nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಹಿಳೆಯರಿಂದಲೇ ಮಹಿಳೆಯರ ಮೇಲೆ ನಡೆಯುವ ಶೋಷಣೆಗಳು ಮೊದಲು ನಿಲ್ಲಲಿ: ತಹಶೀಲ್ದಾರ್ ಮಮತಾ ಎಂ.

    March 9, 2026

    ಕೊರಟಗೆರೆ: ಮೂಢನಂಬಿಕೆಯಿಂದಾಗಿ ಬಳಕೆಯಾಗದೆ ಪಾಳುಬಿದ್ದ ಬಾಲಿಕಾ ವಿದ್ಯಾರ್ಥಿನಿಲಯ

    March 9, 2026

    ಕಣ್ಣಿನ ಶಸ್ತ್ರಚಿಕಿತ್ಸೆಗೆ ಲಂಚ ಕೇಳಿದ್ದ ತುಮಕೂರು ಜಿಲ್ಲಾ ಆಸ್ಪತ್ರೆ ವೈದ್ಯೆ ಲೋಕಾಯುಕ್ತ ಬಲೆಗೆ

    March 9, 2026
    Facebook Twitter Instagram
    ಟ್ರೆಂಡಿಂಗ್
    • ಮಹಿಳೆಯರಿಂದಲೇ ಮಹಿಳೆಯರ ಮೇಲೆ ನಡೆಯುವ ಶೋಷಣೆಗಳು ಮೊದಲು ನಿಲ್ಲಲಿ: ತಹಶೀಲ್ದಾರ್ ಮಮತಾ ಎಂ.
    • ಕೊರಟಗೆರೆ: ಮೂಢನಂಬಿಕೆಯಿಂದಾಗಿ ಬಳಕೆಯಾಗದೆ ಪಾಳುಬಿದ್ದ ಬಾಲಿಕಾ ವಿದ್ಯಾರ್ಥಿನಿಲಯ
    • ಕಣ್ಣಿನ ಶಸ್ತ್ರಚಿಕಿತ್ಸೆಗೆ ಲಂಚ ಕೇಳಿದ್ದ ತುಮಕೂರು ಜಿಲ್ಲಾ ಆಸ್ಪತ್ರೆ ವೈದ್ಯೆ ಲೋಕಾಯುಕ್ತ ಬಲೆಗೆ
    • ನಡೆಯಲಿಲ್ಲ ಪವಾಡ!: ಮಲ್ಲಿಕಾರ್ಜುನ ಮುತ್ಯಾಗೆ ಬಿಗ್ ಶಾಕ್ | ಜಾಮೀನು ಅರ್ಜಿ ವಜಾ
    • ಬರಗೂರು ‘ಕೆಪಿಎಸ್ ಮ್ಯಾಗ್ನೆಟ್’ ಯೋಜನೆ ಕೈಬಿಡಿ:  AIDSO ಆಗ್ರಹ
    • ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ; ಪವಾಡಸದೃಶ ರೀತಿಯಲ್ಲಿ ಬದುಕುಳಿದ 2 ವರ್ಷದ ಕಂದಮ್ಮ!
    • ಆಟಿಕೆ ಗನ್ ತೋರಿಸಿ ‘ಪ್ರಾಂಕ್’ ಮಾಡಲು ಯತ್ನಿಸಿದ ಯುವಕನಿಗೆ ಸಂಕಷ್ಟ!
    • RSS ನಿಷೇಧ ವಿಚಾರ ಅನಗತ್ಯ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜೆ.ಸಿ.ಮಾಧುಸ್ವಾಮಿಗೆ ಪುನಃ ತುಮಕೂರು ಜಿಲ್ಲಾ ಉಸ್ತುವಾರಿ ನೀಡುವಂತೆ ಅಭಿಮಾನಿಗಳ ಆಗ್ರಹa
    ತಿಪಟೂರು January 27, 2022

