ಗುಬ್ಬಿ: ಮನೆ ಹಾಗೂ ರಸ್ತೆ ಸೌಕರ್ಯ ನೀಡಲು ಗ್ರಾಮ ಪಂಚಾಯತ್ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದ ಇದರಿಂದ ನೊಂದ ವ್ಯಕ್ತಿಯೊಬ್ಬರು 4000 ಕೆವಿ ವಿದ್ಯುತ್ ಹೈಟೆನ್ಷನ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಗುಬ್ಬಿ ಕಸಬಾ ಹೋಬಳಿ ಹಳೇಗುಬ್ಬಿ ಗ್ರಾಮದ ವಾಸಿ ರಾಮು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾರೆ. ಪಿಡಿಓ ಮತ್ತು ತಹಶೀಲ್ದಾರ್ ರವರಿಗೆ ಹಲವು ಬಾರಿ, ತನಗೆ ಮನೆ ಹಾಗೂ ರಸ್ತೆ ಮಂಜೂರು ಮಾಡಿ ಕೊಡಲು ಅರ್ಜಿ ಸಲ್ಲಿಸಿದ್ದರೂ ಈವರೆಗೆ ಯಾರು ಸ್ಪಂದಿಸುತ್ತಿಲ್ಲ ಎಂದು ರಾಮು ದೂರಿದ್ದಾರೆ.
ಹಳೇಗುಬ್ಬಿ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ನಮ್ಮದೇ ಗ್ರಾಮದ ಬೇರೆ ಬೇರೆ ವ್ಯಕ್ತಿಗಳು ವಾಸದ ಮನೆಗಳನ್ನು ಕಟ್ಟಿಕೊಂಡಿದ್ದು, ತನಗೂ ಕೂಡ ಅದೇ ರೀತಿ ವಾಸದ ಮನೆ ಕಟ್ಟಿಕೊಳ್ಳಲು ಜಾಗ ಮಂಜೂರು ಮಾಡಲು ಅವಕಾಶವನ್ನು ನೀಡಿ ಎಂದು ಕೇಳಿದರೆ, ಅಡಗೂರು ಗ್ರಾಮ ಪಂಚಾಯಿತಿ ಪಿಡಿಓ ಅವರು, ನಾನು ಮನೆ ನಿರ್ಮಾಣ ಮಾಡುವ ಜಾಗದ ಬಳಿ ಬಂದು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಮ್ಮ ಗ್ರಾಮದ ಪಂಚಾಯತ್ ಸದಸ್ಯರು ಕೂಡ ನನಗೆ ನ್ಯಾಯ ಒದಗಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರಾಮು ಆರೋಪಿಸಿದ್ದು, ಪ್ರಭುವನ ಹಳ್ಳಿ ಗೇಟ್ ಬಳಿಯಿರುವ ತಾಳಗೊಪ್ಪದಿಂದ ನೆಲಮಂಗಲ ಸರಬರಾಜಾಗುವ ಹೈಟೆನ್ಷನ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಘಟನಾ ಸ್ಥಳಕ್ಕೆ ಗುಬ್ಬಿ ತಹಶೀಲ್ದಾರ್ ಆರತಿ ಅವರು ತಡವಾಗಿ ಬಂದು ಸಂತ್ರಸ್ತ ಶ್ರೀನಿವಾಸ್ ಅವರ ಮನವೊಲಿಸುವ ಪ್ರಯತ್ನ ನಡೆಯಿತು. ತದ ನಂತರ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ತಾಲ್ಲೂಕು ಆಡಳಿತ ವ್ಯಕ್ತಿಯ ಮನವೊಲಿಸುವಲ್ಲಿ ಯಶಸ್ವಿಯಾದರು. ಇದೀಗ ರಾಮು ಅವರ ಸಮಸ್ಯೆ ಪರಿಹಾರದ ಭರವಸೆ ನೀಡಿದರು.
ವರದಿ: ಡಿ.ಮಂಜುನಾಥ್ ಗುಬ್ಬಿ