ಮಧುಗಿರಿ : ವಾಸವಿಕ್ಲಬ್ ಮಹಿಳೆಯರ ಬಳಗ ಸದಸ್ಯರು ವರ್ಷದ ಮೊದಲ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.
ನಗರದ ಮಹಿಳಾ ಸಮಾಜದಲ್ಲಿ ಸಂಕ್ರಾಂತಿ ಹಬ್ಬವನ್ನು ಆಯೋಜಿಸಿದ್ದು, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ವಾಸವಿ ಕ್ಲಬ್ ಅಧ್ಯಕ್ಷರಾದ ಲಕ್ಷ್ಮಿಮೂರ್ತಿ, ಸೂರ್ಯನು ಈ ದಿನ ತನ್ನ ಪಥ ಬದಲಾಯಿಸುವಂತೆ ಎಲ್ಲರ ಬಾಳಿನ ಪಥ ಬದಲಾಗಲಿ ಸುಖ ಸಂತೋಷ ಸಮೃದ್ಧಿ ಆರೋಗ್ಯದ ಸಂಭ್ರಮ ಪಸರಿಸಲಿ ಎಂದು ಹಾರೈಸಿದರು.
ಹಬ್ಬದಲ್ಲಿ ನಾವು ನದಿಗಳಲ್ಲಿ ಸ್ನಾನವನ್ನು ಮಾಡಿ ಸೂರ್ಯ ದೇವರ ಆರಾಧಿಸುತ್ತೇವೆ. ನಮ್ಮಲ್ಲಿನ ಪಾಪಗಳು ತೊಳೆಯುತ್ತದೆ ಎಂಬ ನಂಬಿಕೆ ಇದೆ. ಸಂಕ್ರಾಂತಿ ಎಂದರೆ ಪರ್ವಕಾಲ ಪುಣ್ಯಕಾಲ ಸೂರ್ಯ ತನ್ನ ಪತನವನ್ನು ಬದಲಿಸುವ ಕಾಲ ಉತ್ತರಾಯಣ ಪುಣ್ಯಕಾಲ ಎಂದು ಕರೆಯುತ್ತೇವೆ ಎಂದು ಲಕ್ಷ್ಮಿ ಮೂರ್ತಿ ವಿವರಿಸಿದರು.
ಈ ಸಂದರ್ಭದಲ್ಲಿ ಕ್ಲಬ್ಬಿನ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಆಶಾ ಮಲ್ಲಿಕಾರ್ಜುನ್, ಅರುಣ ಸತೀಶ್, ಕಲ್ಪನಾ ಗೋವಿಂದರಾಜ್, ಲಲಿತಾ ನವೀನ್, ಸುಮಾ ಸುದರ್ಶನ್, ಭಾರತಿ ಲಕ್ಷ್ಮಿಕಾಂತ್, ಸುಷ್ಮಾ ರಮೇಶ್, ಪ್ರತಿಭಾ ಧನಪಾಲ್, ನಾಗ ಸ್ಮಿತಾ ಲಕ್ಷ್ಮಿ ಶ್ರೀನಾಥ್, ವೀಣಾ ಹನುಮಂತರಾಜು, ಪದ್ಮ ಬದ್ರಿನಾಥ್, ರೂಪ ರವಿ, ಪುಷ್ಪ ಆದಿನಾರಾಯಣ, ಸುಶೀಲ, ಮಾಧವಿ ರಾಜ್, ಪವಿತ್ರ ಪ್ರಕಾಶ್ ಬಾಬು ಇನ್ನು ಮುಂತಾದವರಿದ್ದರು.
ವರದಿ: ಅಬಿದ್, ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy