Author: admin

ಬೆಂಗಳೂರು: ಒಂದನೇ ತರಗತಿ ಶಾಲಾ ಪ್ರವೇಶ ವಯೋಮಿತಿಯನ್ನು ರಾಜ್ಯ ಶಿಕ್ಷಣ ನೀತಿ (SEP)ಆಯೋಗದ ಶಿಫಾರಸಿನಂತೆ ನಿಗದಿಪಡಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶನಿವಾರ ಹೇಳಿದ್ದಾರೆ. 1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ವಯೋಮಿತಿ ಸಡಿಲಿಕೆ ನೀಡುವಂತೆ ಹಲವು ಪೋಷಕರ ಮನವಿಯ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು. ಇದು ಹಿಂದಿನ ಸರ್ಕಾರ ಮಾಡಿದ ತಪ್ಪಾಗಿದೆ. ಅವರು ರಾಷ್ಟ್ರೀಯ ಶಿಕ್ಷಣ ನೀತಿ ಮಾರ್ಗಸೂಚಿ ರೂಪಿಸಿದ್ದಾರೆ. ನಾವು ಅದರ ವಿರುದ್ಧವಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಶಿಕ್ಷಣ ನೀತಿ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಒಂದು ಊರಿನಲ್ಲಿ ಒಬ್ಬ ಅಗಸ ಒಂದು ಕತ್ತೆ ಸಾಕಿದ್ದನು.  ಅದನ್ನು ಬಟ್ಟೆಗಳನ್ನು ಹೇರಿಕೊಂಡು ನದಿಗೆ ಹೋಗಿ ಒಗೆದು, ಒಣಗಿಸಿ ಮತ್ತೆ ಹೇರಿಕೊಂಡು ಊರಿಗೆ ಬರಲು ಉಪಯೋಗಿಸುತ್ತಿದ್ದನು. ದಿನಾಲೂ ಬಟ್ಟೆತೂಕ ಹೊರುವುದೇ ಅದರ ಕಾಯಕವಾಗಿತ್ತು. ಒಂದು ದಿನ ರಾತ್ರಿ ಕತ್ತೆ ಮಲಗಿಕೊಂಡು ಹೀಗೆ ಯೋಚಿಸುತ್ತಿತ್ತು. ಈ ಅಗಸ ನನಗೆ ದಿನಾಲೂ ತೂಕ ಹೊರಿಸುತ್ತಾನೆ, ನನಗೂ ತೂಕ ಹೊತ್ತೂ ಹೊತ್ತೂ ಸಾಕಾಗಿ ಹೋಗಿದೆ. ಹೇಗಾದರೂ ಮಾಡಿ ಇವನಿಂದ ತಪ್ಪಿಸಿಕೊಂಡು ಹೋಗಬೇಕಲ್ಲ, ನಾನು ಸ್ವತಂತ್ರ್ಯವಾಗಿ ಬದುಕಬೇಕು ಎಂದುಕೊಂಡು ಸಮಯಕ್ಕಾಗಿ ಕಾಯುತ್ತಿತ್ತು. ಒಂದು ದಿನ ಅಗಸನನ್ನು ನದಿ ಬಳಿ ಬಿಟ್ಟು ಮೇಯಲು ಸ್ವಲ್ಪದೂರವಿದ್ದ ಕಾಡಿಗೆ ಹೋಯಿತು ಅದರ ಎದುರು ನರಿಯೊಂದು ಬಂದಿತು. ನರಿಯನ್ನು ನೋಡಿ ಕತ್ತೆ ಇದರ ಉಪಾಯ ಪಡೆದರೆ ಹೇಗೆ ಎಂದುಕೊಂಡು ನರಿಯನ್ನು ಕರೆದು ತನ್ನ ಕಷ್ಟವನ್ನೆಲ್ಲಾ ಹೇಳಿಕೊಂಡು ಒಂದು ಉಪಾಯ ನೀಡುವಂತೆ ಕೇಳಿಕೊಂಡಿತು. ನರಿಗೆ ಹಿಂದೆ ಚಿರತೆಯೊಂದು ತನಗಿಷ್ಟವಾದ ಊರಿನ ಕತ್ತೆಯೊಂದನ್ನು ಊಟಕ್ಕಾಗಿ ತಂದು ಕೊಟ್ಟರೆ ನರಿಗೆ ಪ್ರತಿಯಾಗಿ ನರಿ ಕೇಳಿದ ಬೇಟೆಯೊಂದನ್ನು ಮಾಡಿ…

