Author: admin

ದಾವಣಗೆರೆ: ವಿಶೇಷ ಚಿತ್ರಕಲೆ, ಮಕ್ಕಳಿಗೆ ಬಣ್ಣದ ಕಿರೀಟ, ಹೂವು ನೀಡುವುದು, ಪಠ್ಯಪುಸ್ತಕ ವಿತರಣೆ ಹಾಗೂ ಸಿಹಿ ಊಟದ ವ್ಯವಸ್ಥೆ ಮಾಡುವುದರ ಮೂಲಕ ಹಬ್ಬದ ರೀತಿಯಲ್ಲಿ ಶಾಲಾ ಪ್ರಾರಂಭೋತ್ಸವ ಚನ್ನಗಿರಿ ತಾಲೂಕಿನಲ್ಲಿ ಮಾಡಿದ್ದೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ಹೇಳಿದರು. ಸಂತೆಬೆನ್ನೂರು ಗ್ರಾಮದಲ್ಲಿ ಗುರುವಾರ ಕೆಪಿಎಸ್ ಶಾಲೆಯ ಪ್ರಾಥಮಿಕ ವಿಭಾಗದ ಶಾಲಾ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಿ ಮಾತನಾಡಿದರು . ಪೋಷಕರಿಗೆ ಮಕ್ಕಳನ್ನು ಕಳಿಸಿಕೊಡಿ ಎಂದು ಆಹ್ವಾನ ಪತ್ರ ಬರೆದಿದ್ದೆವು. ಅದೇ ರೀತಿ ಮಕ್ಕಳ ಶಾಲೆ ಪ್ರಾರಂಭೋತ್ಸವ ದಿನ ಮಕ್ಕಳು ಸಂಭ್ರಮದಿಂದ ಬಂದಿದ್ದಾರೆ. ಹಿಂದಿನಿಂದಲೇ ಇಲಾಖೆ ಆದೇಶ ಪ್ರಕಾರ ಸೇತುಬಂಧ ಪ್ರಾರಂಭಿಸಿದ್ದೇವೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಹಳೆಯ ವಿದ್ಯಾರ್ಥಿಗಳು ಪೋಷಕರು ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಸಹಕಾರ ಕೋರಲಾಗಿದೆ ಎಂದು ಹೇಳಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ರೇಣುಕಾ ಮೂರ್ತಪ್ಪ ಮಾತನಾಡಿ, ಸಂತೆವೆನ್ನೂರು ಹೋಬಳಿಯಲ್ಲಿ ಕೆಪಿಎಸ್ ಶಾಲೆ ಕೇಂದ್ರಬಿಂದುವಾಗಿದೆ ಆದ್ದರಿಂದ ಹೆಚ್ಚುವರಿ ಆಂಗ್ಲ ಮಾಧ್ಯಮ ಶಾಲೆಯನ್ನು ತೆರೆಯಲು ಶಿಕ್ಷಣ ಇಲಾಖೆ ಅನುಮತಿ ನೀಡಬೇಕು…

Read More

ತುಮಕೂರು: ತಿಪಟೂರು ನಗರಸಭೆಯು ಸ್ವಚ್ಛ ಭಾರತ್ ಮಿಷನ್–2.0 ಯೋಜನೆಯಡಿ ಮಾಹಿತಿ, ಶಿಕ್ಷಣ ಮತ್ತು ಸಂವಹನ(ಐಇಸಿ) ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸ್ವಸಹಾಯ ಗುಂಪಿನ ಸದಸ್ಯರನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಿದೆ. ಐಇಸಿ ಚಟುವಟಕೆಗಳನ್ನು ನಡೆಸಲಿಚ್ಛಿಸುವ ಸ್ವಸಹಾಯ ಗುಂಪಿನ ಆಸಕ್ತ ಸದಸ್ಯರು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಬಹುದಾಗಿದೆ. ಆಯ್ಕೆಯಾದವರಿಗೆ ಮಾಹೆಯಾನ 18,339 ರೂ.ಗಳ ಮಾಸಿಕ ಗೌರವಧನವನ್ನು ನೀಡಲಾಗುವುದು. ಇಚ್ಛೆ ವ್ಯಕ್ತಪಡಿಸುವವರು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ–ಡೇ ಯೋಜನೆಯಡಿ ನೋಂದಾಯಿಸಿಕೊಂಡಿರಬೇಕು. ಹೆಚ್ಚಿನ ವಿವರ, ಷರತ್ತು ಮತ್ತು ನಿಯಮಗಳಿಗಾಗಿ ಜಾಲತಾಣ: http://www.tipturcity.mrc.gov.in/en/tenders  ಅನ್ನು ವೀಕ್ಷಿಸಬಹುದಾಗಿದೆ. ಆಸಕ್ತರು ಜಾಲತಾಣದಲ್ಲಿ ಅಪ್‌ಲೋಡ್ ಮಾಡಿರುವ ಷರತ್ತುಗಳನ್ವಯ ನಗರಸಭೆಯ ಇ–ಮೇಲ್ ka.tiptur.cmc@gmail.com  ವಿಳಾಸಕ್ಕೆ ಅಗತ್ಯ ದಾಖಲಾತಿಗಳ ಸ್ಕ್ಯಾನ್ ಪ್ರತಿಗಳನ್ನು ಜೂನ್ 10ರೊಳಗಾಗಿ ಸಲ್ಲಿಸಬಹುದಾಗಿದೆ. ಇ–ಮೇಲ್ ಮೂಲಕ ಸಲ್ಲಿಸಿರುವ ದಾಖಲಾತಿಗಳ ಒಂದು ಪ್ರತಿಯನ್ನು ನಗರಸಭಾ ಕಚೇರಿಗೆ ತಲುಪಿಸಬೇಕು. ಐಇಸಿ ಚಟುವಟಕೆಗಳನ್ನು ನಡೆಸಲಿಚ್ಛಿಸುವ ಸ್ವಸಹಾಯ ಗುಂಪಿನ ಸದಸ್ಯರಿಗಾಗಿ ಜೂನ್ 13ರಂದು ಸಂದರ್ಶನ ನಡೆಸಲಾಗುವುದು ಎಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More

ತುಮಕೂರು:  ಬೆಂಗಳೂರಿನ ಅಲಂಕಾರಿಕ ಮೀನು ಕೇಂದ್ರವೊಂದರಲ್ಲಿ ಕೋಯಿ ಕಾರ್ಪ್ ಅಲಂಕಾರಿಕ ಮೀನಿನ ತಳಿಯಲ್ಲಿ ಕೋಯಿ ಹರ್ಪ್ಸ್ ವೈರಸ್(ಕೆಹೆಚ್‌ ವಿ) ಸೋಂಕಿನ ಲಕ್ಷಣ ಕಂಡು ಬಂದಿದೆ ಎಂದು ನ್ಯಾಷನಲ್ ಬ್ಯೂರೋ ಆಫ್ ಫಿಶ್ ಜೆನೆಟಿಕ್ ರಿಸೋರ್ಸಸ್‌ ನವರು ದೃಢಪಡಿಸಿದ್ದಾರೆ. ಮೀನು ಕೃಷಿಕರು ಯಾವುದೇ ಮೀನನ್ನು ಬೇರೆ ದೇಶದಿಂದ ಆಮದು ಮಾಡಿಕೊಳ್ಳುವಾಗ ಕಡ್ಡಾಯವಾಗಿ ಕೆಹೆಚ್‌ ವಿ ತಪಾಸಣೆಗೊಳಪಡಿಸಬೇಕು ಎಂದು ವರ್ಲ್ಡ್ ಆರ್ಗನೈಸೇಷನ್ ಫಾರ್ ಅನಿಮಲ್ ಹೆಲ್ತ್ನವರು ಸೂಚಿಸಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಈ ವೈರಸ್ ದಾಖಲಾಗಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಯಾರಾದರೂ ಬೇರೆ ದೇಶದಿಂದ ಅಲಂಕಾರಿಕ ಮೀನು ತರಲಿಚ್ಛಿಸುವವರು ವೈರಸ್ ತಪಾಸಣೆಯಲ್ಲಿ ನೆಗೆಟಿವ್ ವರದಿ ಇದ್ದರೆ ಮಾತ್ರ ತರಬೇಕೆಂದು ಮಂಗಳೂರಿನ ಮೀನುಗಾರಿಕೆ ಕಾಲೇಜು ಸೂಚಿಸಿದೆ ಎಂದು ಮೀನುಗಾರಿಕೆ ಉಪನಿರ್ದೇಶಕ ಶಿವಶಂಕರ್ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ತುಮಕೂರು: ಒಬ್ಬ ವ್ಯಕ್ತಿಯ ದೇಹಕ್ಕೆ ಸಾವಿರುತ್ತದೆ ಆದರೆ ಆತ್ಮಕ್ಕೆ ಎಂದಿಗೂ ಸಾವಿರುವುದಿಲ್ಲ. ಅದು ಅವರ ಸಾಧನೆಗಳಲ್ಲಿ ಅಡಗಿರುತ್ತದೆ. ಎಚ್.ಎಸ್.ವೆಂಕಟೇಶಮೂರ್ತಿ ಯವರು ಅವರ ಸಾಹಿತ್ಯ ನಮ್ಮೊಂದಿಗೆ ಸದಾ ಇರುತ್ತದೆ ಎಂದು ವಿಶ್ವವಿದ್ಯಾಲಯ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ದಾಕ್ಷಾಯಿಣಿ ತಿಳಿಸಿದರು. ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಹಮ್ಮಿಕೊಂಡಿದ್ದ ಎಚ್.ಎಸ್.ವೆಂಕಟೇಶಮೂರ್ತಿಯವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಿನ ವಿದ್ಯಾರ್ಥಿಗಳು ಎಚ್.ಎಸ್.ವೆಂಕಟೇಶಮೂರ್ತಿ  ಅವರ ಸಾಹಿತ್ಯ ಕಲೆಯನ್ನು ಮತ್ತು ತತ್ವದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇಂಗ್ಲಿಷ್ ವಿಭಾಗದ ಸಹಪ್ರಾಧ್ಯಾಪಕ ಡಾ.ಬಿ.ಎನ್.ವೇಣುಗೋಪಾಲ ಮಾತನಾಡಿ, ಆಕೃತಿ ಅಳಿದಿದೆ ಆತ್ಮ ಉಳಿದಿದೆ. ಎಚ್.ಎಸ್.ವೆಂಕಟೇಶಮೂರ್ತಿ ಯವರ ಸಾಧನೆ ಹಲುವು ಕ್ಷೇತ್ರಗಳಲ್ಲಿ ಜೀವಂತವಾಗಿದೆ.ಅವರು ರಚಿಸಿರುವಂತಹ ಭಾವಗೀತೆಗಳು ನಾಟಕಗಳು ಹಾಡುಗಳು ಸಿನಿಮಾದ ಮೇಲಿನ ಒಲವು ಅಪಾರವಾದದ್ದು ಎಂದರು. ಕನ್ನಡ ಸಹಪ್ರಾಧ್ಯಾಪಕ ಡಾ.ಶಿವಣ್ಣ ಬೆಳವಾಡಿ ಮಾತನಾಡಿ, ಎಚ್.ಎಸ್.ವೆಂಕಟೇಶಮೂರ್ತಿ ಯವರು ಸಾಹಿತಿಗಳು ಅಷ್ಟೇ ಅಲ್ಲ ಒಳ್ಳೆಯ ಹಾಡುಗಾರರು ಕೂಡ ಹೌದು. ಎಲ್ಲರೊಡಗಿನ ಅವರ ಒಡೆನಾಟ ಯಾರೂ ಕೂಡ ಮರೆಯಲಾಗದಂತಹದು. ಅವರಸಾಹಿತ್ಯದಲ್ಲಿ ವೈಚಾರಿಕ ಭಾವನೆಗಳನ್ನು ತುಂಬಿದಂತಹ ಮಹಾನ್ ವ್ಯಕ್ತಿ ಮತ್ತು…

Read More

ತುಮಕೂರು:  ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್‌ ನಲ್ಲಿ ಪ್ರಸ್ತುತ ನೂತನವಾಗಿ ಮೆನು ಸಿದ್ಧಪಡಿಸಲಾಗಿದ್ದು, ಈ ಮೆನುವಿನಂತೆ ಬೆಳಗಿನ ಉಪಹಾರದಲ್ಲಿ ರೈಸ್‌ ಬಾತ್, ಚಿತ್ರಾನ್ನ, ಉಪ್ಪಿಟ್ಟು, ಕೇಸರಿಬಾತ್, ಇಡ್ಲಿ–ಸಾಂಬಾರ್–ಚಟ್ನಿ; ಮಧ್ಯಾಹ್ನದ ಊಟಕ್ಕೆ ಮುದ್ದೆ, ಅನ್ನ, ಸಾಂಬಾರ್, ಮೊಸರನ್ನ, ಚಪಾತಿ ಹಾಗೂ ರಾತ್ರಿ ಊಟಕ್ಕೆ ರೈಸ್‌ ಬಾತ್ ಮತ್ತು ಮೊಸರನ್ನ ನೀಡಲಾಗುತ್ತಿದೆ. ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ 4 ಇಂದಿರಾ ಕ್ಯಾಂಟೀನ್‌ ಗಳೊಂದಿಗೆ ಹೊಸದಾಗಿ ತುಮಕೂರು ಜಿಲ್ಲಾಸ್ಪತ್ರೆ ಮತ್ತು ಎಪಿಎಂಸಿ ಮಾರುಕಟ್ಟೆ ಬಳಿ 2 ಇಂದಿರಾ ಕ್ಯಾಂಟೀನ್‌ ಗಳನ್ನು ಕಾರ್ಯಾರಂಭಗೊಳಿಸಲಾಗಿದೆ. ಪ್ರತಿ ದಿನ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವ ರೋಗಿಗಳು ಹಾಗೂ ಮಾರುಕಟ್ಟೆಗೆ ಆಗಮಿಸುವ ರೈತರು, ಗ್ರಾಹಕರು ಹಾಗೂ ವರ್ತಕರ ಅನುಕೂಲಕ್ಕಾಗಿ ಹೊಸದಾಗಿ 2 ಇಂದಿರಾ ಕ್ಯಾಂಟೀನ್‌ ಗಳನ್ನು ಪ್ರಾರಂಭಿಸಲಾಗಿದೆ. ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳಿಂದಾಗಿ ಬಡಜನರು ಅವರ ಸಮತೋಲಿತ ಹಾಗೂ ಪೌಷ್ಠಿಕ ಆಹಾರದಿಂದ ವಂಚಿತರಾಗುವುದನ್ನು ತಪ್ಪಿಸಲು ಸರ್ಕಾರವು ರಾಜ್ಯದ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ…

Read More

ತಮಿಳಿನಿಂದ ಕನ್ನಡ ಹುಟ್ಟಿದೆ ಎನ್ನುವ ಕಮಲ್ ಹಾಸನ್ ಹೇಳಿಕೆಗೆ ನಾದ ಬ್ರಹ್ಮ ಹಂಸಲೇಖ ತಿರುಗೇಟು ನೀಡಿದ್ದು, ವಿಡಿಯೋ ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿದ ಅವರು, ಮಿಸ್ಟರ್​ ತಮಿಳ್​ ಹಾಸನ್​. ನೀವು ಮಿಸ್ಟರ್​ ತಮಿಳ್​ ಹಾಸನ್​ ಅಂತಾ ಹೆಸರು ಬದಲಾಯಿಸಿಕೊಳ್ಳಿ ಅಂತಾ ಹೇಳಿ ಸಾರ್​​ ಎಂದು ನಮ್ಮ ಮ್ಯೂಸಿಕ್​​ ಸ್ಕೂಲ್​ ಸ್ಟುಡೆಂಟ್ಸ್​​ ರಿಕ್ವೆಸ್ಟ್ ಮಾಡಿದ್ದಾರೆ. ಮಿಸ್ಟರ್​ ತಮಿಳ್​ ಹಾಸನ್​, ನೋಡಿ, ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು ಅನ್ನೋ ಗಾದೆ ನಮ್ಮ ಕಡೆ ಇದೆ. ಮಾತು ಎಷ್ಟು ತೊಂದರೆ ಕೊಡುತ್ತೆ ನೋಡಿ. ಸಿಎಂ ಸ್ಟಾಲಿನ್ ಅವರು ಇಡೀ ದಕ್ಷಿಣ ಭಾರತವನ್ನು ಒಂದುಗೂಡಿಸಬೇಕು ಅನ್ನೋ ಆಸೆಯನ್ನು ವ್ಯಕ್ತಪಡಿಸುತ್ತಾ ಇದ್ದಾರೆ. ಕನಸು ಕಂಡಿದ್ದಾರೆ. ಅವರ ಕನಸಿಗೆ ನಿಮ್ಮ ಮಾತು ಸಹಾಯ ಮಾಡಬೇಕು. ನೀವು ಆ ಪಕ್ಷದ ಮಿತ್ರಪಕ್ಷ. ನೀವು ಒಳ್ಳೆ ಮಾತುಗಳನ್ನಾಡಬೇಕು. ಯೋಚಿಸಿ ಮಾತನಾಡಬೇಕು” ಎಂದಿದ್ದಾರೆ. ”ನೋಡಿ, ನಾವು ಕನ್ನಡಿಗರು. ಕನ್ನಡಿಗರು ಭಾಷಾ ಪ್ರಿಯರು. ಭಾಷಾಂಧತೆ ನಮಗಿಲ್ಲ. ನಮ್ಮ ಕನ್ನಡದ ಸಾಂಸ್ಕತಿಕ ರಾಯಭಾರಿ ಬಸವಣ್ಣ.…

Read More

ತುಮಕೂರು: ಗಾಂಧೀಜಿಯವರ ಮಾತು ಮತ್ತು ಕೃತಿಯ ಮಧ್ಯೆ ವ್ಯತ್ಯಾಸವಿರಲಿಲ್ಲ. ಅವರು ಆತ್ಮವಂಚನೆಯಿಲ್ಲದೆ ಬದುಕಿದ್ದರು. ಎಂತಹದೇ ಪ್ರತಿಕೂಲ ಸನ್ನಿವೇಶದಲ್ಲೂ ಅಂತಃಸಾಕ್ಷಿಗೆ ಬದ್ಧರಾಗಿರಬೇಕು ಎಂಬುದನ್ನು ನಾವು ಗಾಂಧೀಜಿಯವರಿಂದ ಕಲಿಯಬೇಕು ಎಂದು ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಭಾರತೀಯ ವಿದ್ಯಾಭವನದ ಗಾಂಧಿ ಕೇಂದ್ರದ ನಿರ್ದೇಶಕಿ ಡಾ. ಮೀನಾ ದೇಶಪಾಂಡೆ ಮಹಿಷಿ ತಿಳಿಸಿದರು. ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ತುಮಕೂರು ವಿಶ್ವವಿದ್ಯಾನಿಲಯವು ಬುಧವಾರ ಆಯೋಜಿಸಿದ್ದ ‘ಗಾಂಧಿ ಭಾರತ’– ವಿವಿ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ಗಾಂಧೀಜಿಯವರು ವಿಶಿಷ್ಟವಾದ ಶಕ್ತಿಯನ್ನು ಮೈಗೂಡಿಸಿಕೊಂಡಿದ್ದರು. ಸತತ ಪ್ರಯತ್ನ, ಶ್ರಮ ಹಾಗೂ ತಪಸ್ಸಿನ ಫಲವಾಗಿ ಸ್ವಾತಂತ್ರ್ಯದ ಗಮ್ಯವನ್ನು ತಲುಪಿದರು. ಅವರು ಸತ್ಯದ ಅನ್ವೇಷಣೆಯನ್ನು ತಮ್ಮ ಬದುಕಿನ ಹಾದಿಯನ್ನಾಗಿಸಿಕೊಂಡಿದ್ದರು ಎಂದು ನೆನಪಿಸಿಕೊಂಡರು. ನಮ್ಮ ಅಂತರಾಳದ ಮಾತುಗಳನ್ನು ಕೇಳಿಸಿಕೊಂಡಾಗ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆಂತರಿಕವಾಗಿ ಬೆಳೆಯಬೇಕಾದರೆ ಮನಸ್ಸಿನ ಮಾತು ಕೇಳಬೇಕು. ಗಾಂಧೀಜಿ ಒಳಗಿನಿಂದ ಸದೃಢರಾಗಿದ್ದರಿಂದಲೇ ಅವರ ನಡೆನುಡಿಗಳಲ್ಲಿ ಸೌಮ್ಯಸ್ವಭಾವ ಇತ್ತು. ಅವರೆಂದು ದನಿ ಎತ್ತರಿಸಿ ಮಾತನಾಡಿರಲಿಲ್ಲ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ…

Read More

ತುಮಕೂರು: ಹಾಸನದ ಸರ್ಕಾರಿ ಕಲೆ, ವಾಣಿಜ್ಯ ಮತ್ತು ಸ್ನಾತಕೋತ್ತರ ಸ್ವಾಯತ್ತ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಅಂತರ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಶ್ವವಿದ್ಯಾಲಯ ಕಲಾ ಕಾಲೇಜಿನ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ. ತೇಜಸ್ ಎಸ್., ರೋಹನ್ ಆರ್., ರಾಜಶೇಖರ ಎನ್., ಮಹೇಶ್ ಎಚ್.ಎಲ್., ಲೋಕೇಶ್ ಕೆ.ಪಿ., ನಿತಿನ್ ಜಿ.ಎನ್., ವೆಂಕಟೇಶ್ ಕೆ. ಪಿ., ವೆಂಕಟೇಶ್ ವಿ.ಎಸ್., ಟಿ. ಕಿಶನ್ ಕುಮಾರ್, ದರ್ಶನ್ ಕೆ. ಜಿ., ಅಂಜನ್ ಕುಮಾರ್ ಎಚ್.ಆರ್. ಹಾಗೂ ರೋಹಿತ್ ಎಸ್.ಎಂ. ತಂಡದಲ್ಲಿದ್ದರು. ವಿಜೇತ ತಂಡದ ಸದಸ್ಯರನ್ನು ವಿವಿ ಕಲಾ ಕಾಲೇಜು ಪ್ರಾಂಶುಪಾಲೆ ಡಾ.ದಾಕ್ಷಾಯಣಿ ಜಿ. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸುದೀಪ್ ಕುಮಾರ್ ಆರ್., ಸಹಾಯಕ ನಿರ್ದೇಶಕ ಗಣೇಶ್ ಎಚ್. ವಿ. ಅಭಿನಂದಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ತುಮಕೂರು: ಪಾಲಿಕೆ ವತಿಯಿಂದ ನಗರದ ಕುಣಿಗಲ್ ರೈಲ್ವೆ ಅಂಡರ್ ಪಾಸ್ ನಲ್ಲಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಕುಣಿಗಲ್ ಅಂಡರ್ ಪಾಸ್ ಮಾರ್ಗವಾಗಿ ಹೋಗುವ ವಾಹನಗಳ ಸಂಚಾರವನ್ನು ಜೂನ್ 24ರವರೆಗೆ ಸ್ಥಗಿತಗೊಳಿಸಿ ವಾಹನಗಳ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆದೇಶ ಹೊರಡಿಸಿದ್ದಾರೆ. ಈ ಆದೇಶದನ್ವಯ ಲಕ್ಕಪ್ಪ ಸರ್ಕಲ್‌ನಿಂದ ಕುಣಿಗಲ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಲಕ್ಕಪ್ಪ ಸರ್ಕಲ್–ಗುಬ್ಬಿ ರಿಂಗ್ ರಸ್ತೆ ಜಂಕ್ಷನ್–ಕುಣಿಗಲ್ ಜಂಕ್ಷನ್‌ಗೆ ಹಾಗೂ ಕುಣಿಗಲ್ ಕಡೆಯಿಂದ ಲಕ್ಕಪ್ಪ ಸರ್ಕಲ್ ಕಡೆಗೆ ಬರುವ ವಾಹನಗಳು ಕುಣಿಗಲ್ ಜಂಕ್ಷನ್-ಗುಬ್ಬಿ ರಿಂಗ್ ರಸ್ತೆ ಜಂಕ್ಷನ್-ಲಕ್ಕಪ್ಪ ಸರ್ಕಲ್‌ಗೆ ಬರಬೇಕು. ಸದಾಶಿವನಗರ, ಬನಶಂಕರಿ, ಎಸ್.ಎಸ್.ಐ.ಟಿ. ಕಾಲೇಜಿನ ಕಡೆಗಳಿಂದ ಬರುವ ದ್ವಿಚಕ್ರ ಮತ್ತು ಕಾರಿನ ಚಾಲಕರು ಲಕ್ಕಪ್ಪ ಸರ್ಕಲ್ ಕಡೆಗೆ ಹೋಗಲು ಹೇಮಾವತಿ ಕಛೇರಿ ಮುಂಭಾಗದ ರಸ್ತೆಯ ಮೂಲಕ ದಾನಾ ಪ್ಯಾಲೇಸ್-ಗುಬ್ಬಿ ರಿಂಗ್ ರಸ್ತೆ ಜಂಕ್ಷನ್‌ನಿAದ ಲಕ್ಕಪ್ಪ ಸರ್ಕಲ್‌ಗೆ ಬರಬೇಕು. ಲಕ್ಕಪ್ಪ ಸರ್ಕಲ್ ಕಡೆಯಿಂದ ಸದಾಶಿವನಗರ, ಬನಶಂಕರಿ, ಎಸ್.ಎಸ್.ಐ.ಟಿ.ಕಾಲೇಜಿನ ಕಡೆಗೆ ಹೋಗುವ ದ್ವಿಚಕ್ರ ಮತ್ತು ಕಾರು ಚಾಲಕರು…

Read More

ತುಮಕೂರು: ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧೀನದ ಕಿತ್ತೂರು ರಾಣಿ ಚೆನ್ನಮ್ಮ ವಸತಿ/ಮೊರಾರ್ಜಿ ದೆಸಾಯಿ ವಸತಿ ಶಾಲೆಯಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳನ್ನು ಗೌರವ ಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ವಸತಿ ಶಾಲೆಗಳಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ಕಂಪ್ಯೂಟರ್ ಸೈನ್ಸ್ ವಿಷಯದ ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಕನ್ನಡ, ಇಂಗ್ಲೀಷ್, ಹಿಂದಿ ವಿಷಯದ ಶಿಕ್ಷಕರ ಹುದ್ದೆಗೆ ಅಭ್ಯರ್ಥಿಗಳು ಬಿ.ಎ/ಎಂ.ಎ ಮತ್ತು ಬಿ.ಎಡ್/ಟಿಇಟಿ ಹಾಗೂ ಕಂಪ್ಯೂಟರ್ ಸೈನ್ಸ್ ವಿಷಯದ ಶಿಕ್ಷಕರ ಹುದ್ದೆಗೆ ಬಿಇ/ಬಿಸಿಎ/ಬಿ.ಎಸ್.ಸಿ.(ಕಂಪ್ಯೂಟರ್ ಸೈನ್ಸ್) ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸುವವರು ಶಿಕ್ಷಕ ಹುದ್ದೆಯಲ್ಲಿ ಸೇವಾನುಭವ ಹೊಂದಿರಬೇಕು. ಆಸಕ್ತಿಯುಳ್ಳ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಜೂನ್ 4ರೊಳಗೆ ಸಮೀಪದ ವಸತಿ ಶಾಲೆ ಅಥವಾ ಇ-ಮೇಲ್ principalteacher0408@gmail.com ವಿಳಾಸಕ್ಕೆ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 80737536585ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…

Read More