nammatumakuru

    Subscribe to Updates

    Get the latest creative news from FooBar about art, design and business.

    What's Hot

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ಜು. 29ರಂದು ಔರಾದ್‌ನಲ್ಲಿ ತಾಲೂಕು ಪತ್ರಿಕಾ ದಿನಾಚರಣೆ: ಶಾಸಕ ಪ್ರಭು ಚವ್ಹಾಣ್ ಉದ್ಘಾಟನೆ

    July 25, 2026

    ಡಾ.ದರಗೊಂಡ ಉದಯಸಿಂಗ್ ‘ಜೈ ಕರವೇ’ ವೈದ್ಯಕೀಯ ಘಟಕದ ಬೀದರ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ

    July 25, 2026
    Facebook Twitter Instagram
    ಟ್ರೆಂಡಿಂಗ್
    • NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
    • ಜು. 29ರಂದು ಔರಾದ್‌ನಲ್ಲಿ ತಾಲೂಕು ಪತ್ರಿಕಾ ದಿನಾಚರಣೆ: ಶಾಸಕ ಪ್ರಭು ಚವ್ಹಾಣ್ ಉದ್ಘಾಟನೆ
    • ಡಾ.ದರಗೊಂಡ ಉದಯಸಿಂಗ್ ‘ಜೈ ಕರವೇ’ ವೈದ್ಯಕೀಯ ಘಟಕದ ಬೀದರ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ
    • ಗ್ರಾಮೀಣ ಪ್ರತಿಭೆಯ ವೈದ್ಯಕೀಯ ಕನಸು ನನಸು: ನೀಟ್ ನಲ್ಲಿ ಕೊರಟಗೆರೆಯ ಸುಭಾಷ್ ಗೆ ಭರ್ಜರಿ ಸಾಧನೆ!
    • ಕೊರಟಗೆರೆ: ಮತದಾರರ ಗಣಕೀಯ ನಮೂನೆ ತಲುಪಿಸುವಲ್ಲಿ 100% ಸಾಧನೆ; ಶೇ.82.25 ರಷ್ಟು ಡಿಜಿಟಲ್ ಸೇರ್ಪಡೆ ಪೂರ್ಣ
    • ಧರ್ಮಸ್ಥಳ ಸಂಸ್ಥೆಯ ಸೇವೆ ಅನುಕರಣೀಯ: ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ
    • ಸರ್ಕಾರಿ ಶಾಲೆಗಳ ಕಾರ್ಪೊರೇಟ್ ದತ್ತು ನೀತಿಗೆ ಎಐಡಿಎಸ್ ಒ ತೀವ್ರ ಆಕ್ರೋಶ: ಜನಾಂದೋಲನಕ್ಕೆ ಕರೆ
    • ಎಸ್‌ ಐಆರ್: ತುಮಕೂರಿನಲ್ಲಿ ಶೇ.100 ಅರ್ಜಿ ವಿತರಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸರ್ವ ರೋಗಕ್ಕೂ ರಾಮಬಾಣ ಎಕ್ಕ ಗಿಡ
    ಆರೋಗ್ಯ May 31, 2024

    ಸರ್ವ ರೋಗಕ್ಕೂ ರಾಮಬಾಣ ಎಕ್ಕ ಗಿಡ

    By adminMay 31, 2024No Comments3 Mins Read
    ace plant

    ಎಕ್ಕವನ್ನು ಹಿಂದೂಗಳು ದೈವಿಕ ಗಿಡವೆಂದು ಕರೆದರೂ ಅವರಾಗೇ ಬೆಳೆಸುವುದಿಲ್ಲ. ಎಲ್ಲೆಂದರಲ್ಲಿ ತಾನಾಗೇ ಬೆಳೆಯುವ ಅಪಾರ ಔಷಧೀಯ ಗುಣಗಳನ್ನು ಹೊಂದಿರುವ, ಪೂಜೆಗೂ ಉಪಯೋಗಿಸಲ್ಪಡುವ ಈ ಸಸ್ಯದ ಬಗ್ಗೆ ಎಲ್ಲರಿಗೂ ಸಂಪೂರ್ಣ ತಿಳಿವಳಿಕೆ ಇಲ್ಲ. ಆದರೆ ಭಯಭಕ್ತಿ ಇದೆ. ಸೂರ್ಯನು(ಅದಕ್ಕೆ ಅರ್ಕ ಎಂದು ಈ ಗಿಡದ ಇನ್ನೊಂದು ಹೆಸರು) ಈ ಗಿಡದ ಅಧಿಪತಿ. ಇದನ್ನು ತಂತ್ರ ವಿದ್ಯೆ ಕಲಿತವರು ಬಹಳವಾಗಿ ಉಪಯೋಗಿಸುತ್ತಾರೆ. ಹಲವಾರು ನಂಬಿಕೆ, ಮೂಢನಂಬಿಕೆಗಳು ಈ ಗಿಡದ ಬಗ್ಗೆ ಪ್ರಚಲಿತದಲ್ಲಿದ್ದು, ವೈದ್ಯಕೀಯವಾಗಿ ಸರಿಯಾಗಿ ಬಳಸಿದಲ್ಲಿ ಉತ್ತಮ ಫಲಿತಾಂಶ ಕೊಡುವ ರಹಸ್ಯಮಯ ಗಿಡವಾಗಿದೆ.

    ನಮ್ಮ ಪೂರ್ವಜರು ಹೇಳುವಂತೆ ಬಿಳಿ ಎಕ್ಕದ ಗಿಡ ಒಂದು ಮನೆಯಲ್ಲಿದ್ದರೆ ಆರೋಗ್ಯ, ಐಶ್ವರ್ಯ ಮತ್ತು ಹಣಕಾಸು ಎಲ್ಲ ಸಮಸ್ಯೆಗೂ ಪರಿಹಾರ ದೊರಕುತ್ತದೆ. ಕೇವಲ ಪೂಜೆ ಮತ್ತು ಧಾರ್ಮಿಕವಾಗಿ ಮಾತ್ರವಲ್ಲ ಆಯುರ್ವೇದದಲ್ಲೂ ಎಕ್ಕ ಗಿಡಕ್ಕೆ ಮಹತ್ವದ ಸ್ಥಾನವಿದೆ. ಔಷಧೀಯ ಗುಣಗಳಿಂದ ಎಕ್ಕವೂ ಶ್ರೀಮಂತವಾಗಿದೆ. ಈ ಸಸ್ಯದ ಅಡಕವಾಗಿರುವ ಔಷಧೀಯ ಗುಣಗಳ ಬಗ್ಗೆ ಇಂದಿನವರಿಗೆ ಅಷ್ಟಾಗಿ ಅರಿವಿಲ್ಲ. ಇಂದು ಈ ಲೇಖನದಲ್ಲಿ ಪ್ರಕೃತಿದತ್ತವಾಗಿ ದೊರಕುವ ಎಕ್ಕ ಗಿಡದ ಔಷಧೀಯ ಗುಣಗಳ ಬಗ್ಗೆ ತಿಳಿಯೋಣ.

    ಶಿವನಿಗೆ ಅತ್ಯಂತ ಪ್ರಿಯವಾದ ಹೂವುಗಳಲ್ಲಿ ಈ ಎಕ್ಕದ ಹೂವು ಕೂಡ ಒಂದು. ಶಿವರಾತ್ರಿಯಂದು ಈ ಎಕ್ಕದ ಹೂವಿಗೆ ವಿಶೇಷ ಬೇಡಿಕೆ ಇರುತ್ತದೆ. ಅದೇ ರೀತಿ ಆರೋಗ್ಯದ ವಿಷಯಕ್ಕೆ ಬಂದಾಗ ಎಕ್ಕದ ಗಿಡ ಶ್ರೀಮಂತವಾಗಿದೆ. ಮುಳ್ಳು ತಾಗಿದರೆ, ಚೇಳು ಅಥವಾ ಇನ್ನಿತರ ವಿಷಜಂತುಗಳು ಕಡಿದಾಗ ಈ ಎಕ್ಕದ ಗಿಡದ ಹಾಲನ್ನು ಹಚ್ಚುತ್ತಾರೆ. ಅದರೆ ಮಹತ್ವದ ಸಂಗತಿಯೆಂದರೆ ಎಕ್ಕದ ಗಿಡದ ಹಾಲು ಕಣ್ಣಿಗೆ ಸಿಡಿಯಬಾರದು. ಸಿಡಿದರೆ ಕಣ್ಣು ಕುರುಡಾಗುವ ಅಪಾಯವಿರುತ್ತದೆ. ಹೀಗಾಗಿ ಬಳಕೆಯ ವೇಳೆ ಜಾಗೃತರಾಗಿರಿ. ಚಿಕ್ಕಮಕ್ಕಳ ಕೈಗಂತೂ ಸಿಗದಿದ್ದರೇನೆ ಒಳಿತು. ವಯಸ್ಸಾದಂತೆ ಕಾಲಿನ ಸ್ನಾಯುಗಳಲ್ಲಿ ಶಕ್ತಿ ಕೊರತೆಯಾಗುತ್ತದೆ. ಇದರಿಂದ ಕುಳಿತರೂ, ನಿಂತರೂ ನೋವು ಕಾಡಲಾರಂಭಿಸುತ್ತದೆ. ಇದಕ್ಕೆ ಎಕ್ಕದ ಎಲೆ ಪರಿಹಾರ ನೀಡುತ್ತದೆ. ಮಂಡಿನೋವು ಇರುವವರು ಎಕ್ಕದ ಎಲೆಯನ್ನು ಸುಟ್ಟು ಬಿಸಿ ಇರುವಾಗಲೇ ಅದನ್ನು ನೋವಿರುವ ಜಾಗದಲ್ಲಿ ಇರಿಸಿಕೊಂಡು ಬಟ್ಟೆಯನ್ನು ಕಟ್ಟಿಕೊಂಡರೆ ನೋವು ಕಡಿಮೆಯಾಗುತ್ತದೆ.

    ದಿನದಲ್ಲಿ ಒಂದು ಅಥವಾ ಎರಡು ಬಾರಿ ಈ ರೀತಿ ಮಾಡಿದರೆ ಉತ್ತ ಫಲಿತಾಂಶ ಕಂಡುಕೊಳ್ಳಬಹುದಾಗಿದೆ. ಎಕ್ಕದ ಗಿಡ ವಿಷವಾದರೂ ಸರಿಯಾಗಿ ಬಳಕೆ ಮಾಡಿದರೆ ಆರೋಗ್ಯಕ್ಕೆ ಒಳಿತಾಗುವ ಹಲವು ಗುಣಗಳನ್ನು ಒಳಗೊಂಡಿದೆ. ಎಕ್ಕದ ಗಿಡದ ಹೂವನ್ನು ಒಣಗಿಸಿ ಪುಡಿ ಮಾಡಿ ಚೂರ್ಣದಂತೆ ಮಾಡಿಟ್ಟುಕೊಂಡರೆ ಅಸ್ತಮಾ ರೋಗಿಗಳಿಗೆ ಉತ್ತಮ ಔಷಧವಾಗಿದೆ. ಪ್ರತಿದಿನ ಈ ಚೂರ್ಣದ ಸೇವನೆಯನ್ನು ಮಾಡುತ್ತಿದ್ದರೆ ಅಸ್ತಮಾ, ದುರ್ಬಲತೆ, ಶ್ವಾಸಕೋಶದ ಸಮಸ್ಯೆಗಳು ದೂರವಾಗುತ್ತದೆ. ದಮ್ಮು ರೋಗವಿರುವವರು ಕೂಡ ಈ ಚೂರ್ಣವನ್ನು ಸೇವನೆ ಮಾಡುವುದರಿಂದ ಶ್ವಾಸಕೋಶದಲ್ಲಿ ಹಿಡಿತವಾಗುವ ಅನುಭವ ಸರಿಹೋಗುತ್ತದೆ.

    ಪ್ರಾಚೀನ ಕಾಲದಿಂದಲೂ ಎಕ್ಕದ ಗಿಡವನ್ನು ಔಷಧೀಯ ಗಿಡವಾಗಿ ಬಳಸುತ್ತಿದ್ದಾರೆ. ಕಾಲು ಅಥವಾ ಇತರ ದೇಹದ ಮೇಲಾಗುವ ಊತವನ್ನು ಕಡಿಮೆ ಮಾಡಲು ಎಕ್ಕದ ಎಲೆ ಸಹಕಾರಿಯಾಗಿದೆ. ಎಕ್ಕದ ಎಲೆಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಬಿಸಿ ಮಾಡಿ ಊತವಿರುವ ಜಾಗದಲ್ಲಿ ಇಡಬೇಕು. ಒಂದು ವಾರಗಳ ಕಾಲ ಹೀಗೆ ಮಾಡುವುದಿರಿಂದ ಕಾಲಿನ ಊತ ಕಡಿಮೆಯಾಗುತ್ತದೆ. ಶರೀರದ ಮೇಲೆ ಗಾಯಗಳಾದರೆ ಎಕ್ಕದ ಎಲೆಗಳನ್ನು ಬಿಸಿ ಮಾಡಿ ಗಾಯದ ಮೇಲೆ ಇಡುವುದರಿಂದ ರಕ್ತಸ್ರಾವ ನಿಲ್ಲುತ್ತದೆ ಜೊತೆಗೆ ನೋವು ಕೂಡ ಬೇಗನೆ ವಾಸಿಯಾಗುತ್ತದೆ. ಎಕ್ಕದ ಗಿಡದ ಎಲೆಯ ತುದಿಯಲ್ಲಿ ಬರುವ ಬಿಳಿಯ ಬಣ್ಣದ ಹಾಲನ್ನು ನಂಜಿನ ಈಟಗಲು ಕಚ್ಚಿರುವ ಜಾಗದಲ್ಲಿ ಹಚ್ಚದರೆ ದೇಹಕ್ಕೆ ನಂಜು ಅಂಟುವುದಿಲ್ಲ. ಅಲ್ಲದೆ ಮುಳ್ಳು ಚುಚ್ಚಿದ್ದರೆ ಈ ಹಾಲನ್ನು ಮುಳ್ಳು ಚುಚ್ಚಿದ ಜಾಗದಲ್ಲಿ ಹಾಕಿದರೆ ಮುಳ್ಳು ಹೊರಗೆ ಬರುತ್ತದೆ.

    ಚೇಳು ಕಚ್ಚಿದ್ದರೆ ಆ ಜಾಗಕ್ಕೆ ಎಕ್ಕದ ಗಿಡದ ಹಾಲನ್ನು ಹಾಕಿದರೆ ನೋವು ಬೇಗನೆ ಕಡಿಮೆಯಾಗುತ್ತದೆ. ವಿಷ ಕೂಡ ದೇಹಕ್ಕೆ ಹೋಗದಂತೆ ತಡೆಯುತ್ತದೆ. ಇತ್ತೀಚೆಗಂತೂ ಮಧುಮೇಹ ಎಲ್ಲರಲ್ಲೂ ಇರುವ ಸಾಮಾನ್ಯ ಕಾಯಿಲೆಯಂತಾಗಿದೆ. ಮಧುಮೇಹಕ್ಕೆ ಸಾಕಷ್ಟು ಔಷಧಗಳಿದ್ದರೂ ಮೂಲಿಕೆಗಳ ಔಷಧ ಹೆಚ್ಚು ಪರಿಣಾಮಕಾರಿಯಾಗಿದೆ. ಮಧುಮೇಹ ನಿಯಂತ್ರಣಕ್ಕೆ ಎಕ್ಕದ ಎಲೆ ಸಹಕಾರಿಯಾಗಿದೆ. ಹೌದು, ಎಕ್ಕದ ಎಲೆಗಳನ್ನು ಬಿಸಿ ಮಾಡಿ ರಾತ್ರಿ ಮಲಗುವ ಮುನ್ನ ಪಾದದ ಕೆಳಗೆ ಇಟ್ಟು ಬಟ್ಟೆ ಸುತ್ತಿಕೊಂಡು ಮಲಗಿ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬಂದು ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಯಾವುದೇ ಆಗಲಿ ಒಂದೊಮ್ಮೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

     


    Provided by
    Provided by
    admin
    • Website

    Related Posts

    ಮಗು ಪಡೆಯಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ದಂಪತಿಗಳು ಈ ಒಂದು ಹವ್ಯಾಸ ರೂಢಿಸಿಕೊಳ್ಳಿ!

    July 12, 2026

    “ನಿಮ್ಮ ಜಿಲ್ಲೆಯನ್ನು ಕ್ಷಯಮುಕ್ತಗೊಳಿಸಿ”: ಕ್ಷಯ ರೋಗದ ಲಕ್ಷಣಗಳೇನು? ಚಿಕಿತ್ಸೆ ಪಡೆಯೋದು ಹೇಗೆ? | ಪ್ರತಿ ತಿಂಗಳು ರೂ.1,000 ನೆರವು

    July 11, 2026

    ಕಳ್ಳಿ ಗಿಡದ ಹಣ್ಣು ತಿನ್ನುವುದು ಹೇಗೆ? ಇಲ್ಲಿದೆ ಸುಲಭ ವಿಧಾನ ಮತ್ತು ಆರೋಗ್ಯ ಪ್ರಯೋಜನಗಳು!

    July 10, 2026

    Comments are closed.

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನವದೆಹಲಿ: ನೀಟ್–ಯುಜಿ 2026 (NEET-UG 2026) ಪರೀಕ್ಷಾ ವಿವಾದ ಹಾಗೂ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ, ಕೇಂದ್ರ ಶಿಕ್ಷಣ…

    ಜು. 29ರಂದು ಔರಾದ್‌ನಲ್ಲಿ ತಾಲೂಕು ಪತ್ರಿಕಾ ದಿನಾಚರಣೆ: ಶಾಸಕ ಪ್ರಭು ಚವ್ಹಾಣ್ ಉದ್ಘಾಟನೆ

    July 25, 2026

    ಡಾ.ದರಗೊಂಡ ಉದಯಸಿಂಗ್ ‘ಜೈ ಕರವೇ’ ವೈದ್ಯಕೀಯ ಘಟಕದ ಬೀದರ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ

    July 25, 2026

    ಗ್ರಾಮೀಣ ಪ್ರತಿಭೆಯ ವೈದ್ಯಕೀಯ ಕನಸು ನನಸು: ನೀಟ್ ನಲ್ಲಿ ಕೊರಟಗೆರೆಯ ಸುಭಾಷ್ ಗೆ ಭರ್ಜರಿ ಸಾಧನೆ!

    July 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.