    ಜೆ.ಸಿ.ಮಾಧುಸ್ವಾಮಿಗೆ ಪುನಃ ತುಮಕೂರು ಜಿಲ್ಲಾ ಉಸ್ತುವಾರಿ ನೀಡುವಂತೆ ಅಭಿಮಾನಿಗಳ ಆಗ್ರಹa

    By adminJanuary 27, 2022No Comments2 Mins Read
    jcm

    ತಿಪಟೂರು: ಜಿಲ್ಲೆಯಲ್ಲಿ ಜಾತ್ಯತೀತವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ನಿಷ್ಠಾವಂತ, ಸಮರ್ಥ ನಾಯಕ ಸಚಿವ ಜೆ.ಸಿ.ಮಾಧುಸ್ವಾಮಿರನ್ನು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ತೆಗೆದು ಹಾಕಿದ್ದು ಜಿಲ್ಲೆಯ ಜನತೆಗೆ ನೋವು ತಂದಿದೆ ಎಂದು ಜೆ.ಸಿ.ಮಾಧುಸ್ವಾಮಿ ಅಭಿಮಾನಿ ಲಕ್ಮಗೊಂಡನಹಳ್ಳಿ ರವೀಂದ್ರ ಕುಮಾರ್ ಬೇಸರ ಹೊರಹಾಕಿದ್ದಾರೆ.

    ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಪ್ರವಾಸಿ ಮಂದಿರದಲ್ಲಿ ಬುಧವಾರ ಜೆ.ಸಿ.ಮಾಧುಸ್ವಾಮಿ ಅಭಿಮಾನಿಗಳು ಸುದ್ದಿಗೋಷ್ಠಿ ನಡೆಸಿದರು.


    Provided by
    Provided by

    ಸಚಿವ ಜೆ.ಸಿ.ಮಾಧುಸ್ವಾಮಿ ತುಮಕೂರು ಜಿಲ್ಲೆಯ ಆಳ, ಅಗಲ, ವಿಚಾರವನ್ನು ತಿಳಿದುಕೊಂಡಿದ್ದು ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ರಾಜ್ಯಸರ್ಕಾರದ ಮುಖ್ಯಮಂತ್ರಿಗಳು ದಿಢೀರ್ ತುಮಕೂರು ಜಿಲ್ಲಾ ಉಸ್ತುವಾರಿಯಿಂದ ತೆಗೆದು ಜಿಲ್ಲೆಯಿಂದ ಹೊರಗಿನವರಿಗೆ ನೀಡಿರುವುದು ನಿಜಕ್ಕೂ ನೋವು ತಂದಿದೆ. ಜಿಲ್ಲಾ ಉಸ್ತುವಾರಿ ಸ್ಥಾನದಿಂದ ತೆಗೆಯಲು ಸೂಕ್ತ ಕಾರಣ ನೀಡದೇ ತೆಗೆದು ಹಾಕಿರುವುದು ಅಭಿವೃದ್ಧಿಗೆ ಕುಂಠಿತಕ್ಕೆ ಕಾರಣವಾಗುತ್ತದೆ. ಜಿಲ್ಲೆಯ ವಿರೋಧ ಪಕ್ಷದಿಂದ ಹಿಡಿದು ಅನೇಕ ಮುಖಂಡರು, ನಾಯಕರುಗಳು ಬದಲಾವಣೆಯನ್ನು ವಿರೋಧಿಸಿದ್ದಾರೆ. ಸಣ್ಣ ನೀರಾವರಿ ಖಾತೆಯನ್ನು ತೆಗೆದುಕೊಂಡು ರಾಜ್ಯದ ರೈತರಿಗೆ, ಜಿಲ್ಲೆಯ, ತಾಲ್ಲೂಕಿನ ರೈತರಿಗೆ ಅಗತ್ಯವಿರುವ ಸೌಕರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಅಲ್ಲದೇ ಕಳೆದ ಬಾರಿ ಕೊರೊನಾ ಸಂದರ್ಭದಲ್ಲಿ ಅತೀ ಹೆಚ್ಚು ಸಭೆ ನಡೆಸಿ ಕೊರೊನಾ ತಡೆಗೆ ಶ್ರಮಿಸಿದ ಸಚಿವರನ್ನು ತೆಗೆದು ಹಾಕಿರುವುದು ಖಂಡನೀಯ. ಹೊರಗಿನಿಂದ ಬಂದಿರುವ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳು ಹೇಳಿದ ಮಾತಿಗೆ ಕೇಳಿಕೊಂಡು ಕಾಟಾಚಾರಕ್ಕೆ ಸಭೆ ನಡೆಸಿ ತೆರಳುತ್ತಾರೆ. ಅದ್ದರಿಂದ ಕೂಡಲೇ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಿ ಪುನಃ ಸಚಿವ ಜೆ.ಸಿ.ಮಾಧುಸ್ವಾಮಿಯವರಿಗೆ ಜಿಲ್ಲಾ ಉಸ್ತುವಾರಿಯನ್ನು ವಹಿಸಬೇಕು. ಇಲ್ಲವಾದರೆ ಮುಂದಿನ ದಿನಗಳನ್ನು ಅಭಿಮಾನಿಗಳು ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಎದುರಾಗುತ್ತದೆ ಎಂದು ರಾಜ್ಯಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದರು.

    ಕುಂದೂರು ಮಂಜುನಾಥ್ ಮಾತನಾಡಿ ಕಳೆದ ಹತ್ತಾರು ವರ್ಷಗಳಿಂದ ನೆನೆಗುಡಿಗೆ ಬಿದ್ದಿದ್ದ ಕಾಮಾಗರಿಗಳನ್ನು ಕೈಗೆತ್ತಿಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದರು. ಜಿಲ್ಲೆಗೆ ನಾಲೆಯ ಮುಖಾಂತರ ಹರಿಯುವ ನೀರನ್ನು ಸಮರ್ಪಕವಾಗಿ ಎಲ್ಲಾ ಕೆರೆಗಳಿಗೆ ತುಂಬಿಸುವ ಕಾರ್ಯವನ್ನು ಕಳೆದ 3 ವರ್ಷದಿಂದ ಸರಾಗವಾಗಿ ಮಾಡುತ್ತಾ ಬಂದಿದ್ದಾರೆ. ರಾಜ್ಯಸರ್ಕಾರವು ಜಿಲ್ಲಾ ಉಸ್ತುವಾರಿಯಿಂದ ತೆಗೆಯಲು ಸೂಕ್ತ ಕಾರಣ ನೀಡಬೇಕಿದೆ. ಸಣ್ಣ ನೀರಾವರಿ ಸಚಿವರಾದರೂ ಸಹ ಬೆಂಗಳೂರಿನಲ್ಲಿ ನೆಲಸದೇ ಗ್ರಾಮೀಣ ಪ್ರದೇಶದಲ್ಲಿ ಉಳಿದುಕೊಂಡು ಕ್ಷೇತ್ರ, ಜಿಲ್ಲೆಯ ಜನರಿಗೆ ಅಗತ್ಯವಿರುವ ಕಾಮಗಾರಿ, ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ತುಮಕೂರು ಜಿಲ್ಲೆಗೆ ಮತ್ತೇ ಜೆ.ಸಿ.ಮಾಧುಸ್ವಾಮಿಯವರನ್ನು ಉಸ್ತವಾರಿ ಸಚಿವರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಬೇಕೆಂದು ತುಮಕುರಿನ ಜನತೆಯ ಪರವಾರಿ ಮನವಿ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದರು.

    ರಾಜ್ಯದಲ್ಲಿ ಅಭಿವೃದ್ಧಿ, ಕಾರ್ಯನಿರ್ವಹಣೆ, ನಿಷ್ಠಾವಂತಿಕೆಗೆ ಹೆಸರುವಾಸಿ ಜೆ.ಸಿ.ಎಂ. ಅಂತಹವರನ್ನು ತುಕೂರು ಜಿಲ್ಲೆಯ ಉಸ್ತುವಾರಿಯಿಂದ ತೆಗೆದಿರುವುದು ನಿಜಕ್ಕೂ ದುರಂತದ ಸಂಗತಿ. ತುಮಕೂರಿನ ಜನತೆಯ ತಾಳ್ಮೆಯನ್ನು ರಾಜ್ಯಸರ್ಕಾರ ಪರೀಕ್ಷಿಸದೇ ತಮ್ಮ ತಪ್ಪನ್ನು ಅರಿತು ತುಮಕುರು ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಿ ಜೆ.ಸಿ.ಮಾಧುಸ್ವಾಮಿಯವರಿಗೆ ನೀಡಬೇಕು ಎಂದು ಆಗ್ರಹಿಸಿದರು.

    ಈ ಸಂದರ್ಭದಲ್ಲಿ ದುಂಡ ಗ್ರಾ.ಪಂ.ಸದಸ್ಯ ನವೀನ್, ಲಕ್ಮಗೊಂಡನಹಳ್ಳಿ ಚಂದ್ರಶೇಖರ್, ವಿಶೇರ್, ನಾಗೇನಹಳ್ಳಿ ದಯಾನಂದ್, ಸಿದ್ದು, ಹಿಂಡಿಸ್ಕರೆ ಯತೀಶ, ಹಾಲುಗೊಣ ಚೇತನ್ ಸೇರಿದಂತೆ ಹಲವು ಅಭಿಮಾನಿಗಳಿದ್ದರು.

    ವರದಿ: ಆನಂದ ತಿಪಟೂರು

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ತಿಪಟೂರು: ಅಕ್ರಮವಾಗಿ ಸಾಗಿಸುತ್ತಿದ್ದ 119 ಚೀಲ ರಾಗಿ ಜಪ್ತಿ: ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ

    March 3, 2026

    ಸಂವಿಧಾನ ಒಂದು ಜಾತಿ ವರ್ಗಕ್ಕೆ ಸೀಮಿತ ಎನ್ನುವುದು ಅಪಪ್ರಚಾರ: ಸಿ.ಬಿ.ಶಶಿಧರ್

    February 24, 2026

    ತಿಪಟೂರು: ತೋಟದ ಬಾವಿಗೆ ಬಿದ್ದಿದ್ದ ಚಿರತೆ ರಕ್ಷಣೆ

    February 15, 2026

    Leave A Reply Cancel Reply

    Our Picks

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಮಹಿಳೆಯರಿಂದಲೇ ಮಹಿಳೆಯರ ಮೇಲೆ ನಡೆಯುವ ಶೋಷಣೆಗಳು ಮೊದಲು ನಿಲ್ಲಲಿ: ತಹಶೀಲ್ದಾರ್ ಮಮತಾ ಎಂ.

    March 9, 2026

    ಚಿಕ್ಕನಾಯಕನಹಳ್ಳಿ: ತನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯರ ಏಳಿಗೆಗಾಗಿ ಶ್ರಮಿಸಿ, ಅವರನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವುದೇ ಒಬ್ಬ ಮಹಿಳೆಯ ಜೀವನದ ದೊಡ್ಡ…

    ಕೊರಟಗೆರೆ: ಮೂಢನಂಬಿಕೆಯಿಂದಾಗಿ ಬಳಕೆಯಾಗದೆ ಪಾಳುಬಿದ್ದ ಬಾಲಿಕಾ ವಿದ್ಯಾರ್ಥಿನಿಲಯ

    March 9, 2026

    ಕಣ್ಣಿನ ಶಸ್ತ್ರಚಿಕಿತ್ಸೆಗೆ ಲಂಚ ಕೇಳಿದ್ದ ತುಮಕೂರು ಜಿಲ್ಲಾ ಆಸ್ಪತ್ರೆ ವೈದ್ಯೆ ಲೋಕಾಯುಕ್ತ ಬಲೆಗೆ

    March 9, 2026

    ನಡೆಯಲಿಲ್ಲ ಪವಾಡ!: ಮಲ್ಲಿಕಾರ್ಜುನ ಮುತ್ಯಾಗೆ ಬಿಗ್ ಶಾಕ್ | ಜಾಮೀನು ಅರ್ಜಿ ವಜಾ

    March 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.