೂರು ಪೊಲೀಸರು ತಡೆದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಎಡ್ ಶೀರನ್ ಗ್ಲೋಬಲ್ ಪಾಪ್ ಸ್ಟಾರ್ ಆಗಿದ್ದು, ಇವರ ಮ್ಯೂಜಿಕ್ ಕನ್ಸರ್ಟ್ ಎಂದರೆ ಜನರು ಎಗ್ಗಿಲ್ಲದೆ ಸೇರುತ್ತಾರೆ. ಬೆಂಗಳೂರಿನಲ್ಲಿ ಎಡ್ ಶೀರನ್ ಅವರ ತಂಡ ಅನೀರಿಕ್ಷಿತ ಪ್ರದರ್ಶನವನ್ನು ಹಮ್ಮಿಕೊಂಡು ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದರು. ಆದರೆ ಬೆಂಗಳೂರು ಪೊಲೀಸರು ಎಡ್ ಶೀರನ್ ಕಾರ್ಯಕ್ರಮವನ್ನು ತಡೆದು ಎಡ್ ಶೀರನ್ ಗೆ ಸಪ್ರೈಸ್ ನೀಡಿದ್ದಾರೆ. ಸದ್ಯ ಈ ಘಟನೆ ಪರ ವಿರೋಧಕ್ಕೆ ಕಾರಣವಾಗಿದೆ. ಅನುಮತಿ ಇಲ್ಲದೆ ವಿದೇಶಿ ಪ್ರಜೆಗಳು ಹೇಗಬೇಕಾದರೂ ರಸ್ತೆ ಬದಿಯಲ್ಲಿ ವರ್ತಿಸಬಹುದೇ? ಅಂತ ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ಪೊಲೀಸರ ನಡೆಯ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದು, ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…

Read More

ಭೋಪಾಲ್: ಸಹೋದರಿಯ ವಿವಾಹ ಸಮಾರಂಭದಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದ ಯುವತಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶ ವಿದಿಶಾದಲ್ಲಿ ನಡೆದಿದೆ. ಪರಿಣಿತಾ ಜೈನ್(23) ಮೃತಪಟ್ಟ ಯುವತಿಯಾಗಿದ್ದಾಳೆ. ಎಂಬಿಎ ಪದವಿ ವ್ಯಾಸಂಗ ಮಾಡುತ್ತಿದ್ದ ಪರಿಣಿತಾ ಆಕೆಯ ಸಹೋದರಿಯ ಮದುವೆಗಾಗಿ ವಿದಿಶಾಗೆ ಆಗಮಿಸಿದ್ದರು. ಆಶಾ ಭೋಸ್ಲೆ ಹಾಗೂ ಸೋನು ನಿಗಮ್ ಅವರು ಹಾಡಿರುವ ಶರಾರಾ…ಶರಾರಾ ಎಂಬ ಹಿಂದಿ ಗೀತೆಗೆ ಡ್ಯಾನ್ಸ್ ಮಾಡುವಾಗ ಆಕೆಗೆ ಹೃದಯಾಘಾತವಾಗಿದ್ದು, ವೇದಿಕೆ ಮೇಲೆಯೇ ಕುಸಿದು ಸಾವನ್ನಪ್ಪಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಯುವತಿ ವೇದಿಕೆ ಮೇಲೆ ಕುಸಿಯುತ್ತಿದ್ದಂತೆಯೇ ಅಲ್ಲಿದ್ದ ಸಂಬಂಧಿಕರು ಆಕೆಗೆ ಸಿಪಿಆರ್ ನೀಡಿದ್ದು, ಆಗಲೂ ಆಕೆ ಎಚ್ಚರಗೊಳ್ಳದ ಕಾರಣ ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವತಿಯ ಪ್ರಾಣ ವೇದಿಕೆಯಲ್ಲಿ ಹೃದಯಾಘಾತವಾಗಿ ಬಿದ್ದಾಗಲೇ ಸಾವಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಪರಿಣಿತಾ ಅವರ 12 ವರ್ಷ ಸಹೋದರ ಕೂಡ ಈ ಹಿಂದೆ ಇದೇ ರೀತಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದ ಎಂದು ಕುಟುಂಬದ…

Read More

ಮೈಸೂರಿನ ಕರಾಮುವಿಯ ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ 2024–25ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಯ ಯುಜಿಸಿ ಅನುಮೋದಿತ ಕೋರ್ಸ್ ಗಳ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಸ್ನಾತಕ/ ಸ್ನಾತಕೋತ್ತರ ಕೋರ್ಸ್ ಗಳಾದ ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಲಿಬ್.ಐ.ಎಸ್ಸಿ., ಬಿ.ಎಸ್ಸಿ., ಬಿ.ಎಸ್.ಡಬ್ಲ್ಯೂ., ಎಂ.ಎ., ಎಂ.ಸಿ.ಜೆ., ಎಂ.ಕಾಂ., ಎಂ.ಎಸ್ಸಿ., ಎಂ.ಲಿಬ್.ಐ.ಎಸ್ಸಿ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ ಮತ್ತು ಪಿ.ಜಿ.ಸರ್ಟಿಫಿಕೇಟ್., ಡಿಪ್ಲೊಮಾ., ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ. “ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾತ್ರ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕ ಮಾತ್ರ ವಿಶ್ವವಿದ್ಯಾನಿಲಯವಾಗಿರುತ್ತದೆ”. ಯುಜಿಸಿ ನಿಯಮಾವಳಿ ಪ್ರಕಾರ ಮುಕ್ತ ವಿಶ್ವವಿದ್ಯಾನಿಲಯಗಳ ದೂರ ಶಿಕ್ಷಣದ ಪದವಿ ಮತ್ತು ಸಾಂಪ್ರದಾಯಿಕ ವಿವಿಗಳು ನೀಡುವ ಶಿಕ್ಷಣ ಕ್ರಮಗಳ ಪದವಿಗಳಿಗೆ ಸಮನಾಗಿರುತ್ತದೆ. ಪ್ರಥಮ ವರ್ಷದ ಪ್ರವೇಶಾತಿ ಶುಲ್ಕದ ವಿವರ: ಬಿ.ಎ-ರೂ.8,400/-., ಬಿ.ಕಾಂ.-ರೂ.8,900/-.,ಬಿ.ಬಿ.ಎ/ಬಿ.ಎಲ್.ಐ.ಎಸ್ಸಿ-12,400/-., ಬಿ.ಸಿ.ಎ/ಬಿ.ಎಸ್ಸಿ-ರೂ.23,900/-., ಬಿ.ಎಸ್.ಡಬ್ಲ್ಯೂ-ರೂ.12,900/-., ಎಂ.ಎ-ರೂ.10,600/-., ಎಂ.ಸಿ.ಜೆ-ರೂ.16,200/-., ಎಂ.ಕಾಂ-ರೂ.12,400/-., ಎಂ.ಬಿ.ಎ–ರೂ.29,900/-., ಎಂ.ಎಸ್ಸಿ/ಎಂ.ಸಿ.ಎ-ರೂ.29,700/-., ಎಂ.ಎಸ್.ಡಬ್ಲ್ಯೂ-ರೂ.21,300/-., ಎಂ.ಎಲ್.ಐ.ಎಸ್ಸಿ-ರೂ.18,150/-ಗಳಾಗಿರುತ್ತದೆ. ಬೋಧನಾ ಶುಲ್ಕ ರಿಯಾಯಿತಿ: ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ,…

Read More