Subscribe to Updates
Get the latest creative news from FooBar about art, design and business.
- ಜಿಲೆಟಿನ್ ಕಡ್ಡಿ ಕಟ್ಟಿಕೊಂಡು ಸ್ಫೋಟಿಸಿಕೊಂಡ ವ್ಯಕ್ತಿ — ತಂದೆ, ಮಗಳು ದಾರುಣ ಸಾವು; ನಾಲ್ವರಿಗೆ ಗಂಭೀರ ಗಾಯ
- ಬೆಂಗಳೂರು ಮತದಾರರ ಪಟ್ಟಿಯಿಂದ ನಟ ಪ್ರಕಾಶ್ ರಾಜ್ ಹೆಸರು ಔಟ್!
- ಬರದ ಮುನ್ಸೂಚನೆ; ಮುನ್ನೆಚ್ಚರಿಕೆ ವಹಿಸಲು ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
- ಹೀಗೂ ಉಂಟೆ | ಹತ್ತಿಯಲ್ಲೇ ಮೊಳಕೆ ಬಂದ ಮರಿಗಿಡಗಳು, ಮರ ಅಣಬೆ
- ಕಳಚಿತು ಸ್ಟಾರ್ ಹೊಟೇಲ್ ಗಳ ಮುಖವಾಡ: ಕೊಳೆತ ಮಾಂಸ, ಬೂಸ್ಟ್ ಹಿಡಿದ ತರಕಾರಿ, ವಿಷ ಎಣ್ಣೆ ಪತ್ತೆ
- ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’
- ಬೆಳಕುಣಿ (ಚೌದ್ರಿ)–ಮುಂಗನಾಳ ರಸ್ತೆ ಹದಗೆಟ್ಟು ಸಂಚಾರಕ್ಕೆ ಸಂಚಕಾರ: ತಕ್ಷಣ ದುರಸ್ತಿಗೆ ಜೀವನ್ ಮಾಳೆಗೆ ಆಗ್ರಹ
- ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: FIR ದಾಖಲು
Author: admin
ತುಮಕೂರು: ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು IISc, IIT & NIT ಸಂಸ್ಥೆಗಳ ಮೂಲಕ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಮೆಷಿನ್ ಲರ್ನಿಂಗ್ ವೃತ್ತಿಪರ ತರಬೇತಿ ಕೋರ್ಸುಗಳಿಗಾಗಿ ಪರಿಶಿಷ್ಟ ಪಂಗಡದ ಇಂಜಿನಿಯರಿಂಗ್ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದವರಿಗೆ 15,000 ರೂ.ಗಳ ಶಿಷ್ಯವೇತನ ನೀಡಲಾಗುವುದು. ಆಸಕ್ತರು ಏಪ್ರಿಲ್ 11ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತುಮಕೂರು, ಮಧುಗಿರಿ, ಶಿರಾ, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಗುಬ್ಬಿ, ತಿಪಟೂರು, ತುರುವೇಕೆರೆ, ಕುಣಿಗಲ್ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ/ ಪಾವಗಡ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ/ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ತುಮಕೂರು: ಪ್ರತಿಯೊಬ್ಬ ನಾಗರಿಕನೂ ತೆರಿಗೆ ಕಾನೂನಿನ ಎಲ್ಲ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅನುಸರಿಸಬೇಕು ಎಂದು ಭಾರತದ ಸರ್ವೋಚ್ಛ ನ್ಯಾಯಾಲಯದ ವಕೀಲರಾದ ಕೆ. ಆರ್. ಪ್ರದೀಪ್ ಹೇಳಿದರು. ತುಮಕೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ತೆರಿಗೆ ನ್ಯಾಯಶಾಸ್ತ್ರ ಮತ್ತು ನೇರ ತೆರಿಗೆ ಪದ್ಧತಿಗಳು’ ಕುರಿತ ವಿಶೇಷ ಉಪನ್ಯಾಸ ನೀಡಿದರು. ಪಾವತಿಸುವ ಸಾಮರ್ಥ್ಯ ಮತ್ತು ಪಾವತಿಸಲು ಇಚ್ಛೆ ಉತ್ತಮ ತೆರಿಗೆ ಕಾನೂನನ್ನು ಹೊಂದಲು ಎರಡು ತತ್ವಗಳಾಗಿವೆ ಎಂದರು. ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿರುವ ಪ್ರತೀಕ್ಷಣವನ್ನೂ ಕಲಿಕೆಗಾಗಿ ಬಳಸಿಕೊಳ್ಳಬೇಕು. ಕಲಿಕೆಗೆ ಯಾವುದೇ ಸಮಯದ ಮಿತಿ ಇರಬಾರದು. ಹೆಚ್ಚಿನದನ್ನು ತಮ್ಮದಾಗಿಸಿಕೊಳ್ಳುವ ಕುತೂಹಲ ಸದಾ ಜಾಗೃತವಾಗಿರಬೇಕು ಎಂದರು. ಕುಲಸಚಿವೆ ನಾಹಿದಾ ಜಮ್ ಜಮ್, ಮೌಲ್ಯಮಾಪನ ಕುಲಸಚಿವ ಪ್ರೊ.ಕೆ.ಪ್ರಸನ್ನ ಕುಮಾರ್, ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಶೇಖರ್, ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯೋಜಕ…
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ: ತಾಲ್ಲೂಕಿನ ವಡ್ಡಗೆರೆ ಗ್ರಾಮದ 850 ವರ್ಷಗಳ ಇತಿಹಾಸವುಳ್ಳ ಶ್ರೀ ವೀರನಾಗಮ್ಮ ತಾಯಿಯ ಯುಗಾದಿ ಜಾತ್ರಾ ಮಹೋತ್ಸವವು ಲಕ್ಷಾಂತರ ಮಂದಿ ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಪ್ರತಿವರ್ಷ ಯುಗಾದಿ ಮರುದಿನ ನಡೆಯುವ ಶ್ರೀವೀರನಾಗಮ್ಮ ತಾಯಿ ಜಾತ್ರೆಯು ರಥೋತ್ಸವದೊಂದಿಗೆ ವಿಜೃಂಭಣೆಯಿಂದ ನಡೆದಿದೆ. ಈ ವರ್ಷ ದೇವಾಲಯದ ಆಡಳಿತ ಮಂಡಳಿಯಿಂದ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ತೇರಿನ ರಥದಲ್ಲಿ ವೀರನಾಗಮ್ಮ ತಾಯಿ ಮೆರವಣಿಗೆ ವಿಗ್ರಹವನ್ನು ರಥದಲ್ಲಿ ಕೂರಿಸಿ ಸಂಪ್ರಾದಾಯಿಕ ಸಕಲ ಪೂಜೆಗಳನ್ನು ನೆರವೇರಿಸಿದ ಬಳಿಕ ಎಲೆರಾಂಪುರ ಶ್ರೀಮಠದ ಡಾ.ಹನುಮಂತನಾಥ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ತಾಯಿಗೆ ಇಷ್ಟಾರ್ಥಗಳನ್ನು ಸಲ್ಲಿಸುವಂತೆ ಪೂಜೆ ಸಲ್ಲಿಸಿ ಹರಕೆ ತೀರಿಸಿ ಶ್ರೀ ವೀರನಾಗಮ್ಮ ತಾಯಿಯ ರಥ ಎಳೆದು ತಾಯಿಯ ವೈಭವವನ್ನು ಕಣ್ತುಂಬಿಕೊಂಡರು. ಆಗಮಿಸಿದ ಭಕ್ತಾಧಿಗಳಿಗೆ ಆಡಳಿತ ಮಂಡಳಿಯಿಂದ ವಿಶೇಷ ದರ್ಶನ ವ್ಯವಸ್ಥೆ, ಪ್ರಸಾದ ವ್ಯವಸ್ಥೆ ಆಯೋಜನೆ ಮಾಡಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕ ಶಿವಕುಮಾರ್ ಮಾತನಾಡಿ,…
ಸಿಂಧನೂರು: ಮೊಲ ಬೇಟೆಯಾಡಿದ ಮಸ್ಕಿ ಶಾಸಕ ಬಸನಗೌಡ ತುರುವಿಹಾಳ ಅವರ ಪುತ್ರ ಹಾಗೂ ಶಾಸಕರ ಸಹೋದರನ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿದೆ. ತಾಲೂಕಿನ ತುರುವಿಹಾಳ ಪಟ್ಟಣದಲ್ಲಿ ಸೋಮವಾರ ಯುಗಾದಿ ಕರಿ ನಿಮಿತ್ಯ ಬೇಟೆಯಾಡಿದ ಮೊಲವನ್ನು ಹಿಡಿದು ಶಾಸಕರ ಪುತ್ರ ಸತೀಶಗೌಡ ಹಾಗೂ ಅವರ ಸಹೋದರ ಸಿದ್ದನಗೌಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದವು. ಪ್ರಕರಣ ದಾಖಲಿಸುವಂತೆ ಒತ್ತಡ ಕೇಳಿಬಂದ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಡಿಸಿಎಫ್ ಪ್ರವೀಣ್ ಪ್ರಕರಣ ಮಾಡಿದ್ದಾರೆ. ಮೆರವಣಿಗೆಯಲ್ಲಿ ಭಾಗಿಯಾಗಿರುವವರು ಕೂಡ ಇದೀಗ ಕಾನೂನಿನ ಸಂಕಷ್ಟಕ್ಕೆ ಸಿಲುಕಲಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಾಗುವ ಸಾಧ್ಯತೆಗಳಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ಬೆಳಗಾವಿ: ಬಿಜೆಪಿಯ ಉಚ್ಛಾಟಿತ ಶಾಸಕ ಯತ್ನಾಳ್ ಹೊಸ ಪಕ್ಷ ಕಟ್ಟುವುದಾಗಿ ಘೋಷಣೆಮಾಡಿದ್ದರು. ಆದ್ರೆ ಈ ಬಗ್ಗೆ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಹೊಸ ಪಕ್ಷ ಸ್ಥಾಪಿಸುವ ಮಾತುಗಳು ಊಹಾಪೋಹ ಮಾತ್ರ. ಯತ್ನಾಳ ಅವರು ಬಿಜೆಪಿಯನ್ನು ಬಿಟ್ಟುಹೋಗುವುದಿಲ್ಲ, ಪಕ್ಷದಲ್ಲೇ ಮುಂದುವರೆಯುತ್ತಾರೆ ಎಂದು ಹೇಳಿದ್ದಾರೆ. ಯತ್ನಾಳ ಅವರು ಬಿಜೆಪಿಗೆ ವಾಪಸ್ ಬರುತ್ತಾರೆ, ಅವರು ಬೇರೆಡೆಗೆ ಹೋಗುವುದಿಲ್ಲ ಎಂದು ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. ಯತ್ನಾಳ ಅವರು ಹೊಸ ಪಕ್ಷದ ಬಗ್ಗೆ ಹೇಳಿದ್ದ ಉದ್ದೇಶ ವಿಭಿನ್ನವಾಗಿದೆ. ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಅಸಂಗತವಾಗಿವೆ. ಹಿಂದೂತ್ವದ ಆದರ್ಶಗಳಿಗಾಗಿ ಯತ್ನಾಳ ಹೊಸ ಪಕ್ಷ ಕಟ್ಟುವ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆದಿದ್ದವು ಎಂದು ಒಪ್ಪಿಕೊಂಡ ಅವರು, “ಆರ್‌ಎಸ್‌ಎಸ್ ಇರುವಾಗ ಹೊಸ ಪಕ್ಷದ ಅವಶ್ಯಕತೆ ಇಲ್ಲ, ಅಷ್ಟೇ ಸಾಕು ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ತುಮಕೂರು: ಭಕ್ತರ ಪಾಲಿಗೆ ನಡೆದಾಡುವ ದೇವರು ಎನಿಸಿಕೊಂಡಿದ್ದ ಪರಮಪೂಜ್ಯ ಶಿವಕುಮಾರ ಶ್ರೀಗಳ ಜಯಂತೋತ್ಸವ ಇಂದು ಇಡೀ ನಾಡಿನಾದ್ಯಂತ ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಗ್ತಿದೆ. ಅವರು ತೊರಿಸಿಕೊಟ್ಟ ಮಾರ್ಗದರ್ಶನದಂತೆ ಎಲ್ಲರು ನಡೆದುಕೊಳ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಎರಡು ಪ್ರಮುಖ ಹೋರಾಟ ಕೈಗೊಂಡಿದ್ದೇವೆ. ಎರಡು ಹಂತದ ಹೋರಾಟ ನಡೆಸುತ್ತೇವೆ. ರಾಜ್ಯದ ಸರ್ಕಾರದ ನೀತಿ ಖಂಡಿಸಿ, ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುವುದಾಗಿ ಅವರು ತಿಳಿಸಿದರು. ಹಾಲು ಪೆಟ್ರೋಲ್ ನೀರು ವಿದ್ಯುತ್ ದರ ಜಾಸ್ತಿ ಆಗಿದೆ. ಜನ ಸಾಮಾನ್ಯರಿಗೆ ಬರೆ ಎಳೆದಿದ್ದಾರೆ. ಎರಡನೇ ಹಂತದ ಹೋರಾಟ.ಏ 7ಕ್ಕೆ ನಡೆಯಲಿದೆ. ಬೆಲೆ ಏರಿಕೆ ಕುರಿತು ಅಹೋರಾತ್ರಿ ಧರಣಿ ನಡೆಯಲಿದೆ ಎಂದರು. ಎರಡನೇ ಹಂತದ ಹೋರಾಟ ಮುಸ್ಲಿಮರಿಗೆ ಕೊಟ್ಟ ಮೀಸಲಾತಿ ವಿರುದ್ದ ಹಾಗೂ ಎಸ್ಸಿ ಎಸ್ಟಿ ಹಣ ದುರುಪಯೋಗ ಮಾಡಿದುರ ಕುರಿತು ಹೋರಾಟ ಎಂದು ತಿಳಿಸಿದರು. ಮೈಸೂರಿನಿಂದ ಜನ ಆಕ್ರೋಶ…
ತುಮಕೂರು: ರಾಜೇಂದ್ರ ರಾಜಣ್ಣ ಹತ್ಯೆಗೆ ಸುಪಾರಿ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎನ್.ರಾಜಣ್ಣ ತುಮಕೂರಲ್ಲಿ ಪ್ರತಿಕ್ರಿಯಿಸಿದ್ದು, ಸುಫಾರಿ ಪ್ರಕರಣದ ಬಗ್ಗೆ ರಾಜೇಂದ್ರ ಅವರನ್ನೇ ಕೇಳಿ ಎಂದಿದ್ದಾರೆ. ಹನಿಟ್ಯಾಪ್ ಪ್ರಕರಣ ತನಿಖೆಯಾಗುವಾಗ ಮಧ್ಯದಲ್ಲಿ ಏನ್ ಹೇಳೋಕಾಗುತ್ತೆ. ಯಾವುದರಲ್ಲಿ ಮಾಡ್ತಾರೆ ಮಾಡಲಿ ಎಸ್ ಐ ಟಿ ಮಾಡ್ತಾರ ಇನ್ನೊಂದು ಮಾಡ್ತಾರ ಮಾಡಲಿ, ಅದು ಗೃಹಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದರು. ಕೆಲವು ವಿಚಾರಗಳನ್ನ ಹೇಳಲಿಕ್ಕೆ ಆಗೋದಿಲ್ಲ ಆಮೇಲೆ ಹೇಳ್ತೀನಿ ಬನ್ನಿ. ರಾಜೇಂದ್ರ ಹತ್ಯೆ ಸುಫಾರಿ ಆಡಿಯೋ ಪ್ರಕರಣ ಸಂಬಂಧ ಪ್ರಶ್ನೆಗೆ ಉತ್ತರಿಸಿದ ಅವರು, ನೀವೇ ತೋರಿಸಿದ್ದೀರಾ ಎಲ್ಲಾ ಅದರ ಬಗ್ಗೆ ನಾನು ಏನು ಹೇಳೋಕೆ ಆಗೋಲ್ಲ. ಪ್ರಭಾವ ಇದ್ದೋರು ಇದ್ದಾರೋ ಇಲ್ವೋ. ಈ ರೀತಿಯ ಕಾನೂನು ಬಾಹಿರ ಕ್ರಮಗಳಿಗೆ ಯಾರೇ ಪ್ರಯತ್ನ ಮಾಡಿರಲಿ ದೇವರು ಒಳ್ಳೆದು ಮಾಡೋಲ್ಲ ಅನ್ನೋದರ ಜೊತೆಗೆ ಸಾರ್ವಜನಿಕ ಜೀವನದಲ್ಲಿ ಅವರ ಇರಬಾರದು ಎಂದರು. ಯಾರೇ ಆಗಿರಲಿ ನಾನೇ ಆಗಿರಲಿ ಇರಬಾರದು. ನಾನು ಹೇಳೋದು ಬೇರೆಯವರಿಗೋಸ್ಕರ ಅಲ್ಲಾ ನಾನು ಸೇರಿಸಿ…
ಬೆಂಗಳೂರು: ಬೆಲೆ ಏರಿಕೆ ವಿಚಾರವಾಗಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಬಿಜೆಪಿ ಪಕ್ಷದೊಳಗಿನ ಕೋಲಾಹಲವನ್ನು ಮುಚ್ಚಿಹಾಕಲು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ ಅವರು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಹೊರಹಾಕಿದ್ದಾರೆ. ತಮ್ಮ ಪಕ್ಷದೊಳಗಿನ ಕಲಹವನ್ನು ‘ಮುಚ್ಚಿಹಾಕಲು’ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು. ಪ್ರಧಾನಿ ಮೋದಿಯವರ ಆರ್ಥಿಕ ನೀತಿಯಿಂದಾಗಿ ಸಾಮಾನ್ಯ ಜನರ ಜೀವನ ನರಕವಾಗಿದೆ. ಈ ಎಲ್ಲ ಬೆಲೆ ಏರಿಕೆಗೆ ಯಾರು ಹೊಣೆ, ಪ್ರಧಾನಿ ಮೋದಿಯವರ ಮಾಸ್ಟರ್ ಸ್ಟ್ರೋಕ್ ನಿಂದ ಆರ್ಥಿಕತೆ ಕುಸಿದಿದೆ. ಅದಾನಿ ಅಂಬಾನಿಯಿಂದಾಗಿಯೇ ಪರಿಸ್ಥಿತಿ ಹೀಗಿದೆ ಎಂದು ಆರೋಪಿಸಿದರು. ಬಜೆಟ್ ಬಗ್ಗೆ ಚರ್ಚೆ ಏಕೆ ನಡೆಯಲಿಲ್ಲ, ಸಿದ್ದರಾಮಯ್ಯ ಅವರು 4 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ಅದನ್ನು ಎಳೆ ಎಳೆಯಾಗಿ ಬಿಚ್ಚಬಹುದಿತ್ತು. ಆದರೆ, ಇಂದು ವಿಜಯೇಂದ್ರ ಮತ್ತು ಯತ್ನಾಳ್ ನಡುವಿನ ಜಗಳವನ್ನು ಮುಚ್ಚಿಹಾಕಲು ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರಲ್ಲಿ…
ತುಮಕೂರು: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು, ಮೊದಲಿಗೆ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ಭೇಟಿ ನೀಡಿ ದರ್ಶನ ಪಡೆದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4
ಇಂದು ಏಪ್ರಿಲ್ 1. ಪ್ರತಿ ವರ್ಷವೂ ಏಪ್ರಿಲ್ 1ನ್ನು ಮೂರ್ಖರ ದಿನಾಚರಣೆಯಾಗಿ ಆಚರಿಸುತ್ತಾರೆ. ಏಪ್ರಿಲ್ ಫೂಲ್ ಯಾಕೆ ಆಚರಿಸುತ್ತಾರೆ ಎನ್ನುವುದಕ್ಕೆ ಒಬ್ಬೊಬ್ಬರೂ ಒಂದೊಂದು ಕಾರಣಗಳನ್ನು ನೀಡುತ್ತಾರೆ. ಆದ್ರೆ ತಮಾಷೆಯ ಪ್ರಜ್ಞೆ ಬೆಳೆಸಲು ಈ ದಿನ ಬಳಕೆಯಾಗುತ್ತಿದೆ. ಕೆಲವೊಮ್ಮೆ ತಮಾಷೆಗಳು ಅತಿರೇಕಕ್ಕೆ ಹೋದರೆ, ದುಃಖಕರ ಸನ್ನಿವೇಶಗಳನ್ನೂ ಎದುರಿಸುವಂತಹ ಸನ್ನಿವೇಶಗಳು ಪ್ರತಿ ವರ್ಷವೂ ಸಂಭವಿಸುತ್ತಲೇ ಇರುತ್ತದೆ. ಏಪ್ರಿಲ್ ಫೂಲ್ ಕೇವಲ ಒಂದು ದಿನದ ತಮಾಷೆಯ ದಿನ. ಆದ್ರೆ ನಾವು ಪ್ರತಿ ದಿನವೂ ಯಾವುದಾದರೂ ಒಂದು ವಿಷಯದಲ್ಲಿ ಫೂಲ್ ಆಗುತ್ತಲೇ ಇರುತ್ತೇವೆ. ನಾವು ಬೇರೆಯವರ ಮೇಲೆ ವಿಶ್ವಾಸ ನಂಬಿಕೆ ಇಟ್ಟಿರುತ್ತೇವೆ. ಆದರೆ ಅವರು ತಮ್ಮ ಸ್ವಾರ್ಥಕ್ಕೆ ನಮ್ಮ ನಂಬಿಕೆಗಳನ್ನು ಬಲಿ ಕೊಡುತ್ತಾರೆ. ಸುಳ್ಳು ಹೇಳುತ್ತಾರೆ. ಯಜಮಾನನ ಮೇಲೆ ನಿಷ್ಠೆಯಿಂದ ಕೆಲಸ ಮಾಡುವ ಕೆಲಸಗಾರ, ಕೆಲಸಗಾರನ ಮೇಲೆ ನಂಬಿಕೆ ಇಡುವ ಯಜಮಾನ, ಮಕ್ಕಳ ಮೇಲೆ ನಂಬಿಕೆ ಇಡುವ ಪೋಷಕರು, ಪೋಷಕರ ಮೇಲೆ ನಂಬಿಕೆ ಇಡುವ ಮಕ್ಕಳು, ಸ್ನೇಹಿತರ ಮೇಲೆ ನಂಬಿಕೆ ಇಡುವ ಸ್ನೇಹಿತರು ಹೀಗೆ ನಂಬಿಕೆಗಳ ಮೇಲೆ…