ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಕಂದಾಯ ಇಲಾಖೆಯ ನಾಡಕಛೇರಿಯಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸರಳವಾಗಿ ಹಾಗೂ ಸಂಭ್ರಮದಿಂದ ಆಚರಿಸಿದರು.
ಕಂದಾಯ ಇಲಾಖೆಯ ಉಪತಹಶೀಲ್ದರ್ ಮುತ್ತು ರಾಜ್ ಧ್ಜಜರೋಹಣ ನೆರವೇರಿಸಿ ಬಳಿಕ ಮಾತನಾಡಿದ ಅವರು, ಭಾರತದಲ್ಲಿ ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯ ದಿನವೆಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಸಂವಿಧಾನ ಜಾರಿಗೆ ಬಂದ ಈ ದಿನ ಬಹಳ ವಿಶೇಷವಾಗಿದ್ದು. ಭಾರತ ಸ್ವಾತಂತ್ರ್ಯಕ್ಕೆ ಹೋರಾಡಿದ ಹಲವು ಪ್ರಮುಖ ನಾಯಕರನ್ನು ಮತ್ತು ಸಂವಿಧಾನ ಜಾರಿಗೆ ಶ್ರಮಿಸಿದಂತಹ ಪ್ರತಿಯೊಬ್ಬರು ನಮಗೆ ಸ್ಪೂರ್ತಿಯಾಗಿದ್ದಾರೆ ಎಂದರು.
ಗಣರಾಜ್ಯೋತ್ಸವ ದಿನವನ್ನು ಭಾರತದ ಪ್ರತಿ ಸರ್ಕಾರಿ ಕಚೇರಿಗಳು, ಇಲಾಖೆಗಳು ಮತ್ತು ಸಂಸ್ಥೆಗಳು, ಹಾಗೂ ಎಲ್ಲಾ ಶಾಲಾ, ಕಾಲೇಜುಗಳು ಸೇರಿದಂತೆ ವಿಶ್ವವಿದ್ಯಾಲಯಗಳಲ್ಲಿ ಅತ್ಯಂತ ವಿಶೇಷವಾಗಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಭಾರತದ ಸರ್ವ ಪ್ರಜೆಗೂ ಸಮಾನ ಶಿಕ್ಷಣ, ಸರ್ವರಿಗೂ ಹಕ್ಕುಗಳನ್ನು ನೀಡಿರುವ ಸಂವಿಧಾನ ಜಾರಿಗೆ ತಂದ ಈ ದಿನವನ್ನು ನಾವೆಲ್ಲರೂ ವಿಶೇಷವಾಗಿ ಗೌರವಿಸಬೇಕು ಹಬ್ಬದ ದಿನವಾಗಿ ಆಚರಿಸಬೇಕು ಮತ್ತು ಸಂವಿಧಾನ ಜಾರಿಗೆ ಶ್ರಮಿಸಿರುವ ಎಲ್ಲಾ ಮಹಾನ್ ನಾಯಕರನ್ನು, ಅವರ ಸೇವೆಯನ್ನು ನಾನು ಸದಾಕಾಲ ಸ್ಮರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಿ.ಎಸ್.ಪುರ ಗ್ರಾಮದ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು. ಕಂದಾಯ ಇಲಾಖೆಯ ಅಧಿಕಾರಿಗಳು. ಗ್ರಾಮ ಸಹಾಯಕರು.ಸಿಬ್ಬಂದಿ ಹಾಜರಿದ್ದರು.
ವರದಿ: ಡಿ.ಮಂಜುನಾಥ್. ಗುಬ್ಬಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy