ಮದುವೆಯಾದ ಮೇಲೆ ತುಂಬಾ ಬ್ಯುಸಿಯಾಗಿದ್ದೇನೆ. ನಾನು ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದೇನೆ. ದಿಗಂತ್ ಅವರ ಬಟ್ಟೆಯನ್ನು ಮಡಚಿ ಇಡುತ್ತಿದ್ದೇನೆ. ಹೀಗೆ ಫುಲ್ ಬ್ಯೂಸಿಯಾಗಿದ್ದೇನೆ ಅಂತ ಖ್ಯಾತ ನಟಿ ಐಂದ್ರಿತಾ ರೇ ಹೇಳಿದ್ದಾರೆ.
ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮಾಷೆಗೆ ಈ ಮಾತುಗಳನ್ನು ಐಂದ್ರಿಯಾ ಹೇಳಿದ್ದಾರೆ. ಬಳಿಕ ಇದೆಲ್ಲಾ ತಮಾಷೆಗಾಗಿ ಹೇಳಿದ್ದು, ನಾನು ಕಳೆದ ವರ್ಷದವರೆಗೂ ಹಿಂದಿಯಲ್ಲಿ ಬ್ಯೂಸಿಯಾಗಿದ್ದೆ. ತುಂಬಾ ವೆಬ್ ಸೀರಿಸ್ ಗಳನ್ನು ಮಾಡಿದ್ದೇನೆ. ಹಿಂದಿ ಸಿನಿಮಾಗಳನ್ನು ಮಾಡಿದ್ದೇನೆ. ಎರಡು ಹಿಂದಿ ಸಿನಿಮಾಗಳನ್ನು ಮಾಡಿದ್ದೇನೆ. ಅದಾದ ಮೇಲೆ ಕನ್ನಡದಲ್ಲಿ ಒಳ್ಳೆ ಅವಕಾಶ ಸಿಗಬೇಕು ಅಂತ ಕಾಯ್ತಾ ಇದ್ದೇನೆ ಅಂತ ಅವರು ಹೇಳಿದ್ದಾರೆ.
ಮದುವೆಯಾದ ಮೇಲಂತೂ ಎಲ್ಲರೂ ನನ್ನನ್ನು ರಿಜೆಕ್ಟ್ ಮಾಡಿದ್ದಾರೆ. ಆದರೆ ನನ್ನ ಫ್ಯಾನ್ಸ್ ನನ್ನ ರಿಜೆಕ್ಟ್ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಇನ್ಸ್ಟಾಗ್ರಾಮ್ ನಲ್ಲಿ ಫ್ಯಾನ್ಸ್ ಕಂಬ್ಯಾಕ್ ಯಾವಾಗ ಅಂತಾ ಕೇಳುತ್ತಲೇ ಇರುತ್ತಾರೆ. ಆದರೆ ಅಂತಹ ಆಫರ್ ಯಾವುದೂ ಬಂದಿಲ್ಲ ಅಂತ ಅವರು ಹೇಳಿದರು.
ಮದುವೆ ಆದ ಮೇಲೆ ಆಫರ್ಗಳೇ ಬರುತ್ತಿಲ್ಲ. ಈಗ ನಾನು ಯಾರನ್ನು ದೂಷಿಸಬೇಕು. ಪ್ರೇಕ್ಷಕರನ್ನಾ, ನಿರ್ಮಾಪಕರನ್ನಾ, ಚಿತ್ರರಂಗಕ್ಕಾ ಯಾರನ್ನು ನಾನು ಬ್ಲೇಮ್ ಮಾಡಬೇಕು..? ದಿಗಂತ್ ಗೆ ನಾನು ಕನ್ನಡಕ್ಕೆ ಕೆಲಸ ಮಾಡಬೇಕು ಎನ್ನುವ ಆಸೆ ಇದೆ. ಈಗ ನಾನು ಪೌಂಡರ್ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೇನೆ ಎಂದು ಹೇಳಿದರು.
ದಿಗಂತ್ ಅವರ ಎಲ್ಲಾ ಸಿನಿಮಾಗಳು ನನಗೆ ಇಷ್ಟ ಆಗಲ್ಲ. ಸುಮ್ಮನೆ ಚೆನ್ನಾಗಿದೆ ಅಂತಾನೂ ನಾನು ಹೇಳಲ್ಲ. ಆದರೆ ಪೌಂಡರ್ ಸಿನಿಮಾ ಟ್ರೇಲರ್ ನನಗೆ ತುಂಬಾ ಇಷ್ಟ ಆಗಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q