nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು: ದೇವರಾಯಪಟ್ಟಣದಲ್ಲಿ ಚಿರತೆ ಹಾವಳಿ, ಇಸ್ರೋ ಆವರಣದಲ್ಲಿ ಕುರಿ ಬಲಿ – ಬೋನು ಅಳವಡಿಕೆ

    August 1, 2026

    ಗೃಹಲಕ್ಷ್ಮಿ, ಯುವನಿಧಿ: 323 ಕೋಟಿ ರೂ. ಬಿಡುಗಡೆ

    August 1, 2026

    ಜಿಟಿಟಿಸಿ: ವಿವಿಧ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ

    August 1, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು: ದೇವರಾಯಪಟ್ಟಣದಲ್ಲಿ ಚಿರತೆ ಹಾವಳಿ, ಇಸ್ರೋ ಆವರಣದಲ್ಲಿ ಕುರಿ ಬಲಿ – ಬೋನು ಅಳವಡಿಕೆ
    • ಗೃಹಲಕ್ಷ್ಮಿ, ಯುವನಿಧಿ: 323 ಕೋಟಿ ರೂ. ಬಿಡುಗಡೆ
    • ಜಿಟಿಟಿಸಿ: ವಿವಿಧ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ
    • ರಾಜಕಾರಣದಷ್ಟೇ ಶಿಕ್ಷಣ ವ್ಯವಸ್ಥೆ ಕಲುಷಿತ: ಡಾ.ವೈ.ಎ.ನಾರಾಯಣಸ್ವಾಮಿ ಕಳವಳ
    • ತಮಿಳುನಾಡಿಗೆ ನೀರು ಹರಿಸುವ ಆದೇಶಕ್ಕೆ ಸಂಘಟನೆಗಳ ಆಕ್ರೋಶ: ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಒತ್ತಾಯ
    • ಸರಗೂರು: ಕೊಟ್ಟಿಗೆಗೆ ನುಗ್ಗಿ ಕಾಡು ಪ್ರಾಣಿ ದಾಳಿ: 6 ಕುರಿ ಬಲಿ, 12 ಕುರಿಗಳಿಗೆ ಗಂಭೀರ ಗಾಯ
    • ಸರಗೂರು: ಮೂರನೇ ಆಷಾಢ ಶುಕ್ರವಾರ -– ವಾಹನ ಚಾಲಕರ ಸಂಘದಿಂದ ವಿಶೇಷ ಪೂಜೆ ಹಾಗೂ ಖಾಕಿ ಸಮವಸ್ತ್ರ ವಿತರಣೆ
    • ಔರಾದ್: ಜೈ ಕಿಸಾನ್ ಶಾಲೆ ಶಿಕ್ಷಕ, ಬಿಎಲ್ ಒ ಮಲ್ಲಿಕಾರ್ಜುನ ಪಿಟ್ರೆ ನಿಧನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಿಗ್​ ಬಾಸ್​ ಕನ್ನಡ ಹಿಂದಿರುವ ಅಗೋಚರ ಧ್ವನಿ ಯಾರದ್ದು ?
    ಸ್ಪೆಷಲ್ ನ್ಯೂಸ್ August 21, 2024

    ಬಿಗ್​ ಬಾಸ್​ ಕನ್ನಡ ಹಿಂದಿರುವ ಅಗೋಚರ ಧ್ವನಿ ಯಾರದ್ದು ?

    By adminAugust 21, 2024No Comments2 Mins Read
    bigg boss

    ಬಿಗ್​ ಬಾಸ್​ ಕನ್ನಡ ಹಿಂದಿರುವ ಅಗೋಚರ ಧ್ವನಿ ಯಾರದ್ದು ? ಹೀಗೊಂದು ಪ್ರಶ್ನೆ ನೋಡುಗರನ್ನು ಒಂದಲ್ಲಾ ಒಂದು ದಿನ ಕಾಡಿರುತ್ತದೆ. ಮೊದಲ ಸೀಸನ್‌ನಿಂದ ಈ ಸೀಸನ್‌ವರೆಗೂ 3 ಮಂದಿ, ಬಿಗ್‌ ಬಾಸ್‌ ಆಗಿ ಕಾರ್ಯಕ್ರಮಕ್ಕೆ ದನಿ ನೀಡಿದ್ದಾರೆ. ಆದರೆ ಪ್ರತಿದಿನ ಎಲ್ಲರೂ ಇವರ ದನಿ ಕೇಳುತ್ತಿದ್ದರೇ ಹೊರತು ಇವರ ಬಗ್ಗೆ ಮಾಹಿತಿ ಇರಲಿಲ್ಲ. ವೀಕ್ಷಕರಿಗಾಗಿ ಬಿಗ್‌ ಬಾಸ್‌ ಹಿನ್ನೆಲೆ ಧ್ವನಿ ನೀಡಿದ್ದ, ನೀಡುತ್ತಿರುವ ಕಲಾವಿದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

    ಬಿಎಂ ವೆಂಕಟೇಶ್‌

    2015ರಲ್ಲಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾದ ಬಿಗ್‌ ಬಾಸ್‌ ಸೀಸನ್‌ 3ಕ್ಕೆ ಬಿಎಂ ವೆಂಕಟೇಶ್‌ ಬಿಗ್‌ ಬಾಸ್‌ ಆಗಿ ಧ್ವನಿ ನೀಡಿದ್ದರು. ವೆಂಕಟೇಶ್‌ ಅವರನ್ನು ಅನೇಕ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನೋಡಿದ್ದೇವೆ. ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ವೆಂಕಟೇಶ್‌ ಝೇಂಡೆ ಪಾತ್ರದಲ್ಲಿ ನಟಿಸಿದ್ದರು. ವೆಂಕಟೇಶ್‌ ಡಡ್ಬಿಂಗ್‌ ಕಲಾವಿದರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ.

    ಅಮಿತ್‌ ಭಾರ್ಗವ್‌

    ಕನ್ನಡಕ್ಕಿಂತ ಹೆಚ್ಚಾಗಿ ತಮಿಳಿನಲ್ಲಿ ಗುರುತಿಸಿಕೊಂಡಿದ್ದಾರೆ. ಅಮಿತ್‌ ಮೊದಲ ಬಾರಿಗೆ 2010ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ‘ಸೀತೆ’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸಿದ್ದರು. 2013ರಲ್ಲಿ ಈ ಟಿವಿಯಲ್ಲಿ ಪ್ರಸಾರವಾದ ಬಿಗ್‌ ಬಾಸ್‌ ಸೀಸನ್‌ 1 ಹಾಗೂ 2014 ರಲ್ಲಿ ಏಷ್ಯಾನೆಟ್‌ ಸುವರ್ಣದಲ್ಲಿ ಪ್ರಸಾರವಾದ ಬಿಗ್‌ ಬಾಸ್‌ ಸೀಸನ್‌ 2 ಕ್ಕೆ ಅಮಿತ್‌ ಭಾರ್ಗವ್‌ ಬಿಗ್‌ ಬಾಸ್‌ ಆಗಿ ಧ್ವನಿ ನೀಡಿದ್ದರು.

    ಬಡೆಕ್ಕೆಲ ಪ್ರದೀಪ್‌

    ವೀಕ್ಷಕರಿಗೆ ಬಡೆಕ್ಕೆಲ ಪ್ರದೀಪ್‌ ಧ್ವನಿ ಹಾಗೂ ಮುಖ ಪರಿಚಯವಿದೆ. ಪ್ರದೀಪ್‌ ಪುತ್ತೂರಿಗೆ ಸೇರಿದವರು. ನಟನಾಗಿ, ಮಾಡೆಲ್‌ ಹಾಗೂ ಕಂಠದಾನ ಕಲಾವಿದನಾಗಿ ಪ್ರದೀಪ್‌ ಗುರುತಿಸಿಕೊಂಡಿದ್ದಾರೆ. ಟಿವಿ 9 ವಾಹಿನಿಯಲ್ಲಿ ವಾರ್ತಾ ವಾಚಕರಾಗಿ ಕರಿಯರ್‌ ಆರಂಭಿಸಿದ್ದ ಪ್ರದೀಪ್‌, ನಂತರ ತಮಿಳು, ಕನ್ನಡ ಧಾರಾವಾಹಿಗಳಲ್ಲಿ ನಟನೆ ಆರಂಭಿಸಿದರು. ಬೆಂಗಳೂರು ಮೆಟ್ರೋದಲ್ಲಿ ಕೂಡಾ ಪ್ರದೀಪ್‌ ಅವರ ಧ್ವನಿಯನ್ನು ಕೇಳಬಹುದು. ಪ್ರದೀಪ್‌ ಬಿಗ್‌ ಬಾಸ್‌ ಶೋಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ, ಆದರೆ ಬಿಗ್‌ ಬಾಸ್‌ ಆಗಿ ಅಲ್ಲ. ಬಿಗ್‌ ಬಾಸ್‌ ಶೋನಲ್ಲಿ ನೀವು ಕೇಳುವ ಸಮಯದ ಧ್ವನಿ ಪ್ರದೀಪ್‌ ಅವರದ್ದೇ. ಅಂತ್ಯದಲ್ಲಿ ವೈಂಡ್‌ ಅಪ್‌ ಮಾಡುವುದು ಕೂಡಾ ಪ್ರದೀಪ್‌ ಅವರ ಧ್ವನಿ ಮೂಲಕವೇ. ಬಿಗ್​ ಬಾಸ್​ ಟಾಸ್ಕ್ ವಿವರ ಹೇಳಲು , ಅನೌನ್ಸ್​​ಮೆಂಟ್​ ಮಾಡಲು ಮಾತ್ರ ಪ್ರದೀಪ್​ ಅವರ ಧ್ವನಿ ಕೇಳಿಬರುತ್ತದೆ. ಇವರು ಮೊದಲ ಸೀಸನ್​ನಿಂದಲೂ ಧ್ವನಿ ನೀಡುತ್ತಾ ಬಂದಿದ್ದಾರೆ.

    ಶ್ರೀನಿವಾಸ್‌ ಪ್ರಸಾದ್‌

    2016ರಲ್ಲಿ ಆರಂಭವಾದ ಸೀಸನ್‌ 4 ರಿಂದ ಇದುವರೆಗೂ ಬಿಗ್‌ ಬಾಸ್‌ ಆಗಿ ಧ್ವನಿ ನೀಡುತ್ತಿರುವುದು ಶ್ರೀನಿವಾಸ್‌ ಪ್ರಸಾದ್.‌ ಇವರು ಕೂಡಾ ಡಬ್ಬಿಂಗ್‌ ಆರ್ಟಿಸ್ಟ್.‌ ಅನೇಕ ಕಾರ್ಯಕ್ರಮಗಳಿಗೆ ಇವರು ಧ್ವನಿ ನೀಡಿದ್ದಾರೆ. ಆದರೆ ವಾಹಿನಿ ಇದುವರೆಗೂ ಇವರ ಮುಖ ಪರಿಚಯ ರಿವೀಲ್‌ ಮಾಡಿಲ್ಲ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ‘ಚಂದ್ರಗಿರಿ’ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್!

    June 22, 2026

    ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕರ ಸಮ್ಮುಖದಲ್ಲಿ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ ಗ್ರಾಂಡ್ ಫಿನಾಲೆಗೆ ವೇದಿಕೆ ಸಜ್ಜು

    June 5, 2026

    ವಿಜಯ ರಾಘವೇಂದ್ರ ನಟನೆಯ ಕೌಟುಂಬಿಕ ಕಥಾನಕ “ಶ್ರೀಮತಿ ಸಿಂಧೂರ” ಆಡಿಯೋ ಟೀಸರ್ ರಿಲೀಸ್

    May 2, 2026

    Comments are closed.

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು: ದೇವರಾಯಪಟ್ಟಣದಲ್ಲಿ ಚಿರತೆ ಹಾವಳಿ, ಇಸ್ರೋ ಆವರಣದಲ್ಲಿ ಕುರಿ ಬಲಿ – ಬೋನು ಅಳವಡಿಕೆ

    August 1, 2026

    ತುಮಕೂರು: ನಗರದ ದೇವರಾಯಪಟ್ಟಣ ಭಾಗದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ದೇವರಾಯಪಟ್ಟಣದಿಂದ ಬಂಡೇಪಾಳ್ಯ ಸಂಪರ್ಕಿಸುವ ರಸ್ತೆಯಲ್ಲಿ…

    ಗೃಹಲಕ್ಷ್ಮಿ, ಯುವನಿಧಿ: 323 ಕೋಟಿ ರೂ. ಬಿಡುಗಡೆ

    August 1, 2026

    ಜಿಟಿಟಿಸಿ: ವಿವಿಧ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ

    August 1, 2026

    ರಾಜಕಾರಣದಷ್ಟೇ ಶಿಕ್ಷಣ ವ್ಯವಸ್ಥೆ ಕಲುಷಿತ: ಡಾ.ವೈ.ಎ.ನಾರಾಯಣಸ್ವಾಮಿ ಕಳವಳ

    August 1, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.