nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುರುವೇಕೆರೆ: ವಿದ್ಯುತ್ ಖಾಸಗಿಕರಣ ತಿರಸ್ಕರಿಸಲು ಒತ್ತಾಯಿಸಿ ರೈತ ಸಂಘದಿಂದ ಮನವಿ

    June 30, 2026

    ನಾಡಪ್ರಭು ಕೆಂಪೇಗೌಡರದು ಜಾತ್ಯತೀತ ಆಡಳಿತ: ಶಾಸಕ ಎಂ.ಟಿ.ಕೃಷ್ಣಪ್ಪ

    June 29, 2026

    ಸಾರ್ವಜನಿಕ ದೂರು ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಕರ್ತವ್ಯಲೋಪ | ಹೆಗ್ಗರೆ ಗ್ರಾ.ಪಂ. ಪಿಡಿಒ ಅಮಾನತು

    June 29, 2026
    Facebook Twitter Instagram
    ಟ್ರೆಂಡಿಂಗ್
    • ತುರುವೇಕೆರೆ: ವಿದ್ಯುತ್ ಖಾಸಗಿಕರಣ ತಿರಸ್ಕರಿಸಲು ಒತ್ತಾಯಿಸಿ ರೈತ ಸಂಘದಿಂದ ಮನವಿ
    • ನಾಡಪ್ರಭು ಕೆಂಪೇಗೌಡರದು ಜಾತ್ಯತೀತ ಆಡಳಿತ: ಶಾಸಕ ಎಂ.ಟಿ.ಕೃಷ್ಣಪ್ಪ
    • ಸಾರ್ವಜನಿಕ ದೂರು ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಕರ್ತವ್ಯಲೋಪ | ಹೆಗ್ಗರೆ ಗ್ರಾ.ಪಂ. ಪಿಡಿಒ ಅಮಾನತು
    • ತುಮಕೂರು: ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರವಣ ತಪಾಸಣಾ ಶಿಬಿರ
    • ಕೊರಟಗೆರೆ: 10,016 ಮಕ್ಕಳಿಗೆ ಪೋಲಿಯೋ ಲಸಿಕಾ ಗುರಿ: ಡಾ.ಜ್ಯೋತ್ಸ್ನಾ ರೆಡ್ಡಿ ಕರೆ
    • ಜುಲೈ 3ರಂದು ‘ದಲಿತ ಜನಾಗ್ರಹ ಸಮಾವೇಶ’: ಸರಗೂರು ಪ್ರವಾಸಿ ಮಂದಿರದಲ್ಲಿ ಪೋಸ್ಟರ್ ಬಿಡುಗಡೆ
    • ಮಧುಗಿರಿ: ಸಿದ್ಧಾರ್ಥ ವಸತಿ ಪ್ರೌಢಶಾಲೆಯಲ್ಲಿ 2006ರ ಬ್ಯಾಚ್ ಹಳೆಯ ವಿದ್ಯಾರ್ಥಿಗಳಿಂದ ಉಚಿತ ಸಮವಸ್ತ್ರ ವಿತರಣೆ
    • SIR: ಅರ್ಹ ನಾಗರಿಕರ ಮತದಾನದ ಹಕ್ಕು ಕಸಿದುಕೊಳ್ಳುವ ಅಪಾಯ: ಹೆಚ್.ವಿ. ವಾಸು ಆತಂಕ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಏಳು ಮಂದಿ ಆರೋಪಿಗಳ ಬಂಧನ
    ತುಮಕೂರು January 30, 2025

    ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಏಳು ಮಂದಿ ಆರೋಪಿಗಳ ಬಂಧನ

    By adminJanuary 30, 2025No Comments3 Mins Read
    crime news

    Provided by
    Provided by

    ತುಮಕೂರು:   ನಗರದಲ್ಲಿ ಮಾದಕ ವಸ್ತುಗಳನ್ನಾಗಿ ಟೈಡಾಲ್ ಮಾತ್ರೆಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಮೆಡ್ ಪ್ಲಸ್ ನಲ್ಲಿ ಕೆಲಸ ಮಾಡುತ್ತಿದ್ದ ಭಾನುಪ್ರಕಾಶ್, ಮೆಡಿಕಲ್ ರೆಪ್ರೆಸೆಂಟಿವ್ ಕೆಲಸ ಮಾಡುತ್ತಿದ್ದ ರಾಘವೇಂದ್ರ,  ಆಟೋ ಪ್ಲಾಸ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ, ಮೊಹಮ್ಮದ್ ಸೈಪ್ , ಸೈಯದ್ ಲುಕ್ಮಾನ್ , ಅಫ್ತಬ್ ಬಿನ್ ಹಮ್ಜು, ಗುರುರಾಜ್ ಬಂಧಿತ ಆರೋಪಿಗಳಾಗಿದ್ದಾರೆ.

    ತುಮಕೂರು ನಗರದ ಹೊಸಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಐ.ಟಿ. ಬಡಾವಣೆ, ರೈಲ್ವೆ ಹಳಿಗಳ ಪಕ್ಕ, ಹಾಗೂ ಉಪ್ಪಾರಹಳ್ಳಿ ಬ್ರೀಡ್ಜ್, ಶ್ರೀದೇವಿ ಕಾಲೇಜುಗಳ ಬಳಿ , ಕೆಲ ಹುಡುಗರು ಮೆಡಿಕಲ್ ಶಾಪ್ ಗಳಲ್ಲಿ ಹೋಗಿ ಸದರಿ ಟೈಡಾಲ್ ಮಾತ್ರೆಗಳನ್ನು ಕೊಡುವಂತೆ ಕೇಳುತ್ತಿದ್ದರು. ಇದರಿಂದ ಪ್ರೇರೇಪಿತರಾದ ತುಮಕೂರು ನಗರದ ಮಧುಗಿರಿ ರಸ್ತೆಯಲ್ಲಿರುವ ಮೆಡ್ ಪ್ಲಸ್ ಮೆಡಿಕಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಭಾನು ಪ್ರಕಾಶ್ ಎಂಬುವನು ಮೆಡಿಕಲ್ ಗಳಿಗೆ ಬರುವವರುಗಳಿಗೆ ಟೈಡಾಲ್ ಮಾತ್ರೆಗಳನ್ನು ತಂದುಕೊಡುವಂತೆ ತಿಳಿಸಿದ್ದನು.

    ಅದರಲ್ಲಿ ಬೆಂಗಳೂರಿನಲ್ಲಿ ವಾಸವಾಗಿರುವ ರಾಘವೇಂದ್ರ ಮಾತ್ರೆಗಳನ್ನು ಯಾವುದೇ ಬಿಲ್ ಗಳಿಲ್ಲದೆ ಅಕ್ರಮವಾಗಿ ಮೊದಲು 345/- ರೂ. ಗೆ ಒಂದು ಶೀಟ್ ನಂತೆ 4 ಶೀಟ್ ಗಳನ್ನು ತಂದು ತಂದುಕೊಟ್ಟಿದ್ದನು. ನಂತರ ಮಾತ್ರೆಗಳಿಗೆ ಬೇಡಿಕೆ ಜಾಸ್ತಿಯಾದ ಕಾರಣ, ಭಾನು ಪ್ರಕಾಶ್ ಮತ್ತು ರಾಘವೇಂದ್ರ ರವರು ಸೇರಿಕೊಂಡು ಸದರಿ ಮಾತ್ರೆಗಳನ್ನು ಅಂಗಡಿಯಲ್ಲಿ ಮಾರಾಟ ಮಾಡದೇ ಯಾರು ಸದರಿ ಮಾತ್ರೆಗಳನ್ನು ಕೇಳಿಕೊಂಡು ಬಂದಂತಹ ಗಿರಾಕಿಗಳಿಗೆ ತನ್ನ ಮೊಬೈಲ್ ನಂಬರ್ ನೀಡಿ, ಶ್ರೀದೇವಿ ಕಾಲೇಜ್ ಬಳಿ, ಇಂಡಸ್ಟ್ರೀಯಲ್ ಏರಿಯಾಗಳಿಗೆ ಕರೆಸಿಕೊಂಡು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ 10 ಮಾತ್ರೆಗಳಿರುವ ಒಂದು ಶೀಟ್ ನ್ನು 800/- ರೂ. ಗಳಿಗೆ ಮಾರಾಟ ಮಾಡುತ್ತಿದ್ದನು.


    Provided by
    Provided by

    ನಂತರ ಈ ಹಿಂದೆ ಮೆಡಿಕಲ್ ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬುವನಿಗೆ ಮೊಬೈಲ್ ನ್ನು ಕೊಡಿಸಿ, ಸದರಿ ನಂಬರ್ ಗೆ ಟೈಡಾಲ್ ಮಾತ್ರೆಗಳನ್ನು ಕೇಳಿಕೊಂಡು ಪೋನ್ ಮಾಡುತ್ತಾರೆ, ಆಗ ಅವರುಗಳನ್ನು ಕರೆದು 800/- ರೂ. ಗೆ 10 ಮಾತ್ರೆಗಳಿರುವ ಶೀಟನ್ನು ಮತ್ತು ಸೀರಂಜ್ ನ್ನು ಮಾರಾಟ ಮಾಡು ಎಂದು ತಿಳಿಸಿದ್ದನು. ಅಭಿಷೇಕ್  ಅದರಂತೆ ಸದರಿ ಮಾತ್ರೆ ಮತ್ತು ಸಿರಿಂಜ್ ಗಳನ್ನು ಒಂದು ಬ್ಯಾಗ್ ನಲ್ಲಿ ಇಟ್ಟುಕೊಂಡು ಭಾನುಪ್ರಕಾಶ್ ರವರು ತರಿಸಿಕೊಡುತಿದ್ದ ಮಾತ್ರೆಗಳನ್ನು ಪೋನ್ ಮಾಡುತ್ತಿದ್ದ ಮೊಹಮ್ಮದ್ ಸೈಪ್, ಸೈಯದ್ ಲುಕ್ಮಾನ್, ಅಫ್ತಬ್, ಗುರುರಾಜ್ ಹೆಚ್.ಎಸ್. ಎಂಬುವರಿಗೆ ಮತ್ತು ಇತರರಿಗೆ ಶಿರಾಗೇಟ್ ಬಳಿ ಮತ್ತು ಇಂಡಸ್ಟ್ರೀಯಲ್ ಏರಿಯಾ ಬಳಿ ಕರೆಸಿಕೊಂಡು ಮಾರಾಟ ಮಾಡುತ್ತಿದ್ದನು.

    800/- ರೂ. ಗಳಿಗೆ ತೆಗೆದುಕೊಂಡು ಹೋದ 10 ಮಾತ್ರೆಗಳಿರುವ ಶೀಟ್ ಗಳನ್ನು ಆರೋಪಿಗಳು ಒಂದೊಂದು ಮಾತ್ರೆಗಳನ್ನು ಕವರ್ ಸಮೇತ ಕಟ್ ಮಾಡಿ ಒಂದು ಮಾತ್ರೆಗೆ 100/- ರೂ.ಗಳಿಂದ 200/- ರೂ.ಗಳ ವರೆಗೆ ಮಾರಾಟ ಮಾಡುತ್ತಿದ್ದರು.

    ಆಗಾಗ ಆ ಮಾತ್ರೆಗಳನ್ನು ಉಪಯೋಗಿಸುತ್ತಿದ್ದರು.  ಸದರಿ ಮಾತ್ರೆಗಳ ನೀರು ಶರೀರಕ್ಕೆ ಹೋಗುತ್ತಿದ್ದಂತೆ, ಕಿಕ್ ಹೊಡೆಯುತ್ತದೆ ಮತ್ತು ನಷೆ ಬರುತ್ತದೆಂದು ಈ ಮಾತ್ರೆಗಳನ್ನು ಉಪಯೋಗಿಸುತ್ತಿದ್ದರು.   ಪ್ರಸ್ತುತ 7 ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರ ಬಳಿ ಇದ್ದ 10,500/- ರೂ ಬೆಲೆ ಬಾಳುವ 300 ಮಾತ್ರೆಗಳನ್ನು ಮತ್ತು ಸೀರಂಜ್ ಗಳನ್ನು, ಮೊಬೈಲ್ ಮತ್ತು ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಅತಿ ಚಿಕ್ಕ ವಯಸ್ಸಿನ ಮಕ್ಕಳು ಮತ್ತು ವಿದ್ಯಾರ್ಥಿಗಳ ಶರೀರದ ಮೇಲೆ ಹಾಗೂ ಮೆದುಳಿನ ಮೇಲೆ ಪರಿಣಾಮ ಬೀರುವ ಇಂತಹ ವಿಷದ ಮಾತ್ರೆಗಳನ್ನು ಮಾರಾಟ ಮಾಡಿ ಕೆಟ್ಟ ವಾತಾವರಣವನ್ನುಂಟು ಮಾಡಿದ್ದಾರೆ ಎಂದು ಏಳು ಮಂದಿ ಮೇಲೆ ಹೊಸಬಡಾವಣೆ ಪೊಲೀಸ್ ಠಾಣೆ ಮೊ.ನಂ. 13/2025 ಕಲಂ 123, 278, 280 ರೆ.ವಿ. 3(5) ಬಿ.ಎನ್.ಎಸ್. ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಇನ್ನು ಕೆಲವರನ್ನು ಪತ್ತೆ ಮಾಡಿ ಬಂಧಿಸಬೇಕಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

    ತುಮಕೂರು ನಗರದಲ್ಲಿ ಇತ್ತೀಚೆಗೆ ಶಾಲಾ, ಕಾಲೇಜುಗಳ ಬಳಿ ಪಾರ್ಕ್ ಗಳ ಬಳಿ ನಿರ್ಜನ ಪ್ರದೇಶಗಳಲ್ಲಿ ಇಂತಹಾ ನಷೆ ಬರಿಸುವ ಮಾತ್ರೆಗಳ ಖಾಲಿ ಕವರ್ ಗಳು, ಸಿಗರೇಟ್ ಫಿಲ್ಟರ್ ಗಳು ಮತ್ತು ಸೀರಿಂಜ್ ಗಳು ಬಿದ್ದಿರುವ ಬಗ್ಗೆ ಮಾಹಿತಿ ಇದ್ದುದ್ದರಿಂದ ತುಮಕೂರು ಜಿಲ್ಲಾ ಪೊಲೀಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿ.ಮರಿಯಪ್ಪ ಹಾಗೂ ಬಿ.ಎಸ್. ಅಬ್ದುಲ್ ಖಾದರ್ ರವರ ಮಾರ್ಗದರ್ಶನದಲ್ಲಿ ತುಮಕೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಕೆ.ಆರ್.ಚಂದ್ರಶೇಖರ್ ರವರ ಹಾಗೂ ತಿಲಕ್ ಪಾರ್ಕ್ ಪೊಲೀಸ್ ವೃತ್ತ ನಿರೀಕ್ಷಕರವರಾದ ಪುರುಷೋತ್ತಮ್ ರವರ ಮಾರ್ಗಸೂಚನೆ ಮೇರೆಗೆ ಹೊಸಬಡಾವಣೆ ಪೊಲೀಸ್ ಠಾಣೆಯ ಪಿ.ಎಸ್.ಐ ಭಾರತಿ ಮತ್ತು ಎ.ಎಸ್.ಐ. ಅಂಜೀನಪ್ಪ ಹಾಗೂ ಠಾಣೆಯ ಸಿಬ್ಬಂದಿಯವರುಗಳಾದ ಮಂಜುನಾಥ್, ಕೆ.ಟಿ. ನಾರಾಯಣ, ತಿಲಕ್ ಪಾರ್ಕ್  ಠಾಣೆಯ ನಿಜಾಮುದ್ದೀನ್ ಷಾ ಹಾಗೂ ಮಧು, ಸುನಿಲ್, ನಧಾಫ್, ಲೋಕಶ್ ರವರುಗಳು  ಆರೋಪಿಗಳನ್ನು ಬಂಧಿಸುವಲ್ಲಿ ಸಹಕರಿಸಿರುತ್ತಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ಸಾರ್ವಜನಿಕ ದೂರು ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಕರ್ತವ್ಯಲೋಪ | ಹೆಗ್ಗರೆ ಗ್ರಾ.ಪಂ. ಪಿಡಿಒ ಅಮಾನತು

    June 29, 2026

    ತುಮಕೂರು: ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರವಣ ತಪಾಸಣಾ ಶಿಬಿರ

    June 29, 2026

    ರೈತರು ಭೂಮಿ ಹೊಂದುವುದಷ್ಟೇ ಅಲ್ಲ, ಕಾನೂನು ಅರಿವು ಬೆಳೆಸಿಕೊಳ್ಳುವುದು ಮುಖ್ಯ: ನಿವೃತ್ತ ಕೆಎಎಸ್‌ ಅಧಿಕಾರಿ ಕೆ.ಎನ್.ಲಿಂಗಪ್ಪ ಪ್ರತಿಪಾದನೆ

    June 29, 2026

    Comments are closed.

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುರುವೇಕೆರೆ

    ತುರುವೇಕೆರೆ: ವಿದ್ಯುತ್ ಖಾಸಗಿಕರಣ ತಿರಸ್ಕರಿಸಲು ಒತ್ತಾಯಿಸಿ ರೈತ ಸಂಘದಿಂದ ಮನವಿ

    June 30, 2026

    ತುರುವೇಕೆರೆ: ಟಾಟಾ ಪವರ್ ಕಂಪನಿ ಲಿಮಿಟೆಡ್ ರಾಜ್ಯದಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ಕೋರಿ ಕೆ.ಇ.ಆರ್.ಸಿ. ಗೆ ಸಲ್ಲಿಸಿರುವ ಅರ್ಜಿಯನ್ನು…

    ನಾಡಪ್ರಭು ಕೆಂಪೇಗೌಡರದು ಜಾತ್ಯತೀತ ಆಡಳಿತ: ಶಾಸಕ ಎಂ.ಟಿ.ಕೃಷ್ಣಪ್ಪ

    June 29, 2026

    ಸಾರ್ವಜನಿಕ ದೂರು ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಕರ್ತವ್ಯಲೋಪ | ಹೆಗ್ಗರೆ ಗ್ರಾ.ಪಂ. ಪಿಡಿಒ ಅಮಾನತು

    June 29, 2026

    ತುಮಕೂರು: ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರವಣ ತಪಾಸಣಾ ಶಿಬಿರ

    June 29, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.