ಚಿಲಿಯ ವಿನಾ ಡೆಲ್ ಮಾರ್ ನ ವಸತಿ ಪ್ರದೇಶದಲ್ಲಿ ಕಾಡ್ಗಿಚ್ಚಿನಲ್ಲಿ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ ಮತ್ತು 200 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. 1,100 ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ ಎಂದು ಅಂಕಿಅಂಶಗಳಿಂದ ತಿಳಿದು ಬಂದಿವೆ.
43,000 ಹೆಕ್ಟೇರ್ ಗೂ ಹೆಚ್ಚು ಭೂಮಿ ಸುಟ್ಟು ಹೋಗಿದೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಹೆಚ್ಚಿನ ತಾಪಮಾನ ಮತ್ತು ಬಲವಾದ ಗಾಳಿ ಬೆಂಕಿಗೆ ಕಾರಣ. ಇದು ರಕ್ಷಣಾ ಕಾರ್ಯಾಚರಣೆಗೂ ಸವಾಲಾಗಿದೆ.
ನಾಲ್ಕು ಕಡೆ ಕಾಡ್ಗಿಚ್ಚು ವ್ಯಾಪಿಸಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ರಕ್ಷಣಾ ಕಾರ್ಯಕರ್ತರು ಮನೆಗಳಿಗೆ ತಲುಪಲು ಸಾಧ್ಯವಾಗದಿರುವುದು ದೊಡ್ಡ ಬಿಕ್ಕಟ್ಟನ್ನು ಸೃಷ್ಟಿಸಿದೆ. ರಕ್ಷಕರೊಂದಿಗೆ ಸಹಕರಿಸುವಂತೆ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಚಿಲಿಯ ಜನರಿಗೆ ಮನವಿ ಮಾಡಿದರು.