ತಿಪಟೂರು: ನಗರದ ಹಾಸನ ವೃತ್ತದ ನಂದಿನಿ ಹಾಲಿನ ಮಳಿಗೆ ಆವರಣದಲ್ಲಿ ತಾಲೂಕು ಜಯ ಕರ್ನಾಟಕ ಜನಪದ ವೇದಿಕೆ ವತಿಯಿಂದ ಬೆಂಗಳೂರು ನಗರ ಜಯ ಕರ್ನಾಟಕ ಜನಪದ ವೇದಿಕೆ, ಆಟೋ ಘಟಕದ ಜಿಲ್ಲಾಧ್ಯಕ್ಷರಾದ ಆಟೋ ಮಿತ್ರ ಜಯರಾಮ್ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ದಲಿತ ನೌಕರರ ಮುಖಂಡ ನರಸಿಂಹಯ್ಯ, ತಿಪಟೂರು ಘಟಕದ ಜಯ ಕರ್ನಾಟಕ ತಾಲೂಕು ಅಧ್ಯಕ್ಷ ಬಿ.ಟಿ.ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ ಮಾತನಾಡಿದರು.
ಹಿಂಡಿಸ್ಕೆರೆ ರವಿ, ದಲಿತ ಸಂಘಟನೆಯ ಕಲ್ಲೇಶ್, ಉಮಾಶಂಕರ್, ಉಪಾಧ್ಯಕ್ಷ ಸಿದ್ದೇಶ್, ವಿದ್ಯಾರ್ಥಿ ಘಟಕದ ಕಲಂದರ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy