Author: admin

ಸ್ನೇಹ ಅನ್ನೋದನ್ನ ವಿವರಿಸಲು ಪದಗಳು ಸಾಲದು. ಸ್ನೇಹಿತರಿಗಾಗಿ ಪ್ರಾಣಕೊಟ್ಟವರೂ ಇತಿಹಾಸದಲ್ಲಿದ್ದಾರೆ. ಇದೀಗ ಸಾಮಾಜಿಕ ಜಾಲತಾಣವೊಂದರಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಸ್ನೇಹಿತನ ಮೃತದೇಹದ ಎದುರು ಕೊನೆಯ ಬಾರಿಗೆ ಪ್ರಾಣ ಸ್ನೇಹಿತ ಆತ್ಮೀಯತೆಯಿಂದ ಕಾಲ ಕಳೆದಿದ್ದಾನೆ. ಕಳೆದು ಹೋದ ಜೀವನದ ಕೊನೆಯ ಕ್ಷಣವನ್ನು ನೆನಪು ಮಾಡಿಕೊಂಡಿದ್ದಾನೆ. ಹೌದು..! ವೈರಲ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ. ಪ್ರಾಣ ಸ್ನೇಹಿತ ಮೃತಪಟ್ಟಾಗ ಆತನ ಮೃತದೇಹವನ್ನ ಅಂತ್ಯ ಕ್ರಿಯೆ ನಡೆಸುವ ಮುನ್ನ  ಮೃತದೇಹಕ್ಕೆ ಮದ್ಯ ಕುಡಿಸಿ, ಸಿಗರೇಟ್ ಹೊತ್ತಿಸಿ ಸ್ನೇಹಿತ ತುಟಿಯ ಮೇಲೆ ಇಟ್ಟಿದ್ದಾನೆ. ಇದು ನನ್ನ ಜೊತೆಗಿನ ಕೊನೆಯ ಪಾರ್ಟಿ ಎಂದು ಸ್ನೇಹಿತ ಭಾವುಕನಾಗಿದ್ದಾನೆ. ಈ ವಿಡಿಯೋಗೆ ಸಾಕಷ್ಟು ಜನರು ತಮ್ಮದೇ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಇದು ನಿಜವಾದ ಸ್ನೇಹ ಎಂದರೆ ಇನ್ನು ಕೆಲವರು ಇದು ಸ್ನೇಹವಲ್ಲ ಮೂರ್ಖತನ ಎಂದಿದ್ದಾರೆ. ಪ್ರತಿ ದಿನವೂ ಜೊತೆಗೂಡುತ್ತಿದ್ದಾಗ ಒಂದು ಪೆಗ್ ಹಾಕಿ, ಸಿಗರೇಟ್ ಸೇದುತ್ತಿದ್ದ ಸ್ನೇಹಿತರ ಅಗಲಿಕೆ ಇದು. ಆತನ ಜೊತೆಗೆ ಕೊನೆಯ ಬಾರಿ ಮದ್ಯ ಸೇವಿಸುವ, ಸಿಗರೇಟು…

