ತುಮಕೂರು : ಸಿದ್ದಗಂಗಾ ಮಠದ ದಿ.ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಸಿದ್ದಗಂಗಾ ಮಠದಲ್ಲಿ ಈ ಹೇಳಿಕೆ ನೀಡಿದ ಅವರು, ದಾಸೋಹ ನಮ್ಮ ಕರ್ನಾಟಕದ ಒಂದು ಪರಂಪರೆ. ವಿಶೇಷವಾಗಿ ಶ್ರೀಶರಣರು ಅದನ್ನ ನಡೆಸಿಕೊಂಡು ಬಂದಿದ್ದಾರೆ. ದಿ.ಶಿವಕುಮಾರ ಶ್ರೀಗಳು ಎಂಟತ್ತು ದಶಕಗಳಿಂದ ಅನ್ನದಾಸೋಹ ಜೊತೆಗೆ ಅಕ್ಷರ ದಾಸೋಹ, ಜ್ಞಾನ ದಾಸೋಹ ಮಾಡಿದ್ದಾರೆ. ನಮ್ಮಷ್ಟಕ್ಕೆ ನಾವೇ ದಾಸೋಹ ಪರಂಪರೆಗೆ ಸಮರ್ಪಣೆ ಮಾಡಿಕೊಳ್ಳುವ ಧ್ಯೇಯ. ನಮ್ಮ ಸರ್ಕಾರ ಅನ್ನ ದಾಸೋಹ ಮಾಡೋದ್ರಲ್ಲಿ ಹಲವು ಕ್ರಮ ಕೈಗೊಂಡಿದೆ. 4 ಕೆಜಿ ಅಕ್ಕಿಯಿಂದ 5ಕೆಜಿ ಅಕ್ಕಿ, ಗೋಧಿ ಹೆಚ್ಚಳ ಮಾಡಿದೆ ಎಂದು ಹೇಳಿದರು.
ದಾಸೋಹ ಮಾಡುವಂತಹ ಮಠಗಳಿಗೆ ಪಡಿತರ ವ್ಯವಸ್ಥೆ ಮಾಡುತ್ತಿದ್ದೇವೆ. ಇದರ ಜೊತೆಗೆ ಮಕ್ಕಳಿಗೆ ಅಕ್ಷರ ದಾಸೋಹ ಮಾಡುವಂತದ್ದು. ಕಾರ್ಮಿಕರ ಮಕ್ಕಳಿಗೆ ವಿದ್ಯೆ ಕೊಡುವ ಉದ್ದೇಶದಿಂದ 150 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಇದರ ಜೊತೆಗೆ ಆಶ್ರಯ ದಾಸೋಹ ಕೈಂಕರ್ಯವನ್ನು ಕೈಗೊಂಡಿದ್ದೇವೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ 5 ಸಾವಿರ ಮನೆಗಳನ್ನು ನೀಡುತ್ತಿದ್ದೇವೆ. ಕರ್ನಾಟಕದಲ್ಲಿರುವ ಯಾರಿಗೆ ಅನ್ನ, ಅಕ್ಷರ, ಆಶ್ರಯ ಅವಶ್ಯಕತೆ ಇದೆಯೋ ಅವರಿಗೆ ನೀಡುವ ಕೆಲಸ ಮಾಡ್ತಿದ್ದೇವೆ. ಕರ್ನಾಟಕ ಜನರಿಗೆ ಈ ದಾಸೋಹದ ದಿನವನ್ನ ಸಮರ್ಪಣೆ ಮಾಡಿದ್ದೇವೆ ಎಂದು ಅವರು ಹೇಳಿದರು.
ನಾನು ಇಂದು ಸಾಂಕೇತಿಕವಾಗಿ ದಾಸೋಹದ ದಿನಕ್ಕೆ ಚಾಲನೆ ನೀಡಿದ್ದೇನೆ. ಹಿರಿಯಶ್ರೀಗಳು ಈ ಮಠದಲ್ಲಿ ದಾಸೋಹ ಪರಂಪರೆಯನ್ನ ಮಾಡಿದ್ದಾರೆ, ಅದಕ್ಕೆ ನಾವು ಗೌರವ ಸಲ್ಲಿಸುತ್ತಿದ್ದೇವೆ. ಈ ದಾಸೋಹ ಪರಂಪರೆಯನ್ನ ಸರ್ಕಾರ ಗುರುತಿಸಿದೆ. ದಾಸೋಹ ದಿನ ಮುಂದುವರೆಸಲು ವ್ಯವಸ್ಥಿತವಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಮುಂದುವರೆಸುತ್ತೇವೆ. ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ ಎಂದು ಅವರು ಇದೇ ವೇಳೆ ತಿಳಿಸಿದರು.
ವರದಿ: ರಾಜೇಶ್ ರಂಗನಾಥ, ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy