Author: admin

ತುಮಕೂರು:   ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಜಿಲ್ಲೆಯ ಗುಬ್ಬಿ ತಾಲ್ಲೂಕು ಕಸಬ ಹೋಬಳಿ ಜಿ.ಹೊಸಹಳ್ಳಿ ಗ್ರಾಮದ ಬಳಿ ನೂತನವಾಗಿ ನಿರ್ಮಾಣ ಮಾಡುವ 110/11ಕೆವಿ ಉಪಸ್ಥಾವರಕ್ಕೆ ಮಾರ್ಚ್ 7 ಅಥವಾ ತದನಂತರ ಹಾಲಿ ಇರುವ 110ಕೆವಿ ನಿಟ್ಟೂರು–ಕೆ.ಜಿ.ಟೆಂಪಲ್ ಏಕಮುಖ ವಿದ್ಯುತ್ ಮಾರ್ಗದಿಂದ 5.771 ಕಿಮೀ ಉದ್ದದ ದ್ವಿಮುಖ ಗೋಪುರಗಳ ಮೇಲೆ ಲಿಲೋ ವಿದ್ಯುತ್ ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಲಾಗುವುದು. ಸಾರ್ವಜನಿಕರು ಈ ಉಪಸ್ಥಾವರದ ಗೋಪುರವನ್ನು ಹತ್ತುವುದು, ಲೋಹದ ತಂತಿ, ಹಸಿರು ಬಳ್ಳಿ, ಕೊಂಬೆ, ಮತ್ತಿತರ ವಸ್ತುಗಳನ್ನು ಪ್ರಸರಣ ಮಾರ್ಗಕ್ಕೆ ಎಸೆಯುವುದು, ದನ–ಕರು ಮತ್ತಿತರ ಜಾನುವಾರುಗಳನ್ನು ವಿದ್ಯುತ್ ಗೋಪುರಕ್ಕೆ ಕಟ್ಟುವುದನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ನಿರ್ಬಂಧಿತ ಚಟುವಟಿಕೆಗಳನ್ನು ನಡೆಸಿ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ನಿಗಮವು ಯಾವುದೇ ರೀತಿಯಲ್ಲಿ ಜವಾಬ್ದಾರಿಯಾಗಿರುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ. ಈ ಪ್ರಸರಣ ಮಾರ್ಗವು ಜಿಲ್ಲೆಯ ಗುಬ್ಬಿ ತಾಲ್ಲೂಕು ಕಸಬಾ ಹೋಬಳಿ ಸುರಿಗೇನಹಳ್ಳಿ ಕಾವಲ್, ಕೊನೆಮಾದೇನಹಳ್ಳಿ, ಕಟ್ಟಿಗೇನಹಳ್ಳಿ ಮತ್ತು ಜಿ. ಹೊಸಹಳ್ಳಿ ಗ್ರಾಮಗಳ ಸರಹದ್ದಿನಲ್ಲಿ ಹಾದುಹೋಗಿದೆ ಎಂದು ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ…

Read More

ತುಮಕೂರು:  ನೀರುಗಂಟಿ(ನೀರು ಸರಬರಾಜು ನೌಕರರು)ಗಳ ಮುಷ್ಕರದಿಂದ ಕಳೆದ 3 ದಿನಗಳಿಂದ ನಗರದಲ್ಲಿ ಉಲ್ಬಣಗೊಂಡಿದ್ದ ನೀರಿನ ತೀವ್ರ ಸಮಸ್ಯೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಬುಧವಾರ ರಾತ್ರಿ 8:30 ಗಂಟೆಗೆ 26ನೇ ವಾರ್ಡು ಅಶೋಕ್‌ ನಗರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ನಿವಾಸಿಗಳಿಂದ ನೀರಿನ ಸಮಸ್ಯೆ ಕುರಿತು ಅಹವಾಲುಗಳನ್ನು ಆಲಿಸಿದ ಅವರು ತಕ್ಷಣದ ಪರಿಹಾರವಾಗಿ ಒಂದು ದಿನದ ಮಟ್ಟಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನಿರ್ದೇಶನ ನೀಡಿದರು. ನೀರು ಸರಬರಾಜು ನೌಕರರ ಮುಷ್ಕರದಿಂದ ನೀರಿನ ಸಮಸ್ಯೆ ಉಂಟಾಗಿದೆ. ಇನ್ನು ಮುಂದೆ ಎಂದಿನಂತೆ ನೀರು ಸರಬರಾಜು ಮಾಡಲಾಗುವುದು ಎಂದು ಸ್ಥಳೀಯ ನಿವಾಸಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಮಾಧಾನದ ಮಾತುಗಳನ್ನು ಹೇಳಿದರು. ಸ್ವಚ್ಛತೆ ಇಲ್ಲದಿರುವುದರಿಂದ ವಿಷಜಂತುಗಳ ಸಮಸ್ಯೆಯನ್ನು ಎದುರಿಸುತ್ತಿದ್ದು, ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಮನವಿ ಮಾಡಿದಾಗ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಜನರು ವಾಸಿಸುವ ಸ್ಥಳದ ಸುತ್ತಮುತ್ತ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕೆಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ…

Read More

ಬೀದರ್: ಭಾಲ್ಕಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ಸುಗಮ ಸಂಚಾರ ಒದಗಿಸುವ ನಿಟ್ಟಿನಲ್ಲಿ ವಳಂಡಿ–ಹೈದ್ರಾಬಾದ್ (ಆಳವಾಯಿ, ಮೆಹಕರ್, ಸಾಯಿಗಾವ್) ಹಾಗೂ ಭಾಲ್ಕಿ–ಉದಗೀರ್ (ಸೋಂಪುರ, ಅತನೂರ್, ಲಖನಗಾವ್) ಮಾರ್ಗದ ಹೊಸ ಬಸ್ ಸೇವೆಗೆ ಬೀದರ ಲೋಕಸಭಾ ಕ್ಷೇತ್ರದ ಸಂಸದ ಸಾಗರ್ ಖಂಡ್ರೆ  ಹಸಿರು ನಿಶಾನೆ ತೋರಿದ್ದಾರೆ. ಈ ಸೇವೆಯಿಂದ ಪ್ರಯಾಣ, ಉದ್ಯೋಗ, ಶಿಕ್ಷಣ ಹಾಗೂ ಆರೋಗ್ಯ ಸಂಬಂಧಿತ ಸಂಚಾರ ಸುಗಮಗೊಳ್ಳಲಿದೆ. ಸಾರ್ವಜನಿಕರು ಇದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಸಾಗರ್ ಖಂಡ್ರೆ  ವಿನಂತಿಸಿದರು. ವರದಿ: ಅರವಿಂದ ಮಲ್ಲಿಗೆ,  ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಬೀದರ್: ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ  ನಡೆಯುತ್ತಿದ್ದ ಚಾಂಪಿಯನ್ಸ್ ಟ್ರೋಫಿ–2025 ಪಂದ್ಯದ  ವೇಳೆ ಸಾರ್ವಜನಿಕರಿಂದ ಹಣ ಪಡೆದುಕೊಂಡು ಕ್ರಿಕೆಟ್ ಆಟದ ಮೇಲೆ ಕಾನೂನು ಬಾಹಿರವಾಗಿ ಬೆಟ್ಟಿಂಗ್ ಕಟ್ಟಿಕೊಂಡು ಹಣ ಪಡೆಯುತ್ತಿದ್ದ ಅಡ್ಡೆ ಮೇಲೆ ಬೀದರ್ ಸೆನ್ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ವಾಹನ ಹಾಗೂ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ನಿರ್ದೇಶನದಂತೆ ಬೀದರ್  ಸೆನ್ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ  ಎನ್.ಡಿ ಸನಾದಿ ಅವರ ನೇತೃತ್ವದಲ್ಲಿ  ದಾಳಿ ನಡೆಸಲಾಯಿತು. ಬೆಟ್ಟಿಂಗ್ ನಲ್ಲಿ ನಿರತರಾಗಿದ್ದ ಆರೋಪಿಗಳಿಂದ 17 ಸಾವಿರ ರೂ. ನಗದು, 2 ಮೊಬೈಲ್ ಹಾಗೂ 1 ಕಾರು ಸೇರಿದಂತೆ ಒಟ್ಟು 10,41,000 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಯಿತು. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ   ಸಿದ್ರಾಮೇಶ,  ಪ್ರಶಾಂತ,  ಸಂಜುಕುಮಾರ ಭಾಗವಹಿಸಿದ್ದರು.  ಬೆಟ್ಟಿಂಗ್ ಜೂಜಾಟದ ಮೇಲೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯ…

Read More

ಕೊರಟಗೆರೆ : ಪಟ್ಟಣದ ಶಿವಗಂಗಾ ಚಿತ್ರಮಂದಿರದ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮಯೂರ ಬೇಕರಿ ಮತ್ತು ಸ್ವೀಟ್ಸ್ ಅಂಗಡಿಯಲ್ಲಿ ತಯಾರಿಸಿದ ಪದಾರ್ಥಗಳು ಕಳಪೆಯಿಂದ ಕೂಡಿದ್ದು ಹಳಸಿದ ಎಗ್ ರೋಲ್ ಗ್ರಾಹಕರಿಗೆ ನೀಡಿದ್ದಾರೆ ಎಂದು ಭೀಮ್ ಆರ್ಮಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ನವೀನ್ ಕುಮಾರ್ ರವರು ದೂರು ನೀಡಿರುವ ಘಟನೆ ನಡೆದಿದೆ. ದಿನಾಂಕ 3 ಮಾರ್ಚ್ ರಂದು ಸಂಜೆ 8:30 ರ ವೇಳೆಯಲ್ಲಿ ನಾನು ಊರಿಗೆ ಸಮಯದಲ್ಲಿ ಮಕ್ಕಳಿಗೆ ಹಾಗೂ ನನಗೆ ಸದರಿ ಬೇಕರಿಯಲ್ಲಿ ಎಗ್ ರೋಲ್  ಅನ್ನು ಖರೀದಿಸಿ ಮನೆಗೆ ಪಟ್ಟಣ ಕಟ್ಟಿಸಿಕೊಂಡು ಹೋಗಿ ಮಕ್ಕಳಿಗೆ ನೀಡಿ ಹಾಗೂ ನಾನು ತಿನ್ನಲು ಹೋದಾಗ ಈ ಆಹಾರದಿಂದ ಕೊಳೆತ ವಾಸನೆ ಬಂದಾಗ ಪರಿಶೀಲಿಸಿದಾಗ ಪದಾರ್ಥವು ಹಳಸಿರುವುದು ಕಂಡು ಬಂದ ಹಿನ್ನಲೆ ಕೂಡಲೇ ಕೊರಟಗೆರೆಯ ಮಯೂರ ಬೇಕರಿಗೆ ತೆರಳಿ ತಿಳಿಸಿದಾಗ ಅಲ್ಲಿನ ಸಿಬ್ಬಂದಿಗಳು ಉಡಾಫೆ ಮಾತಗಳನ್ನಾಡಿದರು. ಕೂಡಲೇ ಆಹಾರ ಸಂರಕ್ಷಾಣಾಧಿಕಾರಿಗಳು ಕೊರಟಗೆರೆಯ ಮಯೂರ ಬೇಕರಿ ಅಂಡ್ ಸ್ವೀಟ್ಸ್ ಅಂಗಡಿಯಲ್ಲಿ ತಯಾರಾಗುವ  ಎಲ್ಲಾ ಪದಾರ್ಥಗಳನ್ನು ಪರಿಶೀಲಿಸಿ ಕೂಡಲೇ…

Read More

ಕೆ.ಆರ್.ಪೇಟೆ: ತಾಲ್ಲೂಕು ಹೊಸಹೊಳಲು ಗ್ರಾಮದ ಪ್ರಾಚೀನ ಹೊಯ್ಸಳ ಶಿಲ್ಪ ಕಲೆ ವಿಶಿಷ್ಠವಾದ ಸುಂದರ ದೇವಾಲಯದಲ್ಲಿ ಪ್ರತಿಷ್ಟಾಪಿಸ್ಪಟ್ಟಿರುವ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ಬ್ರಹ್ಮ ರಥೋತ್ಸವವು ಅದ್ದೂರಿಯಾಗಿ‌ ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಮಧ್ಯಾಹ್ನ ‌12:45 ಸಮಯದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ದೇವಾಲಯದ ಆವರಣದಲ್ಲಿ ರಥೋತ್ಸವ ಅಂಗವಾಗಿ ರಥೋತ್ಸವದಲ್ಲಿ ಲಕ್ಷ್ಮೀ ನಾರಾಯಣ ಸ್ವಾಮಿಯ ವಿಗ್ರಹವನ್ನು ಕುಳ್ಳಿರಿಸಿ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ ಸಿಂಗರಿಸಿ ತಾಲ್ಲೂಕಿನ ದಂಡಾಧಿಕಾರಿಗಳಾದ ಅಶೋಕ್ ಅವರು  ವಿಶೇಷವಾಗಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವದ ಸಂದರ್ಭದಲ್ಲಿ ಸಮಾಜ ಸೇವಕ ಆರ್ ಟಿ ಒ ರಾಜ್ಯಾದ್ಯಕ್ಷ ಮಲ್ಲಿಕಾರ್ಜುನ್, ಹೊಸಹೊಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಶೋಕ್, ಪುರಸಭಾ ಅಧ್ಯಕ್ಷೆ ಪಂಕಜಾ ಪ್ರಕಾಶ್, ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್, ಸದಸ್ಯರಾದ ಹೆಚ್.ಡಿ.ಅಶೋಕ್, ಪ್ರವೀಣ್, ಗಿರೀಶ್, ಸೊಸೈಟಿ ನಿರ್ದೇಶಕ ಪ್ರಕಾಶ್, ಇಂದ್ರಾಣಿ ವಿಶ್ವನಾಥ್, ಮಾಜಿ‌ ಸದಸ್ಯ ಕೆ.ಆರ್. ಹೇಮಂತ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಬಾಬು ಸೇರಿದಂತೆ ಅನೇಕ…

Read More

ತುಮಕೂರು: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಉಪನೋಂದಣಿ ಕಚೇರಿಯಲ್ಲಿ ಲಂಚ ಪಡೆಯಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರಿಂದ ಅಧಿಕಾರಿಯ ಟೇಬಲ್ ಮೇಲೆ ಚಿಲ್ಲರೆ ಹಣ ಸುರಿದು ಆಕ್ರೋಶ ವ್ಯಕ್ತಪಡಿಸಿರೋ ಘಟನೆ ನಡೆದಿದೆ. ಅಲ್ಲದೆ ಲಂಚಕ್ಕೆ ಬೇಡಿಕೆ ಇರಿಸಿರೋ ಅಧಿಕಾರಿಗೆ ಸನ್ಮಾನಿಸಿ ಪ್ರತಿಭಟನೆ ಯತ್ನ ನಡೆಸಲಾಯಿತು. ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರಿಂದ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು. ಜನರಿಂದ ಭಿಕ್ಷೆ ಬೇಡಿ ಹಣ ಸಂಗ್ರಹಿಸಿದ್ದ ಕೆ.ಆರ್.ಎಸ್. ಕಾರ್ಯಕರ್ತರು, ಉಪನೋಂದಣಾಧಿಕಾರಿ ರಾಘವೇಂದ್ರ ಒಡಯರ್ ಟೇಬಲ್ ಮೇಲೆ ಚಿಲ್ಲರೆ ಸುರಿದರು. ಅಲ್ಲದೆ ರಾಘವೇಂದ್ರ ಒಡೆಯರ್ ಅವರಿಗೆ ಮೈಸೂರು ಪೇಟೆ ತೊಡಿಸಿ ಸನ್ಮಾನಿಸಲು ಯತ್ನಿಸಿದರು. ಸನ್ಮಾನದಿಂದ ತಪ್ಪಿಸಿಕೊಂಡ ಹೊರ ಹೋಗಲು ಯತ್ನಿಸಿದರು, ಅಲ್ಲದೆ ಕುರ್ಚಿಗೆ ಹಾರ ಹಾಕಿ ಪೇಟ ತೊಡಿಸಿದ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತರ ಪ್ರತಿಭಟನೆಯಿಂದ ರಾಘವೇಂದ್ರ ಒಡೆಯರ್ ತೀವ್ರ ಮುಜುಗರಕ್ಕೊಳಗಾದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…

Read More

ತುಮಕೂರು: ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರೊಬ್ಬರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಡಾ ಜಗದೀಶ್ ಮನೆ ಲೋಕಾಯುಕ್ತರು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ತುಮಕೂರು ನಗರದ ಬಟವಾಡಿ ಬಳಿಯಿರುವ ಮನೆ, ಮಂಜುನಾಥ್ ನಗರದಲ್ಲಿರುವ ಕಾಂಪ್ಲೆಕ್ಸ್, ಶಿರಾ ತಾಲೂಕಿನ ಯಲ್ಪೆನಹಳ್ಳಿರುವ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಸಹೋದರ ಕಾಂತರಾಜ್ ಹಾಗೂ ಡಾ.ಜಗದೀಶ್ ಪತ್ನಿ ರೂಪ ಹೆಸರಿನಲ್ಲಿರುವ ಮನೆ ಜಮೀನಿನ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಶಿರಾ ತಾಲೂಕಿನ ಬರಗೂರಿನಲ್ಲಿ ವೈದ್ಯರ ತಾಯಿ ಹೆಸರಿನಲ್ಲಿ ಆಸ್ತಿ ದಾಖಲೆ ಹಾಗೂ ಬರಗೂರಿನಲ್ಲಿ ಮೂರು ಕಡೆ ತುಮಕೂರು ಸೇರಿದಂತೆ ಒಟ್ಟು ಆರು ಕಡೆ ಲೋಕಾಯುಕ್ತ ದಾಳಿ ಮಾಡಿದ್ದಾರೆ. ಲೋಕಾಯುಕ್ತ ಪೊಲೀಸರಿಂದ ಮುಂದುವರೆದ ಪರಿಶೀಲನೆ ನಡೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149…

Read More

ಬೆಂಗಳೂರು: ನಂದಿನಿ ಹಾಲಿನ ಬೆಲೆಯನ್ನು ಹೆಚ್ಚಿಸುವ ನಿರ್ಧಾರವನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದೆ. ಸಿಎಂ ಸಿದ್ದರಾಮಯ್ಯನವರ ಜೊತೆಗೆ ಚರ್ಚಿಸಿದ ನಂತರ ದರ ಹೆಚ್ಚಳ ನಿರ್ಧಾರವಾಗಲಿದೆ. ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಈ ನಿರ್ಧಾರವನ್ನು ದೃಢಪಡಿಸಿದರು. ಕಾಂಗ್ರೆಸ್ ಎಂಎಲ್ಸಿ ಮತ್ತು ಮಾಜಿ ಸಚಿವೆ ಬಿ. ಉಮಾಶ್ರೀ ಮತ್ತು ಬಿಜೆಪಿ ಎಂಎಲ್ಸಿ ಎಂ.ಜಿ. ಮುಳೆ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸರ್ಕಾರ ರೈತರ ಬೇಡಿಕೆಗಳನ್ನು ಪರಿಗಣಿಸುತ್ತಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು. ನಾವು ಖಂಡಿತವಾಗಿಯೂ ಹಾಲಿನ ಬೆಲೆಯನ್ನು ಹೆಚ್ಚಿಸುತ್ತೇವೆ. ಹೆಚ್ಚಳದ ಪ್ರಮಾಣವನ್ನು ಮುಖ್ಯಮಂತ್ರಿಯೊಂದಿಗೆ ಸಮಾಲೋಚಿಸಿ ನಿರ್ಧರಿಸಲಾಗುವುದು ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ಬೆಂಗಳೂರು: ಕಾಂಗ್ರೆಸ್ ಸರಕಾರ ಇಡುವ ಒಂದೊಂದು ಹೆಜ್ಜೆಯೂ ಬಡವರಿಗೆ ಮಾರಕವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಡವರು ಕಣ್ಣೀರು ಹಾಕುತ್ತಿದ್ದಾರೆ. ಈ ಸರಕಾರದ ಕ್ರಮಗಳು ರೈತರಿಗೆ ಶಾಪವಾಗಿ ಪರಿಣಮಿಸಿದೆ ಎಂದು ಟೀಕಿಸಿದರು. ಗ್ಯಾರಂಟಿಗೆ ಹಣ ಕ್ರೋಡೀಕರಿಸಲು ಜನರ ಮೇಲೆ ಬರೆ ಎಳೆಯುತ್ತಿದ್ದಾರೆ, ಎರಡನೇ ಬಾರಿಗೆ ಇದೀಗ ಹಾಲಿನ ದರ ಏರಿಸುತ್ತಿದ್ದಾರೆ. ಹಿಂದಿನ ಬಿಜೆಪಿ ಸರಕಾರವು ಹೈನುಗಾರರಿಗೆ ಪ್ರೋತ್ಸಾಹಧನ ನೀಡುತ್ತಿತ್ತು. ಆದರೆ, ಕಾಂಗ್ರೆಸ್ ಸರಕಾರವು ಹೈನುಗಾರರ ಪ್ರೋತ್ಸಾಹಧನ 700– 800 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದರು. ಸರಕಾರವು ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More