Read More

ಮಚ್ಚು ಹಿಡಿದುಕೊಂಡು ರೀಲ್ಸ್ ಮಾಡಿದ್ದಕ್ಕಾಗಿ ಜೈಲು ಸೇರಿದ್ದ ರಜತ್ ಕಿಶನ್ ಮತ್ತು ವಿನಯ್ ಗೌಡ ಜಾಮೀನು ಮೂಲಕ ರಿಲೀಸ್ ಆಗಿದ್ದಾರೆ. ಇವರಿಬ್ಬರ ಬಂಧನದಿಂದಾಗಿ ಕಳೆದ ವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋ ಪ್ರಸಾರವಾಗಿರಲಿಲ್ಲ. ಈ ವಾರ ಎಂದಿನಂತೆ ‘ಬಾಯ್ಸ್ ವರ್ಸಸ್‌ ಗರ್ಲ್ಸ್‌’ ಶೋ ಪ್ರಸಾರವಾಗಲಿದೆ. ಆದ್ರೆ ಕಲರ್ಸ್ ಕನ್ನಡ ವಾಹಿನಿಯು ಹಂಚಿಕೊಂಡಿರುವ ‘ಬಾಯ್ಸ್ ವರ್ಸಸ್‌ ಗರ್ಲ್ಸ್‌’ ಶೋ ಪ್ರಮೋದಲ್ಲಿ ರಜತ್ ಮಾತ್ರ ಕಾಣಿಸಿಕೊಂಡಿದ್ದು, ವಿನಯ್ ಗೌಡ ಕಾಣಿಸಿಕೊಂಡಿಲ್ಲ. ಹೀಗಾಗಿ ವೀಕ್ಷಕರು ಗೊಂದಲದಲ್ಲಿದ್ದಾರೆ. ಈ ವಾರ ವಿನಯ್ ಗೌಡ ಶೋ ಬಂದಿಲ್ವಾ? ಮಚ್ಚು ರೀಲ್ಸ್, ಜೈಲು ಇದರಿಂದ ರಜತ್ ಸಹವಾಸ ಬಿಟ್ರಾ? ಹೀಗೆಲ್ಲ ವೀಕ್ಷಕರು ಕೇಳುತ್ತಿದ್ದಾರೆ. ಅಲ್ಲದೇ ತಡವಾಗಿ ವಿನಯ್ ಅವರ ಪ್ರೊಮೋ ರಿಲೀಸ್ ಆಗುತ್ತಾ ಅಂತ ವೀಕ್ಷಕರು ತಲೆಕೆಡಿಸಿಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

Read More

ತುಮಕೂರು:  ಪೊಲೀಸ್ ಇಲಾಖೆಯಲ್ಲಿ ಅಪ್ರತಿಮ ಸೇವೆ, ಗಣನೀಯ ಕಾರ್ಯ ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿದ ಕರ್ನಾಟಕ ಲೋಕಾಯುಕ್ತ ತುಮಕೂರು ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಶಿವರುದ್ರಪ್ಪ ಮೇಟಿ ಹಾಗೂ ಹೆಡ್ ಕಾನ್ಸ್ಟೇಬಲ್ ಲಕ್ಷ್ಮೀಶ ವೈ.ಆರ್. ಅವರಿಗೆ ಬುಧವಾರ ಬೆಂಗಳೂರಿನಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರವು ನೀಡುವ ‘ಮುಖ್ಯಮಂತ್ರಿಗಳ ಪದಕ’ ವನ್ನು ನೀಡಿ ಗೌರವಿಸಿದ್ದಾರೆ. ಶಿವರುದ್ರಪ್ಪ ಮೇಟಿ ಅವರು ಮೂಲತಃ ಹುಬ್ಬಳಿಯ ಕಲಘಟಕಿ ತಾಲ್ಲೂಕಿನವರಾಗಿದ್ದು, 2010ರಲ್ಲಿ ಪಿ.ಎಸ್.ಐ ಹುದ್ದೆಗೆ ನೇಮಕಗೊಂಡು, ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆ, ಅಜಾದ್ ನಗರ ಪೊಲೀಸ್ ಠಾಣೆ ಸೇರಿದಂತೆ ಹಲವಾರು ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿರುತ್ತಾರೆ. 2022ರಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಗೆ ಪದೋನ್ನತಿ ಹೊಂದಿ, ತುಮಕೂರು ಲೋಕಾಯುಕ್ತ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇವರ ಪತ್ನಿ ಭವ್ಯ ಡಿ.ಎಂ. ಅವರು ಚಿತ್ರದುರ್ಗ ಬೆಸ್ಕಾಂ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇವರೂ ಸಹ 2024ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿರುತ್ತಾರೆ.…

