nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮನೆಮನೆಗೆ ಮೇರಾ ದೀಪ.. ತಾಂಡಗಳಲ್ಲಿ ಸಂಸ್ಕೃತಿಯ ಸಡಗರ | ಲಂಬಾಣಿ ಸಮುದಾಯದ ಮೂರು ದಿನಗಳ ದವಾಳಿ ಸಂಭ್ರಮ

    November 12, 2026

    ಮದ್ಯದ ಅಮಲಿನಲ್ಲಿ ಹೇಳುವ ಮಾತೆಲ್ಲ ಸತ್ಯವೇ? ಮನೋವಿಜ್ಞಾನ ಹೇಳುವುದೇನು?

    November 12, 2026

    ಶಬರಿಮಲೆ ಯಾತ್ರಿಕರಿಗೆ ಮಹತ್ವದ ಮಾಹಿತಿ; ಕೊಠಡಿ ಬುಕ್ಕಿಂಗ್‌ ಗೆ ದಿನಾಂಕ ನಿಗದಿ; ಬುಕ್ಕಿಂಗ್ ವಿಧಾನ ಇಲ್ಲಿದೆ

    November 12, 2026
    Facebook Twitter Instagram
    ಟ್ರೆಂಡಿಂಗ್
    • ಮನೆಮನೆಗೆ ಮೇರಾ ದೀಪ.. ತಾಂಡಗಳಲ್ಲಿ ಸಂಸ್ಕೃತಿಯ ಸಡಗರ | ಲಂಬಾಣಿ ಸಮುದಾಯದ ಮೂರು ದಿನಗಳ ದವಾಳಿ ಸಂಭ್ರಮ
    • ಮದ್ಯದ ಅಮಲಿನಲ್ಲಿ ಹೇಳುವ ಮಾತೆಲ್ಲ ಸತ್ಯವೇ? ಮನೋವಿಜ್ಞಾನ ಹೇಳುವುದೇನು?
    • ಶಬರಿಮಲೆ ಯಾತ್ರಿಕರಿಗೆ ಮಹತ್ವದ ಮಾಹಿತಿ; ಕೊಠಡಿ ಬುಕ್ಕಿಂಗ್‌ ಗೆ ದಿನಾಂಕ ನಿಗದಿ; ಬುಕ್ಕಿಂಗ್ ವಿಧಾನ ಇಲ್ಲಿದೆ
    • ಎಲ್ಲೆಂದರಲ್ಲಿ ಆಧಾರ್ ಕಾರ್ಡ್ ಜೆರಾಕ್ಸ್ ಕೊಡುತ್ತಿದ್ದೀರಾ? ಸುಪ್ರೀಂ ಕೋರ್ಟ್ ತೀರ್ಪು ತಿಳಿಯಿರಿ, ಈ ತಪ್ಪು ಮಾಡಬೇಡಿ!
    • ಮುದುಡಿ ಕೋಟೆ ಮಾರಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ₹1.5 ಲಕ್ಷ ಅನುದಾನ ಹಸ್ತಾಂತರ
    • ನವೆಂಬರ್ 15: ಮಧುಗಿರಿಯ ಸಿದ್ದಾಪುರದಲ್ಲಿ ಮಹಿಳೆಯರಿಂದ ‘ಸಂಕ್ಷಿಪ್ತ ಮಹಾಭಾರತ’ ಪೌರಾಣಿಕ ನಾಟಕ ಪ್ರದರ್ಶನ
    • ಅದ್ದೂರಿ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ: ಈ ಬಾರಿ ಬಾಗಿಲು ಮುಚ್ಚುವಾಗ ತಡವಾಗಿದ್ದೇಕೆ?
    • ದೀಪಾವಳಿಯ ಆಕಾಶ ಬುಟ್ಟಿ ಬಿದ್ದು 7 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ: ರೈತನ ಬಾಳಲ್ಲಿ ಕತ್ತಲು!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಮ್ಮ ತುಮಕೂರು  ವರದಿಯಿಂದ ಎಚ್ಚೆತ್ತ ಅಧಿಕಾರಿಗಳು: ಜನರಿಗೆ ಕೊನೆಗೂ ಸಿಕ್ತು ಕುಡಿಯುವ ಶುದ್ಧ ನೀರು
    ಮಧುಗಿರಿ August 16, 2022

    ನಮ್ಮ ತುಮಕೂರು  ವರದಿಯಿಂದ ಎಚ್ಚೆತ್ತ ಅಧಿಕಾರಿಗಳು: ಜನರಿಗೆ ಕೊನೆಗೂ ಸಿಕ್ತು ಕುಡಿಯುವ ಶುದ್ಧ ನೀರು

    By adminAugust 16, 2022No Comments2 Mins Read
    madhugiri

    ಮಧುಗಿರಿ: ಪಟ್ಟಣದ 19 ವಾರ್ಡ್ ನಲ್ಲಿ ಶಾಸಕ ಎಂ.ವಿ ವೀರಭದ್ರಯ್ಯ ನವರು ಸುಮಾರು ಎಂಟು ಲಕ್ಷದ ಮೌಲ್ಯದ  ಶುದ್ಧ ನೀರಿನ ಘಟಕವನ್ನು ಉದ್ಘಾಟನೆ ಮಾಡಿದ್ದರು.  ಆದರೆ ಶುದ್ಧ ನೀರಿನ ಘಟಕ ನೋಡಿಕೊಳ್ಳುವವರು ಯಾರು ಇಲ್ಲದ,  ಕಾರಣ   ಸುತ್ತಮುತ್ತ ನಿಂತಿರುವ ಕೊಚ್ಚೆ ನೀರು ತೊಟ್ಟಿಗೆ ಬಂದು, ಅದೇ ನೀರು ಶುದ್ಧವಾಗಿ ಬರುತ್ತಿತ್ತು.

    ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ವೆಚ್ಚ ಮಾಡಿ ಕುಡಿಯುವ ನೀರಿನ ಘಟಕ ತೆರೆದಿದ್ದರೂ, ಕುಡಿಯಲು ನೀರು ಯೋಗ್ಯವಲ್ಲದ ಕಾರಣ ಸಾರ್ವಜನಿಕರು  ಯಾರು ನೀರನ್ನೂ ಕುಡಿಯುತ್ತಿರಲಿಲ್ಲ. ಇದನ್ನು ಮನಗಂಡ ಕನ್ನಡ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಸ್ವತಃ ಸ್ಥಳಕ್ಕೆ ಹೋಗಿ ನೀರನ್ನು ಕುಡಿದು ಪರೀಕ್ಷಿಸಿದಾಗ ನೀರು ಅಶುದ್ಧಿಯಾಗಿ ಬರುತ್ತಿರುವುದು ಕಂಡುಬಂದಿತು.

    ಕುಡಿಯುವ ನೀರಿನ ಘಟಕದ ದುಸ್ಥಿತಿ ಕಂಡ ಕನ್ನಡ ಜಾಗೃತಿ ವೇದಿಕೆಯ ಪದಾಧಿಕಾರಿಗಳು ನಮ್ಮ ತುಮಕೂರು ನ್ಯೂಸ್ ಗೆ ಮಾಹಿತಿ ತಿಳಿಸಿದ್ದು, ಈ ವಿಚಾರದ ಬಗ್ಗೆ  ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸುದ್ದಿ ನಮ್ಮ ತುಮಕೂರು ನ್ಯೂಸ್ ಚಾನಲ್ ನಲ್ಲಿ ವರದಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

    ಸುದ್ದಿ ಪ್ರಕಟವಾಗುತ್ತಲೇ ಸಮಸ್ಯೆಯನ್ನು ಮನವರಿಕೆ ಮಾಡಿಕೊಂಡ ಅಧಿಕಾರಿಗಳು, ಕೇವಲ ಐದು ದಿನಗಳಲ್ಲಿ ಶುದ್ಧ ನೀರಿನ ಘಟಕ ರಿಪೇರಿ ಮಾಡಿಸಿ,  ಸ್ವತಃ ಪುರಸಭಾ ಮುಖ್ಯಾಧಿಕಾರಿ (ಪ್ರಭಾರ ) ಫಿರೋಜ್ ಅಮಿರ್  ಮತ್ತು ಪುರಸಭೆ ಜೆ.ಇ. ಇಂಜಿನಿಯರ್ ಸಂಜೀವ್ ಮೂರ್ತಿ ನೀರು ಕುಡಿದು, ಈಗ  ನೀರು ಕುಡಿಯಲು ಯೋಗ್ಯವಾಗಿದೆ.  ನೀರು ಬೋರ್ ನಿಂದ ನೇರವಾಗಿ ಬರುತ್ತಿದೆ. ಟಿ.ಡಿ.ಎಸ್ 24 ಇದೆ. ಸಾರ್ವಜನಿಕರು ಹಿಂಜರಿಯದೆ  ನೀರಿನ್ನು  ಉಪಯೋಗಿಸಿಕೊಳ್ಳಿ ಎಂದು ಮಾಹಿತಿ ನೀಡಿದರು.

    ನಂತರ  ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ರಾಘವೇಂದ್ರ  ನಮ್ಮ ತುಮಕೂರು ಮಾಧ್ಯಮದೊಂದಿಗೆ ಮಾತನಾಡಿ, ಪಟ್ಟಣದ  19ನೇ ವಾರ್ಡನಲ್ಲಿ  ಉದ್ಘಾಟನೆಗೊಂಡಿದ್ದ ಶುದ್ಧ ನೀರಿನ ಘಟಕದಲ್ಲಿ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ನಮ್ಮ ಸಂಘಟನೆಯಿಂದ ಸ್ವತಃ ನೀರು ಕುಡಿದು ನೋಡಿದಾಗ ನೀರು ಅಶುದ್ದಿಯಾಗಿತ್ತು.  ಇದನ್ನು ನಾವು ಮಾಧ್ಯಮಗಳ ಮೂಲಕ ಅಧಿಕಾರಿಗಳಿಗೆ ಮುಟ್ಟಿಸಿದೆವು, ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಶುದ್ಧ ನೀರಿನ ಘಟಕವನ್ನು ಸರಿಪಡಿಸಿದ್ದಾರೆ,   ಈಗ  ನೀರನ್ನು ಸಾರ್ವಜನಿಕರೆಲ್ಲರೂ ಕುಡಿಯಲು ಉಪಯೋಗಿಸಬಹುದು  ಎಂದು ತಿಳಿಸಿದರು. ನಮ್ಮತುಮಕೂರು ಮಾಧ್ಯಮದ ವರದಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ವಿಶೇಷ ವರದಿ: ಅಬಿದ್ ಮಧುಗಿರಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಮಧುಗಿರಿ: ಪಟ್ಟಣದಲ್ಲಿ ಹೊಸ ಬಾರ್‌ ಗಳಿಗೆ ಅನುಮತಿ ಬೇಡ: ಡಾ. ಕೆ.ಎಸ್. ಪಾಂಡುರಂಗಾರೆಡ್ಡಿ

    November 7, 2026

    ನಾವು ಹಳ್ಳಿಗುಗ್ಗುಗಳೇ ಏನಿವಾಗ? :  ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಜೆಡಿಎಸ್ ಕಾರ್ಯಕರ್ತರ ಪ್ರಶ್ನೆ

    November 7, 2026

    ಶಾಲೆ ಬಳಿ ರಸ್ತೆ ಉಬ್ಬು ತೆರವು: ಮಕ್ಕಳ ಸುರಕ್ಷತೆಗೆ ಆತಂಕ,  ಮರು ಅಳವಡಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ ನಡೆಸುವ ಎಚ್ಚರಿಕೆ

    November 7, 2026

    Comments are closed.

    Our Picks

    ಶಬರಿಮಲೆ ಯಾತ್ರಿಕರಿಗೆ ಮಹತ್ವದ ಮಾಹಿತಿ; ಕೊಠಡಿ ಬುಕ್ಕಿಂಗ್‌ ಗೆ ದಿನಾಂಕ ನಿಗದಿ; ಬುಕ್ಕಿಂಗ್ ವಿಧಾನ ಇಲ್ಲಿದೆ

    November 12, 2026

    Gmail ಸ್ಟೋರೇಜ್ ಫುಲ್ ಆಗಿದೆಯೇ? ಉಚಿತ 15 GB ಜಾಗ ಖಾಲಿ ಮಾಡಲು ಇಲ್ಲಿವೆ 4 ಸರಳ ವಿಧಾನಗಳು!

    November 11, 2026

    ಅನ್ನಾ  ಜೊತೆಗಿನ ವೈವಾಹಿಕ ಸಂಬಂಧಕ್ಕೆ ಅಂತ್ಯ ಹಾಡಿದ ಪವನ್ ಕಲ್ಯಾಣ್ : 4ನೇ ಮದುವೆ ಆಗ್ತಾರಾ? ಜ್ಯೋತಿಷಿಗಳ ಭವಿಷ್ಯ ಏನು?

    November 11, 2026

    ರೈಲು ಬೋಗಿಗಳ ಆಯಸ್ಸು ಮುಗಿದ ಬಳಿಕ ಏನಾಗುತ್ತೆ? ರೈಲ್ವೆಯ ಈ ಮರುಬಳಕೆ ತಂತ್ರ ಗೊತ್ತೇ?

    November 10, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಮನೆಮನೆಗೆ ಮೇರಾ ದೀಪ.. ತಾಂಡಗಳಲ್ಲಿ ಸಂಸ್ಕೃತಿಯ ಸಡಗರ | ಲಂಬಾಣಿ ಸಮುದಾಯದ ಮೂರು ದಿನಗಳ ದವಾಳಿ ಸಂಭ್ರಮ

    November 12, 2026

    ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ: ದೀಪಾವಳಿ ಎಂದರೆ ಕೇವಲ ದೀಪಗಳ ಹಬ್ಬವಲ್ಲ. ಅದು ಸಂಸ್ಕೃತಿ, ಸಂಪ್ರದಾಯ, ಪರಂಪರೆ ಮತ್ತು ಮಾನವೀಯ…

    ಮದ್ಯದ ಅಮಲಿನಲ್ಲಿ ಹೇಳುವ ಮಾತೆಲ್ಲ ಸತ್ಯವೇ? ಮನೋವಿಜ್ಞಾನ ಹೇಳುವುದೇನು?

    November 12, 2026

    ಶಬರಿಮಲೆ ಯಾತ್ರಿಕರಿಗೆ ಮಹತ್ವದ ಮಾಹಿತಿ; ಕೊಠಡಿ ಬುಕ್ಕಿಂಗ್‌ ಗೆ ದಿನಾಂಕ ನಿಗದಿ; ಬುಕ್ಕಿಂಗ್ ವಿಧಾನ ಇಲ್ಲಿದೆ

    November 12, 2026

    ಎಲ್ಲೆಂದರಲ್ಲಿ ಆಧಾರ್ ಕಾರ್ಡ್ ಜೆರಾಕ್ಸ್ ಕೊಡುತ್ತಿದ್ದೀರಾ? ಸುಪ್ರೀಂ ಕೋರ್ಟ್ ತೀರ್ಪು ತಿಳಿಯಿರಿ, ಈ ತಪ್ಪು ಮಾಡಬೇಡಿ!

    November 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.