Read More

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಒಂದೆಡೆಯಾದರೆ, ಇನ್ನೊಂದೆಡೆ ಯುಗಾದಿ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದೆ. ಹಾಲು, ಹೂವು, ಹಣ್ಣು, ತರಕಾರಿ ಸೇರಿದಂತೆ ಮತ್ತಿತರ ದಿನೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಬಾರಿ ಬೆಲೆ ಏರಿಕೆಯೊಂದಿಗೆ ಜನ ಯುಗಾದಿ ಹಬ್ಬ ಆಚರಿಸುತ್ತಿದ್ದಾರೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ. ಇದು ಭರವಸೆ ಮತ್ತು ಜೀವನೋತ್ಸಾಹದೊಂದಿಗೆ ಸಂಬಂಧ ಹೊಂದಿರುವ ವಿಶೇಷ ಹಬ್ಬವಾಗಿದೆ. ಸಂತೋಷ ಮತ್ತು ಸಾಮರಸ್ಯದ ಮನೋಭಾವ ಬೆಳೆಯಲಿ ಮತ್ತು ಅರಳಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ನಾಡಿನೆಲ್ಲೆಡೆ ವಿಶ್ವಾವಸು ಸಂವತ್ಸರದ ಆಚರಣೆ, ಹಬ್ಬದ ಸಂಭ್ರಮ ನೋವು – ನಲಿವು, ಸೋಲು – ಗೆಲುವು, ಕಷ್ಟ – ಸುಖಗಳ…

Read More

ತುಮಕೂರು: ನಮ್ಮ ತಂದೆ ಕಾಲದ ರಂಗಭೂಮಿ ಇಂದು ನೋಡಲು ಸಾಧ್ಯವಿಲ್ಲ. ಇಂದಿನ ರಂಗಭೂಮಿಯಲ್ಲಿ ಬರೀ ಭಾವನೆಗಳನ್ನು ಸರಮಾಲೆಯಲ್ಲಿಯೇ ಹಿಡಿದಿಡಲಾಗುತ್ತಿದೆ. ಅಂತಹ ರಂಗಭೂಮಿ ಬೆಳೆದು ನಿಲ್ಲುವುದಾದರೂ ಹೇಗೆ? ಎಂಬ ಬೃಹದಾಕಾರದ ಪ್ರಶ್ನೆಗಳು ಹೆಮ್ಮರವಾಗಿ ಬೆಳೆಯುತ್ತಿರುವುದಕ್ಕೆ ಈ ಹೊತ್ತಿನ ಕುಟುಂಬಗಳೇ ಸಾಕ್ಷಿಎಂದು ಸಿಂಡಿಕೇಟ್ ಸದಸ್ಯರು ಹಾಗೂ ಹಿರಿಯ ಪ್ರಾಧ್ಯಾಪಕರು ಆಗಿರುವ ತುಮಕೂರು ವಿಶ್ವವಿದ್ಯಾನಿಲಯದಪ್ರೊ. ಪರಶುರಾಮ ಕೆ.ಜಿ. ಹೇಳಿದರು. ತುಮಕೂರಿನ ಸದಾಶಿವನಗರದಲ್ಲಿರುವ ಬೆಳ್ಳಿ ರಂಗ ಮನೆಯಲ್ಲಿ ಶ್ರೀ ರಂಗರಂಗ ಹವ್ಯಾಸಿ ಕಲಾವೃಂದ ಟ್ರಸ್ಟ್, ತುಮಕೂರು, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಮಕೂರು ಇವರುಗಳ ಸಹಕಾರದಲ್ಲಿ 27 ಮಾರ್ಚ್ 2025 ರಂದುಗುರುವಾರ ಸಂಜೆ 4 ಗಂಟೆಗೆ ಏರ್ಪಡಿಸಿದ್ದ “ವಿಶ್ವರಂಗಭೂಮಿ ದಿನಾಚರಣೆ” ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಖಾಸಗೀಕರಣ, ಉದಾರೀಕರಣದ ಸಂದರ್ಭದಲ್ಲಿ ಬದುಕುತ್ತಿರುವ ನಾವುಗಳು ರಂಗಭೂಮಿಯನ್ನು ವ್ಯವಹಾರೀಕರಣವಾಗಿಸುತ್ತಿರುವ ನಮ್ಮ ಕಲಾವಿದರು ಬೆಳೆಯುವುದಾದರೂ ಹೇಗೆ? ಎಂದು ಪ್ರಶ್ನಸಿದರು. ಇದಕ್ಕೆ ಕಾರಣಗಳು ಬೇಕಾದಷ್ಟಿರಬಹುದು. ಆದರೆ ನೈಜವಾದ ನಾಟಕಗಳ ಪ್ರಯೋಗ ನೀಡಿದ/ನೋಡಿದ ಗುಬ್ಬಿ ಕಂಪನಿಯಾಗಲಿ, ಸುಬ್ಬಯ್ಯನಾಯ್ಡು ಕಂಪನಿಯಾಗಲಿ, ಆರ್. ನಾಗರತ್ನಮ್ಮನವರ ಕಂಪನಿಯಾಗಲಿ, ಹಿರಣ್ಣಯ್ಯ…

Read More

ತುಮಕೂರು: ಜಿಲ್ಲೆಯಲ್ಲಿ 2024ರ ಜನವರಿಯಿಂದ ಈವರೆಗೆ 141 ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 176 ಸಂತ್ರಸ್ತರಿಗೆ 1,19,13,500 ರೂ.ಗಳ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕಳೆದ ಕ್ಯಾಲೆಂಡರ್ ವರ್ಷದ ಜನವರಿ ಮಾಹೆಯಿಂದ 2025ರ ಮಾರ್ಚ್ 27ರವರೆಗೆ ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 112 ಪ್ರಕರಣಗಳಲ್ಲಿ 140 ನೊಂದ ಪರಿಶಿಷ್ಟ ಜಾತಿಯ ಸಂತ್ರಸ್ತರಿಗೆ 97,38,500 ರೂ. ಹಾಗೂ 29 ಪ್ರಕರಣಗಳಲ್ಲಿ 36 ಪರಿಶಿಷ್ಟ ವರ್ಗದ ಸಂತ್ರಸ್ತರಿಗೆ 21,75,000 ರೂ.ಗಳ ಪರಿಹಾರವನ್ನು ಮಂಜೂರು ಮಾಡಲಾಗಿದೆ ಎಂದು ಸಭೆಯಲ್ಲಿ ಹಾಜರಿದ್ದ ದಲಿತ ಮುಖಂಡರ ಗಮನಕ್ಕೆ ತಂದರು. ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಈವರೆಗೂ 300ಕ್ಕೂ ಹೆಚ್ಚು ದಲಿತ ದೌರ್ಜನ್ಯ ಪ್ರಕರಣಗಳು ವರದಿಯಾಗಿರುವುದಲ್ಲದೆ, ದಿನೇ ದಿನೇ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದರಿಂದ ದಲಿತರ ದೌರ್ಜನ್ಯ ಪ್ರಕರಣಗಳು ವರದಿಯಾದಾಗ ಪೊಲೀಸ್ ಅಧಿಕಾರಿಗಳು ತಕ್ಷಣವೇ…

Read More

ತುಮಕೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಗೆಮಲ್ಲಿಗೆ ಬಳಗದ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 1ರಂದು ಸಂಜೆ 4 ಗಂಟೆಗೆ ನಗರದ ಕನ್ನಡಭವನದಲ್ಲಿ 30ನೇ ವರ್ಷದ “ಮೂರ್ಖರ ದಿನಾಚರಣೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಭವನದಲ್ಲಿ ನಿರ್ಮಿಸಲಾಗುವ ಹಾಸ್ಯ ಸಾಹಿತಿ ಗೌಡನಕಟ್ಟೆ ತಿಮ್ಮಯ್ಯ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗೆಮಲ್ಲಿಗೆ ಬಳಗದ ಅಧ್ಯಕ್ಷೆ ಬಾ.ಹ. ರಮಾಕುಮಾರಿ ವಹಿಸಲಿದ್ದು, ಸಂಸ್ಕಾರ ಭಾರತಿ ಅಧ್ಯಕ್ಷ ಬಿ.ಆರ್.ನಟರಾಜ ಶೆಟ್ಟಿ ಉದ್ಘಾಟಿಸುವರು. ಜಿಲ್ಲಾ ಕಸಾಪ ಕೊಡಮಾಡುವ ಗೌ.ತಿ.ದತ್ತಿ ಪ್ರಶಸ್ತಿಯನ್ನು ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಪ್ರದಾನ ಮಾಡುವರು. ದಿನಾಚರಣೆ ಪ್ರಯುಕ್ತ ಡಾ: ಬಿ.ಸಿ. ಶೈಲಾನಾಗರಾಜ್ ಅವರ ಉಪಸ್ಥಿತಿಯಲ್ಲಿ ಹಾಸ್ಯ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ಜಿ.ಕೆ.ಕುಲಕರ್ಣಿ, ಸುಮ ಬೆಳಗೆರೆ, ಓಂಕಾರಪ್ರಿಯ ಬಾಗೇಪಲ್ಲಿ, ಕಮಲಾರಾಜೇಶ್, ಸಿಹಿಜೀವಿ ವೆಂಕಟೇಶ್ವರ, ಅಬ್ಬಿನಹೊಳೆ ಸುರೇಶ್, ತುರುವೇಕೆರೆ ಪ್ರಸಾದ್, ಸಂಕೇತ್ ಗುರುದತ್ತ, ಅರುಣಕುಮಾರ್ ಕಲ್ಲೂರು, ಇಂದಿರಾ ಸಿ.ಎ. ಸೇರಿದಂತೆ ಹಲವಾರು ಕವಿಗಳು ಭಾಗವಹಿಸಲಿದ್ದಾರೆ. ಹಿರೇಮಗಳೂರು ಕಣ್ಣನ್ ಆಕರ್ಷಣೆ: ನಂತರ, ಹರಟೆ ಖ್ಯಾತಿಯ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಮತ್ತು…

Read More

ತುಮಕೂರು: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ 21 ರಿಂದ 24 ವರ್ಷದೊಳಗಿನ ನಿರುದ್ಯೋಗಿ ಯುವಕ/ಯುವತಿಯರಿಗೆ 1 ವರ್ಷದ ಇಂಟರ್ನ್ಶಿಪ್ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ತರಬೇತಿ ಪಡೆಯಲಿಚ್ಛಿಸುವವರು ಮಾರ್ಚ್ 31ರೊಳಗಾಗಿ www.pminternship.mca.gov.in ಪೋರ್ಟಲ್ನಲ್ಲಿ ಅಗತ್ಯ ದಾಖಲೆಗಳೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ತಿಳಿಸಿದ್ದಾರೆ. ಎಸ್.ಎಸ್.ಎಲ್.ಸಿ./ ಐಟಿಐ/ ದ್ವಿತೀಯ ಪಿಯುಸಿ/ ಬಿಎ/ ಬಿಎಸ್ಸಿ/ ಬಿ.ಕಾಂ/ ಬಿಸಿಎ/ ಬಿಬಿಎ/ಬಿ–ಫಾರ್ಮ ವಿದ್ಯಾರ್ಹತೆ ಹೊಂದಿರುವವರು ತರಬೇತಿಗೆ ಅರ್ಹರಿರುತ್ತಾರೆ. ತರಬೇತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 1.25ಲಕ್ಷ ರೂ.ಗಳ ಮಿತಿಯೊಳಗಿರಬೇಕು. ಕುಟುಂಬ ಸದಸ್ಯರಲ್ಲಿ ಯಾವುದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಿ/ ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿ ಖಾಯಂ ನೌಕರರಾಗಿರಬಾರದು. ತರಬೇತಿ ಅವಧಿಯಲ್ಲಿ ಮಾಸಿಕ 5,000 ರೂ.ಗಳ ಕಲಿಕಾ ವೇತನ ನೀಡಲಾಗುವುದು. ಇಂಟರ್ನ್ಶಿಪ್ ಪೂರ್ಣಗೊಂಡ ನಂತರ ಅರ್ಹತೆ ಆಧಾರದ ಮೇಲೆ 6,000 ರೂ.ಗಳನ್ನು ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಸಂದಾಯ ಮಾಡಿ ಪ್ರಮಾಣ ಪತ್ರ ವಿತರಣೆ ಮಾಡಲಾಗುವುದು. ಉದ್ಯೋಗಾವಕಾಶ ಕಲ್ಪಿಸಿಕೊಳ್ಳಲು ಈ ತರಬೇತಿ ಉಪಯೋಗವಾಗಲಿದೆ ಎಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ…

Read More

ತುಮಕೂರು: ಜಿಲ್ಲೆಯ 11 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿಯಿದ್ದ 71 ಅಂಗನವಾಡಿ ಕಾರ್ಯಕರ್ತೆ, 18 ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ 214 ಅಂಗನವಾಡಿ ಸಹಾಯಕಿಯರ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ಏಪ್ರಿಲ್ 7 ಕಡೆಯ ದಿನವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಿ ಸದರಿ ಪಟ್ಟಿಯನ್ನು ಸಂಬಂಧಿಸಿದ ಅಂಗನವಾಡಿ ಕೇಂದ್ರ, ಗ್ರಾಮ ಪಂಚಾಯತಿ, ವಾರ್ಡ್, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ ಇತ್ಯಾದಿ ಸ್ಥಳ ಹಾಗೂ ಜಿಲ್ಲಾಡಳಿತದ ಜಾಲತಾಣ https://tumkur.nic.in ನಲ್ಲಿ ಪ್ರಕಟಿಸಲಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಏಪ್ರಿಲ್ 7ರೊಳಗಾಗಿ ಆಯಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…

Read More

ತುಮಕೂರು: ಕೊರಟಗೆರೆ ತಾಲ್ಲೂಕು ಸಿ.ಎನ್.ದುರ್ಗ ಹೋಬಳಿ ಬೂದಗವಿ ಸಿದ್ದರಬೆಟ್ಟ ಶ್ರೀ ಸಿದ್ದೇಶ್ವರಸ್ವಾಮಿ ದೇವಸ್ಥಾನದ ದಾಸೋಹ ನಿಲಯದ ಉಗ್ರಾಣದಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗಿರುವ ಅಕ್ಕಿ, ಬೆಲ್ಲ, ಹುಣಸೇಹಣ್ಣು, ತೆಂಗಿನಕಾಯಿ ಹಾಗೂ ರಾಗಿಯನ್ನು ಏಪ್ರಿಲ್ 3ರಂದು ಬೆಳಿಗ್ಗೆ 11 ಗಂಟೆಗೆ ಬಹಿರಂಗ ಹರಾಜು ಮಾಡಲಾಗುವುದು. ಹರಾಜು ಪ್ರಕ್ರಿಯೆಯನ್ನು ಕೊರಟಗೆರೆ ತಾಲ್ಲೂಕು ತಹಶೀಲ್ದಾರ್ ಅವರ ಸಮಕ್ಷಮದಲ್ಲಿ ದೇವಾಲಯದ ದಾಸೋಹ ಭವನದ ಆವರಣದಲ್ಲಿ ನಡೆಸಲಾಗುವುದು. ಹರಾಜಿನಲ್ಲಿ ಭಾಗವಹಿಸುವವರು 10,000 ರೂ.ಗಳ ಮುಂಗಡವನ್ನು ಪಾವತಿಸಬೇಕು. ಹೆಚ್ಚಿನ ಮಾಹಿತಿ ಹಾಗೂ ನಿಬಂಧನೆಗಳಿಗಾಗಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ತುಮಕೂರು: 21 ನೇ ಶತಮಾನದಲ್ಲಿದ್ದರೂ ನಮ್ಮ ದೇಶವು ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿಲ್ಲ. ಏಕೆಂದರೆ ಭಾರತದ ಕೆಲವು ಭಾಗಗಳಲ್ಲಿ ಈಗಲೂ ಮಹಿಳೆಯರಿಗೆ ದೇವಾಲಯ ಪ್ರವೇಶ ನಿರಾಕರಿಸಲಾಗಿದೆ ಎಂದು ಲೇಖಕಿ ಡಾ.ಹೆಚ್.ಎಸ್.ಅನುಪಮಾ ಅಭಿಪ್ರಾಯಪಟ್ಟರು. ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಸಮಾಜಕಾರ್ಯ ವಿಭಾಗ ಹಾಗೂ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು. ಭಾರತದ ಹಲವಾರು ಭಾಗಗಳಲ್ಲಿ, ಸಾಂಪ್ರದಾಯಿಕ ನಂಬಿಕೆಗಳಿಂದಾಗಿ, ವಿಶೇಷವಾಗಿ ಮುಟ್ಟಿನ ಸಮಯದಲ್ಲಿ, ಮಹಿಳೆಯರಿಗೆ ಇನ್ನೂ ದೇವಾಲಯಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಅಂತಹ ನಿರ್ಬಂಧಗಳು ಲಿಂಗ ಅಸಮಾನತೆಯ ವಿಶಾಲ ಸಮಸ್ಯೆಯನ್ನು ಪ್ರತಿಬಿಂಬಿಸುತ್ತವೆ. ಪ್ರತಿ 29 ನಿಮಿಷಗಳಿಗೊಮ್ಮೆ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತದೆ ಮತ್ತು ಪ್ರತಿ ಒಂಬತ್ತು ನಿಮಿಷಗಳಿಗೊಮ್ಮೆ ದೈಹಿಕ ಹಲ್ಲೆಗಳು ಸಂಭವಿಸುತ್ತವೆ. ಮಹಿಳೆಯರ ವಿರುದ್ಧದ ಅಪರಾಧಗಳು ಗಂಭೀರ ಕಳವಳ ಮೂಡಿಸಿವೆ ಎಂದರು. ನಾಯಕತ್ವದ ಪಾತ್ರಗಳಲ್ಲಿ ಮಹಿಳೆಯರ ಕಡಿಮೆ ಪ್ರಾತಿನಿಧ್ಯವನ್ನು ಉದ್ದೇಶಿಸಿ ಮಾತನಾಡಿದ ಅನುಪಮಾ, ಭಾರತೀಯ ಸಂಸತ್ತಿನಲ್ಲಿ ಕೇವಲ ಶೇ.13 ಸದಸ್ಯರು ಮಹಿಳೆಯರಾಗಿದ್ದರೆ, ಕರ್ನಾಟಕದ ರಾಜ್ಯ ವಿಧಾನಸಭೆಯಲ್ಲಿ ಶೇ.3ರಷ್ಟು ಮಾತ್ರ ಇದ್ದಾರೆ ಎಂದರು.…

Read More