Read More

ಬೆಂಗಳೂರು:  ಪ್ರೇಮಿಗಳಿಗೆ ಆರಾಮದಾಯಕ ಪ್ರಯಾಣಕ್ಕಾಗಿ ಸ್ಮೂಚ್ ಕ್ಯಾಬ್ ಆರಂಭಗೊಳ್ಳಲಿದೆ ಎನ್ನುವ ಸುದ್ದಿ ಇದೀಗ ವ್ಯಾಪಕವಾಗಿ ಹರಿದಾಡುತ್ತಿದೆ. ಕ್ಯಾಬ್ ನಲ್ಲಿ ಪ್ರಯಾಣ ಮಾಡುವ ಜೋಡಿಗಳು ಯಾವುದೇ ಅಡೆತಡೆಗಳಿಲ್ಲದೇ ಆರಾಮದಾಯಕವಾಗಿ ಖಾಸಗಿ ಕ್ಷಣಗಳನ್ನು ಕಳೆಯುತ್ತಾ  ಈ ಕ್ಯಾಬ್ ನಲ್ಲಿ ಪ್ರಯಾಣಿಸಬಹುದಂತೆ. ಪ್ರಯಾಣ ಸಮಯದಲ್ಲಿ ತಮ್ಮ ಖಾಸಗಿ ಸಮಯ ಕಳೆಯಲು, ಯಾರ ಕಿರಿಕಿರಿ ಇಲ್ಲದೆ ತಬ್ಬಿಕೊಂಡು ಪ್ರಯಾಣ ಆಸ್ವಾದಿಸಲು ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿ ಹೊಸ ಸ್ಮೂಚ್ ಕ್ಯಾಬ್ ವ್ಯವಸ್ಥೆ ಆರಂಭಿಸಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಈ ಕ್ಯಾಬ್ ನ ವಿಶೇಷತೆಗಳಂದ್ರೆ, ಜೋಡಿಗಳ ಅವಶ್ಯಕತೆ, ಅಗತ್ಯಕ್ಕೆ ಅನುಗುಣವಾಗಿ ಕ್ಯಾಬ್ ವೇಗ ಹೆಚ್ಚು ಕಡಿಮೆ ಮಾಡಲಿದೆ, ಡು ನಾಟ್ ಡಿಸ್ಟರ್ಬ್ ಪಾಲಿಸಿ ಅಳವಡಿಸಲಾಗುತ್ತದೆ. ಕಾರಿನ ವಿಂಡೋ ಒಳಗೆ ಕರ್ಟನ್ ಬಳಸಲಾಗುತ್ತದೆ, ಶಬ್ದಗಳು ಉಂಟಾಗದಂತೆ ನಾಯ್ಸ್ ಕ್ಲೀಯರೆನ್ಸ್ ಕೂಡ ಅಳವಡಿಸಲಾಗುತ್ತದೆಯಂತೆ. ಅಂದ ಹಾಗೆ ಈ ಸುದ್ದಿ ಎಷ್ಟು ಸತ್ಯವೋ ಸುಳ್ಳೋ ತಿಳಿದಿಲ್ಲ, ಏಪ್ರಿಲ್ ನಲ್ಲಿ ಇಂತಹದ್ದೊಂದು ಸುದ್ದಿ ಬಂದರೋದ್ರಿಂದ ಇದು ಏಪ್ರಿಲ್ ಫೂಲ್ ಅಂತಲೂ ಕೆಲವರು ಹೇಳುತ್ತಿದ್ದಾರೆ. ಆದ್ರೆ,…

Read More

ತುಮಕೂರು: ಮಹಿಳೆಯರನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ, ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮದೇ ಆದ ರೀತಿಯಲ್ಲಿ ಸಾಧನೆ ಮಾಡುವುದರ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡಬೇಕು ಯುವಕರಿಗೆ ಕುಟುಂಬಸ್ಥರೊಂದಿಗೆ ಬೇರೆಯುವುದರಿಂದ ಮನೋವಿಕಾಸಗೊಳ್ಳುತ್ತದೆ ಕೆಟ್ಟಆಲೋಚನೆಗಳನ್ನು ದೂರ ಮಾಡುತ್ತದೆ ಎಂದು ನಾಗಮಣಿ ನಾಗಭೂಷಣ್ ಹೇಳಿದರು. ನಗರದ ಸರಸ್ವತಿಪುರಂನಲ್ಲಿ ಇರುವ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ಸಬಲೀಕರಣ ಹಾಗೂ ಐ.ಕ್ಯೂ.ಎ.ಸಿ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಭಾಗವಹಿಸಿ ಮಾತನಾಡಿದ ಅವರು, ಕುಟುಂಬದೊಂದಿಗೆ ಬೆರೆತಾಗ ಮಾತ್ರ ಯುವಕರಲ್ಲಿ ಮಹಿಳೆಯರ ಮೇಲೆ ಗೌರವ ಹೆಚ್ಚಾಗಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಹೇಮಲತ ಮಾತನಾಡಿ, ಮಹಿಳಾ ದಿನಾಚರಣೆಯನ್ನು ಮಾಡುವಂಥದ್ದು ಪ್ರತಿಯೊಬ್ಬ ಮಹಿಳೆಯರಿಗೂ ಸಹ ಗೌರವ ನೀಡಿದಂತೆ, ಮಹಿಳೆಯರ ಸಾಧನೆ, ಅವರು ಅನುಭವಿಸುತ್ತಿರುವಂತಹ ಸಂಕಷ್ಟಗಳನ್ನ ಚರ್ಚಿಸುವ ವೇದಿಕೆ ಯಾಗಬೇಕು ಮತ್ತು ಸಾಧನೆಯನ್ನ ಶ್ಲಾಘಿಸುವ ವೇದಿಕೆಯಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ರಮೇಶ್ ಮಣ್ಣೆ, ಐ.ಕ್ಯೂ.ಎ.ಸಿ ಸಂಚಾಲಕರಾದ ಸೈಯದ್ ಬಾಬು, ಮಹಿಳಾ…

Read More

ಚಿಕ್ಕಬಳ್ಳಾಪುರ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಗು ಇದ್ದಂತೆ, ಚಾಕ್ಲೇಟ್ ಯಾರು ಕೊಡ್ತಾರೋ ಅವರ ಕಡೆಗೆ ಹೋಗುತ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಧರಣಿಯಿಂದ ಜೆಡಿಎಸ್ ದೂರವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬೆಲೆ ಏರಿಕೆ ವಿಚಾರಕ್ಕೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ತಾಕತ್ ಇದ್ರೆ, ಕೇಂದ್ರದಲ್ಲಿ ಪೆಟ್ರೋಲ್ ಬೆಲೆ ಇಳಿಸಲು ಹೇಳಿ. ಬಿಜೆಪಿಯವರಿಗೆ ಏನಾದ್ರು ಇದ್ರೆ ನಮ್ಮ ಜಿಎಸ್ ಟಿ ಹಣ ಕೊಡಿಸಲಿ. ಸದಾ ಸುದ್ದಿಯಲ್ಲಿರಲು ಬಿಜೆಪಿಯವರು ಧರಣಿ ಹಮ್ಮಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಡಿರುವಂತೆ ಸಿಎಂ ಸಿದ್ದರಾಮಯ್ಯನವರು ಯಾವುದೇ ಅಕ್ರಮ ಹಣ ಮಾಡಿಲ್ಲ. ವಿಜಯೇಂದ್ರ ಮೇಲೆ ಆರೋಪಗಳು ಇವೆ. ಅದನ್ನು ಬಿಟ್ಟು ಸಿದ್ದರಾಮಯ್ಯ ವಿರುದ್ಧ ಮಾತಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

Read More

ತುಮಕೂರು: ಜಿಲ್ಲೆ ಶಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿಯ ಪುರ ಗ್ರಾಮದ ಗೌಡನಕಟ್ಟೆಯಲ್ಲಿ ಯುಗಾದಿ ಹಬ್ಬದಂದು ರತ್ನಮ್ಮ ಬೋವಿರವರ ಗುಡಿಸಲಿಗೆ ಬೆಂಕಿ ಬಿದ್ದ ಪರಿಣಾಮ ಗುಡಿಸಲಿನಲ್ಲಿದ್ದ ದಾಸ್ತಾನು ದಿನಬಳಕೆ ವಸ್ತುಗಳು ಎರಡು ಹಸು ಒಂದು ಕರು ಎರಡು ಕುರಿ ನಾಲ್ಕು ಮೇಕೆ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸಂಪೂರ್ಣ ಭಸ್ಮವಾಗಿತ್ತು. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಶುಕ್ರವಾರ ಸಂಜೆ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರ ಪರಿಸ್ಥಿತಿಯನ್ನು ಕಂಡು ಸಂತ್ರಸ್ತರಿಗೆ ಸಾಂತ್ವನ ಹೇಳಿ ಸ್ಥಳದಲ್ಲಿಯೇ ಧನ ಸಹಾಯ ಮಾಡಿ ಮಾನವೀಯತೆ ಮೆರೆದರು. ಯೋಜನೆಗಳ ಮುಖಂಡರಾದ ಚಿನಾಹಳ್ಳಿ ಆರಾಧನಾ ಸಮಿತಿ ಸದಸ್ಯ ಬಿ.ಡಿ.ದ್ಯಾಮಣ್ಣ, ಅಶ್ವತ್ಥನಾರಾಯಣ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮುಕುಂದಪ್ಪ, ಚಿನಾ ಹಳ್ಳಿ ಗ್ಯಾ ಅ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಕ್ಕಣ್ಣ, ಹೊಸ ಪಾಳ್ಯ ಜೈ ಪ್ರಕಾಶ್, ಲಿಂಗಪ್ಪ ,ಕುರುಬರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಗಣ್ಣ, ಪಿ ಡಿ ಓ…

Read More

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿ ಅಂಬಾರಪುರ ಗ್ರಾಮದ ಸ.ನಂ.46ರ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ ಅವರು ಏಪ್ರಿಲ್ 7ರ ಬೆಳಿಗ್ಗೆ 11 ಗಂಟೆಗೆ ವಿಚಾರಣೆ ನಡೆಸಲಿದ್ದಾರೆ. ವಿಚಾರಣೆಯನ್ನು ಅಂಬಾರಪುರ ಗ್ರಾಮದ ಸ.ನಂ.46ರ ಜಮೀನಿನಲ್ಲಿರುವ ಕುಮಾರ ನಾಯ್ಕ ಅವರ ಮನೆಯ ಬಳಿ ನಡೆಸಲಿದ್ದಾರೆ. ವಿಚಾರಣೆಗೆ ಸಂಬಂಧಪಟ್ಟ ಖಾತೆದಾರರು/ಮಂಜೂರಿ (ಮರಣ ಹೊಂದಿರುವ ಪ್ರಕರಣಗಳಲ್ಲಿ ಆಯಾ ವಾರಸುದಾರರು ಕಡ್ಡಾಯವಾಗಿ ಮರಣ ಪ್ರಮಾಣ ಪತ್ರ, ವಂಶವೃಕ್ಷ, ಗುರುತಿನ ಚೀಟಿ, ಇತರೆ ದಾಖಲೆಗಳನ್ನು ಹಾಜರುಪಡಿಸುವುದು)ದಾರರು ತಮ್ಮಲ್ಲಿರುವ ದೃಢೀಕೃತ ದಾಖಲೆಗಳೊಂದಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ತುರುವೇಕೆರೆ ತಾಲ್ಲೂಕು ಮಾವಿನಕೆರೆ ಗ್ರಾಮದ ಸಿದ್ದಲಿಂಗೇಗೌಡ ಅವರು ಅಂಬಾರಪುರ ಸ.ನಂ.46ರ ದುರಸ್ಥಿ ರದ್ದುಪಡಿಸುವ ಬಗ್ಗೆ ಕರ್ನಾಟಕ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದು, ಈಗಾಗಲೇ ವಿಚಾರಣೆ ನಡೆದು ಕರ್ನಾಟಕ ಲೋಕಾಯುಕ್ತ ವರದಿಯಂತೆ ಕೈಗೊಂಡ ಕ್ರಮದ ಬಗ್ಗೆ ಅಥವಾ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ವರದಿ ಸಲ್ಲಿಸಲು ಸೂಚಿಸಿರುವುದರಿಂದ ಈ ವಿಚಾರಣೆ ನಡೆಸಲಾಗುತ್ತಿದೆ. ಅದೇ ರೀತಿ ರಾಜ್ಯದ ಘನ ಉಚ್ಚನ್ಯಾಯಾಲಯದಲ್ಲಿ ಅರಣ್ಯ/ತೋಟಗಾರಿಕೆ ಇಲಾಖೆಯ ಜಮಿನುಗಳಲ್ಲಿ…

Read More

ತುಮಕೂರು: ಸರಳ ಸಜ್ಜನಿಕೆಯ ವ್ಯಕ್ತಿತ್ವದ ಪಿ.ವಿ.ನಾರಾಯಣ ಕೊರಟಗೆರೆ ತಾಲ್ಲೂಕಿನವರು. ಅವರು 80ಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗೆ ಆಸೆಪಡದ ಪಿ.ವಿ.ನಾರಾಯಣ ಅವರ ಮರಣ ಕನ್ನಡ ಸಾಹಿತ್ಯದ ಹಿರಿಯ ಕೊಂಡಿಯೊಂದು ಕಳಚಿದಂತೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ನುಡಿದರು.ಅವರು ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ಏರ್ಪಡಿಸಿದ್ದ ಪಿ.ವಿ.ನಾರಾಯಣ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅವರು ಸಂಪಾದಿಸಿದ ರಾಮಾಯಣ ಕೃತಿಯೊಂದನ್ನು ಬಿಡುಗಡೆ ಮಾಡಿದುದನ್ನು ಸ್ಮರಿಸಿದ ಅವರು ಪಿ.ವಿ.ನಾರಾಯಣ ಒಬ್ಬ ವಿದ್ವತ್ತಿನ ಗಣಿ ಆಗಿದ್ದರು ಎಂದರು. ಸಂಶೋಧಕ ಡಾ. ಬಿ.ನಂಜುಂಡಸ್ವಾಮಿ ಮಾತನಾಡಿ, ಮೈಸೂರು ಅರಸರ ಕಾಲದಲ್ಲಿ ಪ್ರಧಾನಿ ಆಗಿದ್ದ ಪ್ರಧಾನ ವೆಂಕಪ್ಪಯ್ಯನವರ ವಂಶಸ್ಥರಾದ ಪಿ.ವಿ.ನಾರಾಯಣ ಹನ್ನೆರಡನೇ ಶತಮಾನದ ಶರಣರು ರಚಿಸಿದ ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ವಚನ ಸಾಹಿತ್ಯ-ಸಾಂಸ್ಕೃತಿಕ ಅಧ್ಯಯನ ಎಂಬ ಕೃತಿಯನ್ನು ರಚಿಸಿ ಪ್ರಸಿದ್ಧಿಯಾಗಿದ್ದರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ…

Read More

ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಕಣಿವೇನಹಳ್ಳಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ವೇಳೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ 7 ಗಂಟೆಯಲ್ಲಿ ನಡೆದಿದೆ. ಗ್ರಾಮದ 40 ವರ್ಷದ ಹನುಮಂತರಾಯಪ್ಪ ಎಂಬವರು ಕಳೆದ ಐದು-–ಆರು ತಿಂಗಳಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ಆತ್ಮಹತ್ಯೆಗೆ ಯತ್ನಿಸುವ ಘಟನೆಗಳು ಅತನಿಂದ ಹಲವು ಬಾರಿ ನಡೆದಿದೆ. ಈ ಹಿನ್ನೆಲೆ ಕುಟುಂಬಸ್ಥರು ಆತನು ಮನೆಯಿಂದ ಹೊರಗೆ ಹೋಗದಂತೆ ನೋಡಿಕೊಳ್ಳುತ್ತಿದ್ದರು. ಆದರೆ, ಶುಕ್ರವಾರ ಸಂಜೆ ಮನೆಯವರು ಗಮನಿಸದಿರುವ ಸಂದರ್ಭದಲ್ಲಿ ಹನುಮಂತರಾಯಪ್ಪ ಮನೆಯಿಂದ ತಪ್ಪಿಸಿಕೊಂಡು ಚಾಕುವನ್ನು ಕೈಯಲ್ಲಿ ಹಿಡಿದು ಗ್ರಾಮದ ಹೊರವಲಯದ ಮೆಕ್ಕೆಜೋಳ ತೋಟಕ್ಕೆ ತೆರಳಿದ್ದನು. ಅಲ್ಲೆ ತನ್ನ ಕತ್ತನ್ನು ಚಾಕಿನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈ ವೇಳೆ ಗ್ರಾಮಸ್ಥರು ಅವನನ್ನು ಪತ್ತೆಹಚ್ಚಿ ತಕ್ಷಣ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ವೇಳೆ, ಮಾರ್ಗಮಧ್ಯದ ಮಡಕಶಿರಾ ಬಳಿ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಘಟನಾ ಸ್ಥಳಕ್ಕೆ…